ಖಾಸಗೀಕರಣಕ್ಕೆ ಒಳಪಟ್ಟ ಬಳಿಕ ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್) ಅಸ್ಸಾಂ ನುಮಾಲಿಗಡ ಸಂಸ್ಕರಣ ಘಟಕದ ಸಂಪೂರ್ಣ ಪಾಲನ್ನು ಆಯಿಲ್ ಇಂಡಿಯಾ ಲಿಮಿಟೆಡ್ ಮತ್ತು ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್‌ಗೆ 9,876 ಕೋಟಿ ರೂ.ಗೆ ಮಾರಾಟ ಮಾಡುವುದಾಗಿ ಪ್ರಕಟಿಸಿದೆ.
ಅಸ್ಸಾಂ ನುಮಾಲಿಗಡ ತೈಲ ಸಂಸ್ಕರಣಾ ಘಟಕದ ಮಾರಾಟವು ಭಾರತದ ಎರಡನೇ ಅತಿದೊಡ್ಡ ಇಂಧನ ರೀಟೇಲ್ ಸಂಸ್ಥೆಯಾಗಿರುವ ಬಿಪಿಸಿಎಲ್ ಖಾಸಗೀಕರಣಕ್ಕೆ ದಾರಿ ಮಾಡಿಕೊಡುತ್ತದೆ.
ನುಮಾಲಿಗಡ ರಿಫೈನರಿ ಲಿಮಿಟೆಡ್‌ನ್ನು (ಎನ್‌ಆರ್‌ಎಲ್) ಸರ್ಕಾರವು ಸಾರ್ವಜನಿಕ ವಲಯದಲ್ಲಿ ಉಳಿಸಿಕೊಳ್ಳಲು ನಿರ್ಧರಿಸಿದೆ. ಅದರ ಭಾಗವಾಗಿ ಬಿಪಿಸಿಎಲ್ ತನ್ನ ಎಲ್ಲಾ ಶೇಕಡಾ 61.65ರಷ್ಟು ಪಾಲುದಾರಿಕೆಯನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿದೆ.

ಆಯಿಲ್ ಇಂಡಿಯಾ ಲಿಮಿಟೆಡ್, ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ಹಾಗೂ ಅಸ್ಸಾಂನ ಸರ್ಕಾರ ಪಾಲುದಾರಿಕೆ ಪಡೆಯಲು ಆಸಕ್ತಿ ವ್ಯಕ್ತಪಡಿಸಿದ್ದು, ಬಿಪಿಸಿಎಲ್ ಮಂಡಳಿಯು ಸೋಮವಾರ ಮಾರಾಟಕ್ಕೆ ಸಮ್ಮತಿಸಿದೆ.
"ಮಾರ್ಚ್ 1, 2021 ರಂದು ನಡೆದ ಸಭೆಯಲ್ಲಿ ಬಿಪಿಸಿಎಲ್ ನಿರ್ದೇಶಕರ ಮಂಡಳಿ, ಎನ್‌ಆರ್‌ಎಲ್‌ನಲ್ಲಿ ಬಿಪಿಸಿಎಲ್ ಹೊಂದಿರುವ 445.35 ಕೋಟಿ ಮೊತ್ತದ ಸಂಪೂರ್ಣ ಷೇರುಗಳನ್ನು ಒಐಎಲ್ ಮತ್ತು ಇಐಎಲ್ ಒಕ್ಕೂಟಕ್ಕೆ ಮತ್ತು ಅಸ್ಸಾಂ ಸರ್ಕಾರಕ್ಕೆ ಮಾರಾಟ ಮಾಡುವ ಪ್ರಸ್ತಾಪವನ್ನು ಅಂಗೀಕರಿಸಿದೆ" ಎಂದು ಸಂಸ್ಥೆಯು ಷೇರು ವಿನಿಮಯ ಕೇಂದ್ರಗಳಿಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದೆ.
ಒಟ್ಟು ಪರಿಗಣನೆಯು 9,875.96 ಕೋಟಿ ರೂ. ಒಐಎಲ್ ಮತ್ತು ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್‌ನ ಒಕ್ಕೂಟವು ಶೇಕಡಾ 49 ರಷ್ಟು ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆಯಿದೆ ಮತ್ತು ಉಳಿದ 13.65 ಶೇಕಡಾವನ್ನು ಅಸ್ಸಾಂ ಸರ್ಕಾರಕ್ಕೆ ಮಾರಾಟ ಮಾಡಲಾಗುವುದು.
ಎನ್‌ಆರ್‌ಎಲ್ ಅಸ್ಸಾಂನಲ್ಲಿ ವಾರ್ಷಿಕ 3 ಮಿಲಿಯನ್ ಟನ್ ತೈಲ ಸಂಸ್ಕರಣಾಗಾರವನ್ನು ನಿರ್ವಹಿಸುತ್ತಿದೆ. ಒಐಎಲ್ ಪ್ರಸ್ತುತ ಎನ್‌ಆರ್‌ಎಲ್‌ನಲ್ಲಿ ಶೇ 26ರಷ್ಟು ಷೇರುಗಳನ್ನು ಹೊಂದಿದ್ದರೆ, ಅಸ್ಸಾಂ ಸರ್ಕಾರವು ಶೇಕಡಾ 12.35 ರಷ್ಟನ್ನು ಹೊಂದಿದೆ.
ಇನ್ನು ಬಿಪಿಸಿಎಲ್ ತೈಲ ಸಂಸ್ಕರಣಾ ಘಟಕ ಮಾರಾಟ ಸುದ್ದಿ ಹೊರಬಿದ್ದ ಬಳಿಕ ಇಂದು ಕಂಪನಿಯ ಷೇರುಗಳು ಶೇಕಡಾ 3ಕ್ಕೂ ಅಧಿಕ ಏರಿಕೆಗೊಂಡು 52 ವಾರಗಳ ಗರಿಷ್ಠ 482.40 ರೂಪಾಯಿಗೆ ತಲುಪಿದೆ.


Click it and Unblock the Notifications