ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಸೇವೆ ಜಾರಿಗೆ ಬಂದಾಗಿನಿಂದಲ್ಲೂ ಸಾರಿಗೆ ಇಲಾಖೆ ನಷ್ಟದ ಸುಳಿಯಲ್ಲಿ ಸಿಕ್ಕಿಕೊಂಡಿದೆ.
ಹೌದು, ಸರ್ಕಾರ ಭವಿಷ್ಯ ನಿಧಿ (ಪಿಎಫ್) ಮತ್ತು ಇಂಧನ ಬಾಕಿ ಪಾವತಿಗೆ ಸರ್ಕಾರದ ಖಾತರಿಯೊಂದಿಗೆ ಹಣಕಾಸು ಸಂಸ್ಥೆಗಳಿಂದ 2 ಸಾವಿರ ಕೋಟಿ ರೂ. ಸಾಲ ಪಡೆಯಲು ಸಾರಿಗೆ ಸಂಸ್ಥೆಗಳಿಗೆ ಅನುಮೋದನೆ ನೀಡಿತು.ಕಳೆದ ತಿಂಗಳು ಫೆಬ್ರವರಿ 6 ರಂದು ಈ ಕುರಿತು ಟೆಂಡರ್ ಕೂಡ ಕರೆಯಲಾಗಿತ್ತು. ಆದರೆ ಇದೀಗ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಲವನ್ನು ನೀಡಲು ಮುಂದೆ ಬಂದಿದೆ. ಹಾಗಿದ್ರೆ ಎಷ್ಟು ಕೋಟಿ ಸಾಲವನ್ನು ಕೊಡಲಿದೆ..? ಬಡ್ಡಿ ಎಷ್ಟು ಎಂಬುವುದನ್ನು ತಿಳಿಯಲು ಮುಂದೆ ಓದಿ...

ಬ್ಯಾಂಕ್ ವಲಯದ ಪ್ರಮಖ ಬ್ಯಾಂಕ್ ಆದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾರಿಗೆ ಇಲಾಖೆ ನಷ್ಟ ತುಂಬುವುದಕ್ಕಾಗಿ 589.20 ಕೋಟಿ ಸಾಲವನ್ನುನೀಡಲು ಮುಂದೆ ಬಂದಿದೆ.ವಾರ್ಷಿಕ ಶೇ.7.58 ಬಡ್ಡಿ ದರದಲ್ಲಿ ಸಾಲವನ್ನು ಕೊಡಲಿದೆ.
589.20 ಕೋಟಿ ಸಾಲ
ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಮತ್ತು ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಬ್ಯಾಂಕ್‌ಗಳಲ್ಲಿ ಸಾಲ ತಗೆದುಕೊಳ್ಳಲು ಸರ್ಕಾರ ಒಟ್ಟು 2,000 ಕೋಟಿ ಸಾಲಕ್ಕೆ ಅನುಮೋದನೆ ನೀಡಲಾಗಿದೆ.ಅದರಂತೆ ಹಳೆಯ ಬಾಕಿ ತೀರಿಸಲು ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕ್‌ಗಳಿಂದ 7 ವರ್ಷಗಳ ಅವಧಿಗೆ ಕೆಲವು ಷರತ್ತುಗಳನ್ನು ವಿಧಿಸಿ 589.20 ಕೋಟಿ ಸಾಲ ಕೋರಿ ಟೆಂಡರ್ ಕರೆದಿತ್ತು.
ಬಿಎಂಟಿಸಿಗೆ ಸಾಲ ನೀಡಲು ಕೆನರಾ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ನಡುವೆ ಸ್ಪರ್ಧೆ ನಡೆಯುತ್ತಿತ್ತು. ಕೆನರಾ ಬ್ಯಾಂಕ್ ವಾರ್ಷಿಕ ಶೇ. 10 ರಷ್ಟು ಬಡ್ಡಿ ದರ ನಲ್ಲಿ ಸಾಲ ನೀಡಲು ಪ್ರಯತ್ನಿಸಿದ್ದರೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಶೇ. 7.58 ಬಡ್ಡಿ ದರದಲ್ಲಿ ಸಾಲ ನೀಡಲು ಮುಂದಾಗಿದೆ.ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ ಸಾಲ ಪಡೆದಿದೆ. ಈ ಸಾಲವು ಬಿಎಂಟಿಸಿಗೆ ಹಳೆಯ ಬಾಕಿ ತೀರಿಸಲು ಮತ್ತು ಭವಿಷ್ಯ ನಿಧಿಗೆ ಅನುದಾನ ನೀಡಲು ನೆರವಾಗಲಿದೆ. ಹೆಚ್ಚಿನ ಬಡ್ಡಿ ದರ ಇರುವ ಕೆನರಾ ಬ್ಯಾಂಕಿಗಿಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದ್ದರೆ ಹೆಚ್ಚಿನ ಅನುಕೂಲವಾಗುತ್ತದೆ.
ಬಿಎಂಟಿಸಿ ಸಾಲಕ್ಕೆ ಷರತ್ತು ವಿಧಿಸಿ ಟೆಂಡರ್
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ತನ್ನ ಹಳೆಯ ಇಂಧನ ಬಾಕಿ ಮೊತ್ತ ಮತ್ತು ಭವಿಷ್ಯ ನಿಧಿಗೆ ಅನುದಾನಕ್ಕಾಗಿ ₹589.20 ಕೋಟಿ ಸಾಲ ಪಡೆಯಲು ಟೆಂಡರ್ ಪ್ರಕ್ರಿಯೆ ಹಮ್ಮಿಕೊಂಡಿತ್ತು. ಈ ಸಾಲವನ್ನು ರಾಷ್ಟ್ರೀಯಕೃತ ಮತ್ತು ವಾಣಿಜ್ಯ ಬ್ಯಾಂಕ್‌ಗಳಿಂದ 7 ವರ್ಷಗಳ ಅವಧಿಗೆ ಪಡೆಯಲು ಟೆಂಡರ್ ಪ್ರಕಟಿಸಲಾಗಿತ್ತು.
ಸಾಲಕ್ಕೆ ಷರತ್ತುಗಳು
ಸಾಲದ ಮೊತ್ತ: 589.20 ಕೋಟಿ
ಸಾಲ ಅವಧಿ: 7 ವರ್ಷ
ಬಡ್ಡಿ ದರ: ಬ್ಯಾಂಕ್‌ಗಳು ತಮ್ಮ ಪಾವತಿ ಬಡ್ಡಿ ದರವನ್ನು ಸೂಚಿಸುವುದು.
ಅನುದಾನ ಪ್ರಗತಿ: ಸಾಲವು ಹಳೆಯ ಇಂಧನ ಬಾಕಿ ಪಾವತಿಸಲು ಮತ್ತು ಭವಿಷ್ಯ ನಿಧಿಗೆ ಅನುದಾನ ನೀಡಲು ಬಳಸಲಾಗುತ್ತದೆ.
ಬ್ಯಾಂಕ್‌ಗಳ ಸ್ಪರ್ಧೆ: ಈ ಸಾಲಕ್ಕಾಗಿ ಕೆಲವು ಬ್ಯಾಂಕ್‌ಗಳು ಸ್ಪರ್ಧೆ ಮಾಡಿದ್ದಾರೆ ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ.
ಟೆಂಡರ್ ಪ್ರಕ್ರಿಯೆ
ಟೆಂಡರ್ ಆಹ್ವಾನ: ಬಿಎಂಟಿಸಿ ಈ ಸಾಲಕ್ಕೆ ಟೆಂಡರ್ ಆಹ್ವಾನಿಸಿದ್ದು, ಬ್ಯಾಂಕ್‌ಗಳು ತಮ್ಮ ಷರತ್ತುಗಳೊಂದಿಗೆ ಅರ್ಜಿ ಸಲ್ಲಿಸಲು ಆಹ್ವಾನಿಸಲಾಯಿತು.
ಬ್ಯಾಂಕ್‌ಗಳ ಸ್ಪರ್ಧೆ: ವಿವಿಧ ಬ್ಯಾಂಕ್‌ಗಳು, ಅದರಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಪ್ರಮುಖವಾಗಿ, ತಮ್ಮ ಸಾಲದ ಶರತ್ತುಗಳನ್ನು ಪ್ರಸ್ತಾವಿಸಿದ್ದವು.
ನಿರ್ಧಾರ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಶೇ. 7.58 ಶೇಕಡಾವಾರು ಬಡ್ಡಿ ದರದಲ್ಲಿ ಸಾಲ ನೀಡಲು ಮುಂದು ಬಂದು, ಬಿಎಂಟಿಸಿಯು ಇದನ್ನು ಅನುಮೋದನೆ ನೀಡಿದೆ.
ಸಾಲ ಒಪ್ಪಂದ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ ಸಾಲ ಪಡೆಯುವ ಪ್ರಕ್ರಿಯೆ ಖಚಿತವಾಗಿದೆ, ಮತ್ತು ಇದು ಬಿಎಂಟಿಸಿಗೆ ಆರ್ಥಿಕ ಸುಧಾರಣೆಗೆ ಸಹಾಯ ಮಾಡಲಿದೆ.


Click it and Unblock the Notifications