ದೇಶದಲ್ಲಿ ಇಂದು ರೇಷನ್ ಕಾರ್ಡ್ (Ration Card) ಇಲ್ಲದವರೇ ಇಲ್ಲ. ರೇಷನ್ ಕಾರ್ಡ್ ಹೊಂದಿಲ್ಲದಿದ್ದರೆ ಆತನಿಗೆ ಸಿಗಲ್ಲ ಯಾವುದೇ ಸೌಲಭ್ಯ. ಕೇಂದ್ರ ಸರ್ಕಾರದಿಂದ, ರಾಜ್ಯ ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆಯಬೇಕೆಂದರೂ ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿ ಇರಲೇಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಬಡವರ ಅನುಕೂಲಕ್ಕಾಗಿ ಅಕ್ಕಿಯೋಜನೆಯಡಿ 5 ಕೆಜಿ ಅಕ್ಕಿ ವಿತರಣೆಯನ್ನು ಘೋಷಿಸಿತು. ಇದು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಮೂಲಕ ನೀಡಲಾಗುವ ಈ ಪಡಿತರ ಚೀಟಿ, ಹಲವು ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗಿದೆ.

ಆದ್ರೆ ಇದೀಗ ರೇಷನ್ ಕಾರ್ಡ್ ಬಳಕೆದಾರರು ಬೆಚ್ಚಿಬೀಳುವ ಸುದ್ದಿಯೊಂದು ಹೊರಬಿದ್ದಿದೆ. ಕಳೆದ 5 ವರ್ಷದಲ್ಲಿ ರಾಜ್ಯದಲ್ಲಿ 2.43 ಲಕ್ಷ ಅನರ್ಹ ರೇಷನ್ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ. ಡಿಜಿಟಲ್ ಮೂಲಕ, ತಂತ್ರಜ್ಞಾನ ಬೆಳವಣಿಗೆಯಿಂದಾಗಿ ಕಳೆದ 5 ವರ್ಷದಲ್ಲಿ ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ ಎಂದು ಹೇಳಲಾಗಿದೆ.
ಲೋಕಸಭೆಯಲ್ಲಿ ರಿವೀಲ್!
ಲೋಕಸಭೆಯಲ್ಲಿ ಸದ್ಯ ಚಳಿಗಾಲದ ಸಂಸತ್ ಅಧಿವೇಶನ ನಡೆಯುತ್ತಿದೆ. ಈ ವೇಳೆ ಲೋಕಸಭೆಯಲ್ಲಿ ಬುಧವಾರ ಕಲಬುರ್ಗಿ ಸಂಸದ ರಾಧಾಕೃಷ್ಣ ಅವರು ರೇಷನ್ ಕಾರ್ಡ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಗ್ರಾಹಕ ವ್ಯವಹಾರ ಖಾತೆ ರಾಜ್ಯ ಸಚಿವೆ ನಿಮುಬೆನ್ ಜಯಂತಿಬಾಯಿ ಬಂಬಾನಿಯಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
2.25 ಕೋಟಿ ರೇಷನ್ ಕಾರ್ಡ್ ರದ್ದು!
ಪಡಿತರ ಚೀಟಿಗಳ ಡಿಜಿಟಲೀಕರಣ, ಆಧಾರ್ ಲಿಂಕ್, ಅನರ್ಹ ದಾಖಲೆಗಳು, ಸಾವು, ಫಲಾನುಭವಿಗಳ ವಲಸೆ ಹೀಗೆ ಹಲವು ಕಾರಣಗಳಿಂದ ದೇಶದಲ್ಲಿ 2.25 ಕೋಟಿ ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ ಎಂದು ಹೇಳಿದ್ದಾರೆ.
ಮಹತ್ವದ ಕ್ರಮ
ರೇಷನ್ ಕಾರ್ಡ್ ಮತ್ತಷ್ಟು ಪಾರದರ್ಶಕತೆ ಗೊಳಿಸುವ ಉದ್ದೇಶದಿಂದ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಅವರು ಮಹತ್ವದ ಕ್ರಮ ಕೈಗೊಂಡಿದದಾರೆ. 2024ರ ವರದಿಗಳ ಪ್ರಕಾರ ಒಟ್ಟು 1.51 ಕೋಟಿ ಪಡಿತರ ಚೀಟಿಗಳಿವೆ. ಈ ಮೂಲಕ ಒಟ್ಟು 4 ಕೋಟಿಗೂ ಅಧಿಕ ಮಂದಿ ಸರ್ಕಾರದ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲದೇ 2024ರಲ್ಲಿ 13 ಲಕ್ಷಕ್ಕೂ ಅಧಿಕ ಅನರ್ಹ ಪಡಿತರ ಚೀಟಿದಾರರನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಆದರೆ ಅದರಲ್ಲಿ 3.64 ಲಕ್ಷ ಕಾರ್ಡ್‌ಗಳನ್ನು ರದ್ದುಗೊಳಿಸಿದ್ದರು ಎಂದು ವರದಿಯಾಗಿದೆ. ಅದರಲ್ಲೂ ಸರ್ಕಾರಿ ನೌಕರರ ಕಾರ್ಡ್‌ಗಳು ಕೂಡಾ ಸೇರಿತ್ತು.
ಬಿಪಿಎಲ್‌ನಿಂದ ಎಪಿಎಲ್!
ಇನ್ನು ಹಲವರ ರೇಷನ್ ಕಾರ್ಡ್‌ಗಳನ್ನು ರದ್ದುಗೊಳಿಸಿದ್ದಲ್ಲದೇ, ಕೆಲವರನ್ನು ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾಯಿಸಲಾಗಿದೆ. 2023 ರಿಂದ 2025ರ ಅವಧಿಯಲ್ಲಿ ಲಕ್ಷಾಂತರ ಅನರ್ಹ ಫಲಾನುಭವಿಗಳನ್ನು ಪತ್ತೆ ಮಾಡಲಾಗಿದೆ ಮತ್ತು ರದ್ದುಗೊಳಿಸಲಾಗಿದೆ.
ರೇಷನ್ ಕಾರ್ಡ್ ರದ್ದಾಗಲು ಇದೇ ಕಾರಣ!
- ನಕಲಿ ದಾಖಲೆ ನೀಡುವುದು: ಅಂದರೆ ಬಡತನ ರೇಖೆಗಿಂತ ಹೆಚ್ಚಿನ ಆದಾಯ ಪಡೆಯುತ್ತಿದ್ದರೂ, ಹೆಚ್ಚಿನವರು ನಕಲಿ ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ್ ಸೌಲಭ್ಯ ಪಡೆಯುತ್ತಿದ್ದಾರೆ.
- ಆದಾಯ ಮಿತಿ: ಸಾಮಾನ್ಯವಾಗಿ 1.20 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಕ್ಕೆ
- ಬಿಪಿಎಲ್ ಕಾರ್ಡ್ ನೀಡಲಾಗುತ್ತದೆ.
- ಸರ್ಕಾರಿ ನೌಕರರು, ತೆರಿಗೆ ಪಾವತಿದಾರರಿಗೆ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಪಡಿಸಲಾಗಿದೆ.
- 3 ಎಕರೆಗಿಂತ ಹೆಚ್ಚಿನ ಆಸ್ತಿ ಹೊಂದಿರುವವರು.
- ಐಟಿ ರಿಟರ್ನ್ ಫೈಲ್ ಮಾಡುವವರು
- 4 ಚಕ್ರದ ವಾಹನ ಹೊಂದಿರುವವರು


Click it and Unblock the Notifications