ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟಿಡ್ (ಬಿಎಂಆರ್‌ಸಿಎಲ್) ಕೈ ಗೊಂಡಿರುವ ಈ ಒಂದು ನಿರ್ಧಾರ ನಿಜಕ್ಕೂ ಪ್ರಯಾಣಿಕರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಇನ್ನು ಮುಂದೆ ಮೆಟ್ರೋ ನಿಲ್ದಾಣದಲ್ಲಿ ಮಳಿಗೆಗಳು ಆರಂಭವಾಗಲಿವೆ. ಈ ಮಳಿಗೆಗಳಲ್ಲಿ ತಿಂಡಿ, ತಿನಿಸು ಹಾಗೂ ಕಾಫಿಗಳನ್ನು ಪ್ರಯಾಣಿಕರು ಸವಿಯಬಹುದಾಗಿದೆ. ಈಗಾಗಲೇ ಇದ್ದಾಕ್ಕಾಗಿ ಬಿಎಂಆರ್‌ಸಿಎಲ್ ಟೆಂಡರ್ ಸಹ ಕರೆದಿದೆ.
ಮೆಟ್ರೋ ನೆರಳೆ ಹಾಗೂ ಹಸಿರು ಮಾರ್ಗದ 55 ನಿಲ್ದಾಣಗಳಲ್ಲಿ ಮಳಿಗೆ ತೆರೆಯಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಶುಲ್ಕ ರಹಿತ ಆದಯ ಹೆಚ್ಚಿಸಿಕೊಳ್ಳುವ ಗುರಿಯನ್ನು ಹೊಂದಲಾಗಿದೆ. ಹಲವು ನಿಲ್ದಾಣಗಳಲ್ಲಿ ಇನ್ನು ಮುಂದೆ ರಿಟೇಲ್ ಹಾಗೂ ಔಟ್ ಲೆಟ್ ಸ್ಟೋರ್‌ಗಳು ಕಾರ್ಯ ನಿರ್ವಹಿಸಲಿವೆ.

ಬಿಎಂಆರ್‌ಸಿಎಲ್ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಈ ಕ್ರಮವನ್ನು ಕೈ ಗೊಳ್ಳಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಮೆಟ್ರೋ ನಿಲ್ದಾಣದಲ್ಲಿರುವ ಖಾಲಿ ಸ್ಥಳವನ್ನು ಬಳಸಿಕೊಂಡು ಚಿಲ್ಲರೆ ಮಳಿಗೆಗಳನ್ನು ತೆರೆಯಲು ಗುತ್ತಿಗೆ ನೀಡಲಾಗುವುದು ಎಂದು ಅಧಿಕಾರಿಯೊಬ್ಬರು ದಿ ಹಿಂದುಗೆ ತಿಳಿಸಿದ್ದಾರೆ. ಇನ್ನು ವಾಣಿಜ್ಯ ಚಟುವಟಿಕೆಗಳಿಗೆ ಕಟ್ಟು ನಿಟ್ಟಾದ ಮಾರ್ಗಸೂಚಿಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೆಟ್ರೋ ಆವರಣದಲ್ಲಿ ಆಲ್ಕೋಹಾಲ್, ತಂಬಾಕು ಮತ್ತು ಜೂಜಾಟವನ್ನು ಒಳಗೊಂಡ ಉತ್ಪನ್ನಗಳ ಮಾರಾಟ, ಎಲ್‌ಪಿಜಿ ಮತ್ತು ಸೀಮೆಎಣ್ಣೆ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಟೆಂಡರ್‌ನಲ್ಲಿ ಸೇರಿಸಲಾಗಿದೆ.

ಬಿಎಂಆರ್‌ಸಿಎಲ್ 55 ಮೆಟ್ರೋ ನಿಲ್ದಾಣಗಳ ಒಟ್ಟು 220 ಖಾಲಿ ಜಾಗಗಳನ್ನು ಗುರುತಿಸಲಾಗಿದೆ. ಆಯ ನಿಲ್ದಾಣಕ್ಕೆ ಹೊಂದುವಂತೆ ವ್ಯಾಪಾರಿ ಮಳಿಗೆಗಳನ್ನು ತೆರೆಯಲು ಬಿಎಂಆರ್‌ಸಿಎಲ್ ಪ್ಲ್ಯಾನ್ ಮಾಡಿಕೊಂಡಿದೆ. ಬಿಎಂಆರ್‌ಸಿಎಲ್‌ನ ಟೆಂಡರ್ ಡಾಕ್ಯುಮೆಂಟ್ ಲೇಔಟ್, ಚದರ ಅಡಿ ವಿಸ್ತೀರ್ಣ ಮತ್ತು ಪ್ರತಿ ಜಾಗಕ್ಕೆ ಕನಿಷ್ಠ ಕಾಯ್ದಿರಿಸಿದ ಮಾಸಿಕ ಪರವಾನಗಿ ಶುಲ್ಕವನ್ನು ನೀಗದಿ ಪಡಿಸಿ ಟೆಂಡರ್ ಕರೆಯಲಾಗಿದೆ.
ಕೋವಿಡ್-19 ಸಮಯದಲ್ಲಿ ಬಿಎಂಆರ್‌ಸಿಎಲ್‌ಗೆ ನಷ್ಟವಾಗಿದೆ. ಇದು ಶುಲ್ಕ ಸಂಗ್ರಹಣೆಯ ಮೇಲೆ ಪರಿಣಾಮ ಬೀರಿದೆ. ಅಲ್ಲದೆ ಈ ಹಿಂದೆ ಮೆಟ್ರೋ ನಿಲ್ದಾಣದಲ್ಲಿ ಮಾಡುತ್ತಿದ್ದ ವ್ಯಾಪಾರಿಗಳ ಮೇಲೆ ನೇರ ಪರಿಣಾಮ ಬಿದ್ದಿದೆ. ಕಡಿಮೆ ಆದಾಯ ಹಾಗೂ ಹೆಚ್ಚಿನ ನಿರ್ವಹಣಾ ವೆಚ್ಚದಿಂದ ಈ ಮೊದಲು ಚಿಲ್ಲರೆ ಅಂಗಡಿಗಳನ್ನು ಮುಚ್ಚಲ್ಲಾಯಿತು. ಈಗ ಮತ್ತೆ ಪ್ರಯಾಣಿಕರ ಸಂಖ್ಯೆ ಯಥಾ ಸ್ಥಿತೆಗೆ ಮರಳುತ್ತಿದೆ.
ಏನೆಲ್ಲಾ ಸಿಗುತ್ತದೆ?
ಸದ್ಯ ಜನ ಬೀಡು ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಇಂಟರ್‌ಚೇಂಜ್ ನಿಲ್ದಾಣ ಮೆಜಿಸ್ಟಿಕ್‌ನಲ್ಲಿ 2, ಎಂಜಿ ರಸ್ತೆ, ಮಂತ್ರಿ ಸ್ಕ್ವೇರ್ ಮತ್ತು ನ್ಯಾಷನಲ್ ಕಾಲೇಜು ನಿಲ್ದಾಣದಲ್ಲಿ ಒಂದು ವೆಂಡಿಂಗ್ ಮಷಿನ್ ವ್ಯವಸ್ಥೆ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ನಿಲ್ದಾಣದಲ್ಲಿ ಮಷಿನ್ ಇಡಲಾಗುವುದು. ಈ ಮಳಿಗೆಗಳಲ್ಲಿ ಬಿಸ್ಕಿಟ್, ಎನರ್ಜಿ ಜ್ಯೂಸ್, ಚಾಕೋಲೆಟ್, ಸ್ನ್ಯಾಕ್ಸ್, ಸಾಫ್ಟ್ ಜ್ಯೂಸ್, ಕೇಕ್ ಸೇರಿದಂತೆ ಹಲವು ಉತ್ಪನ್ನಗಳು ಲಭ್ಯ ಇವೆ. ಈ ಮಳಿಗೆಗಳಲ್ಲಿ ಗ್ರಾಹಕರು ಕ್ಯೂಆರ್ ಕೋಡ್ ಬಳಿಸಿ ತಮಗೆ ಅಗತ್ಯ ಇರುವ ಪದಾರ್ಥವನ್ನು ಪಡೆಯಬಹುದಾಗಿದೆ.


Click it and Unblock the Notifications