ಇನ್ಮುಂದೆ ಸಿಮ್ (Sim) ಖರೀದಿಸಲು ಅಂಗಡಿಗೆ ಹೋಗುವ ಅಗತ್ಯವಿಲ್ಲ. ಹೌದು, ನಂಬಿದ್ರೆ ನಂಬಿ, ಬಿಟ್ರೆ ಬಿಡಿ.. ಕೇವಲ 10 ನಿಮಿಷ ಸಾಕು.. 'ಬ್ಲಿಂಕಿಟ್' ಮೂಲಕ ನಿಮ್ಮ ಮನೆಗೇ ಬರುತ್ತೆ ಏರ್‌ಟೆಲ್ ಸಿಮ್‌ನ್ನು ತರೆಸಿಗೊಳ್ಳಬಹುದು.
ಏರ್‌ಟೆಲ್ (Airtel) ಕಂಪನಿಯು ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ ಬ್ಲಿಂಕಿಟ್ (Blinkit) ಜೊತೆ ಕೈಜೋಡಿಸಿದೆ. ಈ ಮೂಲಕ ಆಯ್ದ ನಗರಗಳಲ್ಲಿ ಸಿಮ್ ಕಾರ್ಡ್‌ಗಳ ತ್ವರಿತ ಮನೆ ವಿತರಣೆಯನ್ನು ನೀಡಲು ಮುಂದಾಗಿದೆ. ಪ್ರಸ್ತುತ, ಕಡಿಮೆ ಬೆಲೆಯಲ್ಲಿ ಪ್ರಿಪೇಯ್ಡ್ ಅಥವಾ ಪೋಸ್ಟ್‌ಪೇಯ್ಡ್ ಸಿಮ್ ಅನ್ನು ನಿಮ್ಮ ಮನೆಗೆ ತಲುಪಲಿದೆ. ಸಿಮ್ ಕಾರ್ಡ್ ಮನೆಗೆ ಹೇಗೆ ಬರುತ್ತೆ? ಯಾವ ನಗರಗಳಲ್ಲಿ ಈ ಸೌಲಭ್ಯ ಲಭ್ಯವಿದೆ? ಎನ್ನುವುದನ್ನು ತಿಳಿಯೋಣ ಬನ್ನಿ.

ಹೌದು, ಈ ಸೌಲಭ್ಯವನ್ನು ಪ್ರಾರಂಭಿಸಿದ ದೇಶದ ಮೊದಲ ಟೆಲಿಕಾಂ ಕಂಪನಿ ಎಂಬ ಹೆಗ್ಗಳಿಕೆಗೆ ಏರ್‌ಟೆಲ್ ಪಾತ್ರವಾಗಿದೆ. ಆದರದೆ, ಸಿಮ್ ಕಾರ್ಡ್(Airtel Sim) ವಿತರಣೆ ಉಚಿತವಾಗಿರುವುದಿಲ್ಲ. ನೀವು ಇದಕ್ಕಾಗಿ 49 ರೂ. ಪಾವತಿಸಬೇಕು. ಹೊಸ ಪ್ರಿಪೇಯ್ಡ್ ಸಿಮ್ ಕಾರ್ಡ್ ಬುಕ್ ಮಾಡಲು ಮಾತ್ರವಲ್ಲದೆ, ಪೋಸ್ಟ್‌ಪೇಯ್ಡ್ ಸಿಮ್ ಕಾರ್ಡ್ ಸಹ ತಲುಪಿಸಲಾಗುತ್ತದೆ. ನೀವು ಬೇರೆ ಕಂಪನಿಯಿಂದ ಏರ್‌ಟೆಲ್‌ಗೆ ನಿಮ್ಮ ಸಿಮ್ (ಸಂಖ್ಯೆ) ಬದಲಾಯಿಸಲು ಬಯಸಿದರೆ, ಅದನ್ನು ಸಹ ಸುಲಭವಾಗಿ ಮಾಡಬಹುದು. ಸಿಮ್ ಸಕ್ರಿಯಗೊಳಿಸಲು ನೀವು ಆಧಾರ್ ಬಳಸಿ, ಕೈವೈಸಿ (KYC) ಪೂರ್ಣಗೊಳಿಸಬೇಕು.
ದಿನಸಿ ರೀತಿ ಸಿಮ್ ಕಾರ್ಡ್ ಮನೆಗೆ ಬರುತ್ತೆ
ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಬ್ಲಿಂಕಿಟ್ ಜೊತೆಗೆ ಏರ್‌ಟೆಲ್ ಒಪ್ಪಂದ ಮಾಡಿಕೊಂಡಿದೆ. ಅದರಂತೆ ಬ್ಲಿಂಕಿಟ್ 10 ನಿಮಿಷಗಳಲ್ಲಿ ದಿನಸಿ (ಪಡಿತರ) ವಸ್ತುಗಳಂತೆ ಸಿಮ್ ಕಾರ್ಡ್ ಅನ್ನು ಬಳಕೆದಾರರ ಮನೆಗೆ ತಲುಪಿಸುತ್ತದೆ. ಪ್ರಸ್ತುತ, 16 ನಗರಗಳ ಜನರು ಮನೆಗೆ ಸಿಮ್ ಕಾರ್ಡ್ ತಲುಪಿಸುವ ಸೌಲಭ್ಯವನ್ನು ಪಡೆಯಲಿದ್ದಾರೆ. ಮನೆಯಲ್ಲಿ ಕುಳಿತು ನಿಮಿಷಗಳಲ್ಲಿ ಹೊಸ ಸಿಮ್ ಕಾರ್ಡ್ ಪಡೆಯಲು ಬಯಸುವವರಿಗೆ, ಇದು ಹೆಚ್ಚು ಪ್ರಯೋಜನಕಾರಿ ಆಗಿದೆ. ಆದರೆ, ಈ ಸಿಮ್ ವಿತರಣೆ ಉಚಿತವಾಗಿರುವುದಿಲ್ಲ.
ಮೊದಲೇ ಹೇಳಿದಂತೆ, ಗ್ರಾಹಕರು ಈ ಸೌಲಭ್ಯದ ಲಭ ಪಡೆಯಲು 49 ರೂ. ಗಳ ಶುಲ್ಕ ಪಾವತಿಸಬೇಕು. ಹೊಸ ಪ್ರಿಪೇಯ್ಡ್ ಸಿಮ್ ಮಾತ್ರವಲ್ಲದೆ, ಪೋಸ್ಟ್‌ಪೇಯ್ಡ್ ಸಿಮ್‌ಗಳನ್ನು ಸಹ ನಿಮಗೆ ತಲುಪಿಸಲಾಗುತ್ತದೆ. ಮೊಬೈಲ್ ಸಂಖ್ಯೆ ಪೋರ್ಟ್ (ಪೋರ್ಟಬಿಲಿಟಿ) ಮಾಡಲು ಬಯಸುವ ಗ್ರಾಹಕರು (ತಮ್ಮ ಟೆಲಿಕಾಂ ಆಪರೇಟರ್ ಅನ್ನು ಬದಲಾಯಿಸಲು ಬಯಸುವವರು) ಬ್ಲಿಂಕಿಟ್‌ನಿಂದ ಹೊಸ ಸಿಮ್ ವಿತರಣೆಯನ್ನು ಸಹ ಪಡೆಯಲು ಸಾಧ್ಯವಾಗುತ್ತದೆ.
15 ದಿನಗಳಲ್ಲಿ ಸಕ್ರಿಯಗೊಳಿಸಬೇಕು
ನೀವು ಹೊಸ ಸಿಮ್ ಅನ್ನು 15 ದಿನಗಳಲ್ಲಿ ಸಕ್ರಿಯಗೊಳಿಸಬೇಕು. ಆಧಾರ್ ಕೆವೈಸಿ ಮೂಲಕ ಸಿಮ್ ಸಕ್ರಿಯಗೊಳಿಸಬಹುದು. ಇದಕ್ಕೆ ಆನ್‌ಲೈನ್ ಲಿಂಕ್ ವ್ಯವಸ್ಥೆ ನೀಡಲಾಗುವುದು. ವಿಡಿಯೋ ಮಾರ್ಗದರ್ಶಿಯೊಂದಿಗೆ ಹೊಸ ಸಿಮ್ ಅನ್ನು ಹೇಗೆ ಸಕ್ರಿಯಗೊಳಿಸುವುದು ಎಂಬುದರ ಕುರಿತು ಸೂಚನೆಗಳನ್ನು ನೀಡಲಾಗುತ್ತದೆ. ನೀವು ಮೊಬೈಲ್‌ನಲ್ಲಿ ಏರ್‌ಟೆಲ್ ಥ್ಯಾಂಕ್ಸ್ ಆಪ್ ಡೌನ್‌ಲೋಡ್ ಮಾಡಬೇಕು. ಈ ಮೂಲಕ ಹೊಸ ಸಿಮ್ ಸಕ್ರಿಯಗೊಳಿಸಬೇಕು.
ಯಾವ ನಗರಗಳಲ್ಲಿ ಈ ಸೌಲಭ್ಯ ಸಿಗುತ್ತೆ?
ಪ್ರಸ್ತುತ, ಈ ಸಿಮ್ ವಿತರಣೆಯ ಸೌಲಭ್ಯವನ್ನು 16 ನಗರಗಳ ಜನರು ಪಡೆಯಲಿದ್ದಾರೆ. ಬೆಂಗಳೂರು, ದೆಹಲಿ, ಗುರಗಾಂವ್, ಫರಿದಾಬಾದ್, ಸೋನಿಪತ್, ಅಹಮದಾಬಾದ್, ಸೂರತ್, ಚೆನ್ನೈ, ಭೋಪಾಲ್, ಇಂದೋರ್, ಮುಂಬೈ, ಪುಣೆ, ಲಕ್ನೋ, ಜೈಪುರ, ಕೋಲ್ಕತ್ತಾ ಮತ್ತು ಹೈದರಾಬಾದ್ ನಗರಗಳಲ್ಲಿ ಜನರು ಕೇವಲ 10 ನಿಮಿಷಗಳಲ್ಲಿ ಹೊಸ ಸಿಮ್ ಬುಕ್ ಮಾಡಬಹುದು. ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಹೆಚ್ಚಿನ ಸ್ಥಳಗಳಿಗೆ ವಿಸ್ತರಿಸಲಾಗುವುದು. ಈ ಮೂಲಕ ಏರ್‌ಟೆಲ್ ಕಂಪನಿಯು ತನ್ನ ಗ್ರಾಹಕರ ಜೀವನವನ್ನು ಸುಲಭಗೊಳಿಸಲು ಮುಂದಾಗಿದೆ. ಇದಕ್ಕಾಗಿಯೇ ಬ್ಲಿಂಕಿಟ್ ಜೊತೆ ಒಪ್ಪಂದ (ಪಾಲುದಾರಿಕೆ) ಮಾಡಿಕೊಂಡಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications