ಪೆನ್ನಿ ಸ್ಟಾಕ್ ವಿಭಜನೆಯ ನಿರೀಕ್ಷೆಯಿದೆ.ಬೋನಸ್ ವಿತರಣೆಯ ನಂತರ ಕಂಪನಿಯು ಸ್ಟಾಕ್ ವಿಭಜನೆಗೆ ಘೋಷಣೆ ಮಾಡಿದೆ.ಕಂಪನಿಯು ಸ್ಟಾಕ್ ವಿಭಜನೆ ಅನುಪಾತ ಮತ್ತು ಸ್ಟಾಕ್ ವಿಭಜನೆ ದಾಖಲೆ ದಿನಾಂಕ ಎರಡನ್ನೂ ನಿಗದಿಪಡಿಸಿದೆ.
ಹೌದು,ಯಾವುದೇ ಒಂದು ಷೇರಿನ ಬೆಲೆ ಅತ್ಯಂತ ಕಡಿಮೆ ಇದ್ದರೆ ಅದನ್ನ ಪೆನ್ನಿ ಸ್ಟಾಕ್ ಎನ್ನುತ್ತಾರೆ.ಆದರೆ ಇದೀಗ ಕಂಪನಿಯು ಷೇರು ವಿಭಜನೆ ಅನುಪಾತ ಮತ್ತು ಷೇರು ವಿಭಜನೆ ದಾಖಲೆ ದಿನಾಂಕ ಎರಡನ್ನೂ ನಿಗದಿಪಡಿಸಿದೆ. ಷೇರು ವಿಭಜನೆಯು ಷೇರು ಬೆಲೆ10 ಪಟ್ಟು ಅಗ್ಗವಾಗಲಿದೆ.

ಇದು ನಾಗರಿಕ ನಿರ್ಮಾಣ ಉದ್ಯಮದಲ್ಲಿ ತೊಡಗಿರುವ ಕಂಪನಿಯ ಮೊದಲ ಸ್ಟಾಕ್ ವಿಭಜನೆಯ ಪ್ರಕಟಣೆಯಾಗಿದೆ. ಮತ್ತು ಇದರ ಷೇರಿನ ಬೆಲೆ BSE ನಲ್ಲಿ ಕೇವಲ 25.46 ರೂ. ಆಗಿದೆ.
ಶೀಘ್ರದಲ್ಲೇ ವಿಭಜನೆಯಾಗಲಿರುವ ಷೇರುಗಳ ಪಟ್ಟಿಯಲ್ಲಿ ರಂಜೀತ್ ಮೆಕಾಟ್ರಾನಿಕ್ಸ್ ಲಿಮಿಟೆಡ್ ಕಂಪನಿ ಕೂಡ ಒಂದಾಗಿದೆ. ಕಂಪನಿಯು ಕೇವಲ 50.92 ಕೋಟಿ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ.
ರಂಜೀತ್ ಮೆಕಾಟ್ರಾನಿಕ್ಸ್‌ನ ಷೇರು ವಿಭಜನೆಯ ಘೋಷಣೆಯು ಬೋನಸ್ ವಿತರಣೆಯ ಬೆನ್ನಲ್ಲೇ ಸ್ಟಾಕ್ ವಿಭಜನೆ ಕೂಡ ಬಂದಿದೆ. ಕಂಪನಿಯು ಇದೇ ತಿಂಗಳು ಏಪ್ರಿಲ್ 2, 2025 ರಂದು ತನ್ನ ಷೇರುದಾರರಿಗೆ 1:1 ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡಿತ್ತು.
ಎಕ್ಸ್ಚೇಂಜ್ ಫೈಲಿಂಗ್ ಪ್ರಕಾರ, ರಂಜೀತ್ ಮೆಕಾಟ್ರಾನಿಕ್ಸ್ ಕಂಪನಿಯು 10:1 ಅನುಪಾತದಲ್ಲಿ ಉಪವಿಭಾಗ ಅಥವಾ ಷೇರು ವಿಭಜನೆಗೆ ಪ್ರಸ್ತಾವನೆಯನ್ನು ಅನುಮೋದಿಸಿದೆ. ಅಂದರೆ ಪ್ರತಿ ಸ್ಟಾಕ್ 10 ಹೊಸ ಷೇರುಗಳಾಗಿ ವಿಭಜನೆಯಾಗುತ್ತದೆ. ಷೇರು ವಿಭಜನೆಯ ಅನುಷ್ಠಾನದ ನಂತರ ಅಸ್ತಿತ್ವದಲ್ಲಿರುವ 10 ರೂ. ಮುಖಬೆಲೆಯು ಷೇರುಗಳು 1 ರೂಪಾಯಿಯಾಗುತ್ತದೆ.
ಇನ್ನೂ ಕಂಪನಿಯ ಈಕ್ವಿಟಿ ಷೇರುಗಳ ಮುಖಬೆಲೆಯ ಉಪವಿಭಾಗ ವಿಭಜನೆ ಅಂದರೆ ಕಂಪನಿಯ ಈಕ್ವಿಟಿ ಷೇರುಗಳ ಮುಖಬೆಲೆ,10 ರೂ, ಮುಖಬೆಲೆಯ ಈಕ್ವಿಟಿ ಷೇರುಗಳನ್ನು 5 ರೂ.ಗಳ ಮುಖಬೆಲೆಯ 1 ಈಕ್ವಿಟಿ ಷೇರಾಗಿ ಉಪವಿಭಜಿಸಬಹುದು ಎಂದು ರಂಜೀತ್ ಮೆಕಾಟ್ರಾನಿಕ್ಸ್ ತಿಳಿಸಿದೆ.
ರಂಜೀತ್ ಮೆಕಾಟ್ರಾನಿಕ್ಸ್ ಷೇರು ವಿಭಜನೆಯಲ್ಲಿ ಷೇರುದಾರರ ಭಾಗವಹಿಸುವಿಕೆಯ ಅರ್ಹತೆಯನ್ನು ನಿರ್ಧರಿಸಲು ದಿನಾಂಕವನ್ನು ಸಹ ನಿಗದಿಪಡಿಸಿದೆ. ದಿನಾಂಕ ಇದೇ ತಿಂಗಳು 21ಆಗಿದೆ.
ರಂಜೀತ್ ಮೆಕಾಟ್ರಾನಿಕ್ಸ್ ಷೇರು ಬೆಲೆ ಕಳೆದ 3 ತಿಂಗಳಲ್ಲಿ ಶೇ. 49 ರಷ್ಟು ಮತ್ತು 6 ತಿಂಗಳಲ್ಲಿ ಶೇ. 67 ರಷ್ಟು ಲಾಭವನ್ನು ನೀಡಿದೆ. ಒಂದು ವರ್ಷದಲ್ಲಿ, ಪೆನ್ನಿ ಸ್ಟಾಕ್ ಶೇ. 10 ರಷ್ಟು ಕುಸಿದಿದೆ. ಕಳೆದ 3 ವರ್ಷಗಳಲ್ಲಿ ಪೆನ್ನಿ ಸ್ಟಾಕ್ ಶೇ. 408 ರಷ್ಟು ಭಾರಿ ಲಾಭವನ್ನು ಷೇರುದಾದರಿಗೆ ನೀಡಿದೆ.
ಷೇರು ಮಾರುಕಟ್ಟೆಯಲ್ಲಿ ಸ್ಮಾಲ್ ಕ್ಯಾಪ್ ಷೇರುಗಳು ಸಾಕಷ್ಟು ಏರಿಳಿತಕ್ಕೆ ಒಳಗಾಗುವುದು ಸಹಜವಾಗಿದೆ. ಆದರೆ, ಕೆಲವು ವಿಶೇಷ ಸಂದರ್ಭದಲ್ಲಿ ಈ ಷೇರುಗಳು ಸಾಕಷ್ಟು ಟ್ರೆಂಡ್ ಆಗಿರುತ್ತವೆ. ಇದೇ ರೀತಿಯಲ್ಲಿ 100 ರೂ.ಗಳ ಒಳಗಿನ ಈ ಸ್ಮಾಲ್ ಕ್ಯಾಪ್ ಸ್ಟಾಕ್ ಕಪಿಲ್ ರಾಜ್ ಫೈನಾನ್ಸ್ ನಾಳೆ (ಏಪ್ರಿಲ್ 15 ರಂದು ಮಂಗಳವಾರ) ಷೇರುಪೇಟೆಯಲ್ಲಿ ಸದ್ದು ಮಾಡುವ ಸಾಧ್ಯತೆಯಿದೆ.
ಎನ್‌ಬಿಎಫ್‌ಸಿ ಆಗಿರುವ ಕಪಿಲ್ ರಾಜ್ ಫೈನಾನ್ಸ್ ದೇಶೀಯ ಷೇರುಪೇಟೆಯಲ್ಲಿ 10:1 ಅನುಪಾತದಲ್ಲಿ ವಿಭಜನೆಯಾಗುತ್ತಿದೆ. ನಾಳೆ ಎಕ್ಸ್ ಡೇಟ್ ಮೇಲೆ ವಹಿವಾಟಿಗೆ ಸಾಕ್ಷಿಯಾಗಲಿವೆ.
ಇನ್ನು ಕೈಗಾರಿಕಾ ವಲಯದ ಕಂಪನಿ ಕ್ಯಾಪ್ಟನ್ ಟೆಕ್ನೋಕಾಸ್ಟ್ ಲಿ (Captain Technocast Ltd) ತನ್ನ ಷೇರುದಾರರಿಗೆ ಬಂಪರ್ ಆಫರ್ ನೀಡಿದೆ. ಇತ್ತೀಚೆಗೆ ನಡೆದ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಬೋನಸ್ ಷೇರು ವಿತರಿಸಲು ಅನುಮೋದನೆ ನೀಡಿದೆ. ಈ ಬಗ್ಗೆ ಸ್ವತಃ ಕಂಪನಿ ಮಾಹಿತಿ ನೀಡಿದೆ. ಅದರಂತೆ 1:1 ಅನುಪಾತದಲ್ಲಿ ಬೋನಸ್ ಷೇರು ವಿತರಣೆಗೆ ಆಗಲಿದೆ.
ಷೇರು ಪೇಟೆಯಲ್ಲಿ ಕೆಲವು ಸ್ಟಾಕ್‌ಗಳು ಹೂಡಿಕೆದಾರರಿಂದ ಫೋಕಸ್ ಆಗಿದೆ. ಅದರಲ್ಲೂ 100 ರೂ. ಒಳಗಿನ ಈ ಷೇರು ಸಾಕಷ್ಟು ಸುದ್ದಿಯಲ್ಲಿರಲಿದೆ. ಯಾಕಂದ್ರೆ, ಈ ಷೇರು 10:1 ಅನುಪಾತದಲ್ಲಿ ಸ್ಪ್ಲಿಟ್ ಆಗಿದೆ. ನಾಳೆ ಎಕ್ಸ್ ದಿನಾಂಕದ ಮೇಲೆ ವಹಿವಾಟು ನಡೆಸಲಿದೆ.


Click it and Unblock the Notifications