ಖುಷಿ ಸುದ್ದಿ..ಬಹುದಿನಗಳ ನಿರೀಕ್ಷೆ ಹಳದಿ ಮಾರ್ಗವನ್ನು ಚಾಲನೆಗೊಳಿಸುವಲ್ಲಿ ಬಿಎಂಆರ್‌ಸಿಎಲ್ ಮತ್ತೊಂದು ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದೆ. ಕೋಲ್ಕತ್ತಾದಿಂದ 3 ಹೊಸ ಬೋಗಿಗಳು ಬಂದಿದ್ದೇವೆ. ಮೇ 2 ರೊಳಗೆ ಅಂತಿಮ ಬೋಗಿಗಳು ಬರುವ ನಿರೀಕ್ಷೆಯಿದೆ.
ಹೌದು, ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಇಂದು 19.15 ಕಿಮೀ ಹಳದಿ ಮಾರ್ಗ (ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ) ಯೋಜನೆಯ ಕುರಿತು ಹೊಸ ಅಪ್ಡೇಟ್ಸ್ ವೂಂದನ್ನು ನೀಡಿದೆ. ಅದು ಏನೆಂದರೆ ಹಳದಿ ಮಾರ್ಗಕ್ಕೆ ಮೂರನೇ ರೈಲು ಸೆಟ್‌ನ ಮೂರು ಬೋಗಿಗಳನ್ನು ಪಶ್ಚಿಮ ಬಂಗಾಳದ ತಿತಾಘರ್ ರೈಲು ವ್ಯವಸ್ಥೆ ಲಿಮಿಟೆಡ್ (TRSL) ನಿಂದ ಕಳುಹಿಸಲಾಗಿದೆ. ಮೂರನೇ ರೈಲು ಸೆಟ್‌ನ ಉಳಿದ ಮೂರು ಬೋಗಿಗಳನ್ನು ಮೇ 2 ರೊಳಗೆ ಲೋಡ್ ಮಾಡಿ ರಸ್ತೆ ಮೂಲಕ ಬೆಂಗಳೂರಿಗೆ ಸಾಗಿಸಲು ನಿರ್ಧರಿಸಲಾಗಿದ್ದು, ಮೇ 10 ರಿಂದ ಮೇ 15 ರ ನಡುವೆ ನಗರಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಬಿಎಂಆರ್‌ಸಿಎಲ್ ಇದುವರೆಗೆ ತಲಾ ಆರು ಬೋಗಿಗಳ ಎರಡು ರೈಲು ಸೆಟ್‌ಗಳನ್ನು ಮಾತ್ರ ಪಡೆದುಕೊಂಡಿದೆ. ಈ ಕುರಿತು ಬಿಎಂಆರ್‌ಸಿಎಲ್ ಮುಖ್ಯಸ್ಥ ಎಂ. ಮಹೇಶ್ವರ್ ರಾವ್, ಟ್ರೇಲರ್ ವ್ಯವಸ್ಥೆಯಿಂದಾಗಿ ಕೇವಲ ಮೂರು ಬೋಗಿಗಳನ್ನು ಮಾತ್ರ ಮೊದಲು ರವಾನಿಸಲಾಗಿದೆ ಎಂದು ಹೇಳಿದರು. ಉಳಿದವುಗಳನ್ನು ಪ್ಯಾಕ್ ಮಾಡಲಾಗುತ್ತಿದೆ. ಮೇ 2 ರೊಳಗೆ ಅವುಗಳನ್ನು ಕಳುಹಿಸುವ ನಿರೀಕ್ಷೆಯಿದೆ. ಟ್ರೇಲರ್‌ಗಳು ವಿಳಂಬವಾದರೆ, ಮೇ 4 ರವರೆಗೆ ರವಾನೆ ವಿಳಂಬವಾಗಬಹುದು ಎಂದು ಅವರು ಹೇಳಿದ್ದರು.
ಹೊಸ ರೈಲು ಸೆಟ್ ಸ್ಥಿರ ಮತ್ತು ಕ್ರಿಯಾತ್ಮಕ ಪರೀಕ್ಷೆಗೆ ಒಳಗಾಗಲಿದೆ ಎಂದು ಅವರು ಹೇಳಿದರು, ಬಿಎಂಆರ್‌ಸಿಎಲ್ ಕಳೆದ ವಾರ ಸಿಎಂಆರ್‌ಎಸ್ ಗೆ ಪತ್ರ ಬರೆದಿದೆ. ನಾಲ್ಕನೇ ರೈಲು ಸೆಟ್ ಜುಲೈ ಅಂತ್ಯದ ವೇಳೆಗೆ ತಾತ್ಕಾಲಿಕವಾಗಿ ನಗರಕ್ಕೆ ಆಗಮಿಸಲಿದೆ.
ಮೂರು ರೈಲುಗಳ ಆಗಮನದೊಂದಿಗೆ, ಮೇ ಅಂತ್ಯದ ವೇಳೆಗೆ ಹಳದಿ ಮಾರ್ಗವನ್ನು ಕಾರ್ಯಗತಗೊಳಿಸಲು ಸರ್ಕಾರದ ಗಡುವನ್ನು ಪೂರೈಸುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿದೆ, ಆದರೆ ಅವುಗಳ ಸಮಯವು ಹೊಂದಿಕೆಯಾಗದಿದ್ದರೆ, ಉದ್ಘಾಟನೆಯನ್ನು ಒಂದು ವಾರ ಮುಂದೂಡಬಹುದು. ಏಪ್ರಿಲ್ ಆರಂಭದಲ್ಲಿ ಹಳದಿ ಮಾರ್ಗದ ರೈಲುಗಳು ಆರ್‌ವಿ ರಸ್ತೆ, ಜಯದೇವ ಆಸ್ಪತ್ರೆ, ಸಿಲ್ಕ್ ಬೋರ್ಡ್, ಇನ್ಫೋಸಿಸ್ ಮತ್ತು ಬೊಮ್ಮಸಂದ್ರದಲ್ಲಿ ಮಾತ್ರ ನಿಲ್ಲವಂತಹ ನಿರೀಕ್ಷೆಗಳು ಇವೆ.
ನಮ್ಮ ಮೆಟ್ರೋ ಹಳದಿ ಮಾರ್ಗ ಬೊಮ್ಮಸಂದ್ರದಿಂದ ಆರ್.ವಿ. ರಸ್ತೆವರೆಗೆ ವಿಸ್ತರಿಸಲಾದ ಹಳದಿ ಮೆಟ್ರೋ ಮಾರ್ಗವು 18.8 ಕಿಲೋಮೀಟರ್ ಉದ್ದವಿದ್ದು, ದಕ್ಷಿಣ ಬೆಂಗಳೂರು ಮತ್ತು ನಗರ ಕೇಂದ್ರದ ನಡುವಿನ ಸಂಚಾರಕ್ಕೆ ಪ್ರಮುಖ ಸಂಪರ್ಕನ್ನು ನೀಡುತ್ತದೆ. ಈ ಮಾರ್ಗದಲ್ಲಿ ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರು ರಸ್ತೆ, ಇನ್ಫೋಸಿಸ್ ಫೌಂಡೇಶನ್ (ಕೋನಪ್ಪನ ಅಗ್ರಹಾರ), ಎಲೆಕ್ಟ್ರಾನಿಕ್ ಸಿಟಿ, ಬೆರಟೇನ ಅಗ್ರಹಾರ, ಹೊಸ ರಸ್ತೆ, ಸಿಂಗಸಂದ್ರ, ಕೂಡ್ಲು ಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ, ರಾಗಿಗುಡ್ಡ ಮತ್ತು ಆರ್.ವಿ. ರಸ್ತೆ ಎಂಬ 16 ನಿಲ್ದಾಣಗಳಿವೆ. ಈ ಮಾರ್ಗದಲ್ಲಿ ಐಟಿ ಉದ್ಯೋಗಿ ಕೆಲಸಕ್ಕೆ ಹೋಗುವ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ದಕ್ಷಿಣ ಬೆಂಗಳೂರಿನ ಜನಸಂಚಾರ ಪ್ರದೇಶದ ಕೇಂದ್ರವನ್ನು ಇದು ಸಂಪರ್ಕಿಸಲಿದೆ.
ಹಳದಿ ಮಾರ್ಗದಲ್ಲಿ ರೈಲು ಸಂಚಾರ ಪ್ರಾರಂಭದ ತಯಾರಿ ಅಂತಿಮ ಹಂತದಲ್ಲಿದೆ. ಆರಂಭಿಕ ದಿನಗಳಲ್ಲಿ ರೈಲುಗಳು ಪ್ರತಿ ಅರ್ಧ ಗಂಟೆಗೆ ಒಮ್ಮೆ ಸಂಚರಿಸಲಿದ್ದು, ಈ ಹಂತದಲ್ಲೇ ದಿನಕ್ಕೆ 50,000 ಜನರು ಈ ಮಾರ್ಗದಲ್ಲಿ ಪ್ರಯಾಣಿಸುವ ನಿರೀಕ್ಷೆ ಇದೆ.
3.5 ಲಕ್ಷ ಜನರಿಗೆ ಪ್ರಯೋಜನ
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಅಧಿಕಾರಿಗಳ ಅಂದಾಜು ಪ್ರಕಾರ, ಈ ಮಾರ್ಗವು ಸಂಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದಾಗ, ದಿನಕ್ಕೆ ಸುಮಾರು 3.5 ಲಕ್ಷ ಜನರಿಗೆ ಪ್ರಯೋಜನವಾಗಲಿದೆ. ಪ್ರಮುಖವಾಗಿ ಎಲೆಕ್ಟ್ರಾನಿಕ್ ಸಿಟಿ ಮತ್ತು ಸುತ್ತಮುತ್ತಲಿನ ಐಟಿ ಉದ್ಯೋಗಿಗಳು ಹಾಗೂ ದಕ್ಷಿಣ ಬೆಂಗಳೂರು ನಿವಾಸಿಗಳಿಗೆ ಇದು ಪ್ರಮುಖ ಸಂಚಾರ ಮಾರ್ಗವಾಗುತ್ತದೆ ಎಂದು ಹೇಳಿದ್ದಾರೆ.


Click it and Unblock the Notifications