ಪ್ರಯಾಣಿಕರ ಅನುಕೂಲಕ್ಕಾಗಿ ತಕ್ಕಂತೆ ಸಂಚಾರ ಜೀವನಾಡಿ ಬಿಎಂಟಿಸಿ ಆಗಾಗ ಹೊಸ ಹೊಸ ಸೇವೆಯ ವ್ಯವಸ್ಥೆಯನ್ನು ಕಲ್ಪಸುತ್ತಲೇ ಇರುತ್ತದೆ.ಆದರೆ ಇದೀಗ ಬಿಎಂಟಿಸಿ ಹೊಸ 2 ಮಾರ್ಗಗಳಲ್ಲಿ ಬಸ್ ಸಂಚಾರ ಆರಂಭಿಸುತ್ತಿದೆ. ಈ ಸೇವೆಗಳು ಏಪ್ರಿಲ್ 2 ರಿಂದಲ್ಲೇ ಹೊಸ ಮಾರ್ಗಗಳಲ್ಲಿ ಬಸ್‌ಗಳು ಪ್ರಯಾಣಿಕರ ಸೇವೆಯನ್ನು ಒದಗಿಸಲಿದೆ.ಹಾಗಿದ್ರೆ ಯಾವೆಲ್ಲಾ ಮಾರ್ಗದಲ್ಲಿ ಬಸ್ ಸೇವೆ? ಸಮಯ ಇನ್ನೂ ಮುಂತಾದ ಹೆಚ್ಚಿನ ಮಾಹಿತಿ ಇಲ್ಲಿದೆ..
ಹೌದು,ಸಾರ್ವಜನಿಕರಿಗೆ ಸುವ್ಯವಸ್ಥೆ ಸೇವೆಯನ್ನು ಬದಗಿಸಲು ಬಿಎಂಟಿಸಿ ಸದಾ ಸಿದ್ದವಾಗಿರುತ್ತದೆ.ಸಂಚಾರ ದಟ್ಟಣೆ ಹಾಗೂ ಪ್ರಯಾಣಿಕರಿಗೆ ಅನುಕೂಲಕ್ಕಾಗಿ ಎರಡು ಹೊಸ ಮಾರ್ಗಗಳಲ್ಲಿ ಬಸ್ ವ್ಯವಸ್ಥೆಯನ್ನುಬಿಎಂಟಿಸಿ ಒದಗಿಸಲಿ ಎಂದು ಪ್ರಕಟಣೆಯಲ್ಲಿ ಮಾಹಿತಿಯನ್ನು ತಿಳಿಸಿದೆ.

ಯಾವೆಲ್ಲಾ ಮಾರ್ಗಗಳಲ್ಲಿ ಸೇವೆ ಲಭ್ಯ?
ಕೆ.ಆರ್.ಮಾರುಕಟ್ಟೆ, ಉಪಾಧ್ಯಾಯ ಬಡಾವಣೆ, ಸಿರ್ಸಿ ಸರ್ಕಲ್, ನಾಯಂಡಹಳ್ಳಿ, ಬೆಂಗಳೂರು ವಿಶ್ವವಿದ್ಯಾಲಯ ಗೇಟ್, ಚಂದ್ರಮೌಳೀಶ್ವರ ದೇವಸ್ಥಾನ, ಭೈರವನಗರ ಹಾಗೂ ಕೆಂಪೇಗೌಡ ಬಸ್ ನಿಲ್ದಾಣ, ಜ್ಞಾನ ಭಾರತಿ ಲೇಔಟ್ 1ನೇ ಬ್ಲಾಕ್, ಸಿರ್ಸಿ ಸರ್ಕಲ್, ನಾಯಂಡಹಳ್ಳಿ, ಬೆಂಗಳೂರು ವಿಶ್ವವಿದ್ಯಾಲಯ , ಚಂದ್ರಮೌಳೇಶ್ವರ ದೇವಸ್ಥಾನ, ಭೈರವನಗರ ಮಾರ್ಗಗಳಲ್ಲಿ ಬಸ್ ಸೇವೆಯನ್ನು ಆರಂಭ ಮಾಡಲಾಗುತ್ತದೆ.
ಬಸ್ ಸಂಚಾರ ಯಾವಾಗ ಆರಂಭ: ಬಿಎಂಟಿಸಿ ಹೊಸ 2 ಮಾರ್ಗಗಳಲ್ಲಿ ಬಸ್ ಸಂಚಾರ ವ್ಯವಸ್ಥೆಯನ್ನು ಕಲ್ಪಸಲು ಮುಂದಾಗಿದೆ. ಏಪ್ರಿಲ್ 2ರಿಂದ ಹೊಸ ಮಾರ್ಗಗಳಲ್ಲಿ ಬಸ್‌ಗಳು ಪ್ರಯಾಣಿಕರ ಸೇವೆಗೆ ಸಿಗಲಿದೆ ಎಂದು ಬೆಂಗಳೂರು ಮಹಾನಗರ ಪಾಲಿಕೆ ನಿಗಮ ಮಾಹಿತಿಯನ್ನು ತಿಳಿಸಿದೆ.
ಬಸ್ ಸಂಚಾರ ಮಾರ್ಗ ಮತ್ತು ಸಮಯಗಳ ವಿವರ
ಮಾರ್ಗ ಸಂಖ್ಯೆ 220-ಬಿ/1 ಕೆ.ಆರ್. ಮಾರುಕಟ್ಟೆಯಿಂದ ಬೆಳಗ್ಗೆ 6.50, 8.40, 10.15 ಗೆ ಹಾಗೂ ಮಧ್ಯಾಹ್ನ 2.45, 4.15, ಸಂಜೆ 6.05, 7.45, ರಾತ್ರಿ 9.20ಯ ವರೆಗೆ ಬಸ್ ಸಂಚಾರ ಮಾಡಲಿದೆ.
ಉಪಾಧ್ಯಾಯ ಬಡಾವಣೆಯಿಂದ ಬೆಳಗ್ಗೆ ಬಿಡುವ ಸಮಯ 6.10, 7.35, 9.25, 11, ಮಧ್ಯಾಹ್ನ 3.30, ಸಂಜೆ 5.15, 6.55, ರಾತ್ರಿ 8.35ಕ್ಕೆ ಬಸ್‌ಗಳು ಸಂಚಾರವನ್ನು ಮಾಡುತ್ತೇವೆ.
ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಗ್ಗೆ 6.15, 8.00, 9.50, ಮಧ್ಯಾಹ್ನ 3.15, ಸಂಜೆ 5.15, 7.10, ರಾತ್ರಿ 9.05ಕ್ಕೆ ಬಸ್‌ಗಳು ಸಂಚಾರ ಆರಂಭಿಸಲಿವೆ.
ಜ್ಞಾನಭಾರತಿ ಲೇಔಟ್ 1ನೇ ಬ್ಲಾಕ್‌ನಿಂದ ಬೆಳಗ್ಗೆ 5.30, 7.05, 8.50, 11.10, ಸಂಜೆ 4.05, 6.10, ರಾತ್ರಿ 9.05ಕ್ಕೆ ಓಡಾಟ ಮಾಡುತ್ತೇವೆ.
BMTC ತನ್ನ ಹಳೆಯ ಮಾರ್ಗಗಳನ್ನು ಹೆಚ್ಚಿಸುವ ಮೂಲಕ ಹಾಗೂ ಹೊಸ ಮಾರ್ಗಗಳನ್ನು ಪ್ರಾರಂಭಿಸುವ ಮೂಲಕ ಹೆಚ್ಚಿನ ಪ್ರಗತಿಯನ್ನು ಸಾಧಿಸುತ್ತಲೇ ಇರುತ್ತದೆ.
ವಿಶೇಷ ಕಾರ್ಯಕ್ರಮಗಳ ಸಮಯದಲ್ಲಿ ಸೇವೆ: ಬಿಎಂಟಿಸಿ ಹೊಸ ವರ್ಷ, ಐಪಿಎಲ್ ಸೇರಿದಂತೆ ವಿಶೇಷ ಕಾರ್ಯಕ್ರಮಗಳ ವೇಳೆ ಬಸ್ ಸಂಚಾರದ ವಿಸ್ತರಣೆ ಮಾಡುತ್ತಾ ಬಂದಿದೆ.
ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಹೊಸ ಮಾರ್ಗಗಳು: ಪ್ರಯಾಣಿಕರ ಬೇಡಿಕೆ ಅವರ ಅನುಕೂಲಕ್ಕೆ ತಕ್ಕಂತೆ ಹೊಸ ಮಾರ್ಗಗಳಿಗೆ ಬಸ್‌ಗಳ ಸಂಚಾರವನ್ನು ಪ್ರಾರಂಭ ಮಾಡುತ್ತಲೇ ಇರುತ್ತದೆ.
ಇತ್ತೀಚೆಗೆ ಬಿಎಂಟಿಸಿಗಾಗಿ ನಮ್ಮ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಮಾರ್ಗದಲ್ಲಿ ಬಸ್ ಸೇವೆಯನ್ನು ಪ್ರಾರಂಭಿಸಲಾಗಿದೆ. ಈ ಬಸ್ ಕೋಣನಕುಂಟೆ ಕ್ರಾಸ್ ಮೆಟ್ರೋ ಸ್ಟೇಷನ್ ನಿಂದ ನಾಯಂಡಳ್ಳಿ ಜಂಕ್ಷನ್ ನಡುವೆ ಸಂಚಾರ ನಡೆಸಲಿದೆ.
ಅಪಘಾತ, ಬಸ್ ಕೆಟ್ಟರು ಚಿಂತೆಬೇಡ.. BMTCಗೆ ಐದು ಹೊಸ ಮೊಬೈಲ್ ವ್ಯಾನ್ ಸೇರ್ಪಡೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ ಇದ್ದೇ ಇರುತ್ತದೆ. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸರಕಾರ ಒಂದಿಲ್ಲೊಂದು ಸರ್ಕಸ್ ಮಾಡುತ್ತಲೇ ಇರುತ್ತದೆ. ಅದರಲ್ಲೂ ಬಸ್ ಸಂಚಾರ ಮಾಡುವಾಗ ರಸ್ತೆ ಮಧ್ಯದಲ್ಲಿ ಕೆಟ್ಟರೆ ಅಥವಾ ರಸ್ತೆ ಅಪಘಾತ ಸಂಭವಿಸಿದರೆ, ವಾಹನಗಳ ಓಡಾಟಕ್ಕೆ ಸಮಸ್ಯೆಯಾಗುತ್ತದೆ. ಮುಖ್ಯವಾಗಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಲೇ ಇರುತ್ತದೆ. ಇದನ್ನು ತಡೆಗಟ್ಟಲು ಮತ್ತು ಸಾರ್ವಜನಿಕರಿಗೆ ಉಂಟಾಗುವ ಸಮಸ್ಯೆಯನ್ನು ನಿರ್ವಹಿಸಲು ಬಿಎಂಟಿಸಿ, ಹೊಸ ಸಂಚಾರಿ ದುರಸ್ತಿ ವಾಹನಗಳನ್ನು ಬಿಡುಗಡೆ ಮಾಡಿದೆ.


Click it and Unblock the Notifications