ಮೈಕ್ರೋಸಾಫ್ಟ್‌ನ ಸಹ ಸಂಸ್ಥಾಪಕ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಲ್ಲಿ ಹೆಸರುವಾಸಿಯಾದ, ಬಿಯನೇರ್ ಬಿಲ್ ಗೇಟ್ಸ್ ಕಳೆದ ವಾರ ಭಾರತಕ್ಕೆ ಭೇಟಿ ನೀಡಿದ್ದಾರೆ. ಹಲವಾರು ಪ್ರತಿಷ್ಠಿತ, ಗಣ್ಯ ವ್ಯಕ್ತಿಗಳನ್ನು ಬಿಲ್ ಗೇಟ್ಸ್ ಭೇಟಿಯಾಗಿದ್ದಾರೆ. ವ್ಯಾಪಾರಿಗಳಿಂದ ಹಿಡಿದು ರಾಜಕಾರಣಿಗಳವರೆಗೆ ಮಾತ್ರವಲ್ಲದೆ ಸಾಮಾಜಿಕ ಮಾಧ್ಯಮದಲ್ಲಿ ಹೆಸರುವಾಸಿಯಾದವರನ್ನು ಕೂಡಾ ಭೇಟಿಯಾಗಿದ್ದಾರೆ. ಅದಾದ ಕೆಲವೇ ದಿನಗಳಲ್ಲಿ ಬಿಲ್ ಗೇಟ್ಸ್ ಬಡತನ ನಿರ್ಮೂಲನೆಗೆ ಮತ್ತು ಜಾಗತಿಕ ಹವಾಮಾನಕ್ಕೆ ಭಾರತ ನೀಡಿದ ಕೊಡುಗೆಯನ್ನು ಹಾಡಿಹೊಗಳಿದ್ದಾರೆ.
ಬಿಲ್ ಗೇಟ್ಸ್ ತನ್ನ ಭೇಟಿಯ ಕೊನೆಯಲ್ಲಿ ಪ್ರಧಾನ ಮತ್ರಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದಾರೆ. ಹಲವಾರು ಜಾಗತಿಕ ವಿಚಾರಗಳ ಬಗ್ಗೆ ಇಬ್ಬರೂ ಮಾತನಾಡಿದ್ದಾರೆ. ಇದಾದ ಬೆನ್ನಲ್ಲೇ ಮೈಕ್ರೋಸಾಫ್ಟ್‌ನ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಭಾರತವನ್ನು ಹಾಡಿ ಹೊಗಳಿರುವ ಸಣ್ಣ ಡಾಕ್ಯೂಮೆಂಟರಿಯನ್ನು ಹಂಚಿಕೊಂಡಿದ್ದಾರೆ. ಜಾಗತಿಕವಾಗಿ ಆರೋಗ್ಯ ಸುಧಾರಣೆಗೆ, ಬಡತನ ನಿರ್ಮೂಲನೆಗೆ, ಜಾಗತಿಕ ಹವಾಮಾನ ಸುಧಾರಣೆಗೆ ಭಾರತ ನೀಡಿದ ಕೊಡುಗೆಯನ್ನು ಇದರಲ್ಲಿ ಶ್ಲಾಘಿಸಲಾಗಿದೆ.

ವಿಡಿಯೋ ಮೂಲಕ ಶ್ಲಾಘನೆ
ಮೈಕ್ರೋಸಾಫ್ಟ್‌ನ ಸಹ ಸಂಸ್ಥಾಪಕ, ಬಿಲಿಯನೇರ್ ವಿಡಿಯೋ ಮೂಲಕ ಭಾರತವನ್ನು ಶ್ಲಾಘಿಸಿದ್ದಾರೆ. ಸೂಪರ್ ಸ್ಟಾರ್ ಶಾರುಖ್ ಖಾನ್‌ರ Ra. One ಸಿನಿಮಾದ ರೈಲು ಸೀನ್ ಕಂಡುಬರುತ್ತದೆ. ಅದಾದ ಬಳಿಕ ಬಿಲ್ ಗೇಟ್ಸ್ ಭಾರತವನ್ನು ಹೊಗಳುತ್ತಾ ಮಾತನಾಡಿದ್ದಾರೆ. ಭಾರತವು ಈಗ ಸಾಕಷ್ಟು ಬದಲಾವಣೆಯಾಗಿದೆ ಎಂದು ಬಿಲ್ ಗೇಟ್ಸ್ ತಿಳಿಸಿದ್ದಾರೆ. ಮಕ್ಕಳು, ಸಲಿಕೆ, ಒಇತರೆ ಮಾಹಿತಿಯನ್ನು ಕೂಡಾ ಈ ವಿಡಿಯೋದಲ್ಲೇ ಬಿಲ್ ಗೇಟ್ಸ್ ನೀಡಿದ್ದಾರೆ.
ಬಿಲ್ ಗೇಟ್, "1980ರಲ್ಲಿ ಬಿಲ್ ಗೇಟ್ಸ್ 1ರಿಂದ 10 ಮಕ್ಕಳಿಗೆ ಅಗತ್ಯ ಲಸಿಕೆಗಳು ಲಭ್ಯವಾಗುತ್ತಿತ್ತು. ಆದರೆ ಈಗ ಭಾರತದಲ್ಲಿ ಶೇಕಡ 90ರಷ್ಟು ಮಕ್ಕಳು ಲಸಿಕೆಯನ್ನು ನೀಡಿದ್ದಾರೆ. ಈ ಹಿಂದೆ ಭಾರತದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾಭ್ಯಾಸಕ್ಕಿಂತ ಹೆಚ್ಚಾಗಿ ಈಗ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡುತ್ತಾರೆ. 1970ರಲ್ಲಿ ಅರ್ಧದಷ್ಟು ಮಕ್ಕಳು ಪ್ರಾಥಮಿಕ ಶಾಲೆಯ ವಿದ್ಯಾಭ್ಯಾಸ ಪಡೆಯುತ್ತಿದ್ದರು," ಎಂದು ತಿಳಿಸಿದ್ದಾರೆ.
"ಆದರೆ ಈಗ ಶೇಕಡ 100ರಷ್ಟು ಮಕ್ಕಳು ಪ್ರಾಥಮಿಕ ಶಿಕ್ಷಣ ಪಡೆಯುತ್ತಾರೆ," ಎಂದು ಕೂಡಾ ಉಲ್ಲೇಖ ಮಾಡಲಾಗಿದೆ. ವಿಡಿಯೋದ ಕೊನೆಯ ಭಾಗದಲ್ಲಿ, "1980ರಲ್ಲಿ ಶೇಕಡ 60ರಷ್ಟು ಭಾರತೀಯರು ಪ್ರತಿ ದಿನದ ಖರ್ಚನ್ನು 2 ಡಾಲರ್‌ನಲ್ಲಿ ಸರಿದೂಗಿಸುತ್ತಿದ್ದರು. ಆದರೆ ಶೇಕಡ 10ರಷ್ಟು ಜನರು ಮಾತ್ರ 2 ಡಾಲರ್‌ನಲ್ಲಿ ದಿನವನ್ನು ಕಳೆಯುತ್ತಾರೆ," ಎಂದು ಕೂಡ ನಮೂದಿಸಲಾಗಿದೆ.


Click it and Unblock the Notifications