ಬೆಂಗಳೂರಿಗರಿಗೆ ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ಮತ್ತೊಂದು ಒಳ್ಳೆಯ ಸುದ್ದಿ ನೀಡಿದೆ. ಶೀಘ್ರದಲ್ಲೇ ಮೂರು ಹೊಸ ಮಾರ್ಗದಲ್ಲಿ ಬಸ್ ಸಂಚಾರ ಆರಂಭವಾಗಲಿದೆ. ಹೌದು, ಪ್ರಯಾಣಿಕರ ಬೇಡಿಕೆಯಂತೆ ಬಿಎಂಟಿಸಿ (BMTC), ಮೂರು ಹೊಸ ಮಾರ್ಗದಲ್ಲಿ ಬಸ್ ಸಂಚಾರ ಪ್ರಾರಂಭಿಸಲು ಮುಂದಾಗಿದೆ. ಈ ಮಾರ್ಗದಲ್ಲಿ ಹವಾನಿಯಂತ್ರಣ ರಹಿತ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ. ಪ್ರಯಾಣಿಕರ ಮಾಹಿತಿಗಾಗಿ ಬಸ್ ಟ್ರಿಪ್‌ಗಳ ಸಂಖ್ಯೆ, ಮಾರ್ಗದ ವಿವರವನ್ನು ಬಿಡುಗಡೆ ಮಾಡಲಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಬಿಎಂಟಿಸಿ ಆಗಾಗ್ಗೆ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡುತ್ತದೆ. ಅದರಂತೆ, ಇದೀಗ ಜನವರಿ 16 ರಿಂದ ಮೂರು ಹೊಸ ಮಾರ್ಗದಲ್ಲಿ ಬಿಎಂಟಿಸಿ ಬಸ್‌ಗಳ ಸಂಚಾರ ಶುರುವಾಲಿದೆ. ಈ ಮಾರ್ಗವನ್ನು 168 ಎ, 161 ಬಿ, 168 ಇ ಎಂದು ಕರೆಯಲಾಗಿದೆ. ನಾನ್ ಎಸಿ ಬಸ್‌ಗಳು ಈ ಮಾರ್ಗದಲ್ಲಿ ಸಂಚಾರ ನಡೆಸಲಿವೆ ಎಂದು ಬಿಎಂಟಿಸಿ ತಿಳಿಸಿದೆ. ಈ ಹೊಸ ಬಸ್‌ಗಳ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಪ್ರಯಾಣಿಕರಲ್ಲಿ ಮನವಿ ಕೂಡ ಮಾಡಿದೆ.

ಬಿಎಂಟಿಸಿ ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿದೆ. ಹಾಗೆಯೇ, ಪ್ರದೇಶಗಳ ಅಭಿವೃದ್ಧಿ, ಖಾಸಗಿ ವಾಹನಗಳ ಸಂಚಾರ ಇತ್ಯಾದಿ ವಿಷಯಗಳನ್ನು ಮನಗಂಡು ಸಮೀಕ್ಷೆಗಳನ್ನು ನಡೆಸಿದೆ. ಈ ಮೂಲಕ ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ಹೊಸ ಬಸ್ ಮಾರ್ಗವನ್ನು ಪರಿಚಯಿಸಲು ಮುಂದಾಗಿದೆ. ಬಸ್ ಟ್ರಿಪ್‌ಗಳ ಸಂಖ್ಯೆ, ಮಾರ್ಗದ ವಿವರವನ್ನು ತಿಳಿಯಲು ಮುಂದೆ ಓದಿ.
ಹೊಸ ಬಸ್ ಮಾರ್ಗದ ವಿವರಗಳು
ಮಾರ್ಗ ಸಂಖ್ಯೆ 168 ಎ
ಈ ಮಾರ್ಗದ ಬಸ್‌ಗಳು ಹಲವು ಪ್ರದೇಶಗಳಿಗೆ ಸಂಚರಿಸಲಿವೆ. ಜೈ ಭೀಮಾ ನಗರ್, ಕೆ.ಆರ್. ಮಾರುಕಟ್ಟೆ, ತಾವರೆಕೆರೆ, ಸದ್ದುಗುಂಟೆಪಾಳ್ಯ, ಬೆಂಗಳೂರು ಡೈರಿ, ವಿಲ್ಸನ್ ಗಾರ್ಡನ್ ಪೊಲೀಸ್ ಸ್ಟೇಷನ್, ಲಾಲ್‌ಬಾಗ್ ಮುಖ್ಯ ದ್ವಾರ. ಒಂದು ಬಸ್, 18 ಟ್ರಿಪ್ ಕಾರ್ಯಾಚರಣೆ.
ಮಾರ್ಗ ಸಂಖ್ಯೆ 161 ಬಿ
ಜೈ ಭೀಮಾ ನಗರ್, ಶಿವಾಜಿನಗರ, ತಾವರೆಕೆರೆ, ಸದ್ದುಗುಂಟೆಪಾಳ್ಯ, ಬೆಂಗಳೂರು ಡೈರಿ, ವಿಲ್ಸನ್ ಗಾರ್ಡನ್ ಪೊಲೀಸ್ ಸ್ಟೇಷನ್, ರಿಚ್ಮಂಡ್ ಸರ್ಕಲ್, ಎಂ.ಜಿ ಸ್ಟ್ಯಾಚ್ಯು. ಒಂದು ಬಸ್, 18 ಟ್ರಿಪ್ ಕಾರ್ಯಾಚರಣೆ.
ಬಸ್ ಮಾರ್ಗ 168 ಇ
ಈ ಮಾರ್ಗದ ಬಸ್‌ಗಳು ಜೈ ಭೀಮಾನಗರ್, ಕೆಂಪೇಗೌಡ ಬಸ್ ನಿಲ್ದಾಣ, ತಾವರೆಕೆರೆ, ಸದ್ದುಗುಂಟೆಪಾಳ್ಯ, ಬೆಂಗಳೂರು ಡೈರಿ, ವಿಲ್ಸನ್ ಗಾರ್ಡನ್ ಪೊಲೀಸ್ ಸ್ಟೇಷನ್, ಕಾರ್ಪೊರೇಷನ್. ಒಂದು ಬಸ್, 15 ಟ್ರಿಪ್ ಕಾರ್ಯಾಚರಣೆ.
ಈ ಸುದ್ದಿ ಓದಿದ್ದೀರಾ?: ಸಂಕ್ರಾಂತಿಗೆ ಸಿಹಿಸುದ್ದಿ! ಚಿನ್ನದ ಬೆಲೆ ಇಳಿಕೆ.. ಬೆಳ್ಳಿ ದರವೂ ಕುಸಿತ.. 24k ಗೋಲ್ಡ್ ರೇಟ್ ಎಷ್ಟಿದೆ?
ಶೇ.15ರಷ್ಟು ಪ್ರಯಾಣ ದರ ಹೆಚ್ಚಳ
ರಾಜ್ಯ ಸರ್ಕಾರ ಇತ್ತೀಚೆಗೆ ಬಸ್ ಪ್ರಯಾಣ ದರ ಹೆಚ್ಚಳ ಮಾಡಿದೆ. ಶೇ.15ರಷ್ಟು ಪ್ರಯಾಣ ದರ ಪರಿಷ್ಕರಿಸಲು ಸರ್ಕಾರ ಅನುಮತಿ ನೀಡಿತ್ತು. ಅದರಂತೆ ಬಿಎಂಟಿಸಿ, ಜನವರಿ 5ರಿಂದಲೇ ಜಾರಿಗೆ ಬರುವಂತೆ ಬಸ್ ಪ್ರಯಾಣ ದರ ಪರಿಷ್ಕೃರಣೆ ಮಾಡಿದೆ.
5 ರೂ. ಬಸ್ ದರ 6 ರೂ.ಗೆ ಏರಿಕೆ
ಬಿಎಂಟಿಸಿ ಮೊದಲ ಸ್ಟೇಜ್ ಪ್ರಯಾಣ ದರ 5 ರೂ. ಇದ್ದದ್ದು 6 ರೂ.ಗೆ ಏರಿಕೆ ಮಾಡಿದೆ. 25ನೇ ಸ್ಟೇಜ್‌ನಲ್ಲಿ ಅತಿ ಹೆಚ್ಚು ಪ್ರಯಾಣ ದರ ಏರಿಕೆಯಾಗಿದೆ. 30 ರೂ. ನಿಂದ 32 ರೂ.ಗೆ ಏರಿಕೆ ಆಗಿದೆ.
ಒಟ್ಟಾರೆ, ಬಿಎಂಟಿಸಿ ಸಿಲಿಕಾನ್ ಸಿಟಿ ಜನರ ಜೀವನಾಡಿ. ನಿತ್ಯ 5 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಬಿಎಂಟಿಸಿ ಬಸ್‌ಗಳಲ್ಲಿ ಸಂಚಾರವನ್ನು ನಡೆಸುತ್ತಾರೆ. ನಿತ್ಯ ಎಸಿ, ನಾನ್ ಎಸಿ, ವಾಯು ವಜ್ರ ಬಸ್‌ಗಳು ಕಾರ್ಯಾಚರಣೆ ನಡೆಸುತ್ತವೆ. ಅಲ್ಲದೆ ಎಲೆಕ್ಟ್ರಿಕ್ ಬಸ್, ಡೀಸೆಲ್ ಬಸ್‌ಗಳು ಸಹ ಕಾರ್ಯಾಚರಣೆ ನಡೆಸುತ್ತವೆ. ಬಿಎಂಟಿಸಿ ಮೆಟ್ರೋ ಫೀಡರ್ ಬಸ್ ಸೇವೆಗಳನ್ನು ಪ್ರಾರಂಭಿಸಿದೆ. ಈ ಬಸ್‌ಗಳು ನಗರದ ವಿವಿಧ ಪ್ರದೇಶಗಳಿಂದ ಮೆಟ್ರೋ ನಿಲ್ದಾಣಕ್ಕೆ ಸಂಪರ್ಕವನ್ನು ಕಲ್ಪಿಸುತ್ತವೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications