ಅತಿದೊಡ್ಡ ಭಾರತದ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಕಳೆದ ನಾಲ್ಕು ತಿಂಗಳಲ್ಲಿ ಸುಮಾರು 1.65 ಕೋಟಿ ಗ್ರಾಹಕರನ್ನು ಕಳೆದುಕೊಂಡಿದೆ.ಅಂದ್ರೆ ಅದೇ ನಾಲ್ಕು ತಿಂಗಳಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ತನ್ನ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಜಿಯೋಗೆ ಬಿಗ್ ಶಾಕ್ ಆಗಿದೆ. ಹಾಗಿದ್ರೆ ಜಿಯೋ ತನ್ನ ಗ್ರಾಹಕರನ್ನು ಕಳೆದುಕೊಳ್ಳಲು ಕಾರಣವೇನು? ಇಲ್ಲಿದೆ ಹೆಚ್ಚಿನ ಮಾಹಿತಿ
ಹೌದು, ಜಿಯೋ ಅಕ್ಟೋಬರ್ ತಿಂಗಳಲ್ಲಿ 37.6 ಲಕ್ಷ, ಸೆಪ್ಟೆಂಬರ್‌ನಲ್ಲಿ 2024 ರಲ್ಲಿ 79 ಲಕ್ಷ, ಆಗಸ್ಟ್ 2024 ರಲ್ಲಿ 40 ಲಕ್ಷ ಮತ್ತು ಜುಲೈ 2024 ರಲ್ಲಿ 7.58 ಲಕ್ಷ ಮೊಬೈಲ್ ಗ್ರಾಹಕರನ್ನು ಕಳೆದುಕೊಂಡಿದೆ.

ಏರ್ ಟೆಲ್
ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿ ಏರ್ ಟೆಲ್ ಆಗಸ್ಟ್ 2024 ರಲ್ಲಿ 24 ಲಕ್ಷ ಮತ್ತು ಜುಲೈ 2024 ರಲ್ಲಿ 16 ಲಕ್ಷ ಚಂದಾದಾರರ ಏರ್ ಟೆಲ್ ಕಳೆದುಕೊಂಡಿತ್ತು. ಆದರೆ ಇದೀಗ ಅಕ್ಟೋಬರ್‌ನಲ್ಲಿ ಸುಮಾರು 24 ಲಕ್ಷ ಚಂದಾದಾರರನ್ನು ಗಳಿಸಿದೆ ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಅಂಕಿ ಅಂಶಗಳು ಹೇಳಿವೆ.
ಬಿಎಸ್ಎನ್ಎಲ್ ಗ್ರಾಹಕರ ಸಂಖ್ಯೆ ಹೆಚ್ಚಳ
ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಹೊಸ ಚಂದಾದಾರರನ್ನು ಪಡೆಯುತ್ತಿದ್ದು, ಕಂಪನಿಗೆ ಅಕ್ಟೋಬರ್‌ನಲ್ಲಿ ಐದು ಲಕ್ಷ ಗ್ರಾಹಕರು ಬಿಎಸ್ಎನ್ಎಲ್ ಗೆ ಸೇರಿಗೊಂಡಿದ್ದಾರೆ. ಕಳೆದ ನಾಲ್ಕು ತಿಂಗಳಲ್ಲಿ ಬಿಎಸ್ಎನ್ಎಲ್ ಗೆ 68 ಲಕ್ಷಕ್ಕೂ ಹೆಚ್ಚು ಚಂದಾದಾರರ ಹೊಂದಿದೆ.
ವೊಡಾಫೋನ್ ಐಡಿಯಾ
ಸೆಪ್ಟೆಂಬರ್ ನಲ್ಲಿ 15.5 ಲಕ್ಷ ಮತ್ತು ಅಕ್ಟೋಬರ್‌ನಲ್ಲಿ 19 ಲಕ್ಷಕ್ಕೂ ಹೆಚ್ಚು ಮೊಬೈಲ್ ಚಂದಾದಾರರನ್ನು ಕಳೆದುಕೊಂಡಿದೆ. ಜುಲೈನಲ್ಲಿ ಮೊಬೈಲ್ ಕರೆ ದರಗಳನ್ನು ಹೆಚ್ಚಿಸಿದ್ದು ಚಂದಾದಾರರ ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಜುಲೈನಲ್ಲಿ ಜಾರಿಗೆ ಬಂದ 2024 ರ ಮಧ್ಯದಲ್ಲಿ ಕಂಪನಿಗಳು ಸುಂಕ ಹೆಚ್ಚಳ ಮಾಡಿರುವುದು ಖಾಸಗಿ ಟೆಲಿಕಾಂ ಕಂಪನಿಗೆ ಚಂದಾದಾರರ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ.
ಅಕ್ಟೋಬರ್ ತಿಂಗಳ ಅಂಕಿಅಂಶಗಳ ಪ್ರಕಾರ, ರಿಲಯನ್ಸ್ ಜಿಯೋ 47.48 ಕೋಟಿ ಚಂದಾದಾರರನ್ನು ಹೊಂದಿದೆ. ಏರ್ ಟೆಲ್ 28.7 ಕೋಟಿ, ವೊಡಾಫೋನ್ ಐಡಿಯಾ 12.5 ಕೋಟಿ ಮತ್ತು ಬಿಎಸ್ಎನ್ಎಲ್ 3.6 ಕೋಟಿ ಚಂದಾದಾರರನ್ನು ಹೊಂದಿದೆ. ಒಟ್ಟಾರೆ ನೋಡುವುದಾದರೆ ಮಾರುಕಟ್ಟೆಯಲ್ಲಿ ರಿಲಯನ್ಸ್ ಜಿಯೋ ಶೇಕಡಾ 39.99 ರಷ್ಟು ಪಾಲಿನೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಭಾರ್ತಿ ಏರ್ ಟೆಲ್ ಶೇಕಡಾ 33.50 ರಷ್ಟು ಪಾಲು ಹೊಂದಿದೆ. ವೊಡಾಫೋನ್ ಐಡಿಯಾ ಮತ್ತು ಬಿಎಸ್ಎನ್ಎಲ್ ಕ್ರಮವಾಗಿ ಶೇಕಡಾ 18.30 ಮತ್ತು ಶೇಕಡಾ 8.05 ರಷ್ಟು ಮಾರುಕಟ್ಟೆ ಪಾಲು ಪಡೆದುಕೊಂಡಿವೆ. ಅಕ್ಟೋಬರ್ ಅಂತ್ಯದ ವೇಳೆಗೆ ಒಟ್ಟು ವೈರ್ ಲೆಸ್ ಚಂದಾದಾರರ ಸಂಖ್ಯೆ 1,150.42 ಮಿಲಿಯನ್ ಆಗಿದ್ದು, ಮಾಸಿಕ ಶೇಕಡಾ 0.29 ರಷ್ಟು ಅಲ್ಪ ಪ್ರಮಾಣದ ಕುಸಿತ ಕಂಡು ಬಂದಿದೆ.
ಮೂರು ಖಾಸಗಿ ವಲಯದ ಟೆಲಿಕಾಂಗಲಾದ Jio, Airtel ಮತ್ತು Vi ಜುಲೈ ಮೊದಲ ವಾರದಲ್ಲಿ ತನ್ನ ರಿಚಾರ್ಜ್ ಪ್ಲಾನ್ ಮೊತ್ತವನ್ನು ಹೆಚ್ಚಿಸಿವೆ.ಅಂದ್ರೆ ನಷ್ಟದಲ್ಲಿರುವ BSNL ಯಾವುದೇ ರೀತಿಯ ಹೆಚ್ಚಳವನ್ನು ಮಾಡಲಿಲ್ಲ.
ಕರೆನ್ಸಿ ಹೆಚ್ಚಳವು ಸಿಮ್ ಚಂದಾದಾರಿಕೆ ರದ್ದತಿಗೆ ಕಾರಣವಾಗಿದೆ.ಅಕ್ಟೋಬರ್‌ನಲ್ಲಿ ಭಾರತದಲ್ಲಿ ಮೊಬೈಲ್ ಫೋನ್ ಸಂಪರ್ಕಗಳ ಒಟ್ಟಾರೆ ಸಂಖ್ಯೆ 3.3 ಮಿಲಿಯನ್ ಕಡಿಮೆಯಾಗಿದೆ. ಇದು ಸೆಪ್ಟೆಂಬರ್‌ನ 10.1 ಮಿಲಿಯನ್, ಆಗಸ್ಟ್‌ನ 5.77 ಮಿಲಿಯನ್ ಮತ್ತು ಜುಲೈನ 9.22 ಮಿಲಿಯನ್‌ಗಿಂತ ಕಡಿಮೆಯಾಗಿದೆ. ಅಕ್ಟೋಬರ್‌ನಲ್ಲಿ 13.45 ಮಿಲಿಯನ್ ಚಂದಾದಾರರು ಮೊಬೈಲ್ ನಂಬರ್ ಪೋರ್ಟೆಬಿಲಿಟಿ (MNP) ಗಾಗಿ ವಿನಂತಿಗಳನ್ನು ಸಲ್ಲಿಸಿದ್ದಾರೆ ಎಂದು ಟ್ರಾಯ್ ಡೇಟಾ ಬಹಿರಂಗಪಡಿಸಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications