For Quick Alerts
ALLOW NOTIFICATIONS  
For Daily Alerts

ಇಂದು ಶ್ರೀರಾಮ ನವಮಿ: ಬಿಎಸ್‌ಇ, ಎನ್‌ಎಸ್‌ಇ ಮುಚ್ಚಲ್ಪಟ್ಟಿವೆ

|

ಶ್ರೀರಾಮ ನವಮಿಯ ಪ್ರಯುಕ್ತ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್‌ಎಸ್‌ಇ) ಮತ್ತು ಮುಂಬೈ ಷೇರುಪೇಟೆ (ಬಿಎಸ್‌ಇ) ಏಪ್ರಿಲ್ 21 ರಂದು ಮುಚ್ಚಲ್ಪಟ್ಟಿವೆ.

 

ಲೋಹ ಮತ್ತು ಬೆಳ್ಳಿ ಸೇರಿದಂತೆ ಕಮೋಡಿಟಿ ಮಾರುಕಟ್ಟೆಗಳು ಸಹ ಮುಚ್ಚಲ್ಪಡುತ್ತವೆ. ವಿದೇಶೀ ವಿನಿಮಯ ಮತ್ತು ಸರಕು ಭವಿಷ್ಯದ ಮಾರುಕಟ್ಟೆಗಳಲ್ಲಿ ಯಾವುದೇ ವ್ಯಾಪಾರ ಚಟುವಟಿಕೆ ಇರುವುದಿಲ್ಲ.

 
ಇಂದು ಶ್ರೀರಾಮ ನವಮಿ: ಬಿಎಸ್‌ಇ, ಎನ್‌ಎಸ್‌ಇ ಮುಚ್ಚಲ್ಪಟ್ಟಿವೆ

ಏಪ್ರಿಲ್ 20ರಂದು ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ 243.62 ಪಾಯಿಂಟ್ ಅಥವಾ ಶೇಕಡಾ 0.51ರಷ್ಟು ಇಳಿಕೆಗೊಂಡು 47,705.80 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 63.10 ಪಾಯಿಂಟ್ ಅಥವಾ ಶೇಕಡಾ 0.44ರಷ್ಟು ಇಳಿಕೆಗೊಂಡು 14,296.40 ಪಾಯಿಂಟ್ಸ್‌ ತಲುಪಿದೆ.

ಮಂಗಳವಾರ (ಏಪ್ರಿಲ್ 20) ಗರಿಷ್ಠ ಲಾಭದ ಬುಕ್ಕಿಂಗ್‌ನೊಂದಿಗೆ ಎನ್‌ಎಸ್‌ಇ ಸೂಚ್ಯಂಕವು 14,296 ಪಾಯಿಂಟ್‌ಗೆ ಕೊನೆಗೊಂಡಿತು.

ಬಿಎಸ್‌ಇಯಲ್ಲಿ ಐಟಿ ಸೂಚ್ಯಂಕ ಶೇ 1 ರಷ್ಟು ಕುಸಿಯಿತು. ಬ್ಯಾಂಕಿಂಗ್ ಮತ್ತು ಎಫ್‌ಎಂಸಿಜಿ ಷೇರುಗಳು ಹೆಚ್ಚು ಮಾರಾಟ ಕಂಡುಬಂದಿದೆ. ಮತ್ತೊಂದೆಡೆ, ಹೆಲ್ತ್‌ಕೇರ್, ಕ್ಯಾಪಿಟಲ್ ಗೂಡ್ಸ್, ಮೆಟಲ್ ಮತ್ತು ರಿಯಾಲ್ಟಿ ಸ್ಟಾಕ್‌ಗಳಲ್ಲಿ ಖರೀದಿ ಹೆಚ್ಚಿದೆ.

ಇನ್ನು ಭಾರತೀಯ ರೂಪಾಯಿ ಆರಂಭಿಕ ಲಾಭವನ್ನು ಕಳೆದುಕೊಂಡಿದ್ದಲ್ಲದೆ ಪ್ರತಿ ಡಾಲರ್‌ಗೆ 74.88 ಕ್ಕೆ ತಲುಪಿದೆ.

English summary

BSE, NSE Shut Today On Account Of Ram Navami

The National Stock Exchange of India (NSE) and the BSE will remain closed on April 21 on account of Ram Navami.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X