Gem, Jewellery Exports : ಫೆಬ್ರವರಿ ರತ್ನ, ಜ್ಯುವೆಲ್ಲರಿ ರಫ್ತು ಹೆಚ್ಚಳ, ಎಷ್ಟು ಏರಿಕೆ ನೋಡಿ!

ಭಾರತದಲ್ಲಿ ಫೆಬ್ರವರಿ 2023ರಲ್ಲಿ ರತ್ನ ಹಾಗೂ ಜ್ಯುವೆಲ್ಲರಿ ರಫ್ತು ಏರಿಕೆಯಾಗಿದೆ. ಚೀನಾದ ಮತ್ತು ಮಧ್ಯಪ್ರಾಚ್ಯ ಎರಡೂ ಮಾರುಕಟ್ಟೆಗಳ ತ್ವರಿತ ಚೇತರಿಕೆಯಿಂದಾಗಿ ಭಾರತದಲ್ಲಿ ಈ ಬೆಳವಣಿಗೆ ಕಂಡು ಬಂದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಈ ವರ್ಷದ ಫೆಬ್ರವರಿಯಲ್ಲಿ ದೇ

ಭಾರತದಲ್ಲಿ ಫೆಬ್ರವರಿ 2023ರಲ್ಲಿ ರತ್ನ ಹಾಗೂ ಜ್ಯುವೆಲ್ಲರಿ ರಫ್ತು ಏರಿಕೆಯಾಗಿದೆ. ಚೀನಾದ ಮತ್ತು ಮಧ್ಯಪ್ರಾಚ್ಯ ಎರಡೂ ಮಾರುಕಟ್ಟೆಗಳ ತ್ವರಿತ ಚೇತರಿಕೆಯಿಂದಾಗಿ ಭಾರತದಲ್ಲಿ ಈ ಬೆಳವಣಿಗೆ ಕಂಡು ಬಂದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಈ ವರ್ಷದ ಫೆಬ್ರವರಿಯಲ್ಲಿ ದೇಶದಲ್ಲಿ ರತ್ನ ಹಾಗೂ ಜ್ಯುವೆಲ್ಲರಿ ರಫ್ತು ವರ್ಷದಿಂದ ವರ್ಷಕ್ಕೆ ಶೇಕಡ 24ರಷ್ಟು ಏರಿಕೆಯಾಗಿದೆ. ಅಂದರೆ 23,326.8 ಕೋಟಿ ರೂಪಾಯಿಯಿಂದ 28,832.86 ಕೋಟಿ ರೂಪಾಯಿಗೆ ಏರಿಕೆ ಕಂಡಿದೆ ಎಂದು ರತ್ನ ಮತ್ತು ಜ್ಯುವೆಲ್ಲರಿ ರಫ್ತು ಉತ್ತೇಜನ ಕೌನ್ಸಿಲ್ (ಜಿಜೆಇಪಿಸಿ) ಡೇಟಾ ಹೇಳಿದೆ.

ಫೆಬ್ರವರಿ ತಿಂಗಳಿನಲ್ಲಿ ಒಟ್ಟು ಚಿನ್ನದ ಜ್ಯುವೆಲ್ಲರಿಗಳ (ಪ್ಲೇನ್ ಮತ್ತು ಸ್ಟಡೆಡ್) ರಫ್ತು ಶೇಕಡ 29.89ರಷ್ಟು ಹೆಚ್ಚಳವಾಗಿ 5,829.65 ಕೋಟಿ ರೂಪಾಯಿಗೆ ತಲುಪಿದೆ. ಕಳೆದ ವರ್ಷ ಫೆಬ್ರವರಿಯಲ್ಲೇ 4,488.3 ಕೋಟಿ ರುಫಾಯಿ ಚಿನ್ನದ ರಫ್ತು ಆಗಿತ್ತು. ಕತ್ತರಿಸಿದ, ಪಾಲಿಶ್ ಮಾಡಿದ ವಜ್ರವು ಅತೀ ಹೆಚ್ಚು ಬೆಳವಣಿಗೆ ಕಂಡಿದೆ. ಶೇಕಡ 32ರಷ್ಟು ಏರಿಕೆಯಾಗಿ, 19,582.4 ಕೋಟಿ ರೂಪಾಯಿಗೆ ತಲುಪಿದೆ. ಇನ್ನು ಕಳೆದ ವರ್ಷ 2022ರ ಫೆಬ್ರವರಿಯಲ್ಲಿ 14,841.9 ಕೋಟಿ ರೂಪಾಯಿ ಮೌಲ್ಯದ ಕತ್ತರಿಸಿದ, ಪಾಲಿಶ್ ಮಾಡಿದ ವಜ್ರ ರಫ್ತು ಮಾಡಲಾಗಿತ್ತು.

ಫೆಬ್ರವರಿ ರತ್ನ, ಜ್ಯುವೆಲ್ಲರಿ ರಫ್ತು ಹೆಚ್ಚಳ, ಎಷ್ಟು ಏರಿಕೆ ನೋಡಿ!

ಈ ರಫ್ತು ಏರಿಕೆಗೆ ಪ್ರಮುಖ ಕಾರಣವೇನು?

ಇನ್ನು ಈ ಬಗ್ಗೆ ಮಾಹಿತಿ ನೀಡಿದ ಜಿಜೆಇಪಿಸಿ ಚೇರ್‌ಮನ್ ವಿಪುಲ್ ಶಾ, "ಚೀನಾದಲ್ಲಿ ಬೇಡಿಕೆ ಹೆಚ್ಚಾದ ಕಾರಣ ಮತ್ತು ಲೂನರ್ ಹೊಸ ವರ್ಷದ ಕಾರಣದಿಂದಾಗಿ ಕತ್ತರಿಸಿಸ ಮತ್ತು ಪಾಲೀಶ್ ಮಾಡಿದ ವಜ್ರದ ರಫ್ತು ಅಧಿಕವಾಗಿದೆ. ಇನ್ನು ಯುಎಇಯೊಂದಿಗೆ ಸಿಇಪಿಎ ಡೀಲ್‌ಗೆ ಸಹಿ ಮಾಡಿರುವುದು ಕೂಡಾ ಸಹಕಾರಿಯಾಗಿದೆ. ಇದರಿಂದಾಗಿ ಪ್ಲೇನ್ ಚಿನ್ನ ಜ್ಯುವೆಲ್ಲರಿ ರಫ್ತಿನಲ್ಲಿ ಶೇಕಡ 45ರಷ್ಟು ಏರಿಕೆಯಾಗಿದೆ," ಎಂದು ಮಾಹಿತಿ ನೀಡಿದ್ದಾರೆ.

"ಇನ್ನು ಪ್ರಮುಖವಾಗಿ ಯುಎಸ್‌ಗೆ ರಫ್ತು ಮಾಡಲಾಗುವ ಸ್ಟಡೆಡ್ ಚಿನ್ನದ ಜ್ಯುವೆಲ್ಲರಿಯಲ್ಲಿಯು ಶೇಕಡ 20ರಷ್ಟು ಬೆಳವಣಿಗೆ ಕಂಡು ಬಂದಿದೆ. ಕಳೆದ ಕೆಲವು ತಿಂಗಳುಗಳಿಂದ ಹಾಂಗ್‌ಕಾಂಗ್ ಮಾರುಕಟ್ಟೆಯಲ್ಲಿ ನೆಗೆಟಿವ್ ಬೆಳವಣಿಗೆ ಕಂಡುಬಂದಿದೆ. ಆದರೆ ಈಗ ಮತ್ತೆ ಚೇತರಿಕೆ ಕಾಣುತ್ತಿದೆ. ಚೀನಾದಲ್ಲಿ ಬೇಡಿಕೆ ಅಧಿಕವಾಗಿರುವುದು ಪ್ರಮುಖವಾಗಿ ನಮ್ಮ ಮಾರುಕಟ್ಟೆ ಬೆಳವಣಿಗೆಗೆ ಕಾರಣವಾಗಿದೆ," ಎಂದು ವಿಪುಲ್ ಶಾ ತಿಳಿಸಿದ್ದಾರೆ.

"ಚೀನಾದಲ್ಲಿ ಸರಾಸರಿ ಉಳಿತಾಯ ದರವು ಶೇಕಡ 40ರಷ್ಟಿದೆ. ಅಂದರೆ ಟ್ರಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ಇತರೆ ಖರ್ಚುಗಳಿಗೆ ಬಳಕೆ ಮಾಡಲು ಸಾಧ್ಯವಾಗುತ್ತದೆ. ಮುಖ್ಯವಾಗಿ ದೀರ್ಘಾವಧಿಯ ಲಾಕ್‌ಡೌನ್ ಅವಧಿಗಳ ನಂತರ ಜನರು ಹೆಚ್ಚಾಗಿ ಖರೀದಿ ಕಡೆ ವಾಲುತ್ತಿದ್ದಾರೆ. ಮುಂದಿನ 6 ತಿಂಗಳಲ್ಲಿ ವಜ್ರ ಮತ್ತು ವಜ್ರದ ಆಭರಣ ಉದ್ಯಮದಲ್ಲಿ ಗಮನಾರ್ಹ ಬೆಳವಣಿಗೆ ಸಾಧ್ಯತೆಯಿದೆ," ಎಂದೂ ಹೇಳಿದ್ದಾರೆ.

ಏಪ್ರಿಲ್-ಫೆಬ್ರವರಿ 2022-23ರ ರಫ್ತಿನ ವಿಚಾರಕ್ಕೆ ಬಂದಾಗ ರತ್ನಗಳು ಮತ್ತು ಆಭರಣಗಳ ಒಟ್ಟಾರೆ ರಫ್ತು 2021-2021 ರ ಇದೇ ಅವಧಿಯಲ್ಲಿ 264,994.8 ಕೋಟಿ ರೂಪಾಯಿ ಆಗಿತ್ತು. ಆದರೆ ಅದಕ್ಕೆ ಹೋಲಿಕೆ ಮಾಡಿದಾಗ ಈ ವರ್ಷ ಅಂದರೆ 2022-23ರಲ್ಲಿ 278,960.6 ಕೋಟಿ ರೂಪಾಯಿಗಳಿಗೆ ಅಥವಾ ಶೇಕಡ 5.27ರಷ್ಟು ಏರಿಕೆಯನ್ನು ಕಂಡುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+