ಬೆಂಗಳೂರಿನ ಸಂಚಾರಿ ಜೀವನಾಡಿಯಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸಾರ್ವಜನಿಕರಿ ಹೆಚ್ಚಿನ ಅನುಕೂಲವಾಗಲಿ ಹಾಗೂ ಸಂಚಾರ ದಟ್ಟಣೆ ಕಡಿಮೆ ಆಗಲಿ ಎಂದು ಐದು ಹೊಸ ಎಸಿ ರಹಿತ ಬಸ್ ಮಾರ್ಗಗಳನ್ನು ಆರಂಭ ಮಾಡಿದೆ. ಹಾಗಿದ್ದರೆ ಯಾವೆಲ್ಲಾ ಮಾರ್ಗದಲ್ಲಿ ಎಸಿ ರಹಿತ ಬಸ್ ಓಡಾಟವನ್ನು ನಡೆಸುತ್ತದೆ ಸಮಯ ಎಷ್ಟು ಗಂಟೆಗೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.

ಹೌದು,ಬೆಂಗಳೂರಿನಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭವಾದಗಿನಿಂದಲ್ಲೂ ಬಿಎಂಟಿಸಿ ಬಸ್‌ನಲ್ಲಿ ಜನರು ಯಾವಾಗಲ್ಲೂ ತುಂಬಿ ತುಳಕುತ್ತಿದ್ದಾರೆ.ಇದರಿಂದಾಗಿ ಸಾರ್ವಜನಿಕರಿಗೆ ಯಾವುದೇ ತೊಂದರೆಯುಂಟಾಗಬಾರದು ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹೊಸ ಐದು ಎಸಿ ರಹಿತ ಬಸ್‌ನ್ನು ಪರಿಚಯವನ್ನು ಮಾಡಿ ಬೆಂಗಳೂರಿನ ಮಾರ್ಗದಲ್ಲಿ ಓಡಾಟವನ್ನು ನಡೆಸಲಾಗುತ್ತದೆ.
301ಬಿ: ಶಿವಾಜಿನಗರದಿಂದ ಕೋಲ್ಸ್ ಪಾರ್ಕ್, ಮಾರುತಿ ಸೇವಾನಗರ, ಬಾಣಸವಾಡಿ ಮತ್ತು ಹೊರಮಾವು ಹೊರವರ್ತುಲ ರಸ್ತೆ (ORR) ಮೂಲಕ ಕಲ್ಕೆರೆಗೆ ಎರಡು ಬಸ್ಸುಗಳು ಕಾರ್ಯನಿರ್ವಹಿಸುತ್ತದೆ.ಶಿವಾಜಿನಗರದಿಂದ ಮೊದಲ ಬಸ್ ಬೆಳಿಗ್ಗೆ 5.45ಕ್ಕೆ ಮತ್ತು ಕೊನೆಯ ಬಸ್ ಸಂಜೆ7.55ಕ್ಕೆ ಹೊರಡಲಾಗಿದೆ.
301 ಸಿ: ಕೆ.ಚನ್ನಸಂದ್ರದಿಂದ ಕಲ್ಕೆರೆ ಮತ್ತು ಜಯಂತಿನಗರ ಸಿಗ್ನಲ್ ಮೂಲಕ ಹೊರಮಾವು ಓಆರ್‌ಆರ್‌ಗೆ ಎರಡು ಬಸ್‌ಗಳು ಕಾರ್ಯನಿರ್ವಹಿಸಲಿವೆ.ಕೆ. ಚನ್ನಸಂದ್ರದಿಂದ ಮೊದಲ ಬಸ್ ಬೆಳಿಗ್ಗೆ6.35ಕ್ಕೆ ಮತ್ತು ಕೊನೆಯ ಬಸ್ ರಾತ್ರಿ 9.30ಕ್ಕೆ ಹೊರಡಲಿದೆ. ಹೊರಮಾವು ಓಆರ್‌ಆರ್‌ನಿಂದ ಮೊದಲ ಬಸ್ ಬೆಳಿಗ್ಗೆ 6.10 ಕ್ಕೆ ಮತ್ತು ಕೊನೆಯ ಬಸ್ ರಾತ್ರಿ 9.10ಕ್ಕೆ ಬಸ್ ಹೊರಡಲಾಗಿದೆ.
328 ಎಚ್‌ಎಸ್: ಬೂದಿಗೆರೆ ಕ್ರಾಸ್‌ನಿಂದ ಸೀಗೇಹಳ್ಳಿ ಗೇಟ್, ಕಾಡುಗೋಡಿ, ವರ್ತೂರು ಮತ್ತು ದೊಮ್ಮಸಂದ್ರದ ಮೂಲಕ ಸರ್ಜಾಪುರಕ್ಕೆ ನಾಲ್ಕು ಬಸ್‌ಗಳು ಕಾರ್ಯನಿರ್ವಹಿಸುತ್ತವೆ.ಬೂದಿಗೆರೆ ಕ್ರಾಸ್ ನಿಂದ ಮೊದಲ ಬಸ್ ಬೆಳಿಗ್ಗೆ7.20ಕ್ಕೆ ಮತ್ತು ಕೊನೆಯ ಬಸ್ ಸಂಜೆ 7.45ಕ್ಕೆ ಹೊರಡಿಸಲಾಗಿದೆ. ಸರ್ಜಾಪುರದಿಂದ ಮೊದಲ ಬಸ್ ಬೆಳಿಗ್ಗೆ 5.45ಕ್ಕೆ ಮತ್ತು ಕೊನೆಯ ಬಸ್ ಸಂಜೆ 7.25 ಕ್ಕೆ ಸೇವೆಗೆ ಹೋರಡಲಿಸಲಾಗಿದೆ.
221 ಕಿಮೀ: ಎಂಟು ಬಸ್‌ಗಳು ಕೆಂಗೇರಿ ಟಿಟಿಎಂಸಿಯಿಂದ ಕೊಮ್ಮಘಟ್ಟ,ಸೂಳಿಕೆರೆ, ಗುಲಗಂಜನಹಳ್ಳಿ ಕ್ರಾಸ್, ತಾವರೆಕೆರೆ, ಚೋಳನಾಯಕನಹಳ್ಳಿ, ಶಾನುಭೋಗನಹಳ್ಳಿ, ತಗಚಗುಪ್ಪೆ ಮತ್ತು ರಂಗನಾಥಪುರ ಮಾರ್ಗವಾಗಿ ಮಾಗಡಿ ಬಸ್ ನಿಲ್ದಾಣಕ್ಕೆ ಕಾರ್ಯನಿರ್ವಹಿಸಲಾಗಿದೆ. ಕೆಂಗೇರಿ ಟಿಟಿಎಂಸಿಯಿಂದ ಮೊದಲ ಬಸ್ ಬೆಳಿಗ್ಗೆ5.50ಕ್ಕೆ ಕೊನೆಯ ಬಸ್ ರಾತ್ರಿ 8.05ಕ್ಕೆ ಹೊರಡುತ್ತದೆ.ಮಾಗಡಿ ಬಸ್ ನಿಲ್ದಾಣದಿಂದ ಮೊದಲ ಬಸ್ ಬೆಳಿಗ್ಗೆ 5.45ಕ್ಕೆ ಮತ್ತು ಕೊನೆಯ ಬಸ್ ರಾತ್ರಿ 8.15ಕ್ಕೆ ಮಾರ್ಗದಲ್ಲಿ ಒಳಗೊಂಡಿದೆ.
238 ವಿಬಿ: ಮೆಜೆಸ್ಟಿಕ್‌ನಿಂದ ಸುಜಾತಾ ಟಾಕೀಸ್, ವಿಜಯನಗರ, ಚಂದ್ರ ಲೇಔಟ್, ನಾಗರಭಾವಿ ವೃತ್ತ, ಐಟಿಐ ಲೇಔಟ್, ಮುದ್ದಯ್ಯನಪಾಳ್ಯ ಮತ್ತು ಆರ್‌ಟಿಒ ಕಚೇರಿ ವಿಶ್ವೇಶ್ವರಯ್ಯ ಲೇಔಟ್ ಮೂಲಕ ಉಪಕಾರ್ ಲೇಔಟ್‌ಗೆ ಏಳು ಬಸ್‌ಗಳು ಸಂಚಾರವನ್ನು ಮಾಡಲಾಗಿದೆ.
ಕೆಂಪೇಗೌಡ ಬಸ್ ನಿಲ್ದಾಣದಿಂದ ಮೊದಲ ಬಸ್ ಬೆಳಿಗ್ಗೆ 5.55ಕ್ಕೆ ಮತ್ತು ಕೊನೆಯ ಬಸ್ ರಾತ್ರಿ 10 ಗಂಟೆಗೆ ಹೊರಡಲಿದೆ. ಉಪಕಾರ್ ಲೇಔಟ್ ನಿಂದ ಮೊದಲ ಬಸ್ ಬೆಳಿಗ್ಗೆ 5 ಗಂಟೆಗೆ ಮತ್ತು ಕೊನೆಯ ಬಸ್ ರಾತ್ರಿ 9 ಗಂಟೆಗೆ ಬಸ್ ಹೊರಡಲಿದೆ ಎಂದು ಮಾಹಿತಿಯನ್ನು ತಿಳಿಸಿದ್ದಾರೆ.


Click it and Unblock the Notifications