ಪ್ರಯಾಣಿಕರು ನಿರಾಳ.. ಕಂಡಕ್ಟರ್‌ಗಳಿಗೆ ಕಷ್ಟ ಕಷ್ಟ! ಬಿಎಂಟಿಸಿ (BMTC) ಯುಪಿಐ ಬಳಕೆ ಹೆಚ್ಚಿಸುವಂತೆ ಕಂಡಕ್ಟರ್‌ಗಳಿಗೆ ಖಡಕ್ ಸೂಚನೆ ನೀಡಿದೆ. ಹೌದು, ಪ್ರತಿನಿತ್ಯ ಪ್ರಯಾಣಿಕರಿಂದ ಚಿಲ್ಲರೆ ಸಮಸ್ಯೆ ಬಗ್ಗೆ ದೂರಗಳು ಬರುತ್ತಲೇ ಇವೆ. ಯುಪಿಐ (UPI) ಪಾವತಿಗೆ ಅವಕಾಶವಿದ್ದರೂ, ಕೆಲ ಕಂಡಕ್ಟರ್‌ಗಳು ಇದರ ಬಳಕೆ ಆಸಕ್ತಿ ತೋರುತ್ತಿಲ್ಲ. ಇದರಿಂದಾಗಿ ನಿತ್ಯವೂ ಪ್ರಯಾಣಿಕರು ಮತ್ತು ಕಂಡಕ್ಟರ್ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇದೆ. ಇದೆಲ್ಲವನ್ನೂ ಮನಗಂಡ ಬಿಎಂಟಿಸಿ, ಯುಪಿಐ ಪಾವತಿ ಹೆಚ್ಚಿಸುವಂತೆ ನಿರ್ವಾಹಕರಿಗೆ ತಾಕೀತು ಮಾಡಿದೆ. ಬನ್ನಿ, ಬಿಎಂಟಿಸಿಯ ಈ ನಿರ್ಧಾರದಿಂದ ಯಾರಿಗೆ ಲಾಭ? ಎನ್ನುವುದನ್ನು ತಿಳಿಯೋಣ.
ಹೌದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ನಿರ್ವಾಹಕರಿಗೆ ಯುಪಿಐ (UPI) ಪಾವತಿಗೆ ಆಸಕ್ತಿ ತೋರುತ್ತಿಲ್ಲ. ಮತ್ತು ನಗದು ಹಣವನ್ನು ಪಾವತಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂಬ ಪ್ರಯಾಣಿಕರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಬಿಎಂಟಿಸಿ, ಕಂಡಕ್ಟರ್‌ಗಳಿಗೆ ಯುಪಿಐ ಪಾವತಿ ಸ್ವೀಕರಿಸಲು ಖಡಕ್ ಸೂಚನೆ ನೀಡಿದೆ.

ಪ್ರತಿನಿತ್ಯ ಅನೇಕ ಬಸ್‌ಗಳಲ್ಲಿ, ವಿಶೇಷವಾಗಿ ವಿಮಾನ ನಿಲ್ದಾಣ ಮಾರ್ಗ ಮತ್ತು ನಗರದ ಟೆಕ್ ಕಾರಿಡಾರ್‌ಗಳಲ್ಲಿ ಚಲಿಸುವ ಬಸ್ ಪ್ಯಾನೆಲ್‌ಗಳಲ್ಲಿ ಸ್ಥಿರ ಯುಪಿಐ QR ಕೋಡ್‌ಗಳನ್ನು ಅಂಟಿಸಲಾಗುತ್ತಿದೆ. ಈ ವಿಧಾನದ ಮೂಲಕ ಪಾವತಿಗಳನ್ನು ಅನುಮತಿಸಲು ಕಂಡಕ್ಟರ್‌ಗಳು ನಿರಾಕರಿಸುತ್ತಾರೆ ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ.
BMTC ಬಸ್‌ಗಳಲ್ಲಿ ಪ್ರತಿನಿತ್ಯ ಕೆಲಸಕ್ಕಾಗಿ ಪ್ರಯಾಣಿಸುವ ಪ್ರಯಾಣಿಕರೊಬ್ಬರು ಕೆಲವು ಬಸ್‌ಗಳಲ್ಲಿ, ನಾವು ಪ್ರತಿ ಬಾರಿ ಹತ್ತುವಾಗ ನಿಖರವಾದ ಚಿಲ್ಲರೆ ಹಣ ನೀಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ಯುಪಿಐ ಆಧಾರಿತ ಪಾವತಿಗಳು ಅತ್ಯಗತ್ಯ. ಕಂಡಕ್ಟರ್‌ಗಳು UPI ಪಾವತಿಗಳನ್ನು ನಿರಾಕರಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಬಿಎಂಟಿಸಿ ಸುಮಾರು ಶೇ. 10 ರಷ್ಟು ಬಸ್‌ಗಳನ್ನು ಹೊರತುಪಡಿಸಿ, ಎಲ್ಲಾ ಬಸ್‌ಗಳು ಬಸ್ ಪ್ಯಾನೆಲ್‌ಗಳಲ್ಲಿ ಸ್ಥಿರ QR ಕೋಡ್‌ಗಳನ್ನು ಹೊಂದಿವೆ. ಪ್ರಯಾಣಿಕರು ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು ಮತ್ತು ಮೊತ್ತವನ್ನು ನಮೂದಿಸಿ, ಪಾವತಿ ಯಶಸ್ವಿಯಾದ ನಂತರ, ಟಿಕೆಟ್ ನೀಡಲಾಗುತ್ತದೆ ಎಂದು BMTC ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ. ಪ್ರಭಾಕರ್ ರೆಡ್ಡಿ ಮಾಹಿತಿಯನ್ನು ತಿಳಸಿದ್ದಾರೆ.
ಪ್ರಯಾಣಿಕರು ಸ್ಕ್ಯಾನ್ ಮಾಡಲು ಮತ್ತು ಪಾವತಿಸಲು ಡೈನಾಮಿಕ್ QR ಕೋಡ್ ಅನ್ನು ಬಳಸಬಹುದು. ಮತ್ತು ಸ್ಥಿರ QR ಕೋಡ್‌ಗಳ ಜೊತೆಗೆ, ಹ್ಯಾಂಡ್‌ಹೆಲ್ಡ್ ಎಲೆಕ್ಟ್ರಾನಿಕ್ ಟಿಕೆಟ್ ವೆಂಡಿಂಗ್ ಯಂತ್ರಗಳು ಸಹ ಡೈನಾಮಿಕ್ QR ಕೋಡ್‌ಗಳನ್ನು ನೀಡುತ್ತವೆ ಎಂದು ಅವರು ಮಾಹಿತಿ ತಿಳಿಸಿದ್ದಾರೆ.
ಯುಪಿಐ ಈ ಕ್ರಮಗಳನ್ನು ಪ್ರಾರಂಭಿಸಿದಾಗಿನಿಂದ ದಿನನಿತ್ಯದ ವಹಿವಾಟುಗಳು ಗಹೆಚ್ಚಳವಾಗಿದೆ. "ಈ ಹಿಂದೆ, ದಿನಕ್ಕೆ 3 ಕೋಟಿ ರೂ. ಆದಾಯದಲ್ಲಿ ಕೇವಲ 20-25 ಲಕ್ಷ ರೂ. UPI ಪಾವತಿಗಳಿಂದ ಬರುತ್ತಿತ್ತು. ಈಗ, ಅದು 60 ಲಕ್ಷ ರೂ.ಗಳನ್ನು ದಾಟಿದೆ ಎಂದು ರೆಡ್ಡಿ ಹೇಳಿದರು.
ಬೆಂಗಳೂರಿನಂತಹ ನಗರದಲ್ಲಿ, ಟೀ ಸ್ಟಾಲ್‌ಗಳಿಂದ ಹಿಡಿದು ಅತ್ಯಾಧುನಿಕ ಮಳಿಗೆಗಳವರೆಗೆ ಎಲ್ಲೆಡೆ ಯುಪಿಐ ಬಳಕೆ ರೂಢಿಯಲ್ಲಿದೆ. ಆದರೆ ಬೆಂಗಳೂರಿನ ಜೀವನಾಡಿಯಾಗಿರುವ ಬಿಎಂಟಿಸಿ ಬಸ್‌ಗಳು ಅದನ್ನು ಇನ್ನೂ ಸಂಪೂರ್ಣವಾಗಿ ಸ್ವೀಕರಿಸದಿರುವುದು ನಿರಾಶೆ ಮೂಡಿಸಿದೆ ಎಂದು ಪ್ರಯಾಣಿಕರು ಹೇಳಿದ್ದಾರೆ.
ಬಿಎಂಟಿಸಿ ಬಸ್ ಕಂಡಕ್ಟರ್‌ಗಳು ಇದರ ಬಗ್ಗೆ ಹೇಳಿದ್ದೇನು?
ವಿವಿಧ ಕಾರಣಗಳಿಗಾಗಿ ಕ್ಯೂಆರ್-ಕೋಡ್ ಆಧಾರಿತ ಯುಪಿಐ ಪಾವತಿಗಳನ್ನು ಸ್ವೀಕರಿಸುವುದು ಕಷ್ಟ .ಕೆಲವೆಡೆ ಇಂಟರ್‌ನೆಟ್ ಸಂಪರ್ಕದ ಕೊರತೆಯಿಂದಾಗಿ ಹಣ ಪಾವತಿಗೆ ತಡೆ ಉಂಟಾಗಿದ್ದು, ಪಾವತಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ನಿತ್ಯ 1 ಕೋಟಿ ಕಲೆಕ್ಷನ್ ಟಾರ್ಗೆಟ್
BMTC ಶೀಘ್ರದಲ್ಲೇ ದೈನಂದಿನ UPI ವಹಿವಾಟುಗಳಲ್ಲಿ 1 ಕೋಟಿ ರೂ.ಗಳನ್ನು ತಲುಪುವ ಗುರಿ ಹೊಂದಿದೆ. ಪ್ರಯಾಣಿಕರು ತಮ್ಮ ಆದ್ಯತೆಯ ಪಾವತಿ ವಿಧಾನವನ್ನು ಆಯ್ಕೆ ಮಾಡಿಕೊಂಡು ಯುಪಿಐ ಬಳಕೆ ಮಾಡುವಂತೆ ಹೇಳಿದ್ದಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications