ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ ಇದ್ದೇ ಇರುತ್ತದೆ. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸರಕಾರ ಒಂದಿಲ್ಲೊಂದು ಸರ್ಕಸ್ ಮಾಡುತ್ತಲೇ ಇರುತ್ತದೆ. ಅದರಲ್ಲೂ ಬಸ್ ಸಂಚಾರ ಮಾಡುವಾಗ ರಸ್ತೆ ಮಧ್ಯದಲ್ಲಿ ಕೆಟ್ಟರೆ ಅಥವಾ ರಸ್ತೆ ಅಪಘಾತ ಸಂಭವಿಸಿದರೆ, ವಾಹನಗಳ ಓಡಾಟಕ್ಕೆ ಸಮಸ್ಯೆಯಾಗುತ್ತದೆ. ಮುಖ್ಯವಾಗಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಲೇ ಇರುತ್ತದೆ. ಇದನ್ನು ತಡೆಗಟ್ಟಲು ಮತ್ತು ಸಾರ್ವಜನಿಕರಿಗೆ ಉಂಟಾಗುವ ಸಮಸ್ಯೆಯನ್ನು ನಿರ್ವಹಿಸಲು ಬಿಎಂಟಿಸಿ, ಹೊಸ ಸಂಚಾರಿ ದುರಸ್ತಿ ವಾಹನಗಳನ್ನು ಬಿಡುಗಡೆ ಮಾಡಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೌದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಗರದಾದ್ಯಂತ ಬಸ್ ನಿರ್ವಹಣೆಯನ್ನು ಹೆಚ್ಚಿಸಲು ಮತ್ತು ಸೇವಾ ದಕ್ಷತೆಯನ್ನು ಸುಧಾರಿಸಲು ಹೊಸದಾಗಿ ಖರೀದಿಸಲಾದ ಮೊಬೈಲ್ ಸೇವಾ ವ್ಯಾನ್‌ಗಳನ್ನು ಬಿಡುಗಡೆ ಮಾಡಲಿದೆ. ರಸ್ತೆ ಅಪಘಾತಗಳು ಮತ್ತು ಬಸ್ ಸ್ಥಗಿತಗಳಿಗೆ ತ್ವರಿತ ಪ್ರತಿಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಬೆಂಗಳೂರು ಮಹಾನಗರ ಸಾರಿಗೆ ನಿಗಮ (BMTC) ನಿನ್ನೇ ಐದು ಹೊಸ ಮೊಬೈಲ್ ವ್ಯಾನ್‌ಗಳನ್ನು ಬಿಡುಗಡೆ ಮಾಡಲಾಗಿದೆ.

ಈ ಕುರಿತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಸಿರು ನಿಶಾನೆ ತೊರಿಸಿ ಉದ್ಘಾಟಿಸಿದರು. ಬಿಎಂಟಿಸಿ ಸಂಸ್ಥೆ ಬಳಿ ಸದ್ಯ 6835 ಬಸ್ಸುಗಳಿದ್ದು, ನಿತ್ಯ ಸರಾಸರಿ 5875 ಟ್ರಿಪ್ ಗಳಲ್ಲಿ ಓಡಾಡುತ್ತವೆ. ಬಸ್ಸುಗಳು ನಗರದ ಎಲ್ಲಾ ಪ್ರದೇಶಗಳಿಗೆ ಹಾಗೂ ಉಪನಗರಗಳಿಗೂ ಸಂಚರಿಸುತ್ತಿದ್ದು, ಹೆಚ್ಚುವರಿ ಕಾರ್ಯಚರಣೆ ನಡೆಸುತ್ತಿವೆ.ಅಲ್ಲದೆ ನಗರದಲ್ಲಿ ವಾಯುಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿಯೂ 1336 ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಾಚರಣೆ ಮಾಡುತ್ತಿವೆ.
ಕೆಎಸ್‌ಆರ್‌ಟಿಸಿಗೆ ಪ್ರಶಸ್ತಿಗಳು ಕೆಎಸ್‌ಆರ್‌ಟಿಸಿ ಮೂರು ಅಂತರರಾಷ್ಟ್ರೀಯ ಬ್ರಾಂಡ್ ಕೌನ್ಸಿಲ್ ರೇಟಿಂಗ್ ಪ್ರಶಸ್ತಿಗಳನ್ನು ಗೆದ್ದಿದೆ. ಅವುಗಳೆಂದರೆ ಅಶ್ವಮೇಧ ಬಸ್‌ಗಳಿಗೆ ಐಕಾನಿಕ್ ಬ್ರಾಂಡ್ ಆಫ್ ದಿ ಇಯರ್ ಪ್ರಶಸ್ತಿ, ಕೆಎಸ್‌ಆರ್‌ಟಿಸಿ ಆರೋಗ್ಯಕ್ಕಾಗಿ ವರ್ಷದ ಅತ್ಯುತ್ತಮ ಉಪಕ್ರಮ ಮತ್ತು ನೌಕರರ ಕಲ್ಯಾಣಕ್ಕಾಗಿ ಅತ್ಯುತ್ತಮ ಸಂಸ್ಥೆ ಪ್ರಶಸ್ತಿ. ಮಾರ್ಚ್ 21 ರಂದು ಬ್ಯಾಂಕಾಕ್‌ನಲ್ಲಿರುವ ಭಾರತ-ಥಾಯ್ ವಾಣಿಜ್ಯ ಮಂಡಳಿಯಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು ಎಂದು ಹೇಳಿದ್ದಾರೆ.
ವಾಹನವು ಪ್ರತಿಯೊಂದು ವಲಯ/ ಪ್ರಮುಖ ಟಿ.ಟಿ.ಎಂ.ಸಿ./ ಪ್ರಮುಖ ಬಸ್ ನಿಲ್ದಾಣಗಳಿಗೆ ಕನಿಷ್ಠ ಒಂದು "ಸಂಚಾರಿ ದುರಸ್ಥಿ ವಾಹನ" ಅಗತ್ಯ ಇವೆ. ಹೀಗಾಗಿ ಪ್ರಸ್ತುತ, ಚಾಲ್ತಿಯಲ್ಲಿರುವ ಎರಡು ಸಂಚಾರಿ ದುರಸ್ಥಿ ವಾಹನಗಳನ್ನು ಮಾರತಹಳ್ಳಿ ಹೊರ ವರ್ತುಲ ರಸ್ತೆ ಹಾಗೂ ಕೆಂಪೇಗೌಡ ಬಸ್ ನಿಲ್ದಾಣ ಸುತ್ತಮುತ್ತಲಿನ ಪ್ರದೇಶಗಳ ವ್ಯಾಪ್ತಿಗೆ ನಿಯೋಜಿಯನ್ನು ಮಾಡಲಾಗಿದೆ.
ಇವುಗಳ ಸಂಚಾರ ಪ್ರಮುಖ ಸ್ಥಳಗಳಾದ ಶಿವಾಜಿನಗರ, ಯಶವಂತಪುರ, ಜಯನಗರ-ಬನಶಂಕರಿ, ಸಿಲ್ಕ್ ಬೋರ್ಡ್, ನಾಯಂಡಹಳ್ಳಿ ಜಂಕ್ಷನ್ ಹಾಗೂ ಹತ್ತಿರವಿರುವ ಇತರೆ ಅನೇಕ ಪ್ರದೇಶಗಳ ವ್ಯಾಪ್ತಿಗೆ ನಿಯೋಜಿಸಲು ಹೆಚ್ಚುವರಿಯಾಗಿ ಮೊದಲ ಹಂತದಲ್ಲಿ, ಈಗ, ಐದು ಸಂಚಾರಿ ದುರಸ್ಥಿ ವಾಹನಗಳನ್ನು ಖರೀದಿ ಮಾಡಲಾಗಿದೆ.
ವಾಹನದ ವಿಶೇಷವೇನು?
- ಪರಿಸರ ಸ್ನೇಹಿ ವಾಹನಗಳು.
- ಬಿ.ಎಸ್-6 ಮಾದರಿ ವಾಹನ, 3-ಸಿಲಿಂಡರ್ ಡೀಸೆಲ್ ಇಂಜಿನ್.
- ಶೂನ್ಯ ಹೊರ ಸೂಸುವಿಕೆಯನ್ನು ಹೊಂದಿದೆ.
- ಈ ವಾಹನಗಳು ಒಟ್ಟು 1.4 ಟನ್ ಹಿಂಬದಿ ಭಾರ ಹೊರುವ ಸಾಮಾಥ್ಯವನ್ನು ಹೊಂದಿದೆ.
- ಮೊಬೈಲ್ ವ್ಯಾನ್‌ಗಳು ಒಟ್ಟಾರೆ 2.5 ಟನ್ ತೂಕ ತಡೆಯುವ ಸಾಮರ್ಥ್ಯ ಸಹ ಒಳಗೊಂಡಿದೆ.
- ಚಾಲಕ ಮತ್ತು ಹೆಚ್ಚುವರಿಯಾಗಿ ಒಬ್ಬ ವ್ಯಕ್ತಿಗೆ ಗರಿಷ್ಠ ಆರಾಮದಾಯಕ ಆಸನದ ವ್ಯವಸ್ಥೆಯನ್ನು ಹೊಂದಿದೆ.
- ಈ ವಾಹನಗಳು ವಿಶಾಲವಾಗಿ ಹಾಗೂ ಉತ್ಕ್ರಷ್ಟವಾದ ಕ್ಯಾಬಿನ್ ನ್ನು ಒಳಗೊಂಡಿದೆ.
- ಏರೋಡೈನಾಮಿಕ್ ವಿನ್ಯಾಸದೊಂದಿಗೆ ಗಾಳಿಯಾಡಬಲ್ಲ ಕಂಟೇನರ್ ಹೊಂದಿರುತ್ತದೆ.
- ಭಾರವಾದ ಟೂಲ್ ಬಾಕ್ಸ್ ಗಳು, ಬ್ಯಾಟರಿ, ಟೈರು, ಜಾಕ್, ಟ್ರಾಲಿ, ಕೇಬಲ್, ಇತ್ಯಾದಿಗಳನ್ನು ಹಿಡಿದಿಡಲು ಸಾಕಷ್ಟು ಸಮರ್ಥ್ಯವಿರುವ ವಿಶಾಲವಾದ ಕಂಟೇನರ್ ಒಳಗೊಂಡಿದೆ.
- ಸುರಕ್ಷಿತ ಲಾಕಿಂಗ್ ಕಾರ್ಯವಿಧಾನದೊಂದಿಗೆ ಸಾಮಾನ್ಯವಾಗಿ ವಿನ್ಯಾಸಗೊಳಿಸಿದ ಚಿಟ್ಟೆಯಾಕಾರದ ಬಾಗಿಲನ್ನು ಹೊಂದಿರುತ್ತದೆ.
- ವಾಹನಗಳ ಮೇಲೆ ನಿರಂತರವಾಗಿ ನಿಗಾ ಇಡಲು ವಾಹನದ ಸ್ಥಳ ಟ್ರ್ಯಾಕಿಂಗ್ ವ್ಯವಸ್ಥೆ ಹಾಗೂ ಪ್ಯಾನಿಕ್ ಬಟನ್ ಒದಗಿಸಲು ಅನುಕೂಲವಾಗಿದೆ.


Click it and Unblock the Notifications