ಬೆಂಗಳೂರು, ಮೇ 27: ಭಾರತದ ಟೆಲಿಕಾಂ ವಲಯದಲ್ಲಿ 'ಜಿಯೋ ' ಮೂಲಕ ಸಂಚಲನವನ್ನೇ ಸೃಷ್ಟಿಸಿದ್ದ ಉದ್ಯಮಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಇದೀಗ ಆಫ್ರಿಕನ್ ಖಂಡದಲ್ಲೂ ನೆಲೆಯೂರಲು ಸಿದ್ದತೆ ಮಾಡಿಕೊಂಡಿದೆ. ಆಫ್ರಿಕನ್ ಖಂಡದಲ್ಲಿ ಬೃಹತ್ ವ್ಯಾಪಾರ ಮತ್ತು ಆದಾಯವನ್ನು ಪಡೆಯಲು ಅಲ್ಲಿಯೂ 5G ತಂತ್ರಜ್ಞಾನ ಅಭಿವೃದ್ಧಿಗೆ ಮುಂದಾಗಿದೆ.
ಇಪ್ಪತ್ತರ ದಶಕದ ಆರಂಭದ ಕೆಲವು ಇಂಟರ್ನೆಟ್ ಅಗ್ಗದ, ಕೈಗೆಟುಕುವಂತೆ ಇರಲಿಲ್ಲ. ದುಬಾರಿಯಾಗಿದ್ದ ಈ ಸೇವೆಯನ್ನು ಎಲ್ಲರಿಗೂ ಕೈಗೆಟಕುವ ಬೆಲೆಯಲ್ಲಿ ತಲುಪಿಸಿದ ಶ್ರೇಯಸ್ಸು ರಿಲಯನ್ಸ್ ಸಂಸ್ಥೆ ಜಿಯೋಕ್ಕೆ ಸೇರುತ್ತದೆ. ಇಂಟರ್ನೆಟ್ ಎಲ್ಲರ ಹಕ್ಕು, ಮೂಲಭೂತ ಅಗತ್ಯವೆನ್ನುವಂತೆ ಮಾಡಿದ್ದ ಜಿಯೋ, ಎಲ್ಲ ರೀತಿಯ ಸೇವೆಗಳನ್ನು ಪಡೆಯುವುದಕ್ಕೆ ದೊಡ್ಡ ಸೇತುವೆಯಾಗುವ ಮೂಲಕ ಪ್ರತಿಯೊಬ್ಬ ಭಾರತೀಯನ ಜೀವನದಲ್ಲಿ ಮಹತ್ವದ ಬದಲಾವಣೆಯನ್ನು ತಂದಿತ್ತು.

ರಿಲಯನ್ಸ್ ಸಾಮ್ರಾಜ್ಯದ ಟೆಲಿಕಾಂ ಸೇವಾ ಕಂಪನಿಯಾದ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ (ಜೆಪಿಎಲ್) ಮತ್ತು ಟೆಕ್ ಮಹೀಂದ್ರಾ , ಅಂಬಾನಿ-ನಿಯಂತ್ರಿತ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್- ರಾಡಿಸಿಸ್ ಕಾರ್ಪೊರೇಷನ್ ಘಟಕವು ಘಾನಾ ಮೂಲದ ನೆಕ್ಸ್ಟ್-ಜೆನ್ ಇನ್ಫ್ರಾಕೋ ಹಾಗೂ ಫಿನ್‌ಲ್ಯಾಂಡ್‌ನ ನೋಕಿಯಾ ಸಹಭಾಗಿತ್ವ ಆಫ್ರಿಕನ್ ಖಂಡದಲ್ಲಿ 5 ಜಿ ನೆಟ್‌ವರ್ಕ್ ಮೂಲಸೌಕರ್ಯ, ಅಪ್ಲಿಕೇಶನ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಒದಗಿಸಲಿದೆ ಎಂದು ವರದಿಯಾಗಿದೆ. ಎನ್‌ಜಿಐಸಿ ಸಂಸ್ಥೆ 15 ವರ್ಷಗಳಿಗೆ 5ಜಿ ಬ್ರಾಡ್‌ಬ್ಯಾಂಡ್ ಸರ್ವಿಸ್ ಒದಗಿಸಲು ಲೈಸೆನ್ಸ್ ಹೊಂದಿದೆ. ಈ ವರ್ಷಾಂತ್ಯದೊಳಗೆ ಅದು ಕಾರ್ಯಾಚರಣೆ ಆರಂಭಿಸಬಹುದು ಎನ್ನಲಾಗಿದೆ.
ಈ ಬಗ್ಗೆ ಬ್ಲೂಮ್‌ಬರ್ಗ್ ಮಾಡಿರುವ ವರದಿಯಲ್ಲಿ ಎನ್‌ಜಿಐಸಿಯ ಕಾರ್ಯನಿರ್ವಾಹಕ ನಿರ್ದೇಶಕ ಹರ್ಕಿರಿತ್ ಸಿಂಗ್ ಅವರನ್ನು ಉಲ್ಲೇಖಿಸಿ, ಈ ವರ್ಷದ ಅಂತ್ಯದ ವೇಳೆಗೆ ಕಂಪನಿಯು ಕಾರ್ಯಾಚರಣೆಯನ್ನು ಪ್ರಾರಂಭಿಸುವುದರಿಂದ ಶೀಘ್ರದಲ್ಲೇ ಯೋಜನೆಗಳನ್ನು ಘೋಷಿಸಲಾಗುವುದು ಎಂದು ವರದಿ ಹೇಳಿದೆ.
