For Quick Alerts
ALLOW NOTIFICATIONS  
For Daily Alerts

ನೀಲಿ ಬಣ್ಣದ ಆಧಾರ್ ಕಾರ್ಡ್‌: ಯಾರಿಗೆ ಸಿಗಲಿದೆ? ಅಪ್ಲೈ ಮಾಡುವುದು ಹೇಗೆ?

|

ಅನೇಕ ಸರ್ಕಾರಿ ಮತ್ತು ಇತರ ಕೆಲಸಗಳಲ್ಲಿ ಆಧಾರ್‌ ಕಾರ್ಡ್ ಬಹು ಪ್ರಮುಖ ಗುರುತಿನ ಚೀಟಿಯಾಗಿಬಿಟ್ಟಿದೆ. ಬಹುತೇಕ ಎಲ್ಲಾ ಕಡೆ ಆಧಾರ್ ಕಾರ್ಡ್ ಬಹು ಪ್ರಮುಖ ಡಾಕ್ಯುಮೆಂಟ್ ಆಗಿದೆ. ಆದಾಯ ತೆರಿಗೆಯನ್ನು ಸಲ್ಲಿಸುವುದರಿಂದ ಹಿಡಿದು ಪ್ಯಾನ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವವರೆಗೆ, ಆಧಾರ್ ಗುರುತಿನ ಪ್ರಮುಖ ಪುರಾವೆ ಆಗುತ್ತಿದೆ.

 

ನಿಮ್ಮ ಆಧಾರ್‌ಕಾರ್ಡ್ ಮೊಬೈಲ್ ನಂಬರ್, ವಿಳಾಸ ಅಪ್‌ಡೇಟ್ ಮಾಡುವುದು ಹೇಗೆ?

ಇದೆಲ್ಲದರ ಹೊರತಾಗಿ, 12-ಅಂಕಿಯ ಬಯೋಮೆಟ್ರಿಕ್ ಸಂಖ್ಯೆ ಇತರ ಹಲವು ಉದ್ದೇಶಗಳಿಗೆ ಉಪಯುಕ್ತವಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನೀಡಿರುವ 12 ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯು ಈಗ ನಿಮ್ಮ ಜನಸಂಖ್ಯಾ ಮತ್ತು ಬಯೋಮೆಟ್ರಿಕ್ ಡೇಟಾವನ್ನು ಒಳಗೊಂಡಿರುವ ಕಾರಣ ಮಹತ್ವದ ಗುರುತಿನ ದಾಖಲೆಗಳಲ್ಲಿ ಒಂದಾಗಿದೆ.

ಪ್ರತಿಯೊಬ್ಬರೂ ಆಧಾರ್‌ ಕಾರ್ಡ್‌ ಪಡೆಯಬಹುದು, ನವಜಾತ ಶಿಶು ಕೂಡ. ಈ ಆಧಾರ್ ಕಾರ್ಡ್‌ಗಳನ್ನು ಬಾಲ್ ಆಧಾರ್ ಎಂದು ಕರೆಯಲಾಗುತ್ತದೆ.

ನೀಲಿ ಬಣ್ಣದ ಆಧಾರ್ ಕಾರ್ಡ್‌: ಯಾರಿಗೆ ಸಿಗಲಿದೆ? ಅಪ್ಲೈ ಮಾಡೋದು ಹೇಗೆ?

ಮಕ್ಕಳಿಗಾಗಿ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ವಯಸ್ಕರಿಗೆ ಅನುಸರಿಸಬೇಕಾದ ಪ್ರಕ್ರಿಯೆಯಂತೆಯೇ ಇರುತ್ತದೆ. ನೀವು ದಾಖಲಾತಿ ಕೇಂದ್ರದಲ್ಲಿ ಲಭ್ಯವಿರುವ ಅರ್ಜಿ ನಮೂನೆಯನ್ನು ಪೂರಕ ದಾಖಲೆಗಳೊಂದಿಗೆ ಗುರುತಿನ ಪುರಾವೆ (POI), ವಿಳಾಸದ ಪುರಾವೆ (POA), ಸಂಬಂಧದ ಪುರಾವೆ (POR) ಮತ್ತು ಹುಟ್ಟಿದ ದಿನಾಂಕ (DOB) ದಾಖಲೆಗಳೊಂದಿಗೆ ಭರ್ತಿ ಮಾಡಬೇಕು. UIDAI 31 PoI ಮತ್ತು 44 PoA, 14 PoR ಮತ್ತು 14 DoB ದಾಖಲೆಗಳನ್ನು ಸ್ವೀಕರಿಸುತ್ತದೆ.

