ಬಿಎಸ್ಎನ್ಎಲ್ (BSNL) ಖಾಸಗಿ ಕಂಪನಿಗಳೊಂದಿಗೆ ಸ್ಪರ್ಧಿಸಲು ಅಗ್ಗದ ಬೆಲೆಗಳು ಮತ್ತು ಉತ್ತಮ ಪ್ರಯೋಜನಗಳನ್ನು ನೀಡುವ ಬಜೆಟ್ ಸ್ನೇಹಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳು ಅಧಿಕ ಡೇಟಾ ಸೌಲಭ್ಯ ಒಳಗೊಂಡಿದೆ.ಈ ಯೋಜನೆಗಳ ಬೆಲೆ ಮತ್ತು ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ.
ಹೌದು,ಬಿಎಸ್‌ಎನ್ಎಲ್ ಇತ್ತೀಚಿಗೆ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ನೇರವಾಗಿ ಪೈಪೋಟಿ ನೀಡುತ್ತಿದೆ. ಇದರ ಭಾಗವಾಗಿ ಹಲವು ಯೋಜನೆಗಳನ್ನು ಪರಿಚಯಿಸುತ್ತಾ ಬಂದಿದೆ. ಈಗಾಗಲೇ ಕೆಲವು ಆಕರ್ಷಕ ಪ್ರೀಪೇಯ್ಡ್ ಪ್ಲಾನ್‌ಗಳನ್ನು ಬಿಡುಗಡೆ ಮಾಡುವ ಸೈ ಅನಿಸಿಕೊಂಡಿದೆ. ಟೆಲಿಕಾಂ ಉದ್ಯಮದಲ್ಲಿ 365 ದಿನಗಳಿಗಿಂತ ಹೆಚ್ಚಿನ ವ್ಯಾಲಿಡಿಟಿ ಯೋಜನೆಗಳನ್ನು ಹೊಂದಿರುವ ಏಕೈಕ ಕಂಪನಿ ಬಿಎಸ್‌ಎನ್ಎಲ್ ಆಗಿದೆ.

ಸರ್ಕಾರಿ ಸ್ವಾಮ್ಯದ BSNL, ಜಿಯೋ, ಏರ್‌ಟೆಲ್ ಮತ್ತು Vi ನಂತಹ ಖಾಸಗಿ ದೂರಸಂಪರ್ಕ ಸೇವಾ ಪೂರೈಕೆದಾರರಿಗೆ ಪೈಪೋಟಿ ಸ್ಪರ್ಧೆಯನ್ನು ನೀಡುತ್ತಿದೆ. ಖಾಸಗಿ ಕಂಪನಿಗಳು ತಮ್ಮ ಸುಂಕಗಳನ್ನು ಹೆಚ್ಚಿಸುತ್ತಿರುವುದರಿಂದ, ಮತ್ತೊಂದೆಡೆ, BSNL ಕೈಗೆಟುಕುವ ಯೋಜನೆಗಳ ಸರಣಿಯನ್ನು ನೀಡುವ ಮೂಲಕ ಗ್ರಾಹಕರನ್ನು ತನ್ನ ಕಡೆಗೆ ಸಳೆದುಕೊಂಡಿದೆ.
BSNLನ 400 ರೂ.ಗಳಿಗಿಂತ ಕಡಿಮೆ ಬೆಲೆಯ ಮತ್ತು 150 ದಿನಗಳವರೆಗೆ ವ್ಯಾಲಿಡಿಟಿ ಯೋಜನೆಯಾಗಿದೆ. ಈ ಯೋಜನೆ ಲಕ್ಷಾಂತರ ಬಳಕೆದಾರರಿಗೆ ಅನುಕೂಲವಾಗಿದೆ.
BSNLನ 397 ರೂ. ರೀಚಾರ್ಜ್ ಪ್ಲಾನ್ ಯೋಜನೆ
ಬಿಎಸ್‌ಎನ್ಎಲ್‌ನ 397 ರೂಪಾಯಿಗಳ ರೀಚಾರ್ಜ್ ಯೋಜನೆಯನ್ನು ನೀಡುತ್ತದೆ. ಈ ಯೋಜನೆಯು 150 ದಿನಗಳ ವ್ಯಾಲಿಡಿಟಿ ಇದೆ. ಉಚಿತ ಕರೆ, ಡೇಟಾ ಮತ್ತು SMS ನಂತಹ ಅಗತ್ಯ ಸೇವೆಗಳು ರೀಚಾರ್ಜ್ ಮಾಡುವುದನ್ನು ತಪ್ಪಿಸಲು ಬಯಸುವ ಬಳಕೆದಾರರಿಗೆ ಈ ಯೋಜನೆ ಸೂಕ್ತವಾಗಿದೆ ಎಂದೇ ಹೇಳಬಹುದು. ದೀರ್ಘಾವಧಿಯ ವ್ಯಾಲಿಡಿಟಿ ಇದ್ದು, ಬಜೆಟ್ ಸ್ನೇಹಿ ಆಯ್ಕೆಯಾಗಿದೆ.
ನಿಮ್ಮ ಸಿಮ್ ಅನ್ನು ಆಗಾಗ್ಗೆ ರೀಚಾರ್ಜ್ ಮಾಡುವುದರಿಂದ ನೀವು ಸುಸ್ತಾಗಿದ್ದರೆ, ಈ ಯೋಜನೆ ಸೂಕ್ತ ಎಂದೇ ಹೇಳಬಹುದು. ಇದು ನಿಮ್ಮ BSNL ಸಿಮ್ ಅನ್ನು ಐದು ತಿಂಗಳವರೆಗೆ ಹೆಚ್ಚುವರಿ ರೀಚಾರ್ಜ್‌ಗಳ ಅಗತ್ಯವಿಲ್ಲದೆ ಸಕ್ರಿಯವಾಗಿರಿಸುತ್ತದೆ.
ಬಿಎಸ್ಎನ್