For Daily Alerts
ಷೇರುಪೇಟೆಯಲ್ಲಿ ರಕ್ತದೋಕುಳಿ: ಸೆನ್ಸೆಕ್ಸ್ 1900 ಪಾಯಿಂಟ್ಸ್ ಕುಸಿತ
|
ಭಾರತೀಯ ಷೇರುಪೇಟೆ ಶುಕ್ರವಾರ ಭಾರೀ ಕುಸಿತಕ್ಕೆ ಸಾಕ್ಷಿಯಾಗಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಬರೋಬ್ಬರಿ 1900ಕ್ಕೂ ಅಧಿಕ ಪಾಯಿಂಟ್ಸ್ ನೆಲಕಚ್ಚಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 500ಕ್ಕೂ ಅಧಿಕ ಪಾಯಿಂಟ್ಸ್ ಇಳಿಕೆಯಾಗಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 3.80ರಷ್ಟು ಅಥವಾ 1939.32 ಪಾಯಿಂಟ್ಸ್ ಕುಸಿದು 49,099.99 ಪಾಯಿಂಟ್ಸ್‌ಗೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 3.76ರಷ್ಟು ಅಥವಾ 568.2 ಪಾಯಿಂಟ್ಸ್ ಇಳಿಕೆಗೊಂಡು 14,529.15 ಸೂಚ್ಯಂಕಗಳನ್ನು ತಲುಪಿದೆ.
ಬಿಎಸ್ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇಕಡಾ 1.75 ಮತ್ತು ಶೇಕಡಾ 0.74ರಷ್ಟು ಇಳಿಕೆಯಾಗಿದ್ದು, ಹೂಡಿಕೆದಾರರು ಭಾರೀ ನಷ್ಟವನ್ನು ಎದುರಿಸಿದ್ದಾರೆ.
ನಿಫ್ಟಿ ಬ್ಯಾಂಕ್, ಖಾಸಗಿ ಬ್ಯಾಂಕ್, ಪಿಎಸ್‌ಯು ಬ್ಯಾಂಕ್ ಮತ್ತು ಫೈನಾನ್ಷಿಯಲ್ ಸರ್ವೀಸಸ್ ಸೂಚ್ಯಂಕಗಳೆಲ್ಲವೂ 5 ಪ್ರತಿಶತದಷ್ಟು ಕುಸಿದಿದ್ದರಿಂದ ಬ್ಯಾಂಕಿಂಗ್ ಮತ್ತು ಹಣಕಾಸು ಷೇರುಗಳು ಕುಸಿತಕ್ಕೆ ಕಾರಣವಾಯಿತು.
English summary