For Quick Alerts
ALLOW NOTIFICATIONS  
For Daily Alerts

ಮೈಕ್ರೋಸಾಫ್ಟ್‌ ಆಡಳಿತ ಮಂಡಳಿಯಿಂದ ಕೆಳಗಿಳಿದ ಬಿಲ್‌ಗೇಟ್ಸ್

|

ಮೈಕ್ರೋಸಾಫ್ಟ್‌ ಸಹ ಸಂಸ್ಥಾಪಕ ಬಿಲ್‌ಗೇಟ್ಸ್‌ ಮೈಕ್ರೋಸಾಫ್ಟ್ ಹಾಗೂ ಬರ್ಕ್‌ಶೈರ್ ಹ್ಯಾಥ್ವೆ ಆಡಳಿತ ಮಂಡಳಿಯಿಂದ ಕೆಳಗಿಳಿದ್ದಾರೆ. ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿರುವ ಬಿಲ್‌ಗೇಟ್ಸ್‌ ಅವರು ಬಿಲ್ ಹಾಗೂ ಮೆಲಿಂಡಾ ಗೇಟ್ಸ್ ಫೌಂಡೇಶನ್ ಕಡೆಗೆ ತಮ್ಮ ಗಮನವನ್ನು ಹೆಚ್ಚು ಕೇಂದ್ರೀಕರಿಸಲು ಮೈಕ್ರೋಸಾಫ್ಟ್‌ನಿಂದ ಹೊರಬಂದಿದ್ದಾರೆ.

 

'' ನಾನು ಸೇವೆ ಸಲ್ಲಿಸುತ್ತಿರುವ ಎರಡೂ ಸಾರ್ವಜನಿಕ ಮಂಡಳಿಗಳಿಂದ ಮೈಕ್ರೋಸಾಫ್ಟ್‌ ಮತ್ತು ಬರ್ಕ್‌ಶೈರ್ ಹ್ಯಾಥ್ವೆ ಯಿಂದ ಕೆಳಗಿಳಿಯುವ ನಿರ್ಧಾರವನ್ನು ಕೈಗೊಂಡಿದ್ದೇನೆ. ಜಾಗತಿಕ ಆರೋಗ್ಯ ಮತ್ತು ಅಭಿವೃದ್ಧಿ, ಶಿಕ್ಷಣ ಹಾಗೂ ಹವಾಮಾನ ಬದಲಾವಣೆಯನ್ನು ನಿಭಾಯಿಸುವಲ್ಲಿ ಹೆಚ್ಚು ತೊಡಗಿಸುವಲ್ಲಿ ಸೇರಿದಂತೆ ಲೋಕೋಪಯೋಗಿ ಆದ್ಯತೆಗಳಿಗೆ ಹೆಚ್ಚಿನ ಸಮಯವನ್ನು ಮೀಸಲಿಡಲು ಈ ನಿರ್ಧಾರ ಕೈಗೊಂಡಿದ್ದೇನೆ'' ಎಂದು ಬಿಲ್‌ಗೇಟ್ಸ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

 

2000ನೇ ಇಸವಿಯಲ್ಲಿ ಗೇಟ್ಸ್ ಸಿಇಒ ಹುದ್ದೆಯಿಂದ ಕೆಳಗಿಳಿದು ಸ್ಟೀವ್ ಬಾಲ್ಮರ್‌ಗೆ ದಾರಿ ಮಾಡಿಕೊಟ್ಟ ಬಳಿಕ ಅವರ ಸಕ್ರಿಯ ಪಾತ್ರವು ಕಡಿಮೆಯಾಯಿತು. 2008ರಿಂದ ಅದರ ದಿನನಿತ್ಯದ ವ್ಯವಹಾರಗಳಲ್ಲಿ ತೊಡಗಿಸುಕೊಳ್ಳುವುದನ್ನು ನಿಲ್ಲಿಸಿದರು.

ಮೈಕ್ರೋಸಾಫ್ಟ್‌ ಆಡಳಿತ ಮಂಡಳಿಯಿಂದ ಕೆಳಗಿಳಿದ ಬಿಲ್‌ಗೇಟ್ಸ್

1975ರಲ್ಲಿ ಪಾಲ್ ಅಲೆನ್‌ ಜೊತೆಗೆ ಸೇರಿ ಹುಟ್ಟುಹಾಕಿದ ಮೈಕ್ರೋಸಾಫ್ಟ್‌ ಕಂಪನಿಯಲ್ಲಿ ಕೇವಲ 1 ಪರ್ಸೆಂಟ್‌ಗಿಂತ ಹೆಚ್ಚಿನ ಪಾಲನ್ನು ಹೊಂದಿದ್ದಾರೆ.

ಮೈಕ್ರೋಸಾಫ್ಟ್‌ ಈಗ ಸಿಇಒ ಸತ್ಯ ನಾಡೆಲ್ಲಾ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ. ಇದು ವಿಶ್ವದ ಅತ್ಯಮೂಲ್ಯ ಕಂಪನಿಗಳಲ್ಲಿ ಒಂದಾಗಿದ್ದು, ಮಾರುಕಟ್ಟೆ ಬಂಡವಾಳೀಕರಣದಲ್ಲಿ 1 ಟ್ರಿಲಿಯನ್‌ನಷ್ಟಿದ್ದು ಅಗ್ರಸ್ಥಾನದಲ್ಲಿದೆ.

mobile:ಮೈಕ್ರೋಸಾಫ್ಟ್‌ ಸಹ ಸಂಸ್ಥಾಪಕ ಬಿಲ್‌ಗೇಟ್ಸ್‌ ಆಡಳಿತ ಮಂಡಳಿಯಿಂದ ಕೆಳಗಿಳಿದ್ದಾರೆ. ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿರುವ ಬಿಲ್‌ಗೇಟ್ಸ್‌ ಅವರು ಬಿಲ್ ಹಾಗೂ ಮೆಲಿಂಡಾ ಗೇಟ್ಸ್ ಫೌಂಡೇಶನ್ ಕಡೆಗೆ ತಮ್ಮ ಗಮನ ಕೇಂದ್ರೀಕರಿಸಲು ಮೈಕ್ರೋಸಾಫ್ಟ್‌ನಿಂದ ಹೊರಬಂದಿದ್ದಾರೆ. 2000ನೇ ಇಸವಿಯಲ್ಲಿ ಗೇಟ್ಸ್ ಸಿಇಒ ಹುದ್ದೆಯಿಂದ ಕೆಳಗಿಳಿದು ಸ್ಟೀವ್ ಬಾಲ್ಮರ್‌ಗೆ ದಾರಿ ಮಾಡಿಕೊಟ್ಟ ಬಳಿಕ ಅವರ ಸಕ್ರಿಯ ಪಾತ್ರವು ಕಡಿಮೆಯಾಯಿತು. 2008ರಿಂದ ಅದರ ದಿನನಿತ್ಯದ ವ್ಯವಹಾರಗಳಲ್ಲಿ ತೊಡಗಿಸುಕೊಳ್ಳುವುದನ್ನು ನಿಲ್ಲಿಸಿದರು.

English summary

Bill Gates Steps Down From Microsoft, Berkshire Boards

Bill Gates has stepped down from the boards of Microsoft and Berkshire Hathaway
Story first published: Saturday, March 14, 2020, 12:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X