ನವದೆಹಲಿ, ನವೆಂಬರ್ 22: ಜನಪ್ರಿಯ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ ಟೆಲ್ ತನ್ನ ಮೊಬೈಲ್ ಡೇಟಾ ಶುಲ್ಕದ ಬಗ್ಗೆ ಸೋಮವಾರದಂದು ಪ್ರಕಟಣೆ ಹೊರಡಿಸಿದೆ. ಪ್ರಿಪೇಯ್ಡ್ ಕರೆ, ಡೇಟಾ ಶುಲ್ಕಗಳ ದರ ಶೇ 20 ರಿಂದ 25ರಷ್ಟು ಹೆಚ್ಚಳವಾಗಲಿದೆ.
ವಾಯ್ಸ್ ಕರೆ, ಡೇಟಾ, ಅನ್‌ಲಿಮಿಟೆಡ್ ವಾಯ್ಸ್ ಕಾಲ್‌ನ ವಿವಿಧ ಯೋಜನೆಗಳ ದರ ಕೂಡಾ ಸಹಜವಾಗಿ ಹೆಚ್ಚಳವಾಗುತ್ತಿದೆ. ಪರಿಷ್ಕೃತ ದರಗಳು ನವೆಂಬರ್ 26ರಿಂದ ಜಾರಿಗೆ ಬರಲಿದೆ ಎಂದು ಏರ್ ಟೆಲ್ ಹೇಳಿದೆ. ಎಂಟ್ರಿ ಲೆವೆಲ್ ವಾಯ್ಸ್ ಕರೆ ಪ್ಲಾನ್‌ನ ಶುಲ್ಕವನ್ನು ಶೇ 25ರಷ್ಟು ಹೆಚ್ಚಿಸಲಾಗುತ್ತಿದೆ. ಇದೇ ವೇಳೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಶುಲ್ಕದಲ್ಲಿ ಶೇ 25ರಷ್ಟು ಹೆಚ್ಚಳ ಮಾಡಲಾಗುತ್ತಿದೆ.
ಪ್ರತಿ ಗ್ರಾಹಕರಿಂದ 200 ರು ಹಾಗೂ ಗರಿಷ್ಠ 300 ರು ಸರಾಸರಿ ಆದಾಯ (ಎಪಿಆರ್‌ಪಿಯು) ಗಳಿಕೆಗೆ ಏರ್‌ಟೆಲ್ ಮುಂದಾಗಿದೆ. ಎಪಿಆರ್‌ಪಿಯು ಅಂತರ್ಜಾಲ ಮತ್ತು ಸ್ಪೆಕ್ಟ್ರಂ ಕ್ಷೇತ್ರದಲ್ಲಿ ಹೂಡಿಕೆಗಳನ್ನು ಸಕ್ರಿಯಗೊಳಿಸಲಿದ್ದು, 5ಜಿ ಸೇವೆ ಒದಗಿಸುವುದಕ್ಕೂ ನೆರವಾಗಲಿದೆ ಎಂದು ಸಂಸ್ಥೆ ಹೇಳಿದೆ.

ದರ ಪರಿಷ್ಕರಣೆ ಸುದ್ದಿ ಬರುತ್ತಿದ್ದಂತೆ ಷೇರುಪೇಟೆಯಲ್ಲಿ ಭಾರ್ತಿ ಏರ್ ಟೆಲ್ ಷೇರು ಮೌಲ್ಯ 52 ವಾರಗಳಲ್ಲೆ ಅಧಿಕ ಮೌಲ್ಯಕ್ಕೇರಿತು. ಎನ್ ಎಸ್ ಇಯಲ್ಲಿ ಶೇ 5.8ರಷ್ಟು ಏರಿಕೆ ಕಂಡು 755.95 ರು ನಂತೆ ವಹಿವಾಟು ನಡೆಸಿದರೆ, ಬಿಎಸ್ ಇಯಲ್ಲಿ 756ರು ನಂತೆ ವಹಿವಾಟು ಅಂತ್ಯಗೊಳಿಸಿದೆ. ಹೊಸ ದರ ಬದಲಾವಣೆ ವಿವರ ಕೆಳಗಿನ ಕೋಷ್ಟಕದಲ್ಲಿದೆ
| ಏರ್ ಟೆಲ್ ಪ್ರೀಪೇಯ್ಡ್ ಮೊಬೈಲ್ ದರ ಪರಿಷ್ಕರಣೆ | |||
|---|---|---|---|
| ಹಾಲಿ ದರ(Rs) | ವ್ಯಾಲಿಡಿಟಿ | ಹೊಸ ದರ (Rs) | ಪ್ರಯೋಜನ |
| Tariffed ವಾಯ್ಸ್ ಯೋಜನೆ | |||
| 79 | 28 ದಿನ | 99 | ಶೇ 50 ರಷ್ಟು ಅಧಿಕ ಟಾಕ್ ಟೈಮ್, 200 ಎಂಬಿ ಡೇಟಾ |
| ಅನಿಯಮಿತ ವಾಯ್ಸ್ Bundles | |||
| 149 | 28 ದಿನಗಳು | 179 | ಅನಿಯಮಿತ ಕರೆ, 100 ಎಸ್ಎಂಎಸ್/ದಿನ, 2 ಜಿಬಿ ಡೇಟಾ |
| 219 | 28 ದಿನಗಳು | 265 | ಅನಿಯಮಿತ ಕರೆ, 100 ಎಸ್ಎಂಎಸ್/ದಿನ, 1 ಜಿಬಿ ಡೇಟಾ |
| 249 | 28 ದಿನಗಳು | 299 | ಅನಿಯಮಿತ ಕರೆ, 100 ಎಸ್ಎಂಎಸ್/ದಿನ, 1.5 ಜಿಬಿ ಡೇಟಾ |
| 298 | 28 ದಿನಗಳು | 359 | ಅನಿಯಮಿತ ಕರೆ, 100 ಎಸ್ಎಂಎಸ್/ದಿನ, 2 ಜಿಬಿ ಡೇಟಾ |
| 399 | 56 ದಿನಗಳು | 479 | ಅನಿಯಮಿತ ಕರೆ, 100 ಎಸ್ಎಂಎಸ್/ದಿನ, 1.5 ಜಿಬಿ ಡೇಟಾ |
| 449 | 56 ದಿನಗಳು | 549 | ಅನಿಯಮಿತ ಕರೆ, 100 ಎಸ್ಎಂಎಸ್/ದಿನ, 2 ಜಿಬಿ ಡೇಟಾ |
| 379 | 84 ದಿನಗಳು | 455 | ಅನಿಯಮಿತ ಕರೆ, 100 ಎಸ್ಎಂಎಸ್/ದಿನ, 6 ಜಿಬಿ ಡೇಟಾ |
| 598 | 84 ದಿನಗಳು | 719 | ಅನಿಯಮಿತ ಕರೆ, 100 ಎಸ್ಎಂಎಸ್/ದಿನ, 1.5 ಜಿಬಿ ಡೇಟಾ |
| 698 | 84 ದಿನಗಳು | 839 | ಅನಿಯಮಿತ ಕರೆ, 100 ಎಸ್ಎಂಎಸ್/ದಿನ, 2 ಜಿಬಿ ಡೇಟಾ |
| 1498 | 365 ದಿನಗಳು | 1799 | ಅನಿಯಮಿತ ಕರೆ, 100 ಎಸ್ಎಂಎಸ್/ದಿನ, 24 ಜಿಬಿ ಡೇಟಾ |
| 2498 | 365 ದಿನಗಳು | 2999 | ಅನಿಯಮಿತ ಕರೆ, 100 ಎಸ್ಎಂಎಸ್/ದಿನ, 2 ಜಿಬಿ ಡೇಟಾ |
| Data ಟಾಪ್ ಅಪ್ಸ್ | |||
| 48 | ಅನಿಯಮಿತ | 58 | 3 ಜಿಬಿ ಡಾಟಾ |
| 98 | ಅನಿಯಮಿತ | 118 | 12ಜಿಬಿ ಡಾಟಾ |
| 251 | ಅನಿಯಮಿತ | 301 | 50 ಜಿಬಿ ಡಾಟಾ |


Click it and Unblock the Notifications