"ಎನ್‌ಜಿಐಸಿ ಘಾನಾದಲ್ಲಿ ಮೊಬೈಲ್ ಆಪರೇಟರ್‌ಗಳು ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ 5G ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಒದಗಿಸುತ್ತದೆ, ಕಂಪನಿಯು ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಕೈಗೆಟುಕುವ ಡಿಜಿಟಲ್ ಸೇವೆಗಳನ್ನು ನಿರ್ಮಿಸಲಿದೆ" ಎಂದು ಅವರು ಹೇಳಿದ್ದಾರೆ.
ವರದಿಯ ಪ್ರಕಾರ, Nokia Oyj, Tech Mahindra Ltd. ಮತ್ತು Microsoft Corp. ಎನ್‌ಜಿಐಸಿ ನ ಪಾಲುದಾರರಾಗಿದ್ದು, MTN ಘಾನಾ, ವೊಡಾಫೋನ್ ಘಾನಾ ಮತ್ತು ಸರ್ಕಾರಿ ಏರ್‌ಟೆಲ್ ಟಿಗೊ ಇವು ಘಾನಾದ ಪ್ರಮುಖ ಮೂರು ಪ್ರಮುಖ ಆಪರೇಟರ್ ಗಳಾಗಿವೆ. ಆಸಕ್ತಿಕರ ವಿಚಾರವೆಂದರೆ ಭಾರತದ ಟೆಲಿಕಾಂ ಆಪರೇಟರ್ ಆಗಿರುವ ಭಾರ್ತಿ ಏರ್ಟೆಲ್ ಸಂಸ್ಥೆ ಕೇವಲ 33 ಮಿಲಿಯನ್‌ನಷ್ಟಿರುವ ಜನಸಂಖ್ಯೆಯನ್ನು ಹೊಂದಿರುವ ಘಾನಾ ದೇಶ ಹಾಗೂ 14 ಆಫ್ರಿಕನ್ ದೇಶಗಳಲ್ಲಿ ಟೆಲಿಕಾಂ ಜಾಲ ಹೊಂದಿದೆ. ಅಲ್ಲಿರುವ ಎಂಟಿಎನ್, ವೊಡಾಫೋನ್ ಮತ್ತು ಏರ್ಟೆಲ್ ನ ಪೈಕಿ ಇದರಲ್ಲಿ ಏರ್ಟೆಲ್ ಟಿಗೋ ಸಂಸ್ಥೆಯಲ್ಲಿ ಅಲ್ಲಿನ ಸರ್ಕಾರದ ಪಾಲು ಹೆಚ್ಚಿದೆ.
NGIC ಯ ಕಾರ್ಯತಂತ್ರದ ಪಾಲುದಾರರು, ಅದರ ತಾಂತ್ರಿಕ ಸಾಮರ್ಥ್ಯ ಮತ್ತು ಘಾನಾದ ಏಕೈಕ 5G ಪರವಾನಗಿಯನ್ನು ಹೊಂದಿರುವ ಕಂಪನಿಯು ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಪ್ರಮಾಣದಲ್ಲಿ ನಿರ್ಮಿಸಲು ಸಹಾಯ ಮಾಡಲಿದೆ ಎಂದು ಹರ್ಕಿರಿತ್ ಸಿಂಗ್ ಹೇಳಿದ್ದಾರೆ.
ಎನ್‌ಜಿಐಸಿ ಸಂಸ್ಥೆ ಒಂದು ದಶಕಗಳ ಕಾಲ 5ಜಿ ಬ್ರಾಡ್‌ಬ್ಯಾಂಡ್ ಸರ್ವಿಸ್ ಒದಗಿಸಲು ವಿಶೇಷ ಹಕ್ಕು ಹೊಂದಿದೆ. ಆದರೂ ಅದರ ಪರವಾನಗಿ 15 ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ಈ ವರ್ಷಾಂತ್ಯದೊಳಗೆ ಅದು ಕಾರ್ಯಾಚರಣೆ ಆರಂಭಿಸಬಹುದು ಎನ್ನಲಾಗಿದೆ.
ಭಾರತದಲ್ಲಿ ಹೇಗೆ ಜಿಯೋ ಕ್ರಾಂತಿಯನ್ನು ಹುಟ್ಟುಹಾಕಿತೋ ಅದೇ ರೀತಿ ರಿಲಯನ್ಸ್ ನ ಇನ್ಫೋಕಾಮ್ ಲಿಮಿಟೆಡ್ ಘಾನಾ ದೇಶದಲ್ಲಿ ಹೊಸ ಅಲೆ ಸೃಷ್ಟಿಗೆ ಎದುರುನೋಡುತ್ತಿದೆ. ಜಿಯೋ 2016 ರ ಕೊನೆಯಲ್ಲಿ ಭಾರತದಲ್ಲಿ ಟೆಲಿಕಾಂ ಸೇವೆಗಳನ್ನು ಅಗ್ಗದ ದರದಲ್ಲಿ ನೀಡಿದ್ದು, ಕಡಿಮೆ ವೆಚ್ಚದ ಡೇಟಾ ಮತ್ತು ಉಚಿತ ಕರೆ ಮುಂತಾದ ಆಫರ್ ಗಳನ್ನು ನೀಡಿ ಟೆಲಿಕಾಂ ವಲಯದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು.


Click it and Unblock the Notifications