Boeing Layoffs: ಇದೆಂಥಾ ನ್ಯಾಯ.. ಇತ್ತೀಚೆಗೆ ಇನ್ಫೋಸಿಸ್ ಉದ್ಯೋಗಿಗಳ ವಜಾ ಆಯ್ತು ಇದೀಗ ವೃತ್ತಿಪರ ವಿಮಾನ ಕೈಗಾರಿಕಾ ಕಂಪನಿಯಾಗಿರುವ ಬೋಯಿಂಗ್ ತನ್ನ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಲಾಗಿದೆ. ಈ ನಿರ್ಧಾರದಿಂದ ಉದ್ಯೋಗಿಗಳಿಗೆ ಸಂಕಷ್ಟ ಎದುರಾಗಿದೆ. ಹಾಗಿದ್ರೆ 180 ಉದ್ಯೋಗಿಗಳು ಕೆಲಸದಿಂದ ವಜಾ ಮಾಡಲು ಅಸಲಿ ಕಾರಣವೇನು ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೌದು,ಅಮೆರಿಕದ ಪ್ರಮುಖ ವಿಮಾನ ನಿರ್ಮಾಣ ಕಂಪನಿ ಬೋಯಿಂಗ್ ತನ್ನ ಜಾಗತಿಕ ಉದ್ಯೋಗ ಕಡಿತ ಭಾಗವಾಗಿ ಬೆಂಗಳೂರಿನ ಎಂಜಿನಿಯರಿಂಗ್ ಟೆಕ್ನಾಲಜಿ ಸೆಂಟರ್‌ನ 180 ಉದ್ಯೋಗಿಗಳನ್ನು ಕೆಲಸದಿಂದ ತಗೆದು ಹಾಕಿದ್ದಾರೆ.

ಬೋಯಿಂಗ್ ಭಾರತದಲ್ಲಿ ಸುಮಾರು ಏಳು ಸಾವಿರ ಉದ್ಯೋಗಿಗಳನ್ನು ಹೊಂದಿದೆ. ಕಳೆದ ವರ್ಷವೇ ಬೋಯಿಂಗ್ ಜಾಗತಿಕ ಉದ್ಯೋಗಿ ಸಂಖ್ಯೆಯನ್ನು ಶೇ.10ರಷ್ಟು ಉದ್ಯೋಗಿಗಳನ್ನು ಕಡಿಮೆ ಮಾಡುವುದಾಗಿ ಹೇಳಿತ್ತು. ಅದರಂತೆ ಕಂಪನಿಯು ಈ ಕ್ರಮವನ್ನು ತಗೆದುಕೊಂಡಿದೆ ಎಂದು ಪಿಟಿಐ ವರದಿ ಮಾಡಿದೆ.
ಬೆಂಗಳೂರು ಕಚೇರಿಯ 180 ಉದ್ಯೋಗಿಗಳಿಗೆ ಗೇಟ್ ಪಾಸ್
ಬೋಯಿಂಗ್ ಕಂಪನಿ ಬೆಂಗಳೂರಿನ ಎಂಜಿನಿಯರಿಂಗ್ ಟೆಕ್ನಾಲಜಿ ಸೆಂಟರ್‌ನ 180 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಭಾರತದಲ್ಲಿ ಬೋಯಿಂಗ್ ಕಂಪನಿ ಏಳು ಸಾವಿರ ಉದ್ಯೋಗಿಗನ್ನು ಹೊಂದಿದೆ. ಕಂಪನಿಯ ಭಾರತದಲ್ಲಿ ವಿಶೇಷವಾಗಿ ಬೆಂಗಳೂರಿನ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಟೆಕ್ನಾಲಜಿ ಸೆಂಟರ್‌ನ 180 ಉದ್ಯೋಗಿಗಳಿಗೆ
ಗೇಟ್ ಪಾಸ್ ನೀಡಿದೆ. ಈ ಕ್ರಮವನ್ನು ಡಿಸೆಂಬರ್ ಕೊನೆಯ ತೆಗೆದುಕೊಂಡಿದ್ದು ಆದರೆ ಇದರ ಬಗ್ಗೆ ಸತ್ಯ ಇದೀಗ ಬಹಿರಂಗವಾಗಿದೆ.
ಕಳೆದ ವರ್ಷವೇ ಬೋಯಿಂಗ್ ಕಂಪನಿ ಜಾಗತಿಕವಾಗಿ ತನ್ನ ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡುವುದಾಗಿ ಘೋಷಣೆಯನ್ನು ಮಾಡಲಾಗಿತ್ತು ಆದ್ದರಿಂದ ಈ ಕ್ರಮವನ್ನು ಕೈಗೊಂಡಿದೆ. ಬೋಯಿಂಗ್ ನಿಂದ ಅಧಿಕೃತವಾದ ಯಾವುದೇ ಹೇಳಿಕೆ ಇಂದುವರೆಗೂ ಬಂದಿಲ್ಲ.
ಕೆಲಸದ ಮೇಲೆ ಪರಿಣಾಮ ಇಲ್ಲ
ನಾವು ಉದ್ಯೋಗಿ ಸಂಖ್ಯೆಯನ್ನು ಕಡಿಮೆ ಮಾಡಿರುವುದರಿಂದ ಕೆಲಸದ ಮೇಲೆ ಪರಿಣಾಮ ಇಲ್ಲ ಎಂದ ಕಂಪನಿ ಮೂಲಗಳು ಮಾಹಿತಿಯನ್ನು ತಿಳಿಸಿದೆ. ಉದ್ಯೋಗಿಗಳ ಸಂಖ್ಯೆ ಇಳಿಸುವ ಕ್ರಮವು ಕಂಪನಿಯ ಹೊಂದಾಣಿಕೆಯ ಭಾಗವಾಗಿದೆ. ನಮ್ಮ ಕಂಪನಿ ಕೆಲಸದ ಮೇಲೆ ಕಡಿಮೆ ಕೆಲಸ ಮಾಡುವ ಹುದ್ದೆಗಳನ್ನು ಪರಿಶೀಲಿಸಿ, ಅಂತಹ ಹುದ್ದೆಗಳಲ್ಲಿದ್ದವರನ್ನು ಮನೆಗೆ ಗೇಟ್ ಪಾಸ್ ನೀಡಲಾಗಿದೆ. ಇದರಿಂದಾಗಿ ಕಂಪನಿಯ ಕೆಲಸದ ಮೇಲೆ ಪರಿಣಾಮ ಆಗುವುದಿಲ್ಲ. ಗ್ರಾಹಕ ಸೇವೆ ಮತ್ತು ಆಡಳಿತ ವಿಭಾಗದಲ್ಲಿ ಈ ಹುದ್ದೆಗಳ ನಷ್ಟದಿಂದ ಪರಿಣಾಮ ಉಂಟಾಗಿಲ್ಲ ಎಂದು ಕಂಪನಿ ಮೂಲಗಳು ಮಾಹಿತಿಯನ್ನು ತಿಳಿಸಿವೆ.
ಅಮೆರಿಕದ ಬೋಯಿಂಗ್ ಕಂಪನಿಯ ಅಧೀನ ಕಂಪನಿಯಾಗಿರುವ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಸೆಂಟರ್ (ಬಿಐಇಟಿಸಿ) ಬೆಂಗಳೂರು ಹಾಗೂ ಚೆನ್ನೈನಲ್ಲಿ ಸಂಕೀರ್ಣ ಸುಧಾರಿತ ಏರೋಸ್ಪೇರ್ ಕೆಲಸಗಳನ್ನು ನಿರ್ವಹಿಸುತ್ತಿದೆ.
ಬೆಂಗಳೂರಿನ ಬಿಐಇಟಿಸಿ ಕ್ಯಾಂಪಸ್ ಬೋಯಿಂಗ್ ಕಂಪನಿ ವಿದೇಶದಲ್ಲ ಹೊಂದಿರುವ ಪೂರ್ಣ ಪ್ರಮಾಣದ ಹೂಡಿಕೆಯದ್ದಾಗಿದೆ. ಭಾರತದ ಈ ಕ್ಯಾಂಪಸ್‌ನಿಂದಲೇ ಬೋಯಿಂಗ್ ತನ್ನ 300ಕ್ಕೂ ಹೆಚ್ಚು ಪೂರೈಕೆದಾರರಿಗೆ 1.25 ಶತಕೋಟಿ ಡಾಲರ್ ಮೌಲ್ಯದ ಸೇವೆಗಳನ್ನು ಬದಗಿಸುತ್ತಿದೆ.
ಬೋಯಿಂಗ್ ಇದೊಂದು ಆದಾಯದಲ್ಲಿ ಮಹತ್ತರವಾದ ಜಾಗತಿಕ ವಿಮಾನ ಉತ್ಪಾದನಾ ಸಂಸ್ಥೆಯಾಗಿದೆ. ಆರ್ಡರ್‌ಗಳು ಮತ್ತು ಡೆಲಿವರಿಗಳನ್ನು ನೀಡುವುದಲ್ಲದೇ, ಜಾಗತಿಕವಾಗಿ ರಕ್ಷಣಾ ಸಂಬಂಧಿ ಆದಾಯದ ಮೂರನೇ ಅತ್ಯಂತ ದೊಡ್ಡ ಏರೋಸ್ಪೇಸ್ ಮತ್ತು ಡಿಫೆನ್ಸ್ ಕಾಂಟ್ರಾಕ್ಟರ್ ಇದಾಗಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿಯೇ ಅತ್ಯಂತ ದೊಡ್ಡ ರಫ್ತು ಮಾಡುವ ಸಂಸ್ಥೆ ಬೋಯಿಂಗ್ ಆಗಿದೆ.
ಸುಮಾರು 17,000 ಬೋಯಿಂಗ್ ಉದ್ಯೋಗಿಗಳನ್ನು ಪ್ರತಿನಿಧಿಸುವ ಒಕ್ಕೂಟವು ಪ್ರಾಥಮಿಕವಾಗಿ ವಾಷಿಂಗ್ಟನ್ ನಗರದಲ್ಲಿದೆ.ಬೋಯಿಂಗ್ ಕೆಲಸದಿಂದ ತೆಗೆಯಲ್ಪಡುವ ನಿರ್ಧಾರದಿಂದ ಈ ಉದ್ಯೋಗಿಳಿಗೆ ಸಂಕಷ್ಟ ಎದುರಾಗಿದೆ.


Click it and Unblock the Notifications