ಹಲವು ವರ್ಷಗಳಿಂದ ಬನಶಂಕರಿಯ ಹಸಿರು ಮಾರ್ಗದಲ್ಲಿ ಮೆಟ್ರೋ ನಿಲ್ದಾಣವನ್ನು ಪ್ರವೇಶಿಸಲು ಸಂಚಾರ ದಟ್ಟಣೆಯನ್ನು ಎದುರಿಸುತ್ತಿರುವ ಪ್ರಯಾಣಿಕರು ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇದೀಗ ಸ್ಕೈವಾಕ್ ನಿರ್ಮಿಸಲು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಟೆಂಡರ್ ಕರೆದಿದೆ.
ಹೌದು, ಬನಶಂಕರಿ ಮೆಟ್ರೋ ನಿಲ್ದಾಣ, ಬಿಎಂಟಿಸಿ ಬಸ್ ನಿಲ್ದಾಣ, ಮತ್ತು ಬನಶಂಕರಿ ದೇವಸ್ಥಾನವನ್ನು ಸಂಪರ್ಕಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಬೃಹತ್ ಸ್ಕೈವಾಕ್ ನಿರ್ಮಾಣಕ್ಕೆ ಯೋಜನೆ ರೂಪಿಸಲು ಮುಂದಾಗಿದೆ.

ಈ ಬೃಹತ್ ಸ್ಕೈವಾಕ್ ನಿರ್ಮಾಣ 15 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳವಂತಹ ನಿರೀಕ್ಷೆ ಇದ್ದು, ಸುಮಾರು 50 ರಿಂದ 55 ಕೋಟಿ ರೂ. ವೆಚ್ಚದಲ್ಲಿ ತಗಲುವ ಅಂದಾಜು ಇದೆ. ಇದರಿಂದ ಬನಶಂಕರಿ ಜಂಕ್ಷನ್‌ನ ಟ್ರಾಫಿಕ್ ದಟ್ಟಣೆಗೆ ಪರಿಹಾರ ಸಿಗುತ್ತದೆ.
ಕನಕಪುರ ರಸ್ತೆಯಲ್ಲಿರುವ ಬನಶಂಕರಿ ಜಂಕ್ಷನ್ ಭಾರೀ ಜನಸಂದಣಿಯಿಂದ ತುಂಬಿರುತ್ತದೆ. ಇದು ನಗರದ ಅತ್ಯಂತ ಜನನಿಬಿಡ ಸ್ಥಳಗಳಲ್ಲಿ ಒಂದಾಗಿದೆ. ಮೆಟ್ರೋ ನಿಲ್ದಾಣ ಮತ್ತು ಟಿಟಿಎಂಸಿ ಕಟ್ಟಡವು ಹೆಚ್ಚು ವಾಹನ ದಟ್ಟಣೆಯಿಂದ ಕೂಡಿದ ಸುಬ್ರಹ್ಮಣ್ಯಪುರ ರಸ್ತೆ ಮತ್ತು ಬನಶಂಕರಿ ದೇವಾಲಯದ ಆವರಣದ ಒಂದು ಭಾಗದಿಂದ ಬೇರ್ಪಟ್ಟಿದ್ದು, ಎರಡನ್ನೂ ಪ್ರವೇಶಿಸುವುದು ಸವಾಲಿನ ಸಂಗತಿಯಾಗಿದೆ.
ಈ ಟೆಂಟರ್ ನಲ್ಲಿ ಆಯ್ಕೆಯಾದ ಗುತ್ತಿಗೆದಾರರು 15 ತಿಂಗಳೊಳಗೆ ಯೋಜನೆಯನ್ನು ಪೂರ್ಣಗೊಳಿಸಬೇಕು. ನಿರ್ಮಾಣದ ನಂತರ ನಿರ್ವಹಣೆ ಮತ್ತು ಮರಗಳು ಮತ್ತು ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸುವ ಜವಾಬ್ದಾರಿ ಅವರ ಮೇಲಿರುತ್ತದೆ ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿಯನ್ನು ತಿಳಿಸಿದ್ದಾರೆ.
ಈ ಸ್ಕೈವಾಕ್ ನಿರ್ಮಾಣಕ್ಕೆ ಸುಮಾರು 50 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಸ್ಕೈವಾಕ್ ಜಂಕ್ಷನ್, ಬಸ್ ಟರ್ಮಿನಲ್ ಮತ್ತು ಮೆಟ್ರೋ ನಿಲ್ದಾಣವನ್ನು ಸಂಪರ್ಕಿಸುವ ವೃತ್ತಾಕಾರವನ್ನು ಹೊಂದಿರುತ್ತದೆ. ಈಗ ಅಸ್ತಿತ್ವದಲ್ಲಿರುವ ಜಂಕ್ಷನ್ ಅನ್ನು ಮರಗಳನ್ನು ನೆಡಲು ಮತ್ತು ಸಂಚಾರ ಸಂಕೇತಗಳನ್ನು ಅಳವಡಿಸಲು ಗೊತ್ತುಪಡಿಸಿದ ಪ್ರದೇಶಗಳೊಂದಿಗೆ ಮರುವಿನ್ಯಾಸಗೊಳಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿಯನ್ನು ತಿಳಿಸಿದ್ದಾರೆ .
ಈ ಸ್ಕೈವಾಕ್ ಹಸಿರು ಮರಗಳುಮತ್ತು ವಿಶ್ರಾಂತಿ ಸ್ಥಳಗಳ ಮೂಲಕ ವಿಶಿಷ್ಟ ಅನುಭವವನ್ನು ನೀಡುತ್ತದೆ, ಇದರಲ್ಲಿ ವಾಕ್‌ವೇ ಉದ್ದಕ್ಕೂ ಬೆಂಚುಗಳು ಇರಲಿವೆ. ಇದು ನೆಲದ ಮಟ್ಟದಲ್ಲಿ ಬೀದಿಯಲ್ಲಿ ನಡೆಯುವ ಅನುಭವವನ್ನು ಅನುಕರಿಸುತ್ತದೆ ಇದರಿಂದ ಪಾದಚಾರಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ.
ಬನಶಂಕರಿ ಜಂಕ್ಷನ್‌ನ ಹಲವಾರು ನಿಯಮಿತ ಪ್ರಯಾಣಿಕರು ಸ್ಕೈವಾಕ್ ಸಮಯಕ್ಕೆ ಪೂರ್ಣಗೊಳ್ಳುತ್ತದೆ ಮತ್ತು ಲಿಫ್ಟ್‌ಗಳಂತಹ ಅಗತ್ಯವಿರುವ ವೈಶಿಷ್ಟ್ಯಗಳನ್ನು ಸಹ ಹೊಂದಿರುತ್ತದೆ.
ಬನಶಂಕರಿ ಸೈವಾಕ್ ಅನ್ನು ಮೊದಲು 2019 ರಲ್ಲಿ ಪ್ರಸ್ತಾಪವನ್ನು ಮಾಡಲಾಗಿತ್ತು ಆದರೆ ಈ ಯೋಜನೆ ವಿಳಂಬವಾಗಿತ್ತು. 2022 ರಲ್ಲಿ ಪ್ರಸ್ತಾವನೆಯನ್ನು ಮತ್ತೆ ಪ್ರಸ್ತಾಪಿಸಲಾಯಿತು. BMRCL ಮತ್ತು BBMP ಎರಡೂ ಜಂಟಿಯಾಗಿ ನಿರ್ಮಾಣದೊಂದಿಗೆ ಮುಂದುವರಿಯಲು ನಿರ್ಧರವನ್ನು ಮಾಡಿದ್ದರು. ಇದೀಗ ಈ ಸ್ಕೈವಾಕ್ ಈ ಸಮಸ್ಯೆಗೆ ಪರಿಹಾರವಾಗಲಿದೆ.
ಮೆಟ್ರೋ ಮತ್ತು ಬಿಎಂಟಿಸಿ ಬಸ್ ನಿಲ್ದಾಣದ ನಡುವಿನ ಸುಮಾರು 700 ಮೀಟರ್ ಅಂತರವು ಪ್ರಯಾಣಿಕರಿಗೆ ಜಂಕ್ಷನ್ ದಾಟುವುದನ್ನು ಕಷ್ಟಕರವಾಗಿಸಿದೆ.
ಸ್ಕೈವಾಕ್‌ನ ಪ್ರಮುಖ ವಿಶೇಷತೆಗಳು:
ಮೆಟ್ರೋ ಮತ್ತು ಬಸ್ ನಿಲ್ದಾಣದ ಸಂಪರ್ಕ: ಬನಶಂಕರಿ ಮೆಟ್ರೋ ನಿಲ್ದಾಣ ಮತ್ತು ಬಿಎಂಟಿಸಿ ಟಿಟಿಎಂಸಿ (TTMC) ಬಸ್ ನಿಲ್ದಾಣವನ್ನು ಸಂಯೋಜಿಸುತ್ತದೆ.
ಪಾದಚಾರಿಗಳಿಗೆ ಸುರಕ್ಷತೆ: ಭಾರೀ ಟ್ರಾಫಿಕ್ ಇರುವ ಜಂಕ್ಷನ್‌ನಲ್ಲಿ ಸುರಕ್ಷಿತವಾಗಿ ರಸ್ತೆಯನ್ನು ದಾಟಲು ಅವಕಾಶ.
ಹಸಿರುಗಾರಿಕೆ ಹಾಗೂ ವಿಶ್ರಾಂತಿ ಸ್ಥಳ: ಹಸಿರು ವಾತಾವರಣದಲ್ಲಿ ಕುಳಿತುಕೊಳ್ಳಲು ಅವಕಾಶ.
ಬೀದಿ ವ್ಯಾಪಾರಿಗಳಿಗೆ ಸ್ಥಳ: ಸ್ಕೈವಾಕ್‌ನಲ್ಲಿ ಸಣ್ಣ ವ್ಯಾಪಾರಗಳಿಗೆ ಸ್ಥಳ ಕಲ್ಪಿಸಲಾಗಿದೆ.
ಆಧುನಿಕ ನಿರ್ಮಾಣ ಶೈಲಿ: ಗಾಜು, ಉಕ್ಕು ಮುಂತಾದ ಉತ್ತಮ ವಸ್ತುಗಳಿಂದ ವಿನ್ಯಾಸಗೊಂಡಿದೆ.
50 ಕೋಟಿ ಬಜೆಟ್: ಬಿಬಿಎಂಪಿಯಿಂದ ಅನುದಾನಿತ ಮಹತ್ವದ ನಗರ ಯೋಜನೆ.
ಸೌಕರ್ಯಗಳು: ಎಸ್ಕಲೇಟರ್, ಲಿಫ್ಟ್‌ಗಳಿವೆ ಇದ್ದು ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಸಹಾಯವಾಗುತ್ತದೆ.


Click it and Unblock the Notifications