ಭಾರತದಲ್ಲಿ ಸುಪ್ರಸಿದ್ಧ ಕಾರು ಸಂಗ್ರಾಹಕರಲ್ಲಿ ಯೊಹಾನ್ ಪೂನಾವಾಲಾ ಕೂಡಾ ಒಬ್ಬರಾಗಿದ್ದಾರೆ. ಇವರು ಆಗ್ಗಾಗೆ ವಿಶೇಷತೆಯುಳ್ಳ ಮತ್ತು ಅತಿ ದುಬಾರಿ ಕಾರುಗಳ ಖರೀದಿಗಳಿಂದಲೇ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಪುಣೆಯ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಸೈರಸ್ ಪೂನವಾಲಾ ಅವರ ಸೋದರಳಿಯರಾಗಿರುವ ಯೊಹಾನ್ ಪೂನಾವಾಲಾ ಅವರು 100 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ ವಿಶೇಷ ಕಾರುಗಳನ್ನು ಹೊಂದಿದ್ದಾರೆ.
ಯೊಹಾನ್ ಪೂನಾವಾಲಾ ಅವರ ಸಂಗ್ರಹದಲ್ಲಿಈಗಾಗಲೇ ಹಲವಾರು ಐತಿಹಾಸಿಕ ಕಾರುಗಳನ್ನು ಹೊಂದಿದ್ದು, ಇವರು ದಿವಂಗತ ಬ್ರಿಟನ್ ರಾಣಿ ಎಲಿಜಬೆತ್ ಅವರ ರೇಂಜ್ ರೋವರ್ ಎಸ್‌ಯುವಿಯನ್ನು ಖರೀದಿಸಿದ್ದರಿಂದ ಅವರು ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಯೊಹಾನ್ ಪೂನವಾಲಾ ಅವರು ಬ್ರಿಟಿಷ್ ಇತಿಹಾಸದ ಅನನ್ಯ ಭಾಗವಾಗಿರುವ ರಾಣಿ ಎಲಿಜಬೆತ್ ಅವರ ಕಾರನ್ನು ಬ್ರಾಮ್ಲಿ ಹರಾಜುದಾರರು ಹರಾಜಿಗೆ ಹಾಕಿದ ನಂತರ 2.25 ಕೋಟಿ ರೂ.ಗಿಂತ ಹೆಚ್ಚಿನ ರಿಸರ್ವ್ ಬೆಲೆಯೊಂದಿಗೆ ಖರೀದಿಸಿದರು. ಈ ಮೂಲಕ ಯೊಹಾನ್ ಹರಾಜು ಪ್ರಕ್ರಿಯೆಯನ್ನು ತಪ್ಪಿಸಿ, ಖಾಸಗಿಯಾಗಿ ಕಾರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದಾರೆ.

2016 ರ ರೇಂಜ್ ರೋವರ್ SDV8 ಆಟೋಬಯೋಗ್ರಫಿ LWB ಎಡಿಷನ್ ಆಗಿದ್ದು, ಲೋಯಿರ್ ಬ್ಲ್ಯೂ ಬಣ್ಣದ ಕಾರನ್ನು ರಾಜಮನೆತನದ ಬಳಕೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿ, ವಿಶಿಷ್ಟ ಮಾರ್ಪಾಡುಗಳನ್ನು ಮಾಡಲಾಗಿದೆ. ಯೊಹಾನ್ ಪೂನಾವಾಲಾ ಅವರು ಖರೀದಿಸಿ ರೇಂಜ್ ರೋವರ್ ಕಾರು ಅಪರೂಪವಾದ ವಾಹನವಾಗಿದ್ದರೂ, ಇದು ಅವರ ಸಂಗ್ರಹದಲ್ಲಿರುವ ಕಾರುಗಳ ಪೈಕಿ ಹೆಚ್ಚು ದುಬಾರಿಯಾಗಿರುವುದಲ್ಲ. ಹಲವು ಕಾರುಗಳ ಒಡೆಯರಾಗಿರುವ ಇವರು ಖಾಸಗಿ ಹೆಲಿಕಾಪ್ಟರ್‌ನ್ನು ಹೊಂದಿದ್ದಾರೆ.
ತಮ್ಮ ಕುಟುಂಬ ಹೊಂದಿದ್ದ ಚೆವಿ ಕಾರಿನೊಂದಿಗೆ ಯೊಹಾನ್ ಪೂನಾವಲಾ ಅವರ ಕಾರುಗಳ ಮೇಲಿನ ಗೀಳು ಚಿಕ್ಕ ವಯಸ್ಸಿನಲ್ಲಿ ಪ್ರಾರಂಭವಾಯಿತು. ಅವರ ಕುಟುಂಬವು ಹೊಸ ಎತ್ತರಕ್ಕೆ ಏರಿದಂತೆ ಯೊಹಾನ್ ಅವರ ಗ್ಯಾರೇಜ್ ಕೂಡ ದೊಡ್ಡದಾಗಿ ಮತ್ತಷ್ಟು ಉತ್ತಮವಾಯಿತು. ಯೋಹನ್ ತಮ್ಮ ಕಾರುಗಳ ಮೇಲೆ ಅವರ ಹೆಸರಿನ ಮೊದಲಕ್ಷರಗಳಾದ 'YZP' ಇರುವುದನ್ನು ಇಷ್ಟಪಡುತ್ತಾರೆ. ಸಿರಿವಂತ ಉದ್ಯಮಿಯಾಗಿರುವ ಇವರು ವಿವಿಧ ರೀತಿಯ ಕಾರುಗಳನ್ನುಸಂಗ್ರಹವನ್ನು ಹೊಂದಿದ್ದು, ಇವುಗಳಲ್ಲಿ ಭಾರತದಂತಹ ದೇಶದಲ್ಲಿ ಸಾಕಷ್ಟು ಅಪರೂಪವಾಗಿರುವ ಕಾರುಗಳು ಕೂಡಾ ಇವೆ. ಯೊಹಾನ್ ಪೂನಾವಾಲಾ ಒಡೆತನದಲ್ಲಿ ಅಪರೂಪ ಮತ್ತು ವಿಶೇಷವಾದ ಕಾರುಗಳ ಪೈಕಿ ಬೆಂಟ್ಲಿ ಬೆಂಟೈಗಾ, ಲ್ಯಾಂಡ್ ರೋವರ್ ಡಿಫೆಂಡರ್, ಫೆರಾರಿ 488 ಪಿಸ್ತಾ ಸ್ಪೈಡರ್, ರೋಲ್ಸ್ ರಾಯ್ಸ್ ಫ್ಯಾಂಟಮ್, ಲಂಬೋರ್ಘಿನಿ ಗಲ್ಲಾರ್ಡೊ ಸೇರಿವೆ.
ತಮ್ಮ ದುಬಾರಿ ಅಭಿರುಚಿಯನ್ನು ಪೂರೈಸುವುದು ಹೇಗೆ? ಮತ್ತು ಹಣ ಎಲ್ಲಿಂದ? ಎಂದು ಆಶ್ಚರ್ಯಪಟ್ಟರೆ, ಯೊಹಾನ್ ಅವರು ಇಂಜಿನಿಯರಿಂಗ್ ಗ್ರೂಪ್ ಮತ್ತು ಎಲ್-ಒ-ಮ್ಯಾಟಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷರಾಗಿದ್ದು, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನಲ್ಲಿ ಷೇರುದಾರರೂ ಆಗಿದ್ದಾರೆ. ಇದಲ್ಲದೇ ಯೊಹಾನ್ ಸ್ಟಡ್ ಫಾರ್ಮ್ಸ್ ಮತ್ತು ರೇಸಿಂಗ್ ಮತ್ತು ಬ್ರೀಡಿಂಗ್ ಸಂಸ್ಥೆಯ ನಿರ್ದೇಶಕರೂ ಆಗಿದ್ದಾರೆ.

ಯೊಹಾನ್ ಅವರು ಬಿಲಿಯನೇರ್ ಬ್ಯುಸಿನೆಸ್ ಟೈಕೂನ್ ಆಗಿದ್ದ ಝವರಾಯ್ ಪೂನಾವಾಲ ಮತ್ತು ಬೆಹ್ರೋಜ್ ದಂಪತಿಯ ಪುತ್ರರಾಗಿದ್ದಾರೆ. ಝವರಾಯ್ ಅವರು 1966ರಲ್ಲಿ ತಮ್ಮ ಸಹೋದರ ಸೈರಸ್ ಪೂನವಾಲ್ಲಾ ಅವರೊಂದಿಗೆ ಬಯೋಫಾರ್ಮಾಸ್ಯುಟಿಕಲ್ಸ್ ಸಂಸ್ಥೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾವನ್ನು ಸಹ-ಸ್ಥಾಪಿಸಿದ್ದರು.
ಹಾರ್ಸ್-ರೇಸಿಂಗ್ ಕಮ್ಯೂನಿಟಿ ಯಲ್ಲಿ ಯೊಹಾನ್ ಪೂನಾವಾಲಾ ಅವರು ಪ್ರಸಿದ್ದರಾಗಿದ್ದು, ಅಮೇರಿಕಾ, ಹಾಂಗ್ ಕಾಂಗ್, ಸಿಂಗಾಪುರ್, ದುಬೈ, ಮತ್ತು ಮಲೇಷಿಯಾದಂತಹ ಅನೇಕ ದೇಶಗಳಲ್ಲಿ ಗೆದ್ದು ತಮ್ಮದೇ ಛಾಪು ಮೂಡಿಸಿರುವ ಅನೇಕ ಚಾಂಪಿಯನ್ ಕುದುರೆಗಳನ್ನು ಪೂನಾವಾಲಾ ಸ್ಟಡ್ ಫಾರ್ಮ್ಸ್ ರಫ್ತು ಮಾಡಿದೆ. ಪ್ರಸ್ತುತ, ಪೂನಾವಲ್ಲ ಕುಟುಂಬದ ನಿವ್ವಳ ಮೌಲ್ಯವು 27 ಬಿಲಿಯನ್ ಡಾಲರ್‌ಗಳಿಗಿಂತ ಹೆಚ್ಚು ಇದೆ.
More From GoodReturns

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Biggest Airport: ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಸಂಚಾರಕ್ಕೆ ಸಿದ್ಧ; 45 ದಿನದೊಳಗೆ ಆರಂಭ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications