ಸಣ್ಣಪುಟ್ಟ ವ್ಯಾಪಾರಿಗಳು ಜಿಎಸ್‌ಟಿ ನೋಟಿಸ್‌ನಿಂದ ತತ್ತರಿಸಿ ಹೋಗಿದ್ದಾರೆ. ಈ ವಿರೋಧ ಇದೇ ಜೂಲೈ 25 ರಂದು ಜಿಎಸ್‌ಟಿ ಇಲಾಖೆಯ ದಕ್ಷಿಣವ್ಯಾಪಿ ಮರುಪಾವತಿ ನೋಟಿಸ್‌ಗಳ ವಿರುದ್ಧ ಕೆಂಡಾಮಂಡಲವಾಗಿ,ಅಂದಾಜು 65,000ಕ್ಕೂ ಹೆಚ್ಚು ಅಂಗಡಿಗಳು, ಜುಲೈ 23ರಿಂದ 25ರ ವರೆಗೆ ತೀವ್ರ ಪ್ರತಿಭಟನೆಗೆ ಮುಂದಾಗುತ್ತಿವೆ.
ವಾಣಿಜ್ಯ ತೆರಿಗೆ ಇಲಾಖೆಯು ಸಣ್ಣ ಉದ್ಯಮಗಳಿಗೆ ತೆರಿಗೆ ವಿಚಾರಣೆಗಳನ್ನು ಮುಂದುವರೆಸಿದೆ. ಇತ್ತೀಚೆಗೆ, ಬೆಂಗಳೂರಿನ ನಂದಿನಿ ಬೂತ್ ಮಾಲೀಕರಿಗೆ ಲಕ್ಷಾಂತರ ರೂಪಾಯಿ ತೆರಿಗೆ ಪಾವತಿಸುವಂತೆ ಸೂಚಿಸಿ ನೋಟಿಸ್ ನೀಡಲಾಗಿದೆ.
ಬರೋಬ್ಬರಿ 1 ಕೋಟಿ 3 ಲಕ್ಷ ರೂಪಾಯಿ ಜಿಎಸ್‌ಟಿ
ಉಲ್ಲಾಳದಲ್ಲಿ ಇರುವ ನಂದಿನಿ ಬೂತ್‌ನ ರವಿ ಎಂಬ ವ್ಯಕ್ತಿಗೆ ಬರೋಬ್ಬರಿ 1 ಕೋಟಿ 3 ಲಕ್ಷ ರೂಪಾಯಿಗಳ ತೆರಿಗೆ ಕಟ್ಟುವಂತೆ ನೋಟಿಸ್ ಜಾರಿ ಮಾಡಿದ್ದಾರೆ ಇದನ್ನು ನೋಡಿ ರವಿ ಶಾಕ್ ಆಗಿದ್ದಾರೆ.ಇದರಿಂದಾಗಿ ಅಂಗಡಿ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ.ತೆರಿಗೆ ಕಟ್ಟಲು ಸಾಧ್ಯವಾಗದೆ ಇತರೆ ಕಂಗಾಲಾಗಿದ್ದಾರೆ.
ಅನೇಕಸಣ್ಣಪುಟ್ಟ ವ್ಯಾಪರವನ್ನು ಮಾಡುವವರು ಜಿಎಸ್‌ಟಿ ನೋಟಿಸ್‌ನಿಂದ ತತ್ತರಿಸಿದ್ದಾರೆ. ಜುಲೈ 25 ರಂದು ತಮ್ಮ ಅಂಗಡಿಗಳನ್ನು ಮುಚ್ಚಲು ನಿರ್ಧರಿಸಿದ್ದಾರೆ. ಕಾರ್ಮಿಕ ಪರಿಷತ್ ಕಚೇರಿಯಲ್ಲಿ ಸಭೆ ಸೇರಿದ್ದ ಕಾಂಡಿಮೆಟ್ಸ್ ಹಾಗೂ ಬೇಕರಿ ಅಂಗಡಿ ಮಾಲೀಕರು ಬಂದ್‌ನ ಮತ್ತು ಪ್ರತಿಭಟನೆ ನಡೆಸುವ ಸ್ಥಳಗಳ ಬಗ್ಗೆ ಚರ್ಚೆಸಿದ್ದಾರೆ.
ಬುಧವಾರದಿಂದ ಮೂರು ದಿನಗಳ ಕಾಲ ಹಾಲು ಮಾರಾಟವನ್ನು ಸ್ಥಗಿತಗೊಳಿಸುವ ವರ್ತಕರ ನಿರ್ಧಾರಕ್ಕೆ ಕೆಲವು ನಂದಿನಿ ಬೂತ್‌ಗಳು ಬೆಂಬಲವನ್ನು ಕೂಡ ಸೂಚನೆಯನ್ನು ಮಾಡಿದ್ದಾರೆ.
ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜುಲೈ 25 ರಂದು ರಾಜ್ಯಮಟ್ಟದ ವ್ಯಾಪಾರಿಗಳ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಭಾಗವಹಿಸಲು ರಾಜ್ಯದ ವಿವಿಧ ಜಿಲ್ಲೆಗಳಿಂದ ವ್ಯಾಪಾರಿಗಳು ಟ್ರಕ್‌ಗಳಲ್ಲಿ ಆಗಮಿಸಲಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳ ವ್ಯಾಪಾರಿ ಸಂಘಟನೆಗಳು ಈ ಸಮಾವೇಶಕ್ಕೆ ತಮ್ಮ ಬೆಂಬಲವನ್ನು ಸೂಚಿಸಿವೆ. ಸಮಾವೇಶವು ವ್ಯಾಪಾರಿಗಳ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ನಿರೀಕ್ಷೆಯಿದೆ.
ರಾಜ್ಯದ ಬೀದಿ ಬದಿ ವ್ಯಾಪಾರಿಗಳು ಡ್ರೈವರ್ ಸಂಘಗಳು ಜಿಎಸ್‌ಟಿ ಅಧಿಕಾರಿಗಳ ನಿರ್ಬಂಧಾತ್ಮಕ ನಿಲುವುಗಳು ಸೂಕ್ಷ್ಮ ವ್ಯಾಪಾರ ಆರ್ಥಿಕತೆಯ ಮೇಲೆ ಮಾರಕ ಪರಿಣಾಮ ಬೀರುತ್ತಿವೆ.

ಆಹಾರ ಮತ್ತು ತಂಬಾಕು ಉತ್ಪನ್ನಗಳ ತಾತ್ಕಾಲಿಕ ಲಭ್ಯತೆಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುವ ಸಂಭವವಿರುವುದರಿಂದ, ಹಾಲು, ಮಾವು, ಸಿಗರೇಟು, ಗುಟ್ಕಾ ಮುಂತಾದವುಗಳನ್ನು ಮುಂಚಿತವಾಗಿಯೇ ಖರೀದಿಸಿಟ್ಟುಕೊಳ್ಳುವಂತೆ ಸಂಘಟನೆಗಳು ಜನರಲ್ಲಿ ಮನವಿ ಮಾಡಿವೆ.
ರಾಜ್ಯದ ಸಣ್ಣ ವ್ಯಾಪಾರಿಗಳಿಗೆ ಡಿಜಿಟಲ್ ಪೇಮೆಂಟ್ ನಿಂದ ತೆರಿಗೆ ನೋಟೀಸ್ ನೀಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಜಿಎಸ್‌ಟಿ ಪದ್ಧತಿ ಕೇಂದ್ರ ಸರ್ಕಾರ ಮಾಡಿದ್ದು, ಜಿಎಸ್‌ಟಿ ಕೌನ್ಸಿಲ್ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುತ್ತದೆ. ಇದಕ್ಕೆ ರಾಜ್ಯ ಸರ್ಕಾರಗಳ ಜವಾಬ್ದಾರಿಯಿಲ್ಲ ಈ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ, ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯೊಂದಿಗೆ ಚರ್ಚಿಸಿ, ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕದ ವಾಣಿಜ್ಯ ತೆರಿಗೆ ಇಲಾಖೆಯಿಂದ ನೀಡಲಾಗಿರುವ ಜಿಎಸ್‌ಟಿ (GST) ಬೇಡಿಕೆ ನೋಟಿಸ್‌ಗಳು ರಾಜ್ಯದ ಸಣ್ಣ ವ್ಯಾಪಾರಿಗಳಿಗೆ ಹೆಚ್ಚಿನ ಆಘಾತವನ್ನೇ ತಂದಿವೆ. ಬೇಕರಿ, ಟೀ ಸ್ಟಾಲ್, ಕಾಂಡಿಮೆಂಟ್ ಅಂಗಡಿಗಳು ಮತ್ತು ಬೀದಿ ವ್ಯಾಪಾರಿಗಳು ಎಲ್ಲಾರು ಒಟ್ಟಾಗಿ ಪ್ರತಿಭಟನೆಯನ್ನು ನಡೆಸುತ್ತಿದೆ. ಇದರ ಪರ ಸರ್ಕಾರ ಏನು ಕ್ರಮವನ್ನು ತಗೆದುಕೊಳ್ಳಬಹುದು ಎಂಬುವುದನ್ನು ಕಾದುನೋಡಬೇಕಿದೆ


Click it and Unblock the Notifications