ಬೆಂಗಳೂರಿಗರಿಗೇ ಸಿಹಿ ಸುದ್ದಿ ಸಿಲಿಕಾನ್ ಸಿಟಿ ಜೀವನಾಡಿ ಆಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ನಗರದಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ಎಸಿ ಬಸ್ ಗಳ ಸಂಚಾರ ಸೇವೆ ಆರಂಭಿಸಿದೆ.ಹಾಗಿದ್ರೆ ಯಾವೆಲ್ಲಾ ಮಾರ್ಗದಲ್ಲಿ ಬಸ್ ಸೇವೆ ಇರಲಿದೆ? ಟಿಕೆಟ್ ಎಷ್ಟು? ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ ನೋಡಿ.
ಹೌದು, ಇದೇ ಮೊದಲ ಬಾರಿಗೆ ಬಿಎಂಟಿಸಿ ಎಲೆಕ್ಟ್ರಿಕ್ ಎಸಿ ಬಸ್‌ಗಳು ರಸ್ತೆಗಿಳಿಯುತ್ತಿದ್ದೇವೆ.ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ನಗರದ ಕೆಲವು ಪ್ರಮುಖ ಮಾರ್ಗಗಳಲ್ಲಿ ಮಾತ್ರ ಈ ಬಸ್ ಸೇವೆಗಳನ್ನು ಆರಂಭಮಾಡಿದೆ.ಈಗಲೇ ಇರುವ ಕೆಲವು ಬಸ್‌ಗಳ ಮಾರ್ಗವನ್ನು ಬದಲಾಯಿಸುವ ಗುರಿಯೊಂದಿಗೆ ಈ ವಿದ್ಯುತ್ ಬಸ್ ಪ್ರಾರಂಭ ಮಾಡಿದೆ.

ಯಾವೆಲ್ಲಾ ಮಾರ್ಗಗಳಲ್ಲಿ ಬಸ್ ಸೇವೆ ಇರುತ್ತದೆ.
OHM ಎಂಬುದು ಅಶೋಕ್ ಲೇಲ್ಯಾಂಡ್‌ನ ಅಂಗಸಂಸ್ಥೆಯಾಗಿದೆ. ಇದೇ ಸಂಸ್ಥೆಯು ಬಿಎಂಟಿಸಿಗೆ ಹವಾನಿಯಂತ್ರಿತ (ಎಸಿ) ವಿದ್ಯುತ್ ಬಸ್ ಪೂರೈಕೆ ಮಾಡಿದೆ. 05 ಬಸ್‌ಗಳನ್ನು ಪೂರೈಕೆ ಮಾಡಿದ್ದು, ಮೆಜೆಸ್ಟಿಕ್ ಮತ್ತು ಕಾಡುಗೋಡಿ (ವೈಟ್‌ಫೀಲ್ಡ್) ಮಧ್ಯದ ಮಾರ್ಗದಲ್ಲಿ ನಿಯೋಜನೆ ಮಾಡಲಾಗಿದೆ. ಕೆಲವು ಮಹತ್ವದ ಗುರಿಗಳೊಂದಿಗೆ ವಿದ್ಯುತ್ ಬಸ್ ಆರಂಭಿಸಲಾಗಿದೆ. ಇದು ಮೊದಲ ಬಾರಿ ಆಗಿದ್ದು, ಇದು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ.
ವಿದ್ಯುತ್ ಬಸ್‌ಗಳ ಪೂರೈಕೆಯಿಂದ ನಗರದ ವಜ್ರ ಮತ್ತು ವಾಯು ವಜ್ರ ವಿಮಾನ ನಿಲ್ದಾಣ ಮಾರ್ಗಗಳಲ್ಲಿ ಓಡಾಡುತ್ತಿರುವ ಹಳೆಯ ವೋಲ್ವೋ ಬಸ್‌ಗಳನ್ನು ಬದಲಾಗಿ ಪರಿಸರ ಸ್ನೇಹಿ ಎಸಿ ವಿದ್ಯುತ್ ಬಸ್ ಓಡಿಸಲು ಪ್ಲಾನ್ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಎಸಿ ವಿದ್ಯುತ್ ಬಸ್‌ಗಳನ್ನು ರಸ್ತೆಗೆ ಬಂದಿದ್ದೇವೆ.
ಪ್ರತಿ ಕಿಲೋ ಮೀಟರ್‌ಗೆ ರೂ.65.8 ವೆಚ್ಚ
ಬಿಎಂಟಿಸಿ ವಿದ್ಯುತ್ ಪರಿವರ್ತನಾ ಉಪಕ್ರಮ ಬಿಎಂಟಿಸಿ ಜೊತೆಗೆ ಓಎಚ್ಎಂ ಗ್ಲೋಬಲ್ ಮೊಬಿಲಿಟಿಯು ಸಕಾಲಕ್ಕೆ 320 ಹವಾನಿಯಂತ್ರಿತ ವಿದ್ಯುತ್ ಬಸ್‌ಗಳನ್ನು ಪೂರೈಕೆ ಮಾಡಲಾಗುವುದು ಎಂದು ಒಪ್ಪಂದ ಮಾಡಿಕೊಂಡಿದೆ. ಕಂಪನಿ ನೀಡುವ ಎಲ್ಲ ಬಸ್‌ಗಳು ಜಿಸಿಸಿ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಪ್ರತಿ ಕಿಲೋ ಮೀಟರ್‌ಗೆ ರೂ.65.8 ವೆಚ್ಚವಾಗಲಿದೆ. 2025ರ ಮಾರ್ಚ್ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಬಸ್‌ಗಳು ರಸ್ತೆಗೆ ಇಳಿಯುವ ಸಾಧ್ಯತೆ ಹೆಚ್ಚಿದೆ.
