BSNL: ಹೊಸ IPL ರೀಚಾರ್ಜ್ ಪ್ಲಾನ್ ಬಿಡುಗಡೆ; ಬರೋಬ್ಬರಿ 251GB ಡೇಟಾ.. ಅಗ್ಗದ ಬೆಲೆ, ವ್ಯಾಲಿಡಿಟಿ ಎಷ್ಟು ಗೊತ್ತಾ?

ಐಪಿಎಲ್‌ ಪ್ರಿಯರಿಗೆ ಬಿಎಸ್‌ಎನ್‌ಎಲ್ (BSNL) ಖುಷಿ ಸುದ್ದಿಯನ್ನು ಕೊಟ್ಟಿದೆ. ಕೇವಲ 251 ರೂ.ಗೆ ಹೊಸ ಹೊಸ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ರಿಲೀಸ್ ಮಾಡಿದೆ.

ಹೌದು, ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್‌ಎನ್ಎಲ್ (ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಹೊಸ ಮತ್ತು ಕೈಗೆಟುಕುವ ರೀಚಾರ್ಜ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಬೆಲೆ 251 ರೂ. ಆಗಿದೆ. ಐಪಿಎಲ್ 2025 ಆವೃತ್ತಿಗಾಗಿ ಈ ಯೋಜನೆ ತರಲಾಗಿದೆ.ಈ ಮೂಲಕ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.

BSNL: ಹೊಸ IPL ರೀಚಾರ್ಜ್ ಪ್ಲಾನ್ ಬಿಡುಗಡೆ; ಬರೋಬ್ಬರಿ 251GB ಡೇಟಾ

ಬಿಎಸ್‌ಎನ್‌ಎಲ್‌ನ ಈ ಹೊಸ ರೀಚಾರ್ಜ್ ಯೋಜನೆಯನ್ನು ವಿಶೇಷ ಸುಂಕ ವೋಚರ್ (STV) ಆಗಿ ನೀಡಲಾಗುತ್ತದೆ. ವಿಶೇಷವಾಗಿ, ಈ ವೋಚರ್ ಯಾವುದೇ ಸಕ್ರಿಯ ಸೇವಾ ಮಾನ್ಯತೆ ನೀಡುವುದಿಲ್ಲ. ಅಂದರೆ ಈ ವೋಚರ್ ಪಡೆಯಲು, ಬಳಕೆದಾರರು ಈಗಾಗಲೇ ತಮ್ಮ ಸಂಖ್ಯೆಯಲ್ಲಿ ಸಕ್ರಿಯ ಮೂಲ ಯೋಜನೆಯನ್ನು ಹೊಂದಿರಬೇಕು. ಬಿಎಸ್‌ಎನ್‌ಎಲ್‌ನ 251 ರೂ. ಯೋಜನೆಯಲ್ಲಿ ನಿಮಗೆ ಏನು ಸಿಗುತ್ತದೆ? ಇದು ಒಂದು ಸ್ಮಾರ್ಟ್ ಆಯ್ಕೆಯೇ? ಮತ್ತು ರೀಚಾರ್ಜ್ ಮಾಡುವುದು ಹೇಗೆ? ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಐಪಿಎಲ್ 2025 ಆವೃತ್ತಿಗಾಗಿ ಹೊಸ ಪ್ಲಾನ್ ಬಿಡುಗಡೆ

ಮೊದಲೇ ಹೇಳಿದಂತೆ ಐಪಿಎಲ್ 2025 (IPL 251) ಆವೃತ್ತಿಗಾಗಿ ಹೊಸ ಪ್ಲಾನ್ ಪರಿಚಯಿಸಲಾಗಿದೆ. ಮೊಬೈಲ್‌ನಲ್ಲಿ ಸ್ಟ್ರೀಮಿಂಗ್ ಮೂಲಕ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಬಯಸುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ವಿಶೇಷವಾಗಿ ತರಲಾಗಿದೆ. ಕಂಪನಿಯು ಡೇಟಾ ಬಳಕೆಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಗಣಿಸಿದೆ. ಹೀಗಾಗಿ ರೀಚಾರ್ಜ್ ಆಯ್ಕೆಯನ್ನು ಲಭ್ಯವಾಗುವಂತೆ ಮಾಡಿದೆ. ಇದರಿಂದ ಬಳಕೆದಾರರು ಯಾವುದೇ ಅಡೆತಡೆಯಿಲ್ಲದೆ ಐಪಿಎಲ್‌ ಪಂದ್ಯಗಳನ್ನು ವೀಕ್ಷಣೆಯನ್ನು ಮಾಡಬಹುದು.

ಬಿಎಸ್‌ಎನ್‌ಎಲ್‌ 251 ರೂ. ಐಪಿಎಲ್‌ STV ಯೋಜನೆ: ಇದರಿಂದ ಏನು ಪ್ರಯೋಜನ?

ಬಿಎಸ್‌ಎನ್‌ಎಲ್‌ 251 ರೂ. ರೀಚಾರ್ಜ್ ವೋಚರ್‌ ಬಳಕೆದಾರರಿಗೆ ಒಟ್ಟು 251GB ಹೈ ಸ್ಪೀಡ್ ಡೇಟಾವನ್ನು ನೀಡುತ್ತದೆ. ಇದು 60 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಅಂದರೆ ಪ್ರತಿದಿನ ಸರಾಸರಿ 4GB ಡೇಟಾವನ್ನು ನೀವು ಬಳಸಬಹುದು. 251GB ಮಿತಿಯನ್ನು ತಲುಪಿದ ಬಳಿಕ,ಇಂಟರ್ನೆಟ್ ವೇಗವು 40 Kbps ಗೆ ಕಡಿಮೆಯಾಗುತ್ತದೆ. ಇದು ಸಾಮಾನ್ಯ ಬ್ರೌಸಿಂಗ್ ಅನ್ನು ಅನುಮತಿಸುತ್ತದೆ. ಆದರೆ, ವಿಡಿಯೊ ಸ್ಟ್ರೀಮಿಂಗ್ ಅಥವಾ ಹೆಚ್ಚು ಡೇಟಾ ಬಯಸುವ ಡೌನ್‌ಲೋಡ್‌ ಕಷ್ಟಕರವಾಗಿದೆ.

ರೀಚಾರ್ಜ್ ವೋಚರ್‌ ಡೇಟಾಗೆ ಮಾತ್ರ ಸೀಮಿತವಾಗಿದೆ. ಇದರಲ್ಲಿ ಧ್ವನಿ ಕರೆಗಳು ಅಥವಾ ಎಸ್‌ಎಂಎಸ್ (SMS) ಸೇವೆ ಇರುವುದಿಲ್ಲ. ಇದು ಡೇಟಾ ಆಡ್ ಆನ್ ವೋಚರ್ ಆಗಿದೆ. ಇದಕ್ಕೆ ಯಾವುದೇ ವ್ಯಾಲಿಡಿಟಿ ಇರುವುದಿಲ್ಲ. ಬಳಕೆದಾರರ ಅಸ್ತಿತ್ವದಲ್ಲಿರುವ ಮೂಲ ಯೋಜನೆ ಸಕ್ರಿಯವಾಗಿದ್ದರೆ ಮಾತ್ರ, ಈ ಹೊಸ ಯೋಜನೆಯ ಲಾಭ ಪಡೆಯಬಹುದು.

ಬಿಎಸ್‌ಎನ್‌ಎಲ್‌ ಐಪಿಎಲ್ 251 ರೀಚಾರ್ಜ್ ವೋಚರ್‌ ಸ್ಮಾರ್ಟ್ ಆಯ್ಕೆಯೇ?

ಐಪಿಎಲ್‌ ಸೇರಿದಂತೆ ಗ್ರಾಹಕರು ಹೆಚ್ಚು ಬಯಸುವ ಕಾರ್ಯಕ್ರಮಗಳಲ್ಲಿ ಸ್ಟ್ರೀಮಿಂಗ್ ಡೇಟಾ ಬಳಕೆ ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, 251GB ಡೇಟಾ ಆಕರ್ಷಕ ಮತ್ತು ಬಜೆಟ್ ಸ್ನೇಹಿ ಆಯ್ಕೆಯಾಗಿದೆ. ವಿಶೇಷವಾಗಿ ಜಿಯೋಸಿನಿಮಾ, ಹಾಟ್‌ಸ್ಟಾರ್ ಮುಂತಾದ ಓಟಿಟಿ (OTT) ಪ್ಲಾಟ್‌ಫಾರ್ಮ್‌ಗಳಲ್ಲಿ ಲೈವ್ ಪಂದ್ಯಗಳನ್ನು ವೀಕ್ಷಿಸಲು ಇಷ್ಟಪಡುವ ಬಳಕೆದಾರರಿಗೆ ಇದು ಉತ್ತಮವಾಗಿದೆ.

ಡೇಟಾ ಖಾಲಿಯಾದರೂ ಇಂಟರ್ನೆಟ್ ನಿಲ್ಲಲ್ಲ

ಮೊದಲೇ ಹೇಳಿದಂತೆ ಇದು ಡೇಟಾ ಆಡ್ ಆನ್ ವೋಚರ್ ಆಗಿದೆ. ಈ ಯೋಜನೆಯಲ್ಲಿ ವಾಯ್ಸ್ ಕಾಲ್ ಅಥವಾ ಎಸ್‌ಎಂಎಸ್ ಸೌಲಭ್ಯ ನೀಡುವುದಿಲ್ಲ. ನಿಮ್ಮ ಸಂಖ್ಯೆಯಲ್ಲಿ ಈಗಾಗಲೇ ಸಕ್ರಿಯ ಮೂಲ ಯೋಜನೆ ಇದ್ದರೆ ಮಾತ್ರ ಇದನ್ನು ಬಳಸಬಹುದು. ಡೇಟಾ ಮಿತಿ ಮುಗಿದ ನಂತರವೂ ಇಂಟರ್ನೆಟ್ ನಿಲ್ಲುವುದಿಲ್ಲ. ಆದರೆ ಇಂಟರ್ನೆಟ್ ವೇಗ 40 Kbpsಗೆ ಸೀಮಿತವಾಗಿರುತ್ತದೆ.

ಹೊಸ ಪ್ಲಾನ್ ರೀಚಾರ್ಜ್ ಮಾಡಲು ಹೀಗೆ ಮಾಡಿ

ಬಿಎಸ್‌ಎನ್‌ಎಲ್‌ನ ಈ ಹೊಸ ಐಪಿಎಲ್ 251 ವೋಚರ್ ಅನ್ನು ಕಂಪನಿಯ (BSNL) ಅಧಿಕೃತ ವೆಬ್‌ಸೈಟ್ ಮೂಲಕ ರೀಚಾರ್ಜ್ ಮಾಡಬಹುದು. ಇದಲ್ಲದೆ ಮೊಬೈಲ್ ಆಪ್ ಅಥವಾ ಯಾವುದೇ ಅಧಿಕೃತ ಚಿಲ್ಲರೆ ವ್ಯಾಪಾರಿಗಳಿಂದಲೂ ಸಹ ರೀಚಾರ್ಜ್ ಮಾಡಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+