1. 5 ವರ್ಷದೊಳಗಿನ ಮಗು ನೀಲಿ ಬಣ್ಣದ 'ಬಾಲ್ ಆಧಾರ್' ಪಡೆಯುತ್ತದೆ ಮತ್ತು ಮಗುವಿಗೆ 5 ವರ್ಷ ತುಂಬಿದಾಗ ಆ ಆಧಾರ್ ಕಾರ್ಡ್‌ ಅಮಾನ್ಯವಾಗುತ್ತದೆ.

2. ನಿಮ್ಮ ಮಗುವಿನ ಶಾಲಾ ಗುರುತಿನ ಚೀಟಿಯನ್ನು (ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ನೀಡಲಾದ ಫೋಟೋ ಐಡಿ) ನೀವು ಆತನ/ ಆಕೆಯ ಆಧಾರ್ ದಾಖಲಾತಿಗೆ ಬಳಸಬಹುದು.

3. ನಿಮ್ಮ ಮಗುವಿನ ಬಯೋಮೆಟ್ರಿಕ್ ಆಧಾರ್ ಡೇಟಾವನ್ನು 5 ವರ್ಷ ವಯಸ್ಸಿನಲ್ಲಿ ಮತ್ತು ನಂತರ 15 ನೇ ವಯಸ್ಸಿನಲ್ಲಿ ನವೀಕರಿಸಲು ಮರೆಯದಿರಿ. ಮಕ್ಕಳಿಗಾಗಿ ಈ ಕಡ್ಡಾಯ ಬಯೋಮೆಟ್ರಿಕ್ ಅಪ್‌ಡೇಟ್ ಉಚಿತವಾಗಿದೆ. ಅದನ್ನು ಪುನಃ ಸಕ್ರಿಯಗೊಳಿಸಲು ಕಡ್ಡಾಯ ಬಯೋಮೆಟ್ರಿಕ್ ಅಪ್‌ಡೇಟ್ ಅಗತ್ಯವಿದೆ.

4. ಮಗುವಿನ ಜನನ ಪ್ರಮಾಣಪತ್ರ ಅಥವಾ ಆಸ್ಪತ್ರೆಯಿಂದ ನೀವು ಪಡೆದ ಡಿಸ್ಚಾರ್ಜ್ ಸ್ಲಿಪ್ ಜೊತೆಗೆ ನಿಮ್ಮ ಮಗುವಿನ ಬಾಲ್ ಆಧಾರ್‌ಗೆ ಅರ್ಜಿ ಸಲ್ಲಿಸಬಹುದು.

5. ಮಗುವಿನ ಆಧಾರ್ ಡೇಟಾವು ಬೆರಳಚ್ಚುಗಳು ಮತ್ತು ಐರಿಸ್ ಸ್ಕ್ಯಾನ್ ನಂತಹ ಬಯೋಮೆಟ್ರಿಕ್ ಮಾಹಿತಿಯನ್ನು ಒಳಗೊಂಡಿರುವುದಿಲ್ಲ. ಮಗು 5 ದಾಟಿದ ನಂತರ, ಬಯೋಮೆಟ್ರಿಕ್ ಅನ್ನು ನವೀಕರಿಸಬೇಕಾಗುತ್ತದೆ.

Read more about: aadhaar ಆಧಾರ್
English summary

Blue Aadhaar card : What is the blue-coloured Aadhaar card and How to Apply in Kannada

What is Blue Aadhaar Card? Here's information on how to get it for young children in Kannada
Story first published: Saturday, October 9, 2021, 19:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X