ನಮ್ಮ ಮೊಟ್ರೋ (Namma metro)ಬಿಡದಿ ಹ್ಯಾಫ್ ಮಾರಥಾನ್ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆ 5 ಗಂಟೆಯಿಂದಲೇ ಶುರುವಾಗಲಿದೆ ಎಂದು ಬಿಎಂಆರ್ ಸಿಎಲ್ ಮಾಹಿತಿಯನ್ನು ತಿಳಿಸಿದೆ.
ಹೌದು,ಮ್ಯಾರಥಾನ್‌ನಲ್ಲಿ ಭಾಗವಹಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಗಮವು (ಬಿಎಂಆರ್‌ಸಿಎಲ್) ಬೆಳಿಗ್ಗೆ 5 ಗಂಟೆಯಿಂದ ಮೆಟ್ರೋ ರೈಲುಗಳು ಸಂಚಾರ ಮಾಡಲು ಆರಂಭವಾಗುತ್ತದೆ. ಭಾನುವಾರದ ದಿನಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಮೆಟ್ರೋ ರೈಲುಗಳು ಸೇವೆಯನ್ನು ಶುರು ಮಾಡಲು ಆರಂಭ ಮಾಡಿದೆ.

ಮೆಟ್ರೋ ರೈಲು ಸೇವೆ
ನಾಲ್ಕು ಟರ್ಮಿನಲ್ ನಿಲ್ದಾಣಗಳಿಂದ ಮೆಟ್ರೋ ರೈಲುಗಳು ಬೆಳಿಗ್ಗೆ 7 ಗಂಟೆಗೆ ಬದಲಾಗಿ ಬೆಳಿಗ್ಗೆ 5 ಗಂಟೆಗೆ ಸೇವೆಯನ್ನು ಆರಂಭ ಮಾಡುತ್ತದೆ.ಮ್ಯಾರಥಾನ್‌ನಲ್ಲಿ ಭಾಗವಹಿಸುವವರಿಗೆ ಹೆಚ್ಚಿನ ಅನುಕೂಲ ಮಾಡಲು, ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಚಲ್ಲಘಟ್ಟ ಕಡೆಗೆ ಸೇವೆಗಳು ಬೆಳಿಗ್ಗೆ 4 ಗಂಟೆಯಿಂದಲೇ ಪ್ರಾರಂಭವಾಗಲಿವೆ. ಪರಿಷ್ಕೃತ ವೇಳಾಪಟ್ಟಿಯನ್ನು ಗಮನಿಸಿ ಅದಕ್ಕೆ ಅನುಗುಣವಾಗಿ ತಮ್ಮ ಪ್ರಯಾಣವನ್ನು ಯೋಜಿಸುವಂತೆ ಬಿಎಂಆರ್‌ಸಿಎಲ್ ಪ್ರಯಾಣಿಕರಿಗೆ ವಿನಂತಿಯನ್ನು ಮಾಡಿಕೊಂಡಿದೆ.
ನೇರಳೆ ಮಾರ್ಗದ ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ಸೇವೆಗಳನ್ನು ವಿಸ್ತರಿಸುವುದಾಗಿ ಬಿಎಂಆರ್‌ಸಿಎಲ್ ಇತ್ತೀಚೆಗೆ ಘೋಷಿಸಿತ್ತು. ಅದರ ಪ್ರಕಾರ ಮಾರ್ಚ್ 13 ರಿಂದ ಐಟಿಪಿಎಲ್ ಹಾಗೂ ಮೈಸೂರು ರಸ್ತೆ ನಡುವೆ 5.56ರ ಬದಲು 3.56 ರಿಂದ ರಾತ್ರಿ 8 ಗಂಟೆವರೆಗೆ 5 ನಿಮಿಷಗಳ ಅಂತರದಲ್ಲಿ ಮೆಟ್ರೊ ರೈಲುಗಳು ಸೇವೆಯನ್ನು ಆರಂಭ ಮಾಡಿದೆ ಎಂದು ಬಿಎಂಆರ್ ಸಿಎಲ್ ಮಾಹಿತಿಯನ್ನು ತಿಳಿಸಿದೆ.
255 ಕಿಮೀರವರೆಗೆ ನಮ್ಮ ಮೆಟ್ರೋ ಜಾಲ ವಿಸ್ತರಣೆ
ನಮ್ಮ ಮೆಟ್ರೋ 255 ಕಿಮೀ ನಮ್ಮ ಮೆಟ್ರೋ ಜಾಲ ವಿಸ್ತರಣೆ ಮಾಡಲು ಸಜ್ಜಾಗುತ್ತಿದೆ. ಈಗಾಗಲೇ 77 ಕಿಲೋಮೀಟರ್ ಜಾಲವಿದೆ. 197 ಕಿಲೋಮೀಟರ್‌ಗಳನ್ನು ಸೇರಿಸಲು ಯೋಜನೆಗಳು ನಡೆಯುತ್ತಿವೆ. ಇದನ್ನು ಸಾಧಿಸಲು, ಬಿಎಂಆರ್‌ಸಿಎಲ್ ಆಯ್ದ ಮಾರ್ಗಗಳಲ್ಲಿ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದೆ ಮತ್ತು ವಿಸ್ತರಣೆಯ ಕಾರ್ಯಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಲು ವಿವರವಾದ ಕಾರ್ಯಸಾಧ್ಯತಾ ಅಧ್ಯಯನಗಳನ್ನು ಕೂಡ ನಡೆಸುತ್ತಿದೆ.
ಈಗಿರುವ ಮೆಟ್ರೋ ಜಾಲವು 77 ಕಿಲೋಮೀಟರ್‌ಗಳಷ್ಟು ವಿಸ್ತಾರವಾಗಿದ್ದು, ಪ್ರಸ್ತಾವಿತ ವಿಸ್ತರಣೆಯು ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆಯ ವ್ಯಾಪ್ತಿ ಮತ್ತು ಅನುಕೂಲತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಪ್ರಯಾಣಿಕರ ಸಂಖ್ಯೆ ಮೆಟ್ರೋದಲ್ಲಿ ಕುಸಿತ
ನಮ್ಮ ಮೆಟ್ರೋದಲ್ಲಿ ದರ ಹೆಚ್ಚಳದ ಪರಿಷ್ಕೃತ ದರವನ್ನು ನೋಡಿದ ಜನರು, ಮೆಟ್ರೋಗಿಂತ ಬಿಎಂಟಿಸಿ ಬಸ್, ಖಾಸಗಿ ವಾಹನಗಳೇ ಉತ್ತಮ ಎಂದು ಹೇಳುತ್ತಿದ್ದಾರೆ.ಮೆಟ್ರೋದಲ್ಲಿ ಖಾಲಿ ಖಾಲಿ ಸೀಟುಗಳು ಇದೇ ಮೊದಲ ಭಾರೀ ಕಂಡು ಬರುತ್ತಿದೆ. ಮೆಟ್ರೋದಲ್ಲಿ ಪ್ರಯಾಣ ಮಾಡಲು ಜನರು ಹಿಂದೆ ಮುಂದೆ ನೋಡುತ್ತಿದ್ದಾರೆ. ಮೆಟ್ರೋ ದರ ಏರಿಕೆ ಬಳಿಕ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಕಡಿಮೆಯಾಗಿದೆ.
ಫೆಬ್ರವರಿ 3ರಂದು ದರ ಏರಿಕೆಗೂ ಮೊದಲು ಮೆಟ್ರೋ ಪ್ರಯಾಣಿಕರ ಸಂಖ್ಯೆ 8.7 ಲಕ್ಷವಾಗಿತ್ತು. ಆದರೆ ಫೆಬ್ರವರಿ 10ರಂದು ದರ ಏರಿಕೆ ಬಳಿಕ ಇದು 8.2 ಲಕ್ಷಕ್ಕೆ ಇಳಿಕೆಯಾಗಿದೆ. ಮಾಹಿತಿಗಳ ಪ್ರಕಾರ ಶೇ 4ರಷ್ಟು ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ. ಪರಿಷ್ಕೃತ ದರ ಪಟ್ಟಿ ಫೆಬ್ರುವರಿ 9ರಿಂದ ಜಾರಿಗೆ ಬಂದಿದೆ. ನಂತರದ ಸತತ ಎರಡು ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿದಿದೆ. ಫೆಬ್ರುವರಿ 10ರಂದು (ಸೋಮವಾರ) 8,28,149 ಜನರು ಹಾಗೂ ಫೆಬ್ರುವರಿ 11ರಂದು (ಮಂಗಳವಾರ) 7,78,774 ಮಂದಿ ಮೆಟ್ರೊ ಪ್ರಯಾಣ ಮಾಡಿದ್ದಾರೆ.
ಕಚೇರಿ ದಟ್ಟಣೆಯ ಸಮಯದಲ್ಲಿ, ಬೆಂಗಳೂರು ಮೆಟ್ರೋದಲ್ಲಿ ಖಾಲಿ ಖಾಲಿ ಸೀಟುಗಳು ಕಂಡು ಬರುತ್ತಿದೆ. ಮೆಟ್ರೋ ಬೆಲೆ ಏರಿಕೆಯಿಂದ ಪ್ರಯಾಣಿಕರು ಸಂಕಷ್ಟು ಎದುರಿಸುತ್ತಿದ್ದಾರೆ.


Click it and Unblock the Notifications