Bike Taxi Ban: ಇತ್ತೀಚೆಗೆ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸುವಂತೆ ಹೈಕೋರ್ಟ್ ಆದೇಶವನ್ನು ನೀಡಿತ್ತು.ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಂಡಂತೆ ಈ ಕುರಿತು ಚರ್ಚೆಗಳು, ಹೋರಾಟಗಳು ಆರಂಭವಾಗಿದ್ದವು. ಇದರ ನಡುವೆ ಕೇಂದ್ರ ಸರ್ಕಾರ ಇದೀಗ ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಿ, ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಹೌದು, ರಾಪಿಡೊ, ಉಬರ್ ಮತ್ತು ಓಲಾದಂತಹ ಬೈಕ್ ಟ್ಯಾಕ್ಸಿ ಪ್ಲಾಟ್‌ಫಾರ್ಮ್‌ಗಳಿಗೆ ಪರಿಹಾರವಾಗಿ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಮಾರ್ಗಸೂಚಿಯ ಪ್ರಕಾರ ಪ್ರಯಾಣಿಕರ ಸವಾರಿಗಳಿಗೆ ಸಾರಿಗೆಯೇತರ (ಖಾಸಗಿ) ಮೋಟಾರ್ ಸೈಕಲ್‌ಗಳ ಬಳಕೆಯನ್ನು ಅನುಮತಿ ನೀಡಲಾಗಿದೆ. ಇದಕ್ಕೆ ರಾಜ್ಯಗಳು ಹೊಸ ಚೌಕಟ್ಟನ್ನು ರೂಪಿಸುವಂತೆ ಹೇಳಿದ್ದು, ಬೈಕ್ ಟ್ಯಾಕ್ಸಿ ಸೇವೆ ಈಗ ರಾಜ್ಯ ಸರ್ಕಾರದ ಕೈಯಲ್ಲಿ ಇದೆ. ಇದರ ಜೊತೆಗೆ ಕೈಗೆಟುಕುವ ಪ್ರಯಾಣಿಕರ ಚಲನಶೀಲತೆ, ಹೈಪರ್‌ಲೋಕಲ್ ವಿತರಣೆ ಮತ್ತು ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಕೂಡ ಹೇಳಿದೆ.
ಬೈಕ್ ಟ್ಯಾಕ್ಸಿ ಸ್ಥಗಿತದಿಂದಾಗಿ ಸಂಚಾರ ದಟ್ಟಣೆ ಮತ್ತು ವಾಹನ ಮಾಲಿನ್ಯದಿಂದ ತೊಂದರೆಗೆ ಒಳಪಟ್ಟವರಿಗ ರೀಲೀಫ್ ಸಿಕ್ಕಿದೆ. ಆಟೋ ದರ ಏರಿಕೆಯಿಂದಾಗಿ ಬೇಸತ್ತು ಹೋದ ಪ್ರಯಾಣಿಕಗೂ ಕೂಡ ಇದು ಸಮಧಾನ ಸಿದ್ದಿದೆ. ಲಕ್ಷಾಂತರ ಬೈಕ್ ಟ್ಯಾಕ್ಸಿ ಸವಾರು ಉದ್ಯೋಗವಿಲ್ಲದೇ ಸಂಕಷ್ಟ ಅನುಔವಿಸುತ್ತಿದ್ದರು ಅವರಿಗೆಲ್ಲಾ ಈ ಕೇಂದ್ರ ಸರ್ಕಾರ ನಿರ್ಧಾರ ಸಂತಸವನ್ನು ತಂದುಕೊಟ್ಟಿದೆ.
ಕೇಂದ್ರ ಸರ್ಕಾರ ಖಾಸಗಿ ಮೋಟಾರ್‌ಸೈಕಲ್‌ಗಳನ್ನು ಕಾನೂನುಬದ್ಧವಾಗಿ ನಿರ್ವಹಿಸಲು ಅಧಿಕಾರ ನೀಡುವುದಕ್ಕಾಗಿ ಹೇಳಿದೆ. ಆದರೆ ರಾಜ್ಯಗಳು ಸಾಮೂಹಿಕ ವಾಹನ ಚಾಲಕರ ಮೇಲೆ ದೈನಂದಿನ, ವಾರಕ್ಕೊಮ್ಮೆ ಅಥವಾ 15 ದಿನಗೊಮ್ಮೆ ಶುಲ್ಕವನ್ನು ವಿಧಿಸಬಹುದು ಎಂದುತಿಳಿಸಿವೆ.ಇದಲ್ಲದೆ, ಎಲ್ಲಾ ಆನ್‌ಬೋರ್ಡ್ ಚಾಲಕರು ಮಾನ್ಯ ಚಾಲನಾ ಪರವಾನಗಿಗಳು, ವಿಮೆ ಮತ್ತು ಸರಿಯಾದ ವಾಹನ ಪರಿಶೀಲನೆಯ ಸ್ಥಿತಿ ಸೇರಿದಂತೆ ಅಗತ್ಯವಿರುವ ಕಾನೂನು, ಸುರಕ್ಷತೆ ಮತ್ತು ಮಾನದಂಡಗಳನ್ನು ಪೂರೈಸುತ್ತಾರೆ ಎಂದು ಸಾಮೂಹಿಕ ವಾಹನ ಚಾಲಕರು ಖಚಿತಪಡಿಸಿಕೊಳ್ಳಬೇಕು ಎಂದು ಮಾರ್ಗಸೂಚಿಗಳು ಮಾಹಿತಿಯನ್ನು ತಿಳಿಸಲಾಗಿದೆ.
ಕಾನೂನು ತಜ್ಞರು ಈ ಕುರಿತು, ಕೇಂದ್ರದ ಮಾರ್ಗಸೂಚಿಗಳು ಖಾಸಗಿ ಮೋಟಾರ್‌ಸೈಕಲ್‌ಗಳನ್ನು ಬಳಸಿಕೊಂಡು ಕಾರ್ಯಾಚರಣೆಗಳನ್ನು ಅನುಮತಿಸುವ ಕಾನೂನು ಚೌಕಟ್ಟನ್ನು ಸ್ಪಷ್ಟವಾಗಿ ಹೇಳುತ್ತವೆ ಇದು ಈಗ ಸಂಪೂರ್ಣವಾಗಿ ರಾಜ್ಯ ಸರ್ಕಾರಗಳ ಮೇಲೆ ನಿಂತಿರುವ ನೀತಿಯಾಗಿದೆ ಎಂದು ಅವರು ಹೇಳಿದ್ಧಾರೆ.
ಅಕ್ಟೋಬರ್ 2 ರಂದು ಹೈಕೋರ್ಟ್ ಹೊರಡಿಸಿದ ಆದೇಶದಲ್ಲಿ, ರಾಜ್ಯವು ನಿಯಮಗಳನ್ನು ರಚಿಸದ ಮತ್ತು ಮಾರ್ಗಸೂಚಿಗಳನ್ನು ಪ್ರಕಟಿಸದ ಹೊರತು, ಮೋಟಾರ್ ವಾಹನ ಕಾಯ್ದೆಯ ಸೆಕ್ಷನ್ 3ರ ಪ್ರಕಾರ, ಬೈಕ್ ಟ್ಯಾಕ್ಸಿ ಸೇವೆಗಳು ರಾಜ್ಯದಲ್ಲಿ ಕಾನೂನುಬಾಹಿರವಾಗಿವೆ ಎಂದು ಸ್ಪಷ್ಟವಾಗಿ ಹೇಳಲಾಗಿತ್ತು.
ಬೈಕ್ ಟ್ಯಾಕ್ಸಿಗಳ ಸಂಚಾರಕ್ಕೆ ಹೈಕೋರ್ಟ್ ರಾಜ್ಯಾದ್ಯಂತ ನಿಷೇಧವನ್ನು ಹೇರಿದೆ.ಒಂದೇ ಒಂದು ವಾರದಲ್ಲಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಶೇಕಡ 18 ರಷ್ಟು ಹೆಚ್ಚಳಕ್ಕೆ ಕಾರಣವಾಗಿತ್ತು.ಬೈಕ್ ಟ್ಯಾಕ್ಸಿ ನಿಷೇಧದ ಕುರಿತು ಸರ್ಕಾರವು ತೆಗೆದುಕೊಂಡಿರುವ ಕಠಿಣ ಕ್ರಮವನ್ನು ಹಿಂತೆಗೆದುಕೊಳ್ಳಬೇಕೆಂದು ಬೈಕ್ ಟ್ಯಾಕ್ಸಿ ಸವಾರರು ಒತ್ತಾಯಿಸುತ್ತಿದ್ದಾರೆ.
103 ಬೈಕ್ ಪೊಲೀಸರ ವಶಕ್ಕೆ: ಹೈಕೋರ್ಟ್ ಆದೇಶವನ್ನು ಪಾಲಿಸದೇ ಸೇವೆ ಮಾಡುತ್ತಿದ್ದ ಬೈಕ್ ಸವಾರರ ವಿರುದ್ಧ ಕ್ರಮ ಕೈಗೊಂಡ ಸಾರಿಗೆ ಇಲಾಖೆ, ಒಟ್ಟು 103 ಬೈಕ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದೆ. ನಗರದ ವಿವಿಧ ಭಾಗಗಳಲ್ಲಿ ತಪಾಸಣೆ ನಡೆಸಿದಾಗ, ಸಾರಿಗೆ ಇಲಾಖೆ ಅಧಿಕಾರಿಗಳು ಬೈಕ್ ಟ್ಯಾಕ್ಸಿ ಸೇವೆ ಒದಗಿಸುತ್ತಿದ್ದ 103 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 103 ಬೈಕ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತಲಾ 5,000 ರೂ. ದಂಡವನ್ನು ವಿಧಿಸಲಾಗಿದೆ.


Click it and Unblock the Notifications