BMTC Divya Darshana: ಬೆಂಗಳೂರಿನ ಪ್ರಸಿದ್ದ ದೇವಾಲಯಗಳ ದರ್ಶನಕ್ಕಾಗಿ ಸಾರ್ವಜನಿಕರಿಗೆ ಬಿಎಂಟಿಸಿ (BMTC) 'ದಿವ್ಯ ದರ್ಶನ' (Divya Darshana) ಎಂಬ ಹೆಸರಿನಲ್ಲಿ ಹೊಸ ವಿಕೇಂಡ್ ಟೂರ್ ಪ್ಯಾಕೇಜ್ ಆರಂಭ ಮಾಡಿತ್ತು. ಈ ಟೂರ್ ಪ್ಯಾಕೇಜ್ ಮೂಲಕ ಬೆಂಗಳೂರಿನ ಪ್ರಸಿದ್ಧ 8 ದೇಗುಲಗಳ ದರ್ಶನಕ್ಕೆ ಅವಕಾಶವನ್ನು ಮಾಡಲಾಗಿತ್ತು. ಇದಕ್ಕೆ ಸಾರ್ವನಿಕರಿಂದ ಉತ್ತಮ ಸ್ಪಂದನೆ ಕೂಡ ಸಿಕ್ಕಿದೆ. ದಿವ್ಯ ದರ್ಶನಕ್ಕೆ ಟಿಕೆಟ್ ಬುಕಿಂಗ್ ಮಾಡುವುದು ಹೇಗೆ..? ಟಿಕೆಟ್ ದರ ಎಷ್ಟು ಎಂಬ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.
ಹೌದು,'ಒನ್ ಡೇ ಟೆಂಪಲ್ ಟೂರ್' ಯೋಜನೆಯನ್ನು ಕಳೆದ ಮೇ 31 ರಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಚಾಲನೆ ನೀಡಿದ್ದಾರೆ. ಅಂದಿನಿಂದ ಇಂದಿನವರೆಗೂ 'ದಿವ್ಯ ದರ್ಶನ'ಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಉತ್ತಮವಾದ ರೆಸ್ಪಾನ್ಸ್ ಕೂಡ ಕೊಟ್ಟಿದ್ದಾರೆ. ಬಿಎಂಟಿಸಿಯ ದೇವಲಯಕ್ಕೆ ಭೇಟಿ ನೀಡುವ ಸೇವೆಗಳು ಪ್ರತಿ ಶನಿವಾರ, ಭಾನುವಾರ ಮತ್ತು ಸಾರ್ವತ್ರಿಕ ರಜೆ ದಿನಗಳಲ್ಲಿ ಲಭ್ಯವಿರುತ್ತದೆ.

ನೀವು 'ದಿವ್ಯ ದರ್ಶನ' (Divya Darshana) ಹೆಸರಿನಲ್ಲಿ ಎಸಿ ಬಸ್ ಮೂಲಕ ಒಂದೇ ದಿನ ಬೆಂಗಳೂರಿನ 8 ಪ್ರಸಿದ್ಧ ದೇಗುಲಗಳ ವೀಕ್ಷಣೆಗೆ ಅವಕಾಶವನ್ನು ಸಹ ಮಾಡಲಾಗಿದೆ.
ದಿವ್ಯ ದರ್ಶನಕ್ಕೆ ಟಿಕೆಟ್ ಬುಕಿಂಗ್ ಹೇಗೆ?
ನೀವು ದಿವ್ಯ ದರ್ಶನಕ್ಕೆ ಹೋಗಲು ಮೊದಲು ಕೆಎಸ್ಆರ್ಟಿಸಿ ಅಧಿಕೃತ ವೆಬ್ಸೈಟ್ ಆದ ksrtc.in ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಅಥವಾ ಬಿಎಂಟಿಸಿಯ ಸಂಪರ್ಕ ಸಂಖ್ಯೆ 080-22483777 ಅಥವಾ 7760991170 ಗೆ ಕರೆ ಮಾಡುವ ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.
ದಿವ್ಯ ದರ್ಶನಕ್ಕೆ ಇರುವಂತಹ ಟಿಕೆಟ್ ದರ ಎಷ್ಟು..?
ವಯಸ್ಕರಿಗೆ 450 ರೂಪಾಯಿ
ಮಕ್ಕಳಿಗೆ 350 ರೂಪಾಯಿ
ಯಾವ ಸಮಯಕ್ಕೆ ಬಸ್ ಲಭ್ಯ..?
ದಿವ್ಯ ದರ್ಶನಕ್ಕೆ ಭೇಟಿ ನೀಡಲು ಬಸ್ ಮೆಜೆಸ್ಟಿಕ್ನಿಂದ ಬೆಳಗ್ಗೆ 8.30ಕ್ಕೆ ಹೊರಡುತ್ತದೆ. ಎಲ್ಲಾ ದೇವಾಲಯಕ್ಕ ಭೇಟಿ ನೀಡಿ
ಸಂಜೆ 5.30 ರ ವರೆಗೆ ವಾಪಸ್ಸ್ ಬರುತ್ತದೆ.
ಯಾವೆಲ್ಲಾ ದೇವಸ್ಥಾನಕ್ಕೆ ಭೇಟಿ..?
- ಗಾಳಿ ಆಂಜನೇಯ ಸ್ವಾಮಿ ದೇಗುಲ
- ರಾಜರಾಜೇಶ್ವರಿ ದೇವಸ್ಥಾನ
- ಶೃಂಗಗಿರಿ ಷಣ್ಮುಖ ದೇವಾಸ್ಥಾನ
- ಕರುಮಾರಿ ಅಮ್ಮ ದೇವಾಲಯ
- ಓಂಕಾರ ಹೀಲ್ಸ್
- ಇಸ್ಕಾನ್ ದೇವಸ್ಥಾನ (ವಸಂತಪುರ) ವೈಕುಂಠ
- ಆರ್ಟ್ ಆಫ್ ಲೀವಿಂಗ್
- ಬನಶಂಕರಿಯಲ್ಲಿನ ಬನಶಂಕರಿ ದೇವಾಲಯಗಳಿಗೆ ನೀವು ದಿವ್ಯ ದರ್ಶನ ಟೂರ್ ಪ್ಯಾಕೇಜ್ ಅಡಿಯಲ್ಲಿ ಭೇಟಿ ನೀಡಬಹುದು.
'ಬೆಂಗಳೂರು ದಿವ್ಯ ದರ್ಶನ' ಯೋಜನೆಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನ ವ್ಯಕ್ತವಾಗಿರುವ ಹಿನ್ನಲ್ಲೇ ಯಲ್ಲಿ ವಾರಾಂತ್ಯ ಮತ್ತು ರಜಾದಿನಗಳಲ್ಲಿ ಮಾತ್ರವಲ್ಲದೆ, ವಾರದ ಎಲ್ಲಾ ದಿನಗಳಲ್ಲಿ ಸೇವೆ ಒದಗಿಸಲು ಬಿಎಂಟಿಸಿ ನಿರ್ಧಾರ ಮಾಡಿದೆ.
ಬಿಎಂಟಿಸಿಯಿಂದ ಧಾರ್ಮಿಕ ಕ್ಷೇತ್ರಗಳ ದರ್ಶನ
ದಿವ್ಯ ದರ್ಶನ ಪ್ಯಾಕೇಜ್‌ನಲ್ಲಿ ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿರುವ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಈ ಯೋಜನೆಗಳನ್ನು ರೂಪಿಸಲಾಗಿದೆ. ಈ ಸೇವೆಯಿಂದಾಗಿ ಪ್ರಯಾಣಿಕರು ಧೇವರ ದರ್ಶನವನ್ನು ಅರಾಮಾದಾಯಕವಾಗಿ ಮಾಡಬಹುದು.
ಕಡಿಮೆ ದರದಲ್ಲಿ ನಗರದ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡುವ ಅವಕಾಶವನ್ನು ಒದಗಿಸುತ್ತದೆ. ಬಿಎಂಟಿಸಿಯ ಈ ಉಪಕ್ರಮವು ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜನ ಜೊತೆಗೆ ದೇವರ ಭಕ್ತರಿಗೆ ಹೆಚ್ಚಿನ ಅನುಕೂಲವಾಗುತ್ತದೆ.
ಇನ್ನು ಈಗಾಗಲೇ ಬೆಂಗಳೂರು ದರ್ಶಿನಿ ಮತ್ತು ಈಶ ಫೌಂಡೇಶನ್ ಪ್ರವಾಸಗಳ ಅನುಭವ ಬೆಂಗಳೂರಿನಲ್ಲಿ ಜಾರಿ ಇವೆ ಇದರಂತೆಯೇ ದಿವ್ಯ ದರ್ಶನ ಯೋಜನೆ ಕೂಡ ಕಾರ್ಯ ನಿರ್ವಹಿಸುತ್ತದೆ.
ಒಟ್ಟಾರೆಯಾಗಿ ಈ ದಿವ್ಯದರ್ಶನ ಟೂರ್ ಪ್ಯಾಕೇಜ್‌ನಿಂದ ಕಡಿಮೆ ದರದಲ್ಲಿ ಹೆಚ್ಚಿನ ದೇವಾಲಯಗಳಿಗೆ ಭೇಟಿ ನೀಡಬೇಕೆಂದುಕೊಂಡವರಿಗೆ ಒಳ್ಳೆಯ ಅವಕಾಶ ಎಂದೇ ಹೇಳಬಹುದು.


Click it and Unblock the Notifications