ಕರೆಂಟ್ ಶಾಕ್! ಬೆಂಗಳೂರಿಗರೇ ಇಲ್ಲಿ ಕೇಳಿ.. ಇನ್ಮುಂದೆ ವಿದ್ಯುತ್ ಇಲ್ಲದೆ ದಿನ ಕಳೆಯಲು ಸಿದ್ಧರಾಗಿ. ಹೌದು, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಫೆಬ್ರವರಿ 6 ರಿಂದ 18 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಘೋಷಿಸಿದೆ. ಹಾಗಿದ್ರೆ, ಬೆಂಗಳೂರಿನ ಯಾವೆಲ್ಲಾ ಭಾಗಗಳಲ್ಲಿ ವಿದ್ಯುತ್ ಇರುವುದಿಲ್ಲ. ಯಾಕೆ ಎಂಬ ಇಲ್ಲಿದೆ ಹೆಚ್ಚಿನ ಮಾಹಿತಿ.

ಹೌದು, ಬೆಸ್ಕಾಂನ ಉಪವಿಭಾಗ-1ಕ್ಕೆ ಸಬಂಧಿಸಿದಂತೆ ಅಟಲ್ ಭೂಜಲ್ ಕಾಮಗಾರಿ ಕೈಗೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ 8 ಗಂಟೆಗಳ ಕಾಲ ವಿದ್ಯುತ್ ಸ್ಥಗಿತಗೊಳಿಸಲಾಗುವುದು ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಬೆಂಗಳೂರಿನ ನಿವಾಸಿಗಳಿಗೆ ಎಚ್ಚರಿಕೆ ನೀಡಿದೆ.
ಅಟಲ್ ಭೂಜಲ್ ಯೋಜನೆ
ಬೆಸ್ಕಾಂ ನಗರ ಉಪವಿಭಾಗ, ಭಾಗ 1 ರಲ್ಲಿ ನಿರ್ಣಾಯಕ ಮೂಲಸೌಕರ್ಯ ನವೀಕರಣಗಳನ್ನು ಒಳಗೊಂಡಿರುವ ಅಟಲ್ ಭೂಜಲ್ ಯೋಜನೆಗೆ ಸಂಬಂಧಿಸಿದ ನಡೆಯುತ್ತಿರುವ ಕೆಲಸಗಳನ್ನು ಗಮನದಲ್ಲಿಟ್ಟುಕೊಂಡು ವಿದ್ಯುತ್ ಸರಬರಾಜುವನ್ನು ಕಡಿತಗೊಳಿಸಲು ನಿರ್ಧಾರ ಮಾಡಿ ಅಧಿಕೃತ ಸೂಚನೆಯನ್ನು ಹೊರಡಿಸಿದೆ.
8 ಗಂಟೆಗಳ ಕಾಲ ವಿದ್ಯುತ್ ಇರುವುದಿಲ್ಲ
ಬೆಂಗಳೂರಿನಲ್ಲಿ ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ 8 ಗಂಟೆಗಳ ಕಾಲ ಪವರ್ ಕಟ್ ಆಗಲಿದೆ. ವಿದ್ಯುತ್ ಸಂಬಂಧಿಸಿದಂತೆ ಯಾವುದೇ ಕಾರ್ಯಗಳು ಇದ್ದರೂ ನಿವಾಸಿಗಳು ಮುಂಚಿತವಾಗಿ ಮಾಡಿಕೊಳ್ಳಬೇಕು ಎಂದು ಮಾಹಿತಿಯನ್ನು ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗುವ ಏರಿಯಾಗಳು ವಿವರ ಈ ಕೆಳಗಿನಂತೆ ಇದೆ
ಫೆಬ್ರವರಿ 8
ಗೋವಿಂದನಗರ,ಹೌಸಿಂಗ್ ಬೋರ್ಡ್, ಗುಬ್ಬಿಗೇಟ್,ಕುಂಟಮ್ಮನತೋಟ,ದಿಟ್ಟೂರು,ಬಿ.ಎಚ್.ಪಾಲಿ, ಹೊನ್ನೇನಹಳ್ಳಿ ರಸ್ತೆ,ಹಾರೋನಹಳ್ಳಿಯಲ್ಲಿ ವಿದ್ಯುತ್ ಕಟ್ ಆಗಲಿದೆ.
ಫೆಬ್ರವರಿ 9
ಹನುಮಂತಪುರ, ಕುವೆಂಪು ನಗರ, ಆದರ್ಶ ನಗರ, ಆನೆತೋಟ, ಜಗನ್ನಾಥಪುರ, ಶಾರದಾದೇವಿ ನಗರ, ಗಣೇಶ ನಗರ, ನಿರ್ವಾಣಿ ಲೇಔಟ್ ವಿದ್ಯುತ್ ವ್ಯತ್ಯಯವಾಗಲಿದೆ.
ಫೆಬ್ರವರಿ 10
ಗೋವಿಂದನಗರ, ಹೌಸಿಂಗ್ ಬೋರ್ಡ್, ಗುಬ್ಬಿ ಗೇಟ್, ಕುಂಟಮ್ಮನತೋಟ, ದಿಟ್ಟೂರು, ಬಿ.ಎಚ್.ಪಾಲಿ, ಹೊನ್ನೇನಹಳ್ಳಿ ರಸ್ತೆ, ಹಾರೋನಹಳ್ಳಿಯಲ್ಲಿ ಪವರ್ ಕಟ್ ಆಗಲಿದೆ.
ಫೆಬ್ರವರಿ 11
ಹನುಮಂತಪುರ, ಕುವೆಂಪು ನಗರ, ಆದರ್ಶ ನಗರ, ಆನೆತೋಟ, ಜಗನ್ನಾಥಪುರ, ಶಾರದಾದೇವಿ ನಗರ, ಗಣೇಶ ನಗರ, ನಿರ್ವಾಣಿ ಲೇಔಟ್ನಲ್ಲಿ ವಿದ್ಯುತ್ ವ್ಯತ್ಯಯ.
ಫೆಬ್ರವರಿ 12
ಗೋವಿಂದನಗರ, ಹೌಸಿಂಗ್ ಬೋರ್ಡ್, ಗುಬ್ಬಿ ಗೇಟ್, ಕುಂಟಮ್ಮನತೋಟ, ದಿಟ್ಟೂರು, ಬಿ.ಎಚ್.ಪಾಲಿ, ಹೊನ್ನೇನಹಳ್ಳಿ ರಸ್ತೆ, ಹಾರೋನಹಳ್ಳಿಯಲ್ಲಿ ವಿದ್ಯುತ್ ವ್ಯತ್ಯಯ.
ಫೆಬ್ರವರಿ 13
ಹನುಮಂತಪುರ, ಕುವೆಂಪು ನಗರ, ಆದರ್ಶ ನಗರ, ಆನೆತೋಟ, ಜಗನ್ನಾಥಪುರ, ಶಾರದಾದೇವಿ ನಗರ, ಗಣೇಶ ನಗರ, ನಿರ್ವಾಣಿ ಲೇಔಟ್ನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಫೆಬ್ರವರಿ 14
ಗೋವಿಂದನಗರ, ಹೌಸಿಂಗ್ ಬೋರ್ಡ್, ಗುಬ್ಬಿ ಗೇಟ್, ಕುಂಟಮ್ಮನತೋಟ, ದಿಟ್ಟೂರು, ಬಿ.ಎಚ್.ಪಾಲಿ, ಹೊನ್ನೇನಹಳ್ಳಿ ರಸ್ತೆ, ಹಾರೋನಹಳ್ಳಿಯಲ್ಲಿ ಪವರ್ ಕಟ್ ಆಗಲಿದೆ.
ಫೆಬ್ರವರಿ 15
ಹನುಮಂತಪುರ, ಕುವೆಂಪು ನಗರ, ಆದರ್ಶ ನಗರ, ಆನೆತೋಟ, ಜಗನ್ನಾಥಪುರ, ಶಾರದಾದೇವಿ ನಗರ, ಗಣೇಶ ನಗರ, ನಿರ್ವಾಣಿ ಲೇಔಟ್ನಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ.
ಫೆಬ್ರವರಿ 16
ಗೋವಿಂದನಗರ, ಹೌಸಿಂಗ್ ಬೋರ್ಡ್, ಗುಬ್ಬಿ ಗೇಟ್, ಕುಂಟಮ್ಮನತೋಟ, ದಿಟ್ಟೂರು, ಬಿ.ಎಚ್.ಪಾಲಿ, ಹೊನ್ನೇನಹಳ್ಳಿ ರಸ್ತೆ, ಹಾರೋನಹಳ್ಳಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಫೆಬ್ರವರಿ 17
ಹನುಮಂತಪುರ, ಕುವೆಂಪು ನಗರ, ಆದರ್ಶ ನಗರ, ಆನೆತೋಟ, ಜಗನ್ನಾಥಪುರ, ಶಾರದಾದೇವಿ ನಗರ, ಗಣೇಶ ನಗರ, ನಿರ್ವಾಣಿ ಲೇಔಟ್ನಲ್ಲಿ ವಿದ್ಯುತ್ ಕಟ್ ಆಗಲಿದೆ.
ಫೆಬ್ರವರಿ 18
ಗೋವಿಂದನಗರ, ಹೌಸಿಂಗ್ ಬೋರ್ಡ್, ಗುಬ್ಬಿ ಗೇಟ್, ಕುಂಟಮ್ಮನತೋಟ, ದಿಟ್ಟೂರು, ಬಿ.ಎಚ್.ಪಾಲಿ, ಹೊನ್ನೇನಹಳ್ಳಿ ರಸ್ತೆ, ಹಾರೋನಹಳ್ಳಿಯಲ್ಲಿ ವಿದ್ಯುತ್ ಸ್ಥಗಿತವಾಗಲಿದೆ.
ಈ ಮೇಲಿನ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.


Click it and Unblock the Notifications