8th Pay Commission: ಸರ್ಕಾರಿ ನೌಕರರಿಗೆ ದೊಡ್ಡ ಖುಷಿ ಸುದ್ದಿ ಇಲ್ಲಿದೆ. ಕನಿಷ್ಠ ಮೂಲ ವೇತನ 51,000 ರೂ. ದಾಟುವ ಸಾಧ್ಯತೆ ದಟ್ಟವಾಗಿದೆ. ಪಿಂಚಣಿಯೂ ಸಹ 25,740 ರೂ.ಗೆ ಹೆಚ್ಚಳವಾಗಲಿದೆ. ಹೌದು, ಸರ್ಕಾರಿ ನೌಕರರಿಗೆ ಮೋದಿ ಸರ್ಕಾರ ಸಿಹಿಸುದ್ದಿ ನೀಡುವ ಸುದ್ದಿ ಹಬ್ಬಿದೆ. ಕನಿಷ್ಠ ಮೂಲ ಸಂಬಳವು ಬಹುತೇಕ ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ. 8ನೇ ವೇತನ ಆಯೋಗದಿಂದ ಫಿಟ್ಮೆಂಟ್ ಫ್ಯಾಕ್ಟರ್ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. 18,000 ರೂ. ಇರುವ ನೌಕರರ ವೇತನ ಕನಿಷ್ಠ 51,000 ರೂ. ಗಿಂತಲೂ ಹೆಚ್ಚಳವಾಗುವ ನಿರೀಕ್ಷೆಯಿದೆ.
ಕೇಂದ್ರ ಸರ್ಕಾರಿ ನೌಕರರು 8ನೇ ವೇತನ ಆಯೋಗದ ಅಧಿಕೃತ ಘೋಷಣೆಗೆ ಕಾಯುತ್ತಿದ್ದಾರೆ. ಈ ಮಧ್ಯಯೇ, ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನದಲ್ಲಿ ಶೇಕಡಾ 186 ರಷ್ಟು ಹೆಚ್ಚಳ ಕಾಣುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಕೇಂದ್ರ ಸರ್ಕಾರಿ ನೌಕರರು ಪ್ರಸ್ತುತ 7ನೇ ವೇತನ ಆಯೋಗದ ಅಡಿಯಲ್ಲಿ ತಿಂಗಳಿಗೆ ಕನಿಷ್ಠ 18 ಸಾವಿರ ರೂ. ಮೂಲ ವೇತನ ಪಡೆಯುತ್ತಿದ್ದಾರೆ. ಇದೀಗ, 6ನೇ ವೇತನ ಆಯೋಗದ 7 ಸಾವಿರ ರೂ. ನಿಂದ ಹೆಚ್ಚಿಸಲಾಗುತ್ತದೆ. ಸರಿ ಸುಮಾರು ಮೂರು ಪಟ್ಟು ವೇತನ ಹೆಚ್ಚಬಹುದು.

ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಅನುಮತಿ
ಕೇಂದ್ರ ಸರ್ಕಾರ ಮುಂದಿನ ವರ್ಷ ಬಜೆಟ್‌ನಲ್ಲಿ ಇದಕ್ಕೆ ಅನುಮತಿ ನೀಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. 7ನೇ ವೇತನ ಆಯೋಗದ ಶಿಫಾರಸಿನ ಪ್ರಕಾರ, ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನ 18 ಸಾವಿರ ರೂ. ಇದೆ. ಪ್ರಸ್ತುತ, ಫಿಟ್‌ಮೆಂಟ್ ಫ್ಯಾಕ್ಟರನ್ನು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಸದ್ಯ 2.57 ಇರುವ ಇದನ್ನು 2.86ಕ್ಕೆ ಹೆಚ್ಚಳ ಮಾಡಲು ಶಿಫಾರಸು ಮಾಡಲಾಗಿದೆ. ಇದಲ್ಲದೆ, ಪಿಂಚಣಿಯೂ ಸಹ 9 ಸಾವಿರ ರೂ.ಗಳಿಂದ 25,740 ರೂ.ಗೆ ಹೆಚ್ಚಳವಾಗುವ ಸಾಧ್ಯತೆಯಿದೆ.
ಕನಿಷ್ಠ ಮೂಲ ವೇತನ 51,000 ರೂ.!
ವರದಿಯ ಪ್ರಕಾರ, ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನ 51,000 ರೂ. ದಾಟುವ ಸಾಧ್ಯತೆಯಿದೆ. ಮೊದಲೇ ಹೇಳಿದಂತೆ 7ನೇ ವೇತನ ಆಯೋಗದಲ್ಲಿ ಈ ಫಿಟ್ಮೆಂಟ್ ಫ್ಯಾಕ್ಟರ್ 2.57 ಇದೆ. ಮುಂದೆ ಫಿಟ್ಮೆಂಟ್ ಫ್ಯಾಕ್ಟರ್ 2.86ಕ್ಕೆ ಹೆಚ್ಚಳ ಆಗುವ ಸುಳಿವು ಸಿಕ್ಕಿದೆ. ಒಂದು ವೇಳೆ ಇದು ನಿಜವಾದರೆ, ಅಂದರೆ ಫಿಟ್ಮೆಂಟ್ ಫ್ಯಾಕ್ಟರ್ 2.86ಕ್ಕೆ ಹೆಚ್ಚಿಸಿದಲ್ಲಿ ಕನಿಷ್ಠ ವೇತನ ಶೇಕಡಾ 186ರಷ್ಟು ಏರಿಕೆಯಾಗಲಿದೆ. ಆಗ, 18,000 ರೂ. ಇರುವ ಕನಿಷ್ಠ ಮೂಲ ವೇತನ 51,480 ರೂ. ಆಗಲಿದೆ.
8ನೇ ವೇತನ ಆಯೋಗ ರಚನೆ ಯಾವಾಗ?
6ನೇ ವೇತನ ಆಯೋಗದಲ್ಲಿ ಕನಿಷ್ಠ ಮೂಲ ವೇತನ 7,000 ರೂ. ಇತ್ತು. ಬಳಿಕ, 7ನೇ ವೇತನ ಆಯೋಗ 2014ರ ಫೆಬ್ರುವರಿಯಲ್ಲಿ ರಚನೆಯಾಯಿತು. ಇದು ಕನಿಷ್ಠ ಮೂಲ ವೇತನವನ್ನು 7 ಸಾವಿರ ರೂ.ಗಳಿಂದ 18 ಸಾವಿರ ರೂ.ಗಳಿಗೆ ಹೆಚ್ಚಿಸಿತು. 2016ರ ಜನವರಿ 1ರಿಂದ 7ನೇ ವೇತನ ಆಯೋಗದ ಶಿಫಾರಸುಗಳು ಜಾರಿಗೆ ಬಂದಿವೆ. ಸದ್ಯ, ಈಗ 8ನೇ ವೇತನ ಆಯೋಗ ರಚನೆಯಾಗುವ ನಿರೀಕ್ಷೆಯಿದೆ.
ಕೇಂದ್ರ ಸರ್ಕಾರ 8ನೇ ವೇತನ ಆಯೋಗ ಯಾವಾಗ ರಚನೆ ಬಗ್ಗೆ ಅಧಿಕೃತ ಘೋಷಣೆ ಪ್ರಕಟಿಸಿಲ್ಲ. ಡಿಸೆಂಬರ್ನಲ್ಲಿ ಸಭೆ ನಡೆಯಲಿದ್ದು, ಅಲ್ಲಿ 8ನೇ ವೇತನ ಆಯೋಗದ ಬಗ್ಗೆ ಚರ್ಚೆಯಾಗಲಿದೆ. ಮುಂದಿನ 2025-26ರ ಬಜೆಟ್‌ನಲ್ಲಿ 8ನೆ ವೇತನ ಆಯೋಗದ ಘೋಷಣೆ ಮಾಡುವ ಸಾಧ್ಯತೆಯಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆದಾರರೇ, ಇಂದೇ ನಗದೀಕರಿಸಿಕೊಳ್ಳಿ ನಿಮ್ಮ ಲಾಭ!



Click it and Unblock the Notifications