ಇತ್ತೀಚೆಗೆ ಜುಲೈ 7ರಂದು ಕರ್ನಾಟಕ ರಾಜ್ಯ ಸರ್ಕಾರವು ಬಜೆಟ್ ಮಂಡನೆಯನ್ನು ಮಾಡಲಾಗಿದೆ. ಹಣಕಾಸು ಸಚಿವರೂ ಆಗಿರುವ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರು ರಾಜ್ಯ ಬಜೆಟ್ ಮಂಡನೆ ವೇಳೆಯಲ್ಲಿ ಮದ್ಯದ ಸುಂಕ ಏರಿಸುವ ಮೂಲಕ ಮದ್ಯ ಪ್ರಿಯರಿಗೆ ಶಾಕ್ ನೀಡಿದ್ದಾರೆ. ಈಗ ಅದರಂತೆಯೇ ಮದ್ಯದ ಮೇಲಿನ ಸುಂಕ ಏರಿಕೆಯ ಕಾರಣದಿಂದಾಗಿ ಮದ್ಯದ ಬೆಲೆಯು ಇಂದಿನಿಂದ ಜಾರಿಗೆ ಬರುವಂತೆ ಏರಿಕೆಯಾಗಲಿದೆ.
ಹೌದು, ಜುಲೈ 20ರಿಂದ ಅನ್ವಯವಾಗುವಂತೆ ಮದ್ಯದ ದರ ಹೆಚ್ಚಳವಾಗಿದ್ದು, ನೀವು ಜುಲೈ 21ರಿಂದ ಖರೀದಿ ಮಾಡುವ ಎಲ್ಲ ಮದ್ಯವು ದುಬಾರಿಯಾಗಿರುತ್ತದೆ. ಗರಿಷ್ಠ ಶೇ.20ರಷ್ಟು ಹೆಚ್ಚಿನ ದರದೊಂದಿಗೆ ಹೊಸ ಬೆಲೆಯಲ್ಲಿ ಶುಕ್ರವಾರದಿಂದ ಮದ್ಯ ಮಾರಾಟವಾಗಲಿದೆ. ಸರ್ಕಾರದ ಆದೇಶ ಪ್ರಕಾರ ಮಧ್ಯರಾತ್ರಿಯಿಂದ ಈ ದರ ಹೆಚ್ಚಳ ಜಾರಿಗೆ ಬಂದಿದೆ.

ಬ್ರಾಂದಿ, ವಿಸ್ಕಿ, ರಮ್, ಜಿನ್ ಸೇರಿದಂತೆ ಎಲ್ಲ ಮದ್ಯದ ಮೇಲೆ ಈಗಿರುವ ಸುಂಕಕ್ಕಿಂತ ಶೇಕಡ 20ರಷ್ಟು ದರವನ್ನು ಏರಿಕೆ ಮಾಡಲಾಗುತ್ತದೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಬ್ರಾಂದಿ, ವಿಸ್ಕಿ, ಜಿನ್, ರಮ್ ಮತ್ತು ಅಂಥಹ ಇತರ ಮದ್ಯಗಳ ಸುಂಕವನ್ನು ಶೇ.20ರಷ್ಟು, ಹಾಗೆಯೇ ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಶೇ.10ರಷ್ಟು ಹೆಚ್ಚಳ ಮಾಡಲಾಗುತ್ತದೆ ಎಂದು ಮಾಹಿತಿ ನೀಡಲಾಗಿತ್ತು.
ಯಾವ ಮದ್ಯಕ್ಕೆ ಎಷ್ಟು ಬೆಲೆ ಏರಿಕೆಯಾಗಬಹುದು?
* ಬಿಯರ್ ಬೆಲೆ 230 ರೂಪಾಯಿಂದ 253 ರೂಪಾಯಿಗೆ ಏರಿಕೆ
* ಬ್ರಾಂಡಿ ಬೆಲೆ 300 ರೂಪಾಯಿಯಿಂದ 350 ರೂಪಾಯಿಗೆ ಏರಿಕೆ
* ವೋಡ್ಕಾ ದರ 300 ರೂಪಾಯಿಯಿಂದ 350 ರೂಪಾಯಿಗೆ ಜಿಗಿತ
* ಬ್ಲ್ಯಾಕ್ ಡಾಗ್ ಫುಲ್ ದರ 3360 ರೂಪಾಯಿಯಿಂದ 4000 ರೂಪಾಯಿಗೆ ಹೆಚ್ಚಳ
* ಇಂಪೇರಿಯರ್ ಬ್ಲ್ಯೂ 300 ರೂಪಾಯಿಂದ 360 ರೂಪಾಯಿಗೆ ಏರಿಕೆ
* Vat69 ದರ 3300 ರೂಪಾಯಿಯಿಂದ 4000 ರೂಪಾಯಿಗೆ ಜಿಗಿತ
* ರಾಯಲ್ ಸ್ಟಾಗ್ ದರ 450 ರೂಪಾಯಿಯಿಂದ 500 ರೂಪಾಯಿಗೆ ಹೆಚ್ಚಳ
* ರಾಯಲ್ ಚ್ಯಾಲೆಂಜ್ ಬೆಲೆ 450 ರೂಪಾಯಿಯಿಂದ 500 ರೂಪಾಯಿಗೆ ಏರಿಕೆ
* ಎಂಸಿ ವಿಸ್ಕಿ ದರ 300 ರೂಪಾಯಿಯಿಂದ 360 ರೂಪಾಯಿಗೆ ಜಿಗಿತ
ಜುಲೈ ಆರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 3.39 ಲಕ್ಷ ಕೋಟಿಯ ಬಜೆಟ್ ಮಂಡನೆ ಮಾಡುತ್ತಿದ್ದು, ಹಲವು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಆದರೆ ಈ ನಡುವೆ ಅದರ ಹೊರೆಯನ್ನು ಮದ್ಯ ಪ್ರಿಯರಿಗೆ ವಿಧಿಸಿರುವಂತೆ ಕಾಣುತ್ತಿದೆ. ಅಬಕಾರಿ ತೆರಿಗೆಯಲ್ಲಿ ಹೆಚ್ಚಳ ಮಾಡಲಾಗಿರುವ ಕಾರಣದಿಂದಾಗಿ ಇನ್ನು ಮುಂದೆ ಮದ್ಯ ದುಬಾರಿಯಾಗಲಿದೆ.


Click it and Unblock the Notifications