ಭಾರತದ ಷೇರು ಮಾರುಕಟ್ಟೆಯ ಸೂಚ್ಯಂಕಗಳಾದ ಸೆನ್ಸೆಕ್, ನಿಫ್ಟಿಯಲ್ಲಿ ಸೋಮವಾರ (ಡಿಸೆಂಬರ್ 21, 2020) ರಕ್ತದೋಕುಳಿ ಕಂಡುಬಂತು. ಮಧ್ಯಾಹ್ನ 3 ಗಂಟೆ ಹೊತ್ತಿಗೆ 1615.57 ಪಾಯಿಂಟ್ ಇಳಿಕೆ ಕಂಡು 45,345.12 ಪಾಯಿಂಟ್ ನಲ್ಲಿ ವ್ಯವಹಾರ ನಡೆಸಿತು. ಇನ್ನು ನಿಫ್ಟಿ 494.55 ಪಾಯಿಂಟ್ ಕುಸಿದು, 13,266 ಪಾಯಿಂಟ್ ನಲ್ಲಿ ವ್ಯವಹಾರ ನಡೆಸಿತು.
ಇನ್ನು ನಿಫ್ಟಿ ಬ್ಯಾಂಕ್ ಸೂಚ್ಯಂಕವು 1390.6 ಪಾಯಿಂಟ್ ಕುಸಿತ ಕಂಡಿತು. ಒಂದು ಹಂತದಲ್ಲಿ ಸೆನ್ಸೆಕ್ಸ್ ಸೂಚ್ಯಂಕವು 45 ಸಾವಿರದ ಗಡಿಯನ್ನು ಸಹ ಮೀರಿ ಕೆಳಗೆ ಇಳಿದಿತ್ತು. ನಿಫ್ಟಿ 13,131.45 ಪಾಯಿಂಟ್ ಮುಟ್ಟಿತ್ತು. ಒಎನ್ ಜಿಸಿ, ಟಾಟಾ ಮೋಟಾರ್ಸ್, ಗೇಲ್, ಐಒಸಿ ಹಾಗೂ ಇಂಡಸ್ ಇಂಡ್ ಬ್ಯಾಂಕ್ ನಿಫ್ಟಿಯಲ್ಲಿ ಕನಿಷ್ಠ 7.50 ಪರ್ಸೆಂಟ್ ನಿಂದ 9 ಪರ್ಸೆಂಟ್ ನಷ್ಟ ಕಂಡವು.

ಎಲ್ಲ ವಲಯದ ಸೂಚ್ಯಂಕಗಳು ಇಳಿಕೆಯಲ್ಲಿದ್ದವು. ಅತಿ ಹೆಚ್ಚು ನಷ್ಟವನ್ನು, ಅಂದರೆ ಐದು ಪರ್ಸೆಂಟ್ ಗೂ ಹೆಚ್ಚು ಕುಸಿತವನ್ನು ಕಂಡಿದ್ದು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳ ಸೂಚ್ಯಂಕ. ಲೋಹದ ಸೂಚ್ಯಂಕ ನಾಲ್ಕು ಪರ್ಸೆಂಟ್ ಹಾಗೂ ಎನರ್ಜಿ, ಮೂಲಸೌಕರ್ಯ ಸೂಚ್ಯಂಕಗಳು ತಲಾ 3 ಪರ್ಸೆಂಟ್ ಇಳಿಕೆ ಕಂಡವು.


Click it and Unblock the Notifications