ಭಾರತೀಯ ಪ್ರಮುಖ ಎರಡು ಷೇರುಪೇಟೆಗಳಾದ ರಾಷ್ಟ್ರೀಯ ಸ್ಟಾಕ್ ಎಕ್ಸ್ಚೇಂಜ್ ಆಫ್ ಇಂಡಿಯಾ (ಎನ್‌ಎಸ್‌ಇ), ಮುಂಬೈ ಷೇರುಪೇಟೆ (ಬಿಎಸ್‌ಇ) ಜುಲೈ 21ರಂದು ಬಕ್ರೀದ್ ಪ್ರಯುಕ್ತ ಮುಚ್ಚಲ್ಪಡಲಿವೆ.
ಲೋಹ ಮತ್ತು ಬೆಳ್ಳಿ ಸೇರಿದಂತೆ ಸಗಟು ಸರಕು ಮಾರುಕಟ್ಟೆ ಸಹ ಮುಚ್ಚಲ್ಪಟ್ಟಿವೆ. ಇದರ ಜೊತೆಗೆ ವಿದೇಶಿ ವಿನಿಮಯ ಮತ್ತು ಕಮೋಡಿಟಿ ಫ್ಯೂಚರ್ಸ್ ವ್ಯಾಪಾರ ಚಟುವಟಿಕೆಗಳು ಇರುವುದಿಲ್ಲ.

ಜುಲೈ 20ರಂದು ಮಂಗಳವಾರ ಸೆನ್ಸೆಕ್ಸ್ 354.89 ಪಾಯಿಂಟ್ಸ್ ಅಥವಾ ಶೇಕಡಾ 0.68ರಷ್ಟು ಇಳಿಕೆಗೊಂಡು 52,198.51 ಪಾಯಿಂಟ್ಸ್ ತಲುಪಿದೆ. ಎನ್‌ಎಸ್ಇ ಸೂಚ್ಯಂಕ ನಿಫ್ಟಿ 120.30 ಪಾಯಿಂಟ್ಸ್ ಅಥವಾ ಶೇಕಡಾ 0.76 ಪಾಯಿಂಟ್ಸ್ ಕುಸಿದು 15632.10 ಪಾಯಿಂಟ್ಸ್ ಮುಟ್ಟಿದೆ.
ಬಿಎಸ್‌ಇಯಲ್ಲಿ, ಎಲ್ಲಾ ವಲಯ ಸೂಚ್ಯಂಕಗಳು ವಿದ್ಯುತ್, ರಿಯಾಲ್ಟಿ, ಮೆಟಲ್, ಹೆಲ್ತ್‌ಕೇರ್, ಆಟೋ ಮತ್ತು ಬ್ಯಾಂಕ್ ಶೇಕಡಾ 1 ರಿಂದ 2.4 ರಷ್ಟು ಕುಸಿದವು.
ಹಿಂಡಾಲ್ಕೊ, ಇಂಡಸ್ಇಂಡ್ ಬ್ಯಾಂಕ್, ಟಾಟಾ ಸ್ಟೀಲ್, ಎನ್‌ಟಿಪಿಸಿ ಮತ್ತು ಭಾರ್ತಿ ಏರ್‌ಟೆಲ್ ನಿಫ್ಟಿಯಲ್ಲಿ ನಷ್ಟಗೊಂಡ ಪ್ರಮುಖ ಷೇರುಗಳಾಗಿದೆ. ಏಷ್ಯನ್ ಪೇಂಟ್ಸ್, ಅಲ್ಟ್ರಾಟೆಕ್ ಸಿಮೆಂಟ್, ಎಚ್‌ಯುಎಲ್, ಗ್ರೇಸಿಯಂ ಮತ್ತು ಮಾರುತಿ ಸುಜುಕಿ ಲಾಭಗಳಿಸಿದ ಷೇರುಗಳಾಗಿವೆ.


Click it and Unblock the Notifications