13ಮೀಟರ್ ಉದ್ದದ ಬಸ್
13ಮೀಟರ್ ಉದ್ದದ ಬಸ್, ಓಡಾಟದ ವಿವರ ಈ ಎಸಿ ವಿದ್ಯುತ್ ಬಸ್‌ಗಳು ಒಟ್ಟು 13ಮೀಟರ್ ಉದ್ದವಿದೆ. ವಿಶೇಷ ಚೇತನರಿಗೆ ಸರಳವಾಗಿ ಬಸ್ ಏರುವಂತೆ ಇಳಿಜಾರು ರೂಪದಲ್ಲಿ ಬಸ್ ವ್ಯವಸ್ಥೆ ಇದೆ.
250 ಕಿಲೋಮೀಟರ್ ಸಂಚಾರ
ಎಲೆಕ್ಟ್ರಿಕ್ ಎಸಿ ಬಸ್ ಗಳು ಒಪ್ಪಂದದ ಪ್ರಕಾರ ಪ್ರತಿ ದಿನ ಬಸ್ 250 ಕಿಲೋಮೀಟರ್ ಸಂಚರಿಸಲಿವೆ. ಒಂದು ವರ್ಷಕ್ಕೆ ಸುಮಾರು 87000ಕ್ಕೂ ಹೆಚ್ಚು ಕಿಲೋ ಮೀಟರ್ ಕ್ರಮಿಸಲಿದೆ. ಸದ್ಯ ಐದು ಬಸ್‌ಗಳನ್ನು ಮಾತ್ರವೇ ರಸ್ತೆಗೆ ಇಳಿಸಲಾಗಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಿಎಂಟಿಸಿ ನಾಲ್ಕು ಡಿಪೋಗಳ ವ್ಯಾಪ್ತಿಯಲ್ಲಿ ಈ ಹೊಸ ಬಸ್‌ಗಳು ಓಡಾಡಲಿವೆ. ಸುಭಾಷ್‌ನಗರ ಡಿಪೋ, ಕತ್ರಿಗುಪ್ಪೆ ಡಿಪೋ ವೈಟ್‌ಫೀಲ್ಡ್ ಹಾಗೂ ಎಚ್‌ಎಸ್‌ಆರ್ ಲೇಔಟ್ ಡಿಪೋ ವ್ಯಾಪ್ತಿಯಲ್ಲಿ ಓಡಾಡಲಿವೆ. ಇವು ಪ್ರಯಾಣಿಕರಿಗೆ ಹೊಸ ಅನುಭವ ನೀಡಲಿವೆ ಎಂದು ನಿಗಮ ವಿಶ್ವಾಸ ವ್ಯಕ್ತಪಡಿಸಿದೆ.
ಸದ್ಯ ಬಿಎಂಟಿಸಿಯಲ್ಲಿ 1,269 ನಾನ್ ಎಸಿ ಎಲೆಕ್ಟ್ರಿಕ್ ಬಸ್‌ಗಳಿವೆ. ಇವುಗಳಲ್ಲಿ ಟಾಟಾ ಮೋಟಾರ್ಸ್‌ನ 921, ಸ್ವಿಚ್ ಮೊಬಿಲಿಟಿಯ 300 ಮತ್ತು 90 ಜೆಬಿಎಂ-ಎನ್‌ಟಿಪಿಸಿಯ ಬಸ್‌ಗಳು ಸೇರಿವೆ. ಈ ಬಸ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆದುಕೊಳ್ಳಲಾಗಿದೆ. ಟಾಟಾ ಬಸ್‌ಗಳಿಗೆ ಬಿಎಂಟಿಸಿ ಪ್ರತಿ ಕಿ. ಮೀ.ಗೆ 41 ರೂ. ನೀಡುತ್ತಿದೆ.
ಎಲೆಕ್ಟ್ರಿಕ್ ಎಸಿ ಬಸ್ ಹೇಗಿದೆ?
ವ್ಯವಸ್ಥಿತ ಹೆಡ್‌ರೆಸ್ಟ್‌ಗಳನ್ನು ಹೊಂದಿರುವ ಆಸನಗಳ ವ್ಯವಸ್ಥೆ ವಿನೂತನ ಸೌಕರ್ಯ ಮತ್ತು ವಿನ್ಯಾಸ ಇದ್ದು, ಪ್ರಯಾಣಿಕರು ಈ ಬಸ್‌ಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ.ಪ್ರಯಾಣಿಕರಿಗೆ ಇಷ್ಟವಾದ ಎಸಿ ಇ-ಬಸ್ ಜನದಟ್ಟಣೆ ಹೆಚ್ಚಿರುವ ಮೆಜೆಸ್ಟಿಕ್ ನಿಂದ ವೈಟ್‌ಫೀಲ್ಡ್ವರೆಗೆ ಸಂಚರಿಸುವ ಪ್ರಯಾಣಿಕರಿಗೆ ಈ ಹೊಸ ಪ್ಲೀಟ್ ಬಸ್‌ಗಳು ಹೊಸ ಅನುಭವನ್ನು ನೀಡಲಿದೆ.


Click it and Unblock the Notifications