ಮೋದಿ ಬಜೆಟ್ ಎಫೆಕ್ಟ್‌! ಬಂಗಾರದ ಬೆಲೆ ಭರ್ಜರಿ ಕುಸಿತ.. 100 ಗ್ರಾಂಗೆ ಎಷ್ಟು? ಬೆಳ್ಳಿ ದರ ಇಷ್ಟೆನಾ?

ಚಿನ್ನದ ಬೆಲೆಯಲ್ಲಿ ವಾರದ ಮೊದಲ ದಿನವೇ ಇಳಿಕೆ ಕಂಡಿದೆ. ಹೌದು, ಚಿನ್ನ ಮಾರುಕಟ್ಟೆ ಮಹಿಳೆಯರಿಗೆ ಸಿಹಿ ಸುದ್ದಿ ಕೊಟ್ಟಿದೆ. ಬೆಳ್ಳಿಯ ಬೆಲೆ ಸಹ ಇಂದು ಯಾವುದೇ ಬದಲಾವಣೆ ಕಂಡಿಲ್ಲ.ಬಹು ದಿನಗಳಿಂದ ಆಭರಣ ಖರೀದಿಗಾಗಿ ಕಾಯುತ್ತಿದ್ದವರಿಗೆ ಖುಷಿ ದುಪ್ಪಟ್ಟಾಗಿದೆ. ಹಾಗಿದ್ರೆ ಭಾರತದಲ್ಲಿ ಸೋಮವಾರದಂದು ( ಫೆ.03) ಚಿನ್ನದ ಬೆಲೆ ಎಷ್ಟಿದೆ? ಒಂದು ಕೆಜಿ ಬೆಳ್ಳಿಯ ಬೆಲೆ ಎಷ್ಟು? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.

ಹೌದು, ಬಂಗಾರದ ಮಾರುಕಟ್ಟೆಯಲ್ಲಿ ಇಂದು ಇಳಿಕೆ ಕಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 77,050 ರೂಪಾಯಿ ಇದೆ. ಅಪರಂಜಿ 10 ಗ್ರಾಮ್ 24 ಕ್ಯಾರಟ್ ಗೋಲ್ಡ್ ರೇಟ್ 84,050 ರೂ.ಗಳು ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದ್ದರೆ ಚಿನ್ನದಲ್ಲಿ ಇಂದು ಇಳಿಕೆ ಕಂಡಿದೆ.

ಬಂಗಾರದ ಬೆಲೆ ಭರ್ಜರಿ ಕುಸಿತ.. 100 ಗ್ರಾಂಗೆ ಎಷ್ಟು?

ಭಾರತದಲ್ಲಿ ಬಂಗಾರದ ಬೆಲೆ ಹೇಗಿದೆ?

ಭಾರತದಲ್ಲಿ ಚಿನ್ನದ ದರ ಇಂದು ಇಳಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,705 ರೂಪಯಿ ಆಗಿದೆ.ಅದೇ ರೀತಿ ಅಪರಂಜಿ 24 ಕ್ಯಾರಟ್ ಚಿನ್ನದ ಬೆಲೆ 8,405 ರೂ.ಗಳ ವ್ಯಾಪಾರವಿದೆ. 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನಕ್ಕೆ 77,050 ರೂ.ಗಳು ವ್ಯಾಪಾರವಿದೆ. 10 ಗ್ರಾಂ ನ 24 ಕ್ಯಾರಟ್‌ ಅಪರಂಜಿ ಚಿನ್ನದ ಬೆಲೆ 84,050 ರೂ.ಗಳ ವಾಹಿವಾಟುವನ್ನು ನಡೆಸುತ್ತಿದೆ.

ಇನ್ನೂ 100 ಗ್ರಾಂ 22 ಕ್ಯಾರೆಟ್‌ನ ಚಿನ್ನದ ಬೆಲೆ 7,70,500 ರೂ.ಗಳು ಇದೆ. ಅಪರಂಜಿ 100 ಗ್ರಾಂ ಚಿನ್ನದ ಬೆಲೆ 8,40,500 ಇದೆ. ನಿನ್ನೆಯ ಬೆಲೆಗೆ ಹೋಲಿಕೆ ಮಾಡಿದ್ದರೆ ಅಪರಂಜಿ ಬೆಲೆ 4,400 ರೂ.ಗಳ ಇಳಿಕೆ ಕಂಡಿದೆ.18 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 63,040 ರೂ.ಗಳು ಇದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ.

ಇಂದಿನ ಬೆಳ್ಳಿಯ ಬೆಲೆ ಭಾರತದಲ್ಲಿ ಎಷ್ಟು?

ಬೆಳ್ಳಿಯ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆಯಿಲ್ಲ. ಪ್ರಸ್ತುತ ಪ್ರತಿ ಕಿಲೋಗ್ರಾಂಗೆ 99,500 ರೂಪಾಯಿಗಳು ವಾಹಿವಾಟುವಿದೆ. ಒಂದು ಗ್ರಾಂ ಗೆ ಬೆಳ್ಳಿಗೆ 99.50 ರೂ.ಗಳ ವ್ಯಾಪಾರದವಿದೆ. 10 ಗ್ರಾಂ ಬೆಳ್ಳಿಯ ಬೆಲೆ 995 ರೂಪಾಯಿಯಾಗಿದೆ.100 ಗ್ರಾಂ ಬೆಳ್ಳಿ 9,950 ರೂ.ಗಳು ವ್ಯಾಪಾರವಿದೆ. ನಿನ್ನೆ ಬೆಲೆಗೆ ಹೋಲಿಕೆ ಮಾಡಿದ್ದರೆ ಬೆಳ್ಳಿಯ ಬೆಲೆ ಇದು ಸ್ಥಿರವಾಗಿ ಇದೆ.

MCXನಲ್ಲಿ ಚಿನ್ನ, ಬೆಳ್ಳಿ ಬೆಲೆಗಳು ಹೇಗಿದೆ?

ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಗೋಲ್ಡ್ ರೇಟ್ ಏಪ್ರಿಲ್ 4, 2025 ರಂದು ಪಕ್ವವಾಗಲಿರುವ ಚಿನ್ನದ ಫ್ಯೂಚರ್‌ಗಳು ಸಹ ಕುಸಿತವನ್ನು ಅನುಭವಿಸಿ, ಶೇ.0.05 ಕುಸಿತದ ನಂತರ 82,262ಕ್ಕೆ ವಹಿವಾಟು ನಡೆಸಿದವು. ಅದೇ ರೀತಿ, ಮಾರ್ಚ್ 5, 2025 ರ ಮುಕ್ತಾಯ ದಿನಾಂಕದೊಂದಿಗೆ ಬೆಳ್ಳಿ ಫ್ಯೂಚರ್‌ಗಳು ವಹಿವಾಟಿನ ಅವಧಿಯಲ್ಲಿ ಕುಸಿತ ಕಂಡಿವೆ. ಬೆಲೆಗಳು ಶೇ.0.43ರಷ್ಟು ಕುಸಿತ 92,817 ಕ್ಕೆ ತಲುಪಿದವು.

ಸ್ಪಾಟ್ ಚಿನ್ನದ ಬೆಲೆ ಹೇಗಿದೆ?

ರಾಯಿಟರ್ಸ್ ಪ್ರಕಾರ ಸ್ಪಾಟ್ ಚಿನ್ನವು 0303 GMT ವೇಳೆಗೆ ಪ್ರತಿ ಔನ್ಸ್‌ಗೆ ಶೇ.0.9ರಷ್ಟು ಕುಸಿದು $2,776.05 ಕ್ಕೆ ತಲುಪಿದೆ. ಶುಕ್ರವಾರ ತಲುಪಿದ ದಾಖಲೆಯ ಗರಿಷ್ಠ $2,817.23 ರಿಂದ ಹಿಮ್ಮೆಟ್ಟಿದೆ. ಜಾಗತಿಕ ಅನಿಶ್ಚಿತತೆ ಮತ್ತು ಹೂಡಿಕೆದಾರರ ಸುರಕ್ಷಿತ ಸ್ವತ್ತುಗಳ ಬೇಡಿಕೆಯಿಂದಾಗಿ ಈ ತೀವ್ರ ಕುಸಿತ ಕಂಡುಬಂದಿದೆ.

ಯುಎಸ್ ಚಿನ್ನದ ಬೆಲೆಗಳು ಶೇ.0.9 ರಷ್ಟು ಕುಸಿದು $2,810.80 ಕ್ಕೆ ವಹಿವಾಟು ನಡೆಸುತ್ತಿದೆ.ಇತ್ತೀಚಿನ ಏರಿಕೆಯ ಹೊರತಾಗಿಯೂ, ಕಳೆದ ವಾರದ ರ್ಯಾಲಿಯ ನಂತರ ಕೆಲವು ಹೂಡಿಕೆದಾರರು ಲಾಭವನ್ನು ಮಾಡುವುದರಿಂದ ಚಿನ್ನದ ಬೆಲೆಗಳು ಕೆಳಮುಖ ಒತ್ತಡವನ್ನು ಎದುರಿಸಿವೆ. ಅದೇ ರೀತಿ, ಸ್ಪಾಟ್ ಬೆಳ್ಳಿಯು ಕುಸಿತವನ್ನು ಕಂಡಿದ್ದು, ಪ್ರತಿ ಔನ್ಸ್‌ಗೆ ಶೇ.1.4ರಷ್ಟು ಕುಸಿದು $30.87 ಕ್ಕೆ ತಲುಪಿದೆ.

ಭಾರತದ ವಿವಿಧ ನಗರಗಳಲ್ಲಿರುವ ಚಿನ್ನದ ಬೆಲೆ

ಕ್ರಮ
ಸಂಖ್ಯೆ
ನಗರಗಳು22 ಕ್ಯಾರೆಟ್24 ಕ್ಯಾರೆಟ್
1ಬೆಂಗಳೂರುರೂ.7,705ರೂ.8,405
2ಚೆನ್ನೈರೂ.7,705ರೂ.8,405
3ಮುಂಬೈರೂ.7,705ರೂ.8,405
4ದೆಹಲಿರೂ.7,720ರೂ.8,420
5ಕೋಲ್ಕತ್ತಾರೂ.7,705ರೂ.8,405
6ಪುಣೆರೂ.7,705ರೂ.8,405

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್)

ಬೆಂಗಳೂರು: 9,950 ರೂ

ಚೆನ್ನೈ: 10,700 ರೂ

ಮುಂಬೈ: 9,950 ರೂ

ದೆಹಲಿ: 9,950 ರೂ

ಕೋಲ್ಕತಾ: 9,950 ರೂ

ಹೈದರಾಬಾದ್: 10,700ರೂ

ಪುಣೆ :9,950 ರೂ

ಚಿನ್ನ ಖರೀದಿಸಲು ಯೋಜಿಸುತ್ತಿದ್ದರೆ, ಅದನ್ನು ಮೂರು ತಿಂಗಳು ಮುಂದೂಡುವುದು ಉತ್ತಮ. ಏಪ್ರಿಲ್‌ವರೆಗೆ ಕಾದರೆ, ಆ ನಂತರ ಚಿನ್ನದ ಬೆಲೆಗಳು ಕಡಿಮೆಯಾಗುತ್ತವೆ. ಏಕೆಂದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ ಸುಂಕವನ್ನು ಕಡಿಮೆ ಮಾಡಲಾಗಿದೆ. ಕೇಂದ್ರ ಸರ್ಕಾರವು ದರವನ್ನು ಶೇಕಡಾ 15 ರಿಂದ ಶೇಕಡಾ 6 ಕ್ಕೆ ಇಳಿಸಿದೆ. ಇದರಿಂದಾಗಿ ಏಪ್ರಿಲ್ ನಂತರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಭರ್ಜರಿಯಾಗಿ ಇಳಿಯುವ ಸಾಧ್ಯತೆ ಇದೆ. ಭಾರತದಲ್ಲಿ ಚಿನ್ನಕ್ಕೆ ಹೆಚ್ಚಿನ ಮಹತ್ವವಿದೆ.ಭಾರತೀಯ ಮಹಿಳೆಯರಿಗೆ ಚಿನ್ನ ಅಚ್ಚು-ಮೆಚ್ಚು ಅದರಿಂದ ಅತಿ ಹೆಚ್ಚಾಗಿ ಚಿನ್ನವನ್ನು ಖರೀದಿ ಮಾಡುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+