For Quick Alerts
ALLOW NOTIFICATIONS  
For Daily Alerts

ಟಾಟಾ ಸನ್ಸ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ದೊಡ್ಡ ಗೆಲುವು: ಸೈರಸ್ ಮಿಸ್ತ್ರಿಗೆ ಆಘಾತ

|

ಟಾಟಾ ಸನ್ಸ್ ಮತ್ತು ಸೈರಸ್ ಮಿಸ್ತ್ರಿ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಟಾಟಾ ಸನ್ಸ್ ಪರವಾಗಿ ತೀರ್ಪು ನೀಡಿದೆ. ಈ ಹಿಂದೆ ಎನ್‌ಸಿಎಲ್‌ಎಟಿ ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಸನ್ಸ್‌ನ ಅಧ್ಯಕ್ಷರನ್ನಾಗಿ ಮತ್ತೆ ನೇಮಕ ಮಾಡಲು ಆದೇಶಿಸಿತ್ತು. ಆದರೆ ಈ ನಿರ್ಧಾರವನ್ನು ಇಂದು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

 

ಸುಪ್ರೀಂಕೋರ್ಟ್‌ನ ಈ ನಿರ್ಧಾರವು ಬಹಳ ವರ್ಷದಿಂದ ಉಳಿದಿದ್ದ ವಿವಾದವನ್ನು ಕೊನೆಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ, ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಮತ್ತು ನ್ಯಾಯಮೂರ್ತಿ ವಿ. ರಾಮಸುಬ್ರಮಣಿಯನ್ ಅವರ ನ್ಯಾಯಪೀಠ ಈ ತೀರ್ಪು ನೀಡಿದೆ.

ಟಾಟಾ ಸನ್ಸ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ದೊಡ್ಡ ಗೆಲುವು

ಎನ್‌ಸಿಎಲ್‌ಟಿ 17 ಡಿಸೆಂಬರ್ 2019 ರಂದು ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಮರುಸ್ಥಾಪಿಸುವಂತೆ ಆದೇಶಿಸಿತ್ತು. ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ಸೈರಸ್ ಮಿಸ್ತ್ರಿ ಅವರನ್ನು ತೆಗೆದುಹಾಕಿದ್ದನ್ನು ಎನ್‌ಸಿಎಲ್‌ಟಿ ಸಮರ್ಥಿಸಿತ್ತು. ಅದೇ ಸಮಯದಲ್ಲಿ, ಎನ್‌ಸಿಎಲ್‌ಎಟಿ ಸೈರಸ್ ಮಿಸ್ತ್ರಿ ಅವರನ್ನು ಮತ್ತೆ ನೇಮಕ ಮಾಡುವ ಆದೇಶವನ್ನೂ ನೀಡಿತ್ತು.

ಈ ಎನ್‌ಸಿಎಲ್‌ಎಟಿ ಆದೇಶದ ವಿರುದ್ಧ ಟಾಟಾ ಸನ್ಸ್ ಸುಪ್ರೀಂ ಕೋರ್ಟ್‌ ಮೊರೆ ಹೋಯಿತು. ಇಂದು ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ತೀರ್ಪು ಟಾಟಾ ಸನ್ಸ್ ಪರವಾಗಿದೆ.

24 ಅಕ್ಟೋಬರ್ 2016 ರಂದು, ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಸನ್ಸ್ ಅಧ್ಯಕ್ಷರಾಗಿ ತೆಗೆದು ಹಾಕಲಾಯಿತು. ತದ ನಂತರ ಅವರು ಕಂಪನಿ ವಿರುದ್ಧ 2016 ರ ಡಿಸೆಂಬರ್‌ನಲ್ಲಿ ಎನ್‌ಸಿಎಲ್‌ಟಿಯಲ್ಲಿ ಪ್ರಕರಣ ದಾಖಲಿಸಿದರು. ಜುಲೈ 2018 ರಲ್ಲಿ ಎನ್‌ಸಿಎಲ್‌ಟಿ ಸೈರಸ್ ಮಿಸ್ತ್ರಿ ಅವರ ಅರ್ಜಿಯನ್ನು ವಜಾಗೊಳಿಸಿತು. ಸೈರಸ್ ಮಿಸ್ತ್ರಿ ನಂತರ ಎನ್‌ಸಿಎಲ್‌ಎಟಿಗೆ ತೆರಳಿದರು. ಇಲ್ಲಿ 2019 ರ ಡಿಸೆಂಬರ್‌ನಲ್ಲಿ ಎನ್‌ಸಿಎಲ್‌ಎಟಿ ಸೈರಸ್ ಮಿಸ್ತ್ರಿ ಅವರನ್ನು ಮತ್ತೆ ಟಾಟಾ ಸನ್ಸ್‌ನ ಅಧ್ಯಕ್ಷರನ್ನಾಗಿ ಮಾಡಲು ಆದೇಶಿಸಿತು.

ಟಾಟಾ ಸಮೂಹವು 100 ಕ್ಕೂ ಹೆಚ್ಚು ಕಂಪನಿಗಳನ್ನು ಹೊಂದಿದೆ. ಟಾಟಾ ಸನ್ಸ್ ಈ ಎಲ್ಲ ಕಂಪನಿಗಳನ್ನು ನಿಯಂತ್ರಿಸುತ್ತದೆ.

English summary

Big Win For Tata Sons: Supreme Court Backs Removal Of Cyrus Mistry

In a big win for Tata Sons, the Supreme Court today backed the removal of Cyrus Mistry as the chairman of the over $100 billion salt-to-software Tata Group in 2016
Story first published: Friday, March 26, 2021, 15:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X