ಬಹುರಾಷ್ಟ್ರ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯಾದ ಬಾಷ್ ಭವಿಷ್ಯದ ಸಾರಿಗೆ ವ್ಯವಸ್ಥೆಗೆ ರೂಪಾಂತರವಾದ ವ್ಯಕ್ತಿಗತ ಸಂಪರ್ಕ ಪರಿಹಾರವನ್ನು ಕಂಡುಕೊಂಡಿದೆ.
ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಬಿಎಸ್ VI ವಾಹನಗಳಿಗೆ ಅತ್ಯಂತ ಸುರಕ್ಷಿತ ಲಕ್ಷಣಗಳನ್ನು ಒಳಗೊಂಡ ಮತ್ತು ವೈಶಿಷ್ಟ್ಯತೆಗಳನ್ನು ಒಳಗೊಂಡಂತಹ ಸಾರಿಗೆ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಭಾಷ್ ನೀಡುತ್ತಿದೆ.
ಬಿಎಸ್ IV ನಿಂದ ಬಿಎಸ್ VIಗೆ ಎಂಜಿನ್‌ಗಳನ್ನು ಉತ್ತಮ ರೀತಿಯಲ್ಲಿ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಬಾಷ್ ಒಇಎಂಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದೆ.
ಪ್ರಯಾಣಿಕ ಕಾರುಗಳು ಮತ್ತು ವಾಣಿಜ್ಯ ವಾಹನಗಳಿಗೆ ಸಂಬಂಧಿಸಿದ 70ಕ್ಕೂ ಹೆಚ್ಚು ಯೋಜನೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಬಾಷ್ ಬಿಎಸ್ VI ಆಧಾರಿತ ವಾಹನಗಳ ಅಭಿವೃದ್ಧಿಗೆ ಒಇಎಂಗಳಿಂದ ಮತ್ತಷ್ಟು ಬೆಂಬಲ ಪಡೆಯಲು ಹೆಜ್ಜೆ ಇಟ್ಟಿದೆ.
'' ಹೊಸ ಹೊಸ ತಂತ್ರಜ್ಞಾನಗಳ ಮೂಲಕ ಬಾಷ್ ಭಾರತದಲ್ಲಿ ಭವಿಷ್ಯದ ಸಾರಿಗೆ ವ್ಯವಸ್ಥೆಗೆ ಒಂದು ಹೊಸ ರೂಪ ಕೊಡಲು ನಿರಂತರವಾಗಿ ಕಾರ್ಯಪ್ರವೃತ್ತವಾಗಿದೆ. ಗ್ರಾಹಕರ ಅಗತ್ಯತೆಗಳಿಗೆ ತಕ್ಕಂತೆ ನಾವು ಸರ್ಕಾರದ ಉಪಕ್ರಮಗಳನ್ನು ಜಾರಿಗೆ ತರುವುದಕ್ಕೆ ಆದ್ಯತೆ ನೀಡುತ್ತಿದ್ದೇವೆ. ಎಂದು ಬಾಷ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಬಾಷ್ ಗ್ರೂಪ್ ಇನ್ ಇಂಡಿಯಾದ ಅಧ್ಯಕ್ಷರಾಗಿರುವ ಸೌಮಿತ್ರ ಭಟ್ಟಚಾರ್ಯ ಹೇಳಿದ್ದಾರೆ.
ಭಾರತೀಯ ಮಾರುಕಟ್ಟೆಗೆ ಉತ್ಪನ್ನಗಳ ಜೊತೆಗೆ ಪರಿಹಾರಗಳು
ಬಾಷ್‌ನ ಪ್ರಮುಖ ಆದ್ಯತೆಯೆಂದರೆ ಭವಿಷ್ಯಕ್ಕೆ ಶುದ್ಧ, ಸಮರ್ಥ, ಸುರಕ್ಷಿತ, ಆಟೋಮೇಟೆಡ್ ಮತ್ತು ಸಂಪರ್ಕದ ಸೇವೆಗಳನ್ನು ಒದಗಿಸುವುದಾಗಿದೆ. ಈ ನಿಟ್ಟಿನಲ್ಲಿ ಆಟೋಮೇಷನ್, ವಿದ್ಯುದ್ದೀಕರಣ ಮತ್ತು ಸಂಪರ್ಕದಂತಹ ಮೂರು ಪ್ರಮುಖ ತಂತ್ರಜ್ಙಾನಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಎಲೆಕ್ಟ್ಟಿಫೈಯ್ಡ್ ಮತ್ತು ಪವರ್‌ಟ್ರೇನ್ ಪರಿಹಾರಗಳು
ಬಾಷ್‌ನ ಎಲೆಕ್ಟ್ರಿಕ್ ಪವರ್‌ಟ್ರೇನ್ ವ್ಯವಸ್ಥೆಯು ಸಮರ್ಥತೆ, ಆರ್ಥಿಕತೆ ಮತ್ತು ಡೈನಾಮಿಕ್ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಬಾಷ್‌ನ ಪ್ರಮುಖ ಗುರಿಯೆಂದರೆ ಕಾರ್ಬನ್ ತಟಸ್ಥತೆಯನ್ನು ಕಾಪಾಡುವುದಾಗಿದೆ. ಅಂದರೆ ವಾಹನಗಳಲ್ಲಿ ಕಾರ್ಬನ್ ಮುಕ್ತ ವಾತಾವರಣವನ್ನು ನಿರ್ಮಾಣ ಮಾಡುವುದಾಗಿದೆ.
ಈ ನಿಟ್ಟಿನಲ್ಲಿ ಬಾಷ್ ಗರಿಷ್ಟ ಮಟ್ಟದಲ್ಲಿ ಪವರ್‌ಟ್ರೇನ್ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುತ್ತಿದೆ. ಈ ಮೂಲಕ ಹವಾಮಾನ ಬದಲಾವಣೆ ಮತ್ತು ಇಂಧನದ ದಕ್ಷ ಬಳಕೆಯ ಬಳಕೆಯಂತಹ ಸವಾಲುಗಳಿಗೆ ಪರಿಹಾರ ಒದಗಿಸುವತ್ತ ಗಮನಹರಿಸಿದೆ.
ಹಗುರ ಎಲೆಕ್ಟ್ರಿಕ್ ವಾಹನಗಳಿಗೆ ಆದ್ಯತೆ
ಬಾಷ್ ಹಗುರ ಎಲೆಕ್ಟ್ರಿಕ್ ವಾಹನಗಳಿಗೆ 1 ರಿಂದ 20 ಕೆಡಬ್ಲ್ಯೂ ಸಾಮರ್ಥ್ಯದ ಎಂಜಿನ್‌ಗಳನ್ನು ತಯಾರು ಮಾಡುತ್ತಿದೆ. ಮೋಟಾರ್, ಕಂಟ್ರೋಲ್ ಯೂನಿಟ್, ಬ್ಯಾಟರಿ ಮತ್ತು ಇನ್ನಿತರೆ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಿದೆ.
ಎಲೆಕ್ಟ್ರಾನಿಕ್ ಬ್ಯಾಟರಿ ಸೆನ್ಸಾರ್
ಎಲೆಕ್ಟ್ರಾನಿಕ್ ಬ್ಯಾಟರಿ ಸೆನ್ಸಾರ್ (ಇಬಿಎಸ್) 12-ವಿ ಲೆಡ್ -ಆಸಿಡ್ ಬ್ಯಾಟರಿಗಳ ಅಸ್ತಿತ್ವದ ಮಾಹಿತಿಗಳನ್ನು ಇದು ನೀಡುತ್ತದೆ. ಈ ಇಬಿಎಸ್ ಎಲೆಕ್ಟ್ರಿಕಲ್-ಪವರ್ ಮ್ಯಾನೇಜ್‌ಮೆಂಟ್ (ಇಇಎಂ) ಸಿಸ್ಟಂ ಜಾರಿಗೆ ಅವಕಾಶ ಮಾಡಿಕೊಡುತ್ತದೆ.


Click it and Unblock the Notifications