Karnataka Bike Taxi Ban: ಬೈಕ್ ಟ್ಯಾಕ್ಸಿ ನಿಷೇಧದ ನಂತರ ಬೆಂಗಳೂರಿನಲ್ಲಿ ಆನ್‌ಲೈನ್ ಆಟೋ ಸೇವೆಗಳ ದರಗಳ ಏರಿಕೆ ಕಂಡಿಬಂದಿದೆ. ಸಾರ್ವಜನಿಕರಿಗೆ ಆಟೋ ಪ್ರಯಾಣ ದುಬಾರಿಯಾಗಿರುವುದರಿಂದ ದರಗಳನ್ನು ಮಿತಿಗೊಳಿಸಬೇಕು ಎಂದು ಮನವಿ ಮಾಡುತ್ತಿದ್ದಾರೆ. ಜೊತೆಗೆ ಮೇ 2024 ರ ಹೈಕೋರ್ಟ್ ಆದೇಶವನ್ನು ಜಾರಿಗೊಳಿಸಲು ಕೂಗು ಕೇಳಿಬರುತ್ತಿದೆ.
ಹೌದು, ರಾಜ್ಯಾದ್ಯಂತ ಹೈಕೋರ್ಟ್ ಬೈಕ್ ಮತ್ತು ಟ್ಯಾಕ್ಸಿ ಸೇವೆಗಳನ್ನು ಸ್ಥಗಿತಗೊಳಿಸಿದೆ. ಈ ಮಹತ್ವದ ಆದೇಶಗಳನ್ನು ನೀಡಿದ ಬಳಿಕ ಪ್ರಯಾಣಿಕರು ತೀವ್ರ ತೊಂದರೆಗಳನ್ನು ಎದುರಿಸಿದ್ದಾರೆ.ಆಟೋ ಚಾಲಕರು ಪ್ರಯಾಣಿಕರಿಗೆ ತೊಂದರೆ ಕೊಡುವ ಜೊತೆಗೆ ತಮಗೆ ಇಷ್ಟ ಬಂದಂತೆ ಬೆಲೆಗಳನ್ನು ನಿಗದಿ ಮಾಡುವ ಮೂಲಕ ಹಣ ವಸೂಲಿಯನ್ನು ಮಾಡುತ್ತಿದ್ದಾರೆ.ಅದರಲ್ಲೂ ಆನ್‌ಲೈನ್ ಆಟೋ ಸೇವೆಗಳು ದುಬಾರಿ ಮತ್ತು ವಿರಳವಾಗಿವೆ ಎಂದು ಪ್ರಯಾಣಿಕರು ಆಟೋ ಚಾಲಕರನ್ನು ದೂರುತ್ತಿದ್ದಾರೆ.

ರಾಜ್ಯಾದ್ಯಂತ ಬೈಕ್ ಮತ್ತು ಟ್ಯಾಕ್ಸಿ ಸೇವೆಗಳು ಜೂನ್ 16 ರಂದು ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಂಡ ದಿನದಿಂದ ಆನ್‌ಲೈನ್ ಆಟೋ ಸವಾರಿಗಳು ಮೀಟರ್ ದರಕ್ಕಿಂತ ಶೇ.20 ರಿಂದ ಶೇ. 30ವರರೆಗೂ ಏರಿಕೆಯನ್ನು ಮಾಡುತ್ತಿದ್ದಾರೆ. ಮೊದಲ 1.9 ಕಿಮೀಗೆ 30 ರೂ. ಮತ್ತು ನಂತರದ ಪ್ರತಿ ಕಿಲೋಮೀಟರಿಗೆ 15 ರೂ. ದರವನ್ನು ವಿಧಿಸುತ್ತಿದ್ದಾರೆ.
ರೈಡ್-ಹೆಲಿಂಗ್ ಸೇವೆಗಳನ್ನು ಒದಗಿಸುವ ಕೆಲವು ಪ್ರಮುಖ ಸಂಸ್ಥೆಗಳೆಂದರೆ ಓಲಾ (Ola), ಉಬರ್ (Uber), ಮತ್ತು ರಾಪಿಡೊ ಸಂಸ್ಥೆಗಳು ಸರ್ಜ್ ಶುಲ್ಕ, ಪಿಕ್-ಅಪ್ ಶುಲ್ಕ ಅಥವಾ ಪ್ಲಾಟ್‌ಫಾರ್ಮ್ ಶುಲ್ಕವನ್ನು ವಿಧಿಸುತ್ತವೆ, ಇವು ದರದ ಭಾಗವಾಗಿರಬಾರದು ಅಥವಾ ಅಧಿಕಾರಿಗಳಿಂದ ನಿಯಂತ್ರಿಸಲ್ಪಡಬಾರದು ಎಂದು ಅವರು ಹೇಳುತ್ತಿದ್ಧಾರೆ.
ಬೆಂಗಳೂರಿನಲ್ಲಿ ಮೇ 27, 2024 ರಂದು ಆಟೋ ಸವಾರಿಗಳಿಗೆ ರೈಡ್ ಹೆಲಿಂಗ್ ಸಂಸ್ಥೆಗಳು ನಿಗದಿತ ದರಕ್ಕಿಂತ ಶೇ. 5ಕ್ಕಿಂತ ಹೆಚ್ಚು ಶುಲ್ಕ ವಿಧಿಸುವಂತಿಲ್ಲ ಎಂದು ಹೈಕೋರ್ಟ್ ನ್ಯಾಯಪೀಠ ತೀರ್ಪುನ್ನು ನೀಡಲಾಗಿತ್ತು. ಅದು ಸಾರಿಗೆ ಇಲಾಖೆಯ 2022 ರ ಅಧಿಸೂಚನೆಯನ್ನು ಎತ್ತಿಹಿಡಿಯಿತು. ಇದು ಅಗ್ರಿಗೇಟರ್‌ಗಳು ಸರ್ಜ್ ಬೆಲೆ ವಿಧಿಸುವುದನ್ನು ನಿರ್ಬಂಧಿಸಿತು, ಅಂತಹ ಯಾವುದೇ ಶುಲ್ಕಗಳು ಪರ್ಮಿಟ್ ಹೊಂದಿರುವವರು/ಚಾಲಕರಿಗೆ ಪ್ರಯೋಜನವನ್ನು ನೀಡಬೇಕು ಅಗ್ರಿಗೇಟರ್ ಅಲ್ಲ ಎಂದು ಸಹ ಹೇಳಿದೆ. ಈ ವಿಷಯಕ್ಕೆ ಕುರಿತು ಬೈಕ್ ಮತ್ತು ಟ್ಯಾಕ್ಸಿ ಸಂಘಗಳು ಕೆಲವು ರಾಜಕೀಯ ನಾಯಕರು ಕೂಡ ಹೋರಾಟಕ್ಕೆ ಬೆಂಬಲವನ್ನು ಸೂಚಿಸಿದ್ದರು. ಬೆಂಗಳೂರು ಸಂಸದ ಪಿ.ಸಿ. ಮೋಹನ್, ರಾಜ್ಯ ಸರ್ಕಾರ ನ್ಯಾಯಾಲಯ ಆದೇಶವನ್ನು ಜಾರಿಗೊಳಿಸಲು ಏಕೆ ವಿಫಲವಾಗಿದೆ ಎಂದು ಪ್ರಶ್ನಿಸಿದರು.
ಮೂಲ ದರ 31.60 ರೂ. ಆಗಿರಬೇಕು ಎಂದು ಹೇಳಿದ್ದರು.
ಯಾವುದೇ ಒಂದು ಅಗ್ರಿಗೇಟರ್ ಸಂಸ್ಥಗಳು ಇದನ್ನು ಅಳವಡಿಸಿಕೊಳ್ಳವುದಿಲ್ಲ. ಪ್ರತಿದಿನ ಬೆಂಗಳೂರಿನಲ್ಲಿ 4.8 ಲಕ್ಷ ರೈಡ್‌ಗಳು ನಡೆಯುತ್ತವೆ. ಪ್ರತಿ ರೈಡ್‌ಗೆ ಕೇವಲ 50 ರೂ. ಹೆಚ್ಚು ಶುಲ್ಕ ವಿಧಿಸುವುದರಿಂದ ದಿನಕ್ಕೆ 2.4 ಕೋಟಿ ರೂ. ನಷ್ಟವಾಗುತ್ತದೆ. ಮೇ 2024 ರಿಂದ, ಪ್ರಯಾಣಿಕರು 1,010 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ ಎಂದು ಸರ್ಕಾರಕ್ಕೆ ಪ್ರಶ್ನೆಯನ್ನು ಮಾಡಿದ್ದಾರೆ.
ಅನುಕೂಲಕರ ಆದೇಶದ ಹೊರತಾಗಿಯೂ, ಸಾರಿಗೆ ಇಲಾಖೆಯು ತೀರ್ಪಿನ ಕೆಲವು ಅಂಶಗಳನ ಕೋರಿ ಮೇಲ್ಮನವಿ ಸಲ್ಲಿಸಿದೆ.
ಬೆಂಗಳೂರಿನಾದ್ಯಂತ ಅನೇಕ ಜನರು ಆಟೋ ಚಾಲಕರ ದರ ಏರಿಕೆಗೆ ಬೇಸತ್ತು ಹೋಗಿದ್ದಾರೆ. ಬೆಂಗಳೂರಿನಲ್ಲಿ 2,500 ಕ್ಕೂ ಹೆಚ್ಚು ಆಟೋ ನಿಲ್ದಾಣಗಳಿವೆ. ಅವರೆಲ್ಲರೂ ಬುಕಿಂಗ್‌ಗಳಿಗೆ ಹೆಚ್ಚಿನ ಹಣವನ್ನು ಕೇಳುತ್ತಾರೆ. ಈ ಸಂದರ್ಭದಲ್ಲಿ, ಸರ್ಕಾರ ನಿಯಂತ್ರಿತ ಬೈಕ್ ಟ್ಯಾಕ್ಸಿಗಳನ್ನು ಏಕೆ ನಿಷೇಧಿಸುತ್ತಿದೆ ಎಂದು ಬೆಂಗಳೂರು ಮೂಲದ ಪ್ರಯಾಣಿಕರೊಬ್ಬರು ಪ್ರಶ್ನೆಯನ್ನು ಮಾಡಿದ್ದಾರೆ.


Click it and Unblock the Notifications