ಜಿಯೋ, ಏರ್‌ಟೆಲ್, ವಿಐಗಳ ಸ್ಪರ್ಧೆಗಳಿಂದ ಮಂಕಾಗಿರುವ ಬಿಎಸ್‌ಎನ್‌ಎಲ್ ಮೈಕೊಡವಿ ಮೇಲೇಳುವ ಪ್ರಯತ್ನದಲ್ಲಿದೆ. ಭಾರತೀಯ ಸಂಚಾರ ನಿಗಮ ಇದೀಗ ಎರಡು ಹೊಸ ಪ್ರಮುಖ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ. ಒಂದು ವರ್ಷ ವ್ಯಾಲಿಡಿಟಿ ಇರುವ 1198 ರೂಗಳ ಒಂದು ಪ್ಲಾನ್, ಮತ್ತು 3 ತಿಂಗಳು ವ್ಯಾಲಿಡಿಟಿ ಇರುವ 439 ರೂಗಳ ಇನ್ನೊಂದು ಪ್ಲಾನ್ ಅನ್ನು ಬಿಎಸ್‌ಎನ್‌ಎಲ್ ಪ್ರಕಟಿಸಿದೆ.
ಇವಲ್ಲದೇ 30 ದಿನಗಳ ವ್ಯಾಲಿಡಿಟಿ ಇರುವ 269 ರೂ ಮತ್ತು 90 ದಿನಗಳ ವ್ಯಾಲಿಡಿಟಿ ಇರುವ 769 ರೂಗಳ ಎಂಟರ್ಟೈನ್ಮೆಂಟ್ ಮತ್ತು ಗೇಮಿಂಗ್ ವೋಚರ್‌ಗಳನ್ನೂ ಬಿಡುಗಡೆ ಮಾಡಲಾಗಿದೆ. ಇದು ಬಿಎಸ್‌ಎನ್‌ಎಲ್ ತನ್ನ ಪ್ರೀಪೇಡ್ ಗ್ರಾಹಕರಿಗೆ ನೀಡಿರುವ ದೀಪಾವಳಿ ಆಫರ್ ಎನ್ನಲಾಗಿದೆ.
ರೂ 1198 ಪ್ಲಾನ್
ನಿಮಗೆ ಮೂಲ ಸೌಲಭ್ಯಗಳೊಂದಿಗೆ ಸುದೀರ್ಘ ಅವಧಿ ವ್ಯಾಲಿಡಿಟಿ ಇರುವ ಪ್ಲಾನ್ ಬೇಕೆಂದರೆ ಬಿಎಸ್‌ಎನ್‌ಎಲ್‌ನಲ್ಲಿ ಇದೆ. 1198 ರೂಪಾಯಿಗೆ ಒಂದು ವರ್ಷ ವ್ಯಾಲಿಡಿಟಿ ಇದೆ. ಪ್ರತೀ ತಿಂಗಳು 3ಜಿಬಿ ಡಾಟಾ, 300 ನಿಮಿಷ ಟಾಕ್ ಟೈಮ್, 30 ಎಸ್ಸೆಮ್ಮೆಸ್ ಸಿಗುತ್ತದೆ.
ಹೆಚ್ಚು ಇಂಟರ್ನೆಟ್ ಉಪಯೋಗಿಸದವರಿಗೆ ಬಿಎಸ್‌ಎನ್‌ಎಲ್‌ನ ಈ ಪ್ಲಾನ್ ಹೇಳಿ ಮಾಡಿಸಿದ್ದು. ಒಂದು ವೇಳೆ. ನಿಮಗೆ ಹೆಚ್ಚು ಇಂಟರ್ನೆಟ್ ಅವಶ್ಯಕತೆ ಬೇಕೆನಿಸಿದಾಗೆಲ್ಲಾ ಕೆಲವೇ ರೂಪಾಯಿ ತೆತ್ತು ಡಾಟಾ ಟಾಪ್ ಅಪ್ ತೆಗೆದುಕೊಳ್ಳಬಹುದು.
ರೂ 439 ಪ್ಲಾನ್
ಮೊಬೈಲ್‌ನಲ್ಲಿ ಹೆಚ್ಚು ಮಾತನಾಡುವ ಅಗತ್ಯ ಇರುವ ಜನರಿಗೆ ಹೇಳಿ ಮಾಡಿಸಿದ ಪ್ಲಾನ್ ಅನ್ನು ಬಿಎಸ್‌ಎನ್‌ಎಲ್ ನೀಡಿದೆ. 439 ರೂಪಾಯಿಯ ಈ ಪ್ಲಾನ್ 90 ದಿನ, ಅಂದರೆ ಮೂರು ತಿಂಗಳ ಕಾಲ ವ್ಯಾಲಿಡ್ ಆಗಿರುತ್ತದೆ. ವಿಶೇಷ ಎಂದರೆ ಇದು ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಕೊಡುತ್ತದೆ. ಎಷ್ಟು ಬೇಕಾದರೂ ನೀವು ಮಾತನಾಡಬಹುದು. 300 ಎಸ್ಸೆಮ್ಮೆಸ್ ಕಳುಹಿಸಬಹುದು. ಆದರೆ, ಈ ಪ್ಲಾನ್‌ನಲ್ಲಿ ಡಾಟಾ ಇರುವುದಿಲ್ಲ. ಇಂಟರ್ನೆಟ್‌ನ ಅಗತ್ಯ ಇಲ್ಲದೇ, ಕೇವಲ ದೂರವಾಣಿ ಕರೆ ಮಾತ್ರ ಉಪಯೋಗಿಸಬೇಕೆನ್ನುವವರಿಗೆ ಒಳ್ಳೆಯ ಪ್ಲಾನ್ ಇದು. ತಿಂಗಳಿಗೆ 150 ರೂಪಾಯಿಗಿಂತ ಕಡಿಮೆ ದರಕ್ಕೆ ನಿಮಗೆ ಈ ಸೌಲಭ್ಯ ಸಿಗುತ್ತದೆ.
ಗೇಮಿಂಗ್ ವೋಚರ್ಸ್
ಇವುಗಳ ಜೊತೆಗೆ ಬಿಎಸ್‌ಎನ್‌ಎಲ್ ಎರಡು ಸ್ಪೆಷಲ್ ವೋಚರ್‌ಗಳನ್ನೂ ಬಿಡುಗಡೆ ಮಾಡಿದೆ. ಇವು ಮನರಂಜನೆ ಮತ್ತು ಗೇಮಿಗ್ ವೋಚರ್‌ಗಳು. 269 ರೂಪಾಯಿಯ ವೋಚರ್ 30 ದಿನಗಳವರೆಗೆ ವ್ಯಾಲಿಡಿಟಿ ಹೊಂದಿದ್ದು, ಇದು ಅನ್‌ಲಿಮಿಟೆಡ್ ಕಾಲ್, ದಿನಕ್ಕೆ 2ಜಿಬಿ ಡಾಟಾ, ದಿನಕ್ಕೆ 100 ಎಸ್ಸೆಮ್ಮೆಸ್ ಸೌಲಭ್ಯ ನೀಡುತ್ತದೆ. ಜೊತೆಗೆ ಎಷ್ಟು ಬೇಕಾದರು ನೀವು ಬಿಎಸ್‌ಎನ್‌ಎಲ್‌ನ ಟ್ಯೂನ್‌ಗಳನ್ನು ಡೌನ್‌ಲೋಡ್ ಮಾಡಬಹುದು. ಚಾಲೆಂಜಸ್ ಅರೇನಾ ಗೇಮ್‌ಗಳನ್ನು ಆಡಬಹುದು. ಇನ್ನೂ ಹಲವು ಎಂಟರ್ಟೈನ್ಮೆಂಟ್ ಸೌಲಭ್ಯಗಳನ್ನು ಈ ಪ್ಲಾನ್‌ನಿಂದ ನೀವು ಪಡೆಯಬಹುದು.
ಇನ್ನು, 769 ರೂಪಾಯಿಯ ವೋಚರ್ ಕೂಡ ಈ ಮೇಲಿನ ಎಲ್ಲಾ ಸೌಲಭ್ಯಗಳನ್ನು ನೀಡುತ್ತದೆ. ಆದರೆ, ವ್ಯಾಲಿಡಿಟಿ ಅವಧಿ ಮೂರು ತಿಂಗಳು ಇರುತ್ತದೆ. ನಿಮಗೆ ಸತತ ಮೂರು ತಿಂಗಳ ಕಾಲ ಇವೆಲ್ಲಾ ಸೌಲಭ್ಯ ಬೇಕೆಂದರೆ 769 ರೂಪಾಯಿಯ ಈ ವೋಚರ್ ವರ್ಕೌಟ್ ಆಗುತ್ತದೆ.


Click it and Unblock the Notifications