ರಾಜ್ಯ ಸರ್ಕಾರ ಇತ್ತೀಚೆಗೆ ಬಿಪಿಎಲ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ, ಒಂದಷ್ಟು ನಿಯಮಗಳನ್ನ ಬಿಗಿ ಮಾಡಿದೆ. ಅರ್ಹ ಕುಟುಂಬಗಳು ಮಾತ್ರ ರೇಷನ್ ಮತ್ತು ಕಲ್ಯಾಣ ಸೌಲಭ್ಯ ಪಡೆಯಲಿ ಅನ್ನೋದು ಸರ್ಕಾರದ ಉದ್ದೇಶ. ಹೀಗಾಗಿ ಬಿಪಿಎಲ್ ಕಾರ್ಡುದಾರರಿಗಾಗಿ ಸರ್ಕಾರ ಒಂದಷ್ಟು ಅಪ್ಡೇಟ್ ಮಾಡಿದೆ. ಅಪ್ಡೇಟ್ ಆಗಿರುವ ಮಾರ್ಗಸೂಚಿಗಳಲ್ಲಿ ಹೊಸ ಸದಸ್ಯರನ್ನ ಸೇರಿಸೋದು, ಈಗಾಗ್ಲೇ ಇರುವ ಸದಸ್ಯರನ್ನ ಅಳಿಸೋದು ಮತ್ತು ಪಡಿತರ ಚೀಟಿಯನ್ನ ತಿದ್ದುಪಡಿ ಮಾಡೋದು ಮಾತ್ರ ಇದೆ.

ಈಗ ಕೆಲವರಿಗೆ ಇರೋ ಗೊಂದಲ ಏನು ಅಂದ್ರೆ, ಹೊಸ ಸದಸ್ಯರನ್ನ ಬಿಪಿಎಲ್ ಕಾರ್ಡ್‌ಗೆ ಸೇರಿಸೋದು ಹೇಗೆ ಅನ್ನೋದು. ಹೊಸದಾಗಿ ಮದುವೆಯಾದವರು, ತಮ್ಮ ಪತ್ನಿಯ ಹೆಸರು ಸೇರಿಸೋದು, ಅಥವಾ ಮಗುವಿನ ಹೆಸರನ್ನ ಸೇರಿಸೋ ಅಂಥವರಿಗೆ ಈ ಗೊಂದಲ ಇರುತ್ತೆ. ಅಂಥವರಿಗಾಗಿಯೇ ಈ ಲೇಖನ.
ಹೊಸ ಸದಸ್ಯರನ್ನು ಸೇರಿಸಲು ಬೇಕಾದ ದಾಖಲೆಗಳು:
ಇನ್ನು ನೀವು ನಿಮ್ಮ ಕುಟುಂಬದ ಸದಸ್ಯರನ್ನು ಪಡಿತರ ಚೀಟಿಗೆ ಸೇರಿಸಬೇಕು ಅಂದ್ರೆ, ಅದಕ್ಕೆ ಸರಿಯಾದ ದಾಖಲೆಗಳು ಬೇಕೇ ಬೇಕು. ಇಲ್ಲವಾದ್ರೆ ನಿಮ್ಮ ಅರ್ಜಿ ರಿಜೆಕ್ಟ್ ಆಗುತ್ತೆ. ಹಾಗಾದ್ರೆ ಯಾವ್ಯಾವ ದಾಖಲೆಗಳು ಬೇಕು ಅನ್ನೋದನ್ನ ಇಲ್ಲಿ ಮೊದಲು ತಿಳಿಯಿರಿ.
ಮಕ್ಕಳಿಗಾಗಿ: 6 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಜಾತಿ ಪ್ರಮಾಣಪತ್ರ ಮತ್ತು ಆದಾಯ ಪ್ರಮಾಣಪತ್ರ ಅಗತ್ಯ. 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಜನನ ಪ್ರಮಾಣಪತ್ರ ಕಡ್ಡಾಯ.
ಹೆಚ್ಚುವರಿ ದಾಖಲೆಗಳು: ಪೋಷಕರ ಆಧಾರ್ ಕಾರ್ಡ್ ನಕಲು ಮತ್ತು ಅಸ್ತಿತ್ವದಲ್ಲಿರುವ ಬಿಪಿಎಲ್ ಪಡಿತರ ಚೀಟಿ ನಕಲು.
ಅಧಿಕಾರಿಗಳು ಮೂಲ ದಾಖಲೆಗಳನ್ನು ಪರಿಶೀಲಿಸಿ ಮಾತ್ರ ಮಕ್ಕಳನ್ನು ಪಡಿತರ ಚೀಟಿಗೆ ಸೇರಿಸುತ್ತಾರೆ.
ವಿವಾಹಿತರಿಗೆ ಬೇಕಾದ ದಾಖಲೆಗಳು:
ಇನ್ನು ಹೊಸದಾಗಿ ಮದುವೆಯಾದ ದಂಪತಿಗಳು ತಮ್ಮ ಪಡಿತರ ಚೀಟಿಗೆ ಹೆಂಡತಿಯ ಹೆಸರನ್ನು ಸೇರಿಸಲು ವಿವಾಹ ನೋಂದಣಿ ಪ್ರಮಾಣಪತ್ರ ಸಲ್ಲಿಸಬೇಕು. ಹೆಂಡತಿಯ ಹೆಸರು ಹೊಸ ಪಡಿತರ ಚೀಟಿಗೆ ಸೇರಿಸೋಕೆ, ಮೊದಲು ಹಿಂದಿನ ಪಡಿತರ ಚೀಟಿಯಿಂದ ಆ ಹೆಸರನ್ನು ತೆಗೆದುಹಾಕಿರಬೇಕು. ಹಾಗೂ ಹಳೆಯ ಚೀಟಿಯಿಂದ ಅಳಿಸುವಿಕೆ ಪ್ರಮಾಣಪತ್ರ ನೀಡಬೇಕು.
ಇತರ ತಿದ್ದುಪಡಿಗಳು:
ಬಿಪಿಎಲ್ ಕಾರ್ಡ್‌ನಲ್ಲಿ ಹೊಸ ಸದಸ್ಯರನ್ನು ಸೇರಿಸುವುದರ ಹೊರತಾಗಿ, ಕೆಲವೊಂದು ತಿದ್ದುಪಡಿಗಳು ಅಥವಾ ನವೀಕರಣಗಳು ಸಹ ಮಾಡಬಹುದು:
- ಹೆಸರು ತಿದ್ದುಪಡಿ
- ಫೋಟೋ ನವೀಕರಣ
- ವಿಳಾಸ ಬದಲಾವಣೆ
- ಸದಸ್ಯರನ್ನು ಅಳಿಸುವುದು
- ಪಡಿತರ ಅಂಗಡಿ ಬದಲಾವಣೆ
- ಕುಟುಂಬದ ಮುಖ್ಯಸ್ಥರ ಬದಲಾವಣೆ
ಪ್ರತಿ ಬದಲಾವಣೆಗೆ ಮಾನ್ಯ ದಾಖಲೆಗಳು ಕಡ್ಡಾಯ, ಅಧಿಕಾರಿಗಳು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸುತ್ತಾರೆ.
ಅರ್ಜಿ ಸಲ್ಲಿಸುವ ಮಾರ್ಗಗಳು:
ಅರ್ಜಿಗಳನ್ನು ಈ ಮಾರ್ಗಗಳ ಮೂಲಕ ಸಲ್ಲಿಸಬಹುದು:
- ಬೆಂಗಳೂರು ಒನ್ ಕೇಂದ್ರಗಳು
- ಅಧಿಕೃತ ಸೈಬರ್ ಕೇಂದ್ರಗಳು
- ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್
- ಅರ್ಜಿಯೊಂದಿಗೆ ಮೂಲ ದಾಖಲೆಗಳ ನಕಲು ಸಹ ತೆಗೆದುಕೊಂಡು ಹೋಗಬೇಕು. ಪರಿಶೀಲನೆ ವೇಳೆ ಮೂಲ ದಾಖಲೆಗಳು ಲಭ್ಯವಿಲ್ಲದಿದ್ದರೆ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
ನೀವು ಪ್ರಮುಖವಾಗಿ ತಿಳಿಯಬೇಕಿರುವ ಮಾಹಿತಿ ಏನಂದ್ರೆ, ಹೊಸ BPL ಕಾರ್ಡ್ ಪ್ರಸ್ತುತ ನೀಡಲಾಗುತ್ತಿಲ್ಲ. ಪ್ರಕ್ರಿಯೆ ಹೊಸ ಸದಸ್ಯ ಸೇರಿಸುವುದು, ಅಸ್ತಿತ್ವದಲ್ಲಿರುವ ಸದಸ್ಯರನ್ನು ಅಳಿಸುವುದು, ಮತ್ತು ತಿದ್ದುಪಡಿಗಳನ್ನು ಮಾಡುವುದು ಮಾತ್ರ ಸೀಮಿತ. ದಾಖಲಾತಿ ಇಲ್ಲದ ಅರ್ಜಿಗಳನ್ನು ಪರಿಗಣಿಸಲ್ಲ.
ಈ ನಿಯಮಗಳ ಉದ್ದೇಶ ಪಡಿತರ ವ್ಯವಸ್ಥೆಯಲ್ಲಿ ಪಾರದರ್ಶಕತೆ, ನಿಖರತೆ ಮತ್ತು ನ್ಯಾಯತೀರ್ಮಾನ ಸುಧಾರಿಸುವುದು. ಜಾತಿ, ಆದಾಯ, ಜನನ ಮತ್ತು ವಿವಾಹ ಪ್ರಮಾಣಪತ್ರಗಳನ್ನು ಕಡ್ಡಾಯಗೊಳಿಸುವ ಮೂಲಕ, ಅರ್ಹ ಕುಟುಂಬಗಳು ಮಾತ್ರ ಸಬ್ಸಿಡಿ ಆಹಾರ ಧಾನ್ಯಗಳು ಮತ್ತು ಕಲ್ಯಾಣ ಸೌಲಭ್ಯಗಳನ್ನು ಪಡೆಯುತ್ತವೆ. ಈ ನಿಯಮಗಳು ನಕಲಿ ಕಾರ್ಡ್‌ಗಳನ್ನು ತೆಗೆದುಹಾಕಲು ಸಹ ಸಹಾಯಮಾಡುತ್ತವೆ.


Click it and Unblock the Notifications