ರಿಷಿ ಸುನಕ್ ಗೆಲುವಿನ ಎಫೆಕ್ಟ್; ಗರಿಗೆದರಿದ ಬ್ರಿಟನ್ ಬಾಂಡ್‌ಗಳು

ಲಂಡನ್, ಅ. 25: ಭಾರತ ಮೂಲದ ರಿಷಿ ಸುನಕ್ ಬ್ರಿಟನ್ ದೇಶದ ಪ್ರಧಾನಿಯಾದ ಬಳಿಕ ಅಲ್ಲಿನ ಉದ್ಯಮ ವಲಯ ಗರಿಗೆದರಿ ನಿಂತಿದೆ. ಸಂಕಷ್ಟಕ್ಕೆ ಸಿಲುಕಿರುವ ಬ್ರಿಟನ್ ದೇಶದ ಆರ್ಥಿಕತೆಗೆ ರಿಷಿ ಸುನಕ್ ಭರವಸೆಯ ಆಶಾಕಿರಣವಾಗಿ ಕಾಣುತ್ತಿರುವಂತಿದೆ. ಇದಕ್ಕೆ ಸೂಚಕವೆಂಬಂತೆ ಬ್ರಿಟನ್‌ನ ಬಾಂಡ್‌ಗಳು ನಿನ್ನೆಯಿಂದ ಲಾಭದ ಹಂತದಲ್ಲಿವೆ.

ಲಿಜ್ ಟ್ರುಸ್ ರಾಜೀನಾಮೆ ನೀಡಿದ ಬಳಿಕ ತೆರವಾದ ಪ್ರಧಾನಿ ಸ್ಥಾನಕ್ಕೆ ರೇಸ್‌ನಲ್ಲಿ ಪೆನಿ ಮಾರ್ಡಾಂಡ್ ವಿರುದ್ಧ ರಿಷಿ ಸುನಕ್ ಗೆಲುವು ಪಡೆದಿದ್ದಾರೆ. ಆದರೆ, ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಈ ರೇಸ್‌ನಿಂದ ಹೊರಹೋಗಲು ನಿರ್ಧರಿಸುತ್ತಿದ್ದಂತೆಯೇ ರಿಷಿ ಸುನಕ್ ಗೆಲುವು ಬಹುತೇಕ ಖಚಿತವಾಗಿ ಹೋಗಿತ್ತು. ಆಗಲೇ ಯುಕೆ ಬಾಂಡ್‌ಗಳು ಫಳಫಳಿಸತೊಡಗಿದ್ದವು.

ಹಿಂದೆ ಬೋರಿಸ್ ಜಾನ್ಸನ್ ಪ್ರಧಾನಿಯಾಗಿದ್ದಾಗ ರಿಷಿ ಸುನಕ್ ಹಣಕಾಸು ಸಚಿವರಾಗಿದ್ದರು. ಆಗ ಅವರು ಆರ್ಥಿಕತೆಯನ್ನು ನಿರ್ವಹಿಸಿದ ರೀತಿ ಪ್ರಶಂಸೆಗೆ ಒಳಗಾಗಿತ್ತು. ಈಗ ಅವರೇ ಪ್ರಧಾನಿ ಆಗುತ್ತಿರುವುದರಿಂದ ಬ್ರಿಟನ್ ಅನ್ನು ಆರ್ಥಿಕ ದುಸ್ಥಿತಿಯಿಂದ ಹೊರತರುವ ಸಾಮರ್ಥ್ಯ ಅವರಲ್ಲಿದೆ ಎಂಬ ನಂಬಿಕೆ ಹೂಡಿಕೆದಾರರದ್ದಾಗಿದೆ.

ಬೋರಿಸ್ ಜಾನ್ಸನ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಲಿಜ್ ಟ್ರುಸ್ ಕನ್ಸರ್ವೇಟಿವ್ ಪಕ್ಷದ ನಾಯಕಿಯಾಗಿ ಮತ್ತು ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಆದರೆ, ತೆರಿಗೆ ವಿನಾಯಿತಿ, ಪರಿಹಾರ ಪ್ಯಾಕೇಜ್ ಇತ್ಯಾದಿ ಯೋಜನೆಗಳ ಮೂಲಕ ಜನಸಾಮಾನ್ಯರಿಗೆ ಸಂಕಷ್ಟ ನಿವಾರಿಸುವ ಅವರ ಪ್ರಯತ್ನ ಫಲಪ್ರದವಾಗುವ ಬದಲು ಮುಳುವಾಯಿತು. ದೇಶದ ಆರ್ಥಿಕತೆ ಇನ್ನಷ್ಟು ಅಧಃಪತನಕ್ಕೆ ದೂಡಲಾಗುತ್ತಿತ್ತು. ಬಾಂಡ್ ಮಾರುಕಟ್ಟೆ ನಿಸ್ತೇಜಗೊಂಡು ತೀರಾ ಹೆಚ್ಚಿನ ದರ ಪಡೆದಿದ್ದವು. ಈಗ ರಿಷಿ ಸುನಕ್ ಪ್ರಧಾನಿಯಾಗಿ ಅಯ್ಕೆಯಾದ ಬಳಿಕ ಹೂಡಿಕೆದಾರರ ವಿಶ್ವಾಸ ಹೆಚ್ಚಿದೆ ಎಂಬುದು ತಜ್ಞರ ಅನಿಸಿಕೆ.

ಏನಿದು ಬಾಂಡ್‌ಗಳು?

ಏನಿದು ಬಾಂಡ್‌ಗಳು?

ಆರ್ಥಿಕ ಮಾರುಕಟ್ಟೆಯಲ್ಲಿ ಬಾಂಡ್ ಎಂದರೆ ಸಾಲಪತ್ರ. ಒಂದು ಕಂಪನಿಯು ಬ್ಯಾಂಕಿನಿಂದ ಸಾಲ ಪಡೆಯುವ ಬದಲು ನೇರವಾಗಿ ಜನರಿಂದ ಸಾಲ ಪಡೆಯುವ ದಾರಿಯೇ ಬಾಂಡ್. ಬಾಂಡ್ ಅನ್ನು ಜನರು ಖರೀದಿಸಿದರೆ ನಿರ್ದಿಷ್ಟ ಅವಧಿಯ ಬಳಿಕ ನಿರ್ದಿಷ್ಟ ಬಡ್ಡಿಯೊಂದಿಗೆ ಹಣ ವಾಪಸ್ ಬರುತ್ತದೆ.

ಸಾಲಪತ್ರಗಳನ್ನು ಸರ್ಕಾರ ಕೂಡ ನೀಡುತ್ತದೆ, ಕಾರ್ಪೊರೇಟ್ ಕಂಪನಿಗಳೂ ನೀಡುತ್ತವೆ. ಕಾರ್ಪೊರೇಟ್ ಸಂಸ್ಥೆಗಳು ನೀಡುವ ಸಾಲಪತ್ರಗಳಿಗೆ ಕಾರ್ಪೊರೇಟ್ ಬಾಂಡ್‌ಗಳೆನ್ನುತ್ತಾರೆ. ಸರ್ಕಾರ ನೀಡುವುದು ಗವರ್ನ್ಮೆಂಟ್ ಬಾಂಡ್‌ಗಳು.

ಒಂದು ಸರ್ಕಾರಿ ಬಾಂಡ್‌ನ ಬಡ್ಡಿ ದರ ಹೆಚ್ಚಾದಷ್ಟೂ ಆರ್ಥಿಕ ದುಸ್ಥಿತಿಯ ಸೂಚಕವೆಂಬಂತೆ ಭಾವಿಸಲಾಗುತ್ತದೆ. ಲಿಜ್ ಟ್ರುಸ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ 2 ವರ್ಷದ ಸರ್ಕಾರಿ ಬಾಂಡ್‌ನ ರಿಟರ್ನ್ ವ್ಯಾಲ್ಯೂ ಅಥವಾ ಯೀಲ್ಡ್ ಶೇ. 3.80 ಇತ್ತು. ರಿಷಿ ಸುನಕ್ ಪ್ರಧಾನಿಯಾಗಿ ಅಯ್ಕೆಯಾಗುವುದು ಖಚಿತವಾಗುತ್ತಿರುವಂತೆಯೇ ಎರಡು ವರ್ಷದ ಯೀಲ್ಡ್ ಶೇ. 3.43ಕ್ಕೆ ಇಳಿದಿದೆ.

ಆರ್ಥಿಕ ಮುಗ್ಗಟ್ಟಿನಲ್ಲಿ ಯುಕೆ

ಆರ್ಥಿಕ ಮುಗ್ಗಟ್ಟಿನಲ್ಲಿ ಯುಕೆ

ಯುಕೆ ಈಗ ಐತಿಹಾಸಿಕ ಆರ್ಥಿಕ ದುಸ್ಥಿತಿಯ ಹಂತದಲ್ಲಿದೆ. ಹಣದುಬ್ಬರ ಶೇ. 13ರ ಗಡಿದಾಟಿ ಹೋಗಿದೆ. ಇದು ಕಳೆದ ಹಲವು ದಶಕಗಳಲ್ಲೇ ಅತಿ ಹೆಚ್ಚಿನ ಹಣದುಬ್ಬರ ಮಟ್ಟ ಇದೆ. ಕೋವಿಡ್ ಸಂದರ್ಭದಲ್ಲಿ ಹಣಕಾಸು ಸಚಿವರಾಗಿ ರಿಷಿ ಸುನಕ್ ಅವರಿಂದ ಆರ್ಥಿಕ ನಿರ್ವಹಣೆ ಚೆನ್ನಾಗಿತ್ತೆಂಬ ಮಾತಿದೆ. ಈಗ ಪ್ರಧಾನಿಯಾಗಿರುವುದರಿಂದ ಅವರು ದೇಶದ ಆರ್ಥಿಕತೆಯನ್ನು ಸಂಕಷ್ಟದಿಂದ ಪಾರು ಮಾಡಬಹುದು ಎಂಬ ನಂಬಿಕೆ ಜನರಲ್ಲಿ ಇದ್ದಂತಿದೆ.

ಭಾರತ ಮೂಲದ ರಿಷಿ ಸುನಕ್

ಭಾರತ ಮೂಲದ ರಿಷಿ ಸುನಕ್

ರಿಷಿ ಸುನಕ್ ಕುಟುಂಬ ಭಾರತ ಮೂಲದ್ದು. ಇವರ ಅಜ್ಜನ ಕುಟುಂಬ ಸ್ವಾತಂತ್ರ್ಯ ಪೂರ್ವದಲ್ಲಿ ಈಗಿನ ಪಾಕಿಸ್ತಾನದ ರಾವಲ್ಪಿಂಡಿಯಿಂದ ಸೌತ್ ಆಫ್ರಿಕಾಗೆ ವಲಸೆ ಹೋಗಿತ್ತು. ಅಲ್ಲಿಂದ ಯುಕೆಗೆ ಹೋಗಿ ನೆಲಸಿತ್ತು. ರಿಷಿ ಸುನಕ್ ಬ್ರಿಟನ್‌ನಲ್ಲೇ ಹುಟ್ಟಿದವರು. ಭಾರತದ ಐಟಿ ಕಂಪನಿ ಇನ್ಫೋಸಿಸ್‌ನ ಸಂಸ್ಥಾನಕ ಎನ್ ಆರ್ ನಾರಾಯಣಮೂರ್ತಿ ಅವರ ಮಗಳನ್ನು ವಿವಾಹವಾಗುವ ಮೂಲಕ ರಿಷಿ ಸುನಕ್ ಭಾರತೀಯರಿಗೆ ಚಿರಪರಿಚಿತರೆನಿಸಿದ್ದಾರೆ. ಒಂದು ಮಟ್ಟಿಗೆ ಅವರು ಕರ್ನಾಟಕದ ಅಳಿಯ ಎಂಬುದು ಕನ್ನಡಿಗರಿಗೆ ಹೆಮ್ಮೆ.

ಇದೀಗ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿರುವ ಭಾರತ ಮೂಲದ ಮೊದಲ ವ್ಯಕ್ತಿ ಮಾತ್ರವಲ್ಲ ಮೊದಲ ಬಿಳಿಯೇತರ ವ್ಯಕ್ತಿಯೂ ಹೌದು. ೪೩ ವರ್ಷದ ರಿಷಿ ಸುನಕ್ ಕಳೆದ ಎರಡು ಶತಮಾನದಲ್ಲಿ ಬ್ರಿಟನ್ ಪ್ರಧಾನಿಯಾದ ಅತೀ ಕಿರಿಯ ವ್ಯಕ್ತಿ ಎಂಬ ಶ್ರೇಯಸ್ಸಿಗೂ ಬಾಜನರಾಗಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+