ಭಾರತದ ಎರಡನೇ ಅತೀ ದೊಡ್ಡ ಟೆಲಿಕಾಂ ಸಂಸ್ಥೆಯಾದ ಭಾರ್ತಿ ಏರ್‌ಟೆಲ್ ತನ್ನ ಮೂರನೇ ತ್ರೈಮಾಸಿಕದ ವರದಿಯನ್ನು ಬಿಡುಗಡೆ ಮಾಡಿದೆ. ಭಾರ್ತಿ ಏರ್‌ಟೆಲ್ ಮೂರನೇ ತ್ರೈಮಾಸಿಕದ ನಿವ್ವಳ ಆದಾಯವು ಶೇಕಡ 92ರಷ್ಟು ಏರಿಕೆಯಾಗಿದೆ. ಡಿಸೆಂಬರ್ 2022ರಲ್ಲಿ ಕೊನೆಯಾದ ತ್ರೈಮಾಸಿಕದಲ್ಲಿ ಭಾರ್ತಿ ಏರ್‌ಟೆಲ್ ಲಾಭವು 1,588 ಕೋಟಿ ರೂಪಾಯಿ ಆಗಿದೆ.
ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ಭಾರ್ತಿ ಏರ್‌ಟೆಲ್‌ನ ನಿವ್ವಳ ಆದಾಯವು 830 ಕೋಟಿ ರೂಪಾಯಿ ಆಗಿತ್ತು. ಆದರೆ ಈ ವರ್ಷ ಶೇಕಡ 92ರಷ್ಟು ಹೆಚ್ಚಳವಾಗಿದೆ. ಅಂದರೆ ನಿವ್ವಳ ಆದಾಯ 1,588 ಕೋಟಿ ರೂಪಾಯಿ ಆಗಿದೆ. ಸಂಸ್ಥೆಯ ಒಟ್ಟು ಆದಾಯ 35,804 ಕೋಟಿ ರೂಪಾಯಿ ಆಗಿದೆ. ಒಟ್ಟು ಆದಾಯ ಶೇಕಡ 20ರಷ್ಟು ಏರಿಕೆಯಾಗಿದೆ.
ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಸಂಸ್ಥೆಯ ಒಟ್ಟು ಆದಾಯ 29,867 ಕೋಟಿ ರೂಪಾಯಿ ಆಗಿತ್ತು. ಆದರೆ ಈ ವರ್ಷ ಆದಾಯವು 35,804 ಕೋಟಿ ರೂಪಾಯಿಗೆ ತಲುಪಿದೆ. ಆ ಸಂದರ್ಭದಲ್ಲಿ ಸಂಸ್ಥೆಯ ಒಟ್ಟು ಆದಾಯವು ಶೇಕಡ 4ರಷ್ಟು ಏರಿಕೆಯಾಗಿದೆ. ಈ ವರ್ಷ ಶೇಕಡ 20ರಷ್ಟು ಹೆಚ್ಚಳವಾಗಿದೆ.

ಇಬಿಐಟಿಡಿಎ, ಮಾರ್ಜಿನ್ ಎಷ್ಟಿದೆ?
ಈ ತ್ರೈಮಾಸಿಕದಲ್ಲಿ ಇಬಿಐಟಿಡಿಎ 18,601 ಕೋಟಿ ರೂಪಾಯಿ ಆಗಿದೆ. ಅಂದರೆ ವರ್ಷದಿಂದ ವರ್ಷಕ್ಕೆ ಶೇಕಡ 25ರಷ್ಟು ಏರಿಕೆಯಾಗಿದೆ. ತ್ರೈಮಾಸಿಕವಾಗಿ ಶೇಕಡ 5ರಷ್ಟು ಏರಿಕೆಯಾಗಿದೆ. ಇಬಿಐಟಿಡಿಎ ಮಾರ್ಜಿನ್ ಶೇಕಡ 52.0 ಏರಿಕೆಯಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಮಾರ್ಜಿನ್ ಶೇಕಡ 49.9ರಷ್ಟು ಹೆಚ್ಚಳವಾಗಿತ್ತು. ಹಾಗೆಯೇ ಈ ಹಿಂದಿನ ತ್ರೈಮಾಸಿಕದಲ್ಲಿ ಮಾರ್ಜಿನ್ ಶೇಕಡ 51.3ರಷ್ಟು ಏರಿಕೆ ಕಂಡಿದೆ. ಇನ್ನು ಭಾರತದ ಪ್ರತಿ ವ್ಯಕ್ತಿಯಿಂದ ಸಂಸ್ಥೆಗೆ ಬಂದ ಆದಾಯವು ಮಾಸಿಕವಾಗಿ 193 ರೂಪಾಯಿ ಆಗಿದೆ.
ಅಂದಾಜಿಗಿಂತ ಕಡಿಮೆ ನಿವ್ವಳ ಆದಾಯ
ಭಾರ್ತಿ ಏರ್‌ಟೆಲ್ ಮೂರನೇ ತ್ರೈಮಾಸಿಕದ ನಿವ್ವಳ ಆದಾಯವು ಶೇಕಡ 200ರಷ್ಟು ಏರಿಕೆಯಾಗಿ, 2,521 ಕೋಟಿ ರೂಪಾಯಿಗೆ ತಲುಪಲಿದೆ ಎಂಬ ಅಂದಾಜನ್ನು ಮಾಡಲಾಗಿತ್ತು. ಭಾರ್ತಿ ಏರ್‌ಟೆಲ್ ಆದಾಯವು ವರ್ಷದಿಂದ ವರ್ಷಕ್ಕೆ ಶೇಕಡ 92ರಷ್ಟು ಏರಿಕೆಯನ್ನು ಕಂಡಿದ್ದರೂ ಕೂಡಾ ಅಂದಾಜಿಗಿಂತ ಕಡಿಮೆಯೇ ಲಾಭ ಹೆಚ್ಚಳವಾಗಿದೆ. ಸಂಸ್ಥೆಯು ಸುಮಾರು ಶೇಕಡ 150ರಿಂದ 250ರಷ್ಟು ಏರಿಕೆಯಾಗಬಹುದು ಎಂಬ ನಿರೀಕ್ಷೆಯಿತ್ತು. ಸಂಸ್ಥೆಯು ಶೇಕಡ 18ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆಯಿತ್ತು. ಪ್ರತಿ ಬಳಕೆದಾರರಿಂದ ಲಭ್ಯವಾಗುವ ಆದಾಯವು 195 ರೂಪಾಯಿ ಆಗುವ ನಿರೀಕ್ಷೆಯಿತ್ತು. ಆದರೆ ಮಾಸಿಕವಾಗಿ 193 ರೂಪಾಯಿ ಪ್ರತಿ ವ್ಯಕ್ತಿಯಿಂದ ಲಭ್ಯವಾಗಿದೆ.


Click it and Unblock the Notifications