ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶನಿವಾರ ನಿವೃತ್ತ ಪತ್ರಕರ್ತರ ಮಾಸಿಕ ಪಿಂಚಣಿಯನ್ನು 6,000 ರೂ.ಗಳಿಂದ 15,000 ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಘೋಷಣೆಯನ್ನು ಮಾಡಿದ್ದಾರೆ.
ಹೌದು, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪತ್ರಕರ್ತರಿಗೆ ನೀಡಲಾಗುವ ಮಾಸಿಕ ಪಿಂಚಣಿಯನ್ನು ಗನೀಯವಾಗಿ ಹೆಚ್ಚಳವನ್ನು ಮಾಡಿದೆ. ಬಿಹಾರ ಪತ್ರಕಾರ್ ಸಮ್ಮಾನ್ ಪಿಂಚಣಿ ಯೋಜನೆಯಡಿ ಈ ಹೆಚ್ಚಳವನ್ನು ಮಾಡಲಾಗಿದೆ. ಅರ್ಹ ಪತ್ರಕರ್ತರು ಇನ್ನು ಮುಂದೆ ತಿಂಗಳಿಗೆ 15,000 ಪಿಂಚಣಿ ಪಡೆಯಲಿದ್ದಾರೆ. ಈ ಮೊದಲು ಇದು 6,000 ರೂ ಇತ್ತು.

ಬಿಹಾರ್ ಮುಖ್ಯಮಂತ್ರಿಯವರು ಪ್ರಕಾರ ಪಿಂಚಣಿ ಪಡೆಯುತ್ತಿರುವ ಪತ್ರಕರ್ತರು ಒಂದು ವೇಳೆ ಮರಣ ಹೊಂದಿದರೆ, ಅವರ ಸಂಗಾತಿಯು ಜೀವನಾಧಾರವಾಗಿ ತಿಂಗಳಿಗೆ 10,000 ಪಿಂಚಣಿ ಪಡೆಯಲು ಅರ್ಹರಾಗುತ್ತಾರೆ ಎಂದು ಹೇಳಿದ್ದಾರೆ. ಈ ಹಿಂದೆ ಮೊತ್ತ ಕೇವಲ 3,000 ಆಗಿತ್ತು. ಈ ಕ್ರಮವು ಪತ್ರಕರ್ತರ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಮಾಹಿತಿಯನ್ನು ಹಂಚಿಕೊಂಡಿರುವ ನಿತೀಶ್ ಕುಮಾರ್, ಪ್ರಜಾಪ್ರಭುತ್ವದಲ್ಲಿ ಪತ್ರಕರ್ತರ ಪಾತ್ರವನ್ನು ಶ್ಲಾಘಿಸಿದ್ದಾರೆ.ಬಿಹಾರ ಪತ್ರಕಾರ್ ಸಮ್ಮಾನ್ ಪಿಂಚಣಿ ಯೋಜನೆಯಡಿ ಎಲ್ಲಾ ಅರ್ಹ ಪತ್ರಕರ್ತರಿಗೆ ಮಾಸಿಕ ಪಿಂಚಣಿಯನ್ನು 15,000ಕ್ಕೆ ಹೆಚ್ಚಿಸಲು ಸೂಚನೆ ನೀಡಲಾಗಿದೆ. ಅಲ್ಲದೆ, ಪತ್ರಕರ್ತರ ನಿಧನದ ನಂತರ ಅವರ ಸಂಗಾತಿಗೆ 10,000 ಪಿಂಚಣಿ ನೀಡಲಾಗುವುದು ಎಂದು ಬರೆದುಕೊಂಡಿದ್ದಾರೆ.
ಪತ್ರಕರ್ತರು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಇದ್ದಂತೆ, ಸಮಾಜದ ಪ್ರಗತಿಯಲ್ಲಿ ಅವರ ಪಾತ್ರ ಮಹತ್ವದಾಗಿದೆ.
ನಿಷ್ಪಕ್ಷಪಾತ ವರದಿಗಾರಿಕೆಯಿಂದ ಭ್ರಷ್ಟಚಾರಗಳು ಕಡಿಮೆಯಾಗುತ್ತೇವೆ.ಜೀವನದಲ್ಲಿ ಸಂತೋಷದಿಂದ ಬದುಕಲು ಸಹಾಯ ಮಾಡುವ ಮೂಲಕ ಅವರ ಯೋಗಕ್ಷೇಮವನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ನಿತೀಶ್ ಕುಮಾರ್ ತಿಳಿಸಿದ್ದಾರೆ.
ಇದಲ್ಲದೆ, ಬಿಹಾರ ಸರ್ಕಾರವು ಹಿರಿಯ ನಾಗರಿಕರು, ವಿಧವೆಯರು ಮತ್ತು ಅಂಗವಿಕಲರಿಗೆ ನೀಡಲಾಗುತ್ತಿದ್ದ ಮಾಸಿಕ ಪಿಂಚಣಿಯನ್ನು 400 ರಿಂದ 1,100ಕ್ಕೆ ಹೆಚ್ಚಳವನ್ನು ಮಾಡಿದೆ. ಇದರೊಂದಿಗೆ, ಆಗಸ್ಟ್ 1, 2025 ರಿಂದ 125 ಯೂನಿಟ್‌ಗಳವರೆಗೆ ವಿದ್ಯುತ್ ಬಳಕೆಯನ್ನು ಉಚಿತವಾಗಿ ಸಹ ನೀಡಲಾಗುತ್ತದೆ.ಮುಂದಿನ ಐದು ವರ್ಷಗಳಲ್ಲಿ 1 ಕೋಟಿ ಸರ್ಕಾರಿ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಬಿಹಾರ್ ಸರ್ಕಾರ ಹೊಂದಿದೆ.
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪತ್ರಕರ್ತರಿಗೆ ನೀಡಲಾಗುವ ಮಾಸಿಕ ಪಿಂಚಣಿಯನ್ನು ಗನೀಯವಾಗಿ ಹೆಚ್ಚಳವನ್ನು ಮಾಡಿದೆ. ಬಿಹಾರ ಪತ್ರಕಾರ್ ಸಮ್ಮಾನ್ ಪಿಂಚಣಿ ಯೋಜನೆಯಡಿ ಈ ಹೆಚ್ಚಳವನ್ನು ಮಾಡಲಾಗಿದೆ. ಅರ್ಹ ಪತ್ರಕರ್ತರು ಇನ್ನು ಮುಂದೆ ತಿಂಗಳಿಗೆ 15,000 ಪಿಂಚಣಿ ಪಡೆಯಲಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ ಬಿಹಾರ ಸರ್ಕಾರ ಪತ್ರಕರ್ತರಿಗಾಗಿ ಪಿಂಚಣಿಯನ್ನು ಹೆಚ್ಚಳ ಮಾಡಿರುವುದರಿಂದ ಗ್ರಾಮೀಣ ಪತ್ರಕರ್ತರಿಗೆ ಹೆಚ್ಚಿನ ಅನುಕೂಲವಾಗಿದೆ. ಸಮಾಜದ ಕುಂದುಕೊರತೆಗಳನ್ನು ಗುರುತಿಸಿ ಸರ್ಕಾರದವರೆಗೂ ಮುಟ್ಟಿಸುವ ಕೆಲಸ ಮಾಡುವರು ಪತ್ರಕರ್ತರು. ಸತ್ಯ ನ್ಯಾಯದ ಜನರ ಧ್ವನಿಯಾಗಿರುವ ಪತ್ರಕರ್ತನ ಹುದ್ಧೆ ಸಾಮಾನ್ಯದಲ್ಲ.. ಹಲವಾರು ಕಷ್ಟ ತೊಡಕುಗಳು ಸಾವಲುಗಳು ಇರುತ್ತಾವೆ. ಇವೆಲ್ಲಾವನ್ನು ಮೆಟ್ಟಿ ನಿಂತು ಸುದ್ದಿಯನ್ನು ಸರ್ಕಾರಕ್ಕೆ ತಲುಪಿಸಉವಂತಹ ಕಾರ್ಯವನ್ನು ಮಾಡುತ್ತೇನೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications