ಬೆಂಗಳೂರು, ಏಪ್ರಿಲ್ 27: ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ಷಾ ಪರೇಡ್ ಮೈದಾನದಿಂದ ಪ್ರಾರಂಭವಾಗಲಿರುವ ಟಿಸಿಎಸ್ (TCS) ವರ್ಲ್ಡ್ 10ಕೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಪ್ರಯಾಣಿಕರಿಗೆ ಸಹಾಯ ಮಾಡಲು ಮೆಟ್ರೋ ರೈಲುಗಳು ಭಾನುವಾರದಂದು ಬೇಗನೆ ಪ್ರಾರಂಭವಾಗಲಿವೆ.
ನಾಗಸಂದ್ರ, ಸಿಲ್ಕ್ ಇನ್‌ಸ್ಟಿಟ್ಯೂಟ್, ವೈಟ್‌ಫೀಲ್ಡ್ (ಕಾಡುಗೋಡಿ) ಮತ್ತು ಚಲ್ಲಘಟ್ಟ ಮೆಟ್ರೋ ನಿಲ್ದಾಣ ಈ ಎಲ್ಲಾ ನಾಲ್ಕು ಟರ್ಮಿನಲ್‌ಗಳಿಂದ ಸಾಮಾನ್ಯ ವೇಳಾಪಟ್ಟಿಗಿಂತ ನಾಲ್ಕೂವರೆ ಗಂಟೆಗಳ ಮುಂಚಿತವಾಗಿ ಮೆಟ್ರೋ ಸೇವೆಗಳು 03.35 ಕ್ಕೆ ಪ್ರಾರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಪ್ರಕಟಣೆ ತಿಳಿಸಿದೆ.

ಈ ಆರಂಭಿಕ ಪ್ರಯಾಣದಲ್ಲಿ ರೈಲುಗಳು 03.35 ರಿಂದ 04.25 ರವರೆಗೆ 10 ನಿಮಿಷಗಳ ಆವರ್ತನದಲ್ಲಿ ಕಾರ್ಯನಿರ್ವಹಿಸುತ್ತವೆ. ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ (ಮೆಜೆಸ್ಟಿಕ್) ಎಂಜಿ ರಸ್ತೆ ಕಡೆಗೆ ಮೊದಲ ರೈಲು ಸೇವೆ ಬೆಳಿಗ್ಗೆ 04.10 ಕ್ಕೆ ಹೊರಡಲಿದೆ. ತರುವಾಯ, ರೈಲುಗಳು 10 ನಿಮಿಷಗಳ ಮಧ್ಯಂತರದಲ್ಲಿ ಬೆಳಿಗ್ಗೆ 5 ಗಂಟೆಯವರೆಗೆ ಚಲಿಸುತ್ತವೆ, ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಹೆಚ್ಚಿನ ಸೇವೆಗಳು ಇರಲಿವೆ.
ತುಮಕೂರಿನವರೆಗೆ ಮೆಟ್ರೋ:
ಮಾದಾವರದಿಂದ ತುಮಕೂರಿನವರೆಗೆ 52 ಕಿಮೀ ಮೆಟ್ರೊ ರೈಲು ಕಾರಿಡಾರ್ ವಿಸ್ತರಣೆಗೆ ಎಂಟು ಸಲಹಾ ಸಂಸ್ಥೆಗಳು ಕಾರ್ಯಸಾಧ್ಯತೆಯ ಅಧ್ಯಯನ ವರದಿಯನ್ನು ಸಿದ್ಧಪಡಿಸಲು ಆಸಕ್ತಿ ತೋರಿಸಿವೆ. ಇದು ಕಾರ್ಯಸಾಧ್ಯವಾದರೆ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ಕಾರ್ಯಗತಗೊಳಿಸಲಾಗುತ್ತದೆ. ಟೆಂಡರ್‌ನಲ್ಲಿ ಭಾಗವಹಿಸುವ ಕೆಲವು ಬಿಡ್‌ದಾರರು RITES ಲಿಮಿಟೆಡ್, Systra MVA ಕನ್ಸಲ್ಟಿಂಗ್, ಆರ್ವಿ ಅಸೋಸಿಯೇಟ್ಸ್ ಇವೇ ಮೊದಲಾದವು.
ಎಂಟು ಬಿಡ್‌ದಾರರ ಭಾಗವಹಿಸಿವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ದೃಢಪಡಿಸಿದ್ದಾರೆ. ತಾಂತ್ರಿಕ ಮತ್ತು ಆರ್ಥಿಕ ಮೌಲ್ಯಮಾಪನಗಳ ನಂತರ ಯಶಸ್ವಿ ಸಲಹೆಗಾರರನ್ನು ಆಯ್ಕೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ತುಮಕೂರಿಗೆ ಮೆಟ್ರೋ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.


Click it and Unblock the Notifications