ನವದೆಹಲಿ, ಏಪ್ರಿಲ್ 4: ಬ್ರಿಗೇಡ್ ಎಂಟರ್‌ಪ್ರೈಸಸ್ ಲಿಮಿಟೆಡ್ ಬೆಂಗಳೂರಿನಲ್ಲಿ ₹340 ಕೋಟಿ ಮೌಲ್ಯದ ಕಚೇರಿ ಕಟ್ಟಡ ನಿರ್ಮಿಸಲು ಯುನೈಟೆಡ್ ಆಕ್ಸಿಜನ್ ಕಂಪನಿ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಜಂಟಿ ಅಭಿವೃದ್ಧಿ ಒಪ್ಪಂದಕ್ಕೆ (ಜೆಡಿಎ) ಸಹಿ ಹಾಕಿದೆ.
ವೈಟ್‌ಫೀಲ್ಡ್‌ನಲ್ಲಿರುವ ಈ ಸ್ಥಳವು 3 ಲಕ್ಷ ಚದರ ಅಡಿ ಗುತ್ತಿಗೆ ಪ್ರದೇಶವನ್ನು ಹೊಂದಿದ್ದು, ಸುಮಾರು ₹ 340 ಕೋಟಿಗಳ ಒಟ್ಟು ನಿರ್ಮಾಣ ಮೌಲ್ಯವನ್ನು (ಜಿಡಿವಿ) ಹೊಂದಿರುತ್ತದೆ. ಬಹುಬೇಡಿಕೆ ಹೊಂದಿರುವ ಕಚೇರಿ ಗುತ್ತಿಗೆ ಮಾರುಕಟ್ಟೆಯಾಗಿ ಬೆಂಗಳೂರು ಮುಂದುವರಿದಿದೆ. ಸದ್ಯ ವೈಟ್‌ಫೀಲ್ಡ್ ಮೈಕ್ರೋ ಮಾರುಕಟ್ಟೆಯಲ್ಲಿ ಬೇಡಿಕೆಯು ಸುಧಾರಿಸುತ್ತಿದೆ.

ಈ ಪ್ರಾಪರ್ಟಿಯ ಪ್ರಧಾನ ಸ್ಥಳ, ಮೆಟ್ರೋ ಸಂಪರ್ಕ ಮತ್ತು ಪ್ರಾಪರ್ಟಿಯ ಮುಂಚೂಣಿಯಲ್ಲಿರುವ ನವೀನ ಮತ್ತು ಸುಸ್ಥಿರ ವಿನ್ಯಾಸವನ್ನು ಗಮನಿಸಿದರೆ ಈ ಯೋಜನೆಯು ಉನ್ನತ ಶ್ರೇಣಿಯ ಕೆಲಸದ ಸೌಲಭ್ಯಗಳನ್ನು ಬಯಸುವ ವೃತ್ತಿಪರರಿಗೆ ಅಗತ್ಯತೆಗಳೊಂದಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ ಎಂದು ನಾವು ನಂಬುತ್ತೇವೆ ಎಂದು ಬ್ರಿಗೇಡ್ ಎಂಟರ್‌ಪ್ರೈಸಸ್ ಲಿಮಿಟೆಡ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ನಿರುಪಾ ಶಂಕರ್ ಹೇಳಿದ್ದಾರೆ.
ಯುನೈಟೆಡ್ ಆಕ್ಸಿಜನ್ ಕಂಪನಿ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಅಶ್ವಿನ್ ಪುರಸ್ವಾನಿ, "ನಿವಾಸಿಗಳು, ಹೂಡಿಕೆದಾರರು ಮತ್ತು ಸೂಕ್ತ ಸಾಮರ್ಥ್ಯವನ್ನು ಹೊಂದಿರುವ ಈ ಯೋಜನೆ ಭಾಗವಾಗಿ ಬ್ರಿಗೇಡ್ ಗ್ರೂಪ್‌ನೊಂದಿಗೆ ಪಾಲುದಾರಿಕೆಯನ್ನು ನಾವು ಎದುರು ನೋಡುತ್ತಿದ್ದೇವೆ" ಎಂದು ಹೇಳಿದ್ದಾರೆ. 1986 ರಲ್ಲಿ ಸ್ಥಾಪಿಸಲಾದ ಬ್ರಿಗೇಡ್ ಗ್ರೂಪ್ ವೈವಿಧ್ಯಮಯ ರಿಯಲ್ ಎಸ್ಟೇಟ್ ಯೋಜನೆಯಲ್ಲಿ 83 ಮಿಲಿಯನ್ ಚದರ ಅಡಿಗಳಷ್ಟು ಅಭಿವೃದ್ಧಿ ಹೊಂದಿದ ಜಾಗದ 280 ಕ್ಕೂ ಹೆಚ್ಚು ಕಟ್ಟಡಗಳನ್ನು ಪೂರ್ಣಗೊಳಿಸಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications