ಏರ್‌ಟೆಲ್ ಬಳಕೆದಾರರಿಗೆ ಬಿಗ್ ಶಾಕ್! ಈ ಜನಪ್ರಿಯ ರೀಚಾರ್ಜ್ ಯೋಜನೆಯ ವ್ಯಾಲಿಡಿಟಿ ಕಡಿತ. ಹೌದು, ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಭಾರ್ತಿ ಏರ್‌ಟೆಲ್ (airtel) ಒಂದಾಗಿದೆ. ಪ್ರಸ್ತುತ, ತನ್ನ ಅತ್ಯಂತ ಜನಪ್ರಿಯ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್‌ನಲ್ಲಿ ದೊಡ್ಡ ಬದಲಾವಣೆ ಮಾಡಿದೆ. ಕಂಪನಿಯು 219 ರೂ.ನ ರೀಚಾರ್ಜ್ ಯೋಜನೆಯ (Airtel Rs 219 Prepaid Plan) ವ್ಯಾಲಿಡಿಟಿಯನ್ನು ಇಳಿಕೆ ಮಾಡಿದೆ. ಆದರೆ, ಡೇಟಾ ಸೌಲಭ್ಯ, ಧ್ವನಿ ಕರೆ ಮತ್ತು ಎಸ್‌ಎಂಎಸ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಬದಲಾಯಿಸಿಲ್ಲ. ಬನ್ನಿ, ಈ ಪ್ಲಾನ್‌ನ ವ್ಯಾಲಿಡಿಟಿ ಎಷ್ಟು? ಇದರಿಂದ ಯಾರಿಗೆಲ್ಲಾ ನಷ್ಟ? ಎನ್ನುವುದನ್ನು ತಿಳಿಯೋಣ.
ಕಡಿಮೆ ಬಜೆಟ್‌ನಲ್ಲಿ ದೀರ್ಘಾವಧಿಯ ವ್ಯಾಲಿಡಿಟಿ ಪಡೆಯುವ ನಿರೀಕ್ಷೆಯಲ್ಲಿದ್ದ ಗ್ರಾಹಕರಿಗೆ ಇದು, ನಿರಾಶೆ ಉಂಟುಮಾಡಿದೆ. ವರದಿಯ ಪ್ರಕಾರ, ಏರ್‌ಟೆಲ್ ತನ್ನ ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯ (ARPU) ಹೆಚ್ಚಿಸುವ ಗುರಿಯೊಂದಿಗೆ ಈ ಕ್ರಮ ಕೈಗೊಂಡಿದೆ. ಕಂಪನಿಯು ಪ್ರತಿ ಗ್ರಾಹಕರು ಸರಾಸರಿ ಆದಾಯವನ್ನು 300 ರೂ.ಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. ವ್ಯಾಲಿಡಿಟಿ ಕಡಿಮೆ ಮಾಡುವುದರಿಂದ, ಬಳಕೆದಾರರು ಹೆಚ್ಚು ರೀಚಾರ್ಜ್ ಮಾಡಬೇಕಾಗುತ್ತದೆ. ಇದು ಏರ್‌ಟೆಲ್ ಕಂಪನಿಗೆ ಹೆಚ್ಚಿನ ಆದಾಯವನ್ನು ತಂದು ಕೊಡುತ್ತದೆ.

219 ರೂ. ಯೋಜನೆಯ ಪ್ರಯೋಜನಗಳು
ಏರ್‌ಟೆಲ್ ಕಂಪನಿಯು ತನ್ನ 219 ರೂ.ನ ರೀಚಾರ್ಜ್ ಯೋಜನೆಯ ವ್ಯಾಲಿಡಿಟಿಯನ್ನು 30 ದಿನಗಳಿಂದ 28 ದಿನಗಳಿಗೆ ಇಳಿಕೆ ಮಾಡಿದೆ. ಈ ಜನಪ್ರಿಯ ಯೋಜನೆಯಲ್ಲಿ, ನಿಮಗೆ 3GB ಡೇಟಾ ಲಭ್ಯವಿದೆ. ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನ್‌ಲಿಮಿಟೆಡ್ ಧ್ವನಿ ಕರೆ ಮತ್ತು ಮೊದಲಿನಂತೆ 300 ಎಸ್‌ಎಂಎಸ್ (SMS) ಸೌಲಭ್ಯ ಸಿಗುತ್ತದೆ. ಆದರೆ, ಪ್ರಸ್ತುತ ಈ ಎಲ್ಲಾ ಸೌಲಭ್ಯಗಳು ಕೇವಲ 28 ದಿನಗಳವರೆಗೆ ಮಾತ್ರ ಲಭ್ಯವಿರುತ್ತವೆ. ಈ ಹಿಂದೆ ಈ ರೀಚಾರ್ಜ್ ಪ್ಲಾನ್ 30 ದಿನಗಳ ವ್ಯಾಲಿಡಿಟಿಯೊಂದಿಗೆ ಬಿಡುಗಡೆಯಾಗಿತ್ತು.
ಸುಂಕ ದರಗಳು ಹೆಚ್ಚಳ, ರೀಚಾರ್ಜ್ ದುಬಾರಿ!
ವರದಿಯ ಪ್ರಕಾರ, ಈ ವರ್ಷವೂ (2025) ರೀಚಾರ್ಜ್ ದುಬಾರಿಯಾಗಲಿದೆ. ಎಲ್ಲಾ ಪ್ರಮುಖ ಟೆಲಿಕಾಂ ಕಂಪನಿಗಳು ಮತ್ತೊಮ್ಮೆ ಸುಂಕ ಯೋಜನೆಗಳ ಬೆಲೆಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ. ಇದಕ್ಕೂ ಮೊದಲು ಕಳೆದ ವರ್ಷ (2024) ಸುಂಕವನ್ನು ಹೆಚ್ಚಳ ಮಾಡಲಾಯಿತು. ಇದರಿಂದ ಟೆಲಿಕಾಂ ಕಂಪನಿಗಳಿಗೆ ಲಾಭವೇ ಆಗಿತ್ತು. ಅದರಂತೆ, ಗ್ರಾಹಕರು ಈ ವರ್ಷವೂ ಹೆಚ್ಚು ದುಬಾರಿ ರೀಚಾರ್ಜ್‌ಗಳಿಗೆ ಸಿದ್ಧರಾಗಬೇಕು ಎಂಬ ಸುಳಿವು ಸಿಕ್ಕಿದೆ.
ಇತ್ತೀಚೆಗೆ ಏರ್‌ಟೆಲ್ ತನ್ನ ಅಂತರರಾಷ್ಟ್ರೀಯ ರೋಮಿಂಗ್ ಪೋರ್ಟ್‌ಫೋಲಿಯೊಗೆ 4,000 ರೂ.ಗಳ ಯೋಜನೆಯನ್ನು ಸೇರಿಸಿದೆ. ಈ ಪ್ಲಾನ್‌ನಲ್ಲಿ, 5GB ಡೇಟಾ, 100 ನಿಮಿಷದ ಧ್ವನಿ ಕರೆ ಮತ್ತು 100 ಎಸ್‌ಎಂಎಸ್ ಸೌಲಭ್ಯ ನೀಡಲಾಗುತ್ತದೆ. ಇದನ್ನು ಭಾರತ ಮತ್ತು ವಿದೇಶಗಳಲ್ಲಿ ಬಳಸಬಹುದು.
ಏರ್‌ಟೆಲ್ 195 ರೂ. ರೀಚಾರ್ಜ್ ಪ್ಲಾನ್
ಏರ್‌ಟೆಲ್ ತನ್ನ ಬಳಕೆದಾರರಿಗಾಗಿ ಹಲವು ಕೈಗೆಟುಕುವ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಈ ಪೈಕಿ 195 ರೂ.ನ ರೀಚಾರ್ಜ್ ಯೋಜನೆಯು ಒಂದಾಗಿದೆ. ಕಡಿಮೆ ಡೇಟಾ ಅಗತ್ಯವಿರುವ ಆದರೆ, ಓಟಿಟಿ ಚಂದಾದಾರಿಕೆ ಪ್ರಯೋಜನಗಳನ್ನು ಪಡೆಯಲು ಬಯಸುವ ಬಳಕೆದಾರರಿಗೆ 195 ರೂ. ಯೋಜನೆ ಸೂಕ್ತವಾಗಿದೆ. ಇದು 15GB ಡೇಟಾ, 90 ದಿನಗಳ ವ್ಯಾಲಿಡಿಟಿ ಹೊಂದಿದೆ. ಹಾಗೆಯೇ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್‌ಗೆ 3 ತಿಂಗಳ ಉಚಿತ ಚಂದಾದಾರಿಕೆ ನೀಡುತ್ತದೆ. ನೀವು ಹೆಚ್ಚು ಇಂಟರ್ನೆಟ್ ಬಳಕೆದಾರರಾಗಿದ್ದರೆ ಮತ್ತು ಓಟಿಟಿ ಇಷ್ಟಪಡುತ್ತಿದ್ದರೆ, ಹೊಸ 451 ರೂ. ಯೋಜನೆ ನಿಮಗೆ ಉತ್ತಮ ಆಯ್ಕೆಯಾಗಿದೆ.
ಏರ್‌ಟೆಲ್ 379 ರೂ. ರೀಚಾರ್ಜ್ ಯೋಜನೆ
379 ರೂ.ಗಳ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು ಬಳಕೆದಾರರ ಮೆಚ್ಚುಗೆ ಪಡೆದಿದೆ. ಈ ಪ್ಲಾನ್ 30 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಯೋಜನೆಯಲ್ಲಿ ಪ್ರತಿದಿನ 2GB ಹೈ ಸ್ಪೀಡ್ ಡೇಟಾ ಸಿಗುತ್ತದೆ. ಜೊತೆಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಮತ್ತು 100 ಎಸ್‌ಎಂಎಸ್ ಸೌಲಭ್ಯ ಒದಗಿಸಲಾಗುತ್ತದೆ. ನೀವು 5G ಫೋನ್ ಬಳಸುತ್ತಿರಬೇಕು ಮತ್ತು ನೀವು ಇರುವ ಸ್ಥಳದಲ್ಲಿ 5G ನೆಟ್‌ವರ್ಕ್ ಲಭ್ಯವಿರಬೇಕು. ಆಗ ನೀವು ಉಚಿತ ಅನ್‌ಲಿಮಿಟೆಡ್ 5G ಡೇಟಾದ ಪ್ರಯೋಜನವನ್ನು ಪಡೆಯಬಹುದು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್‌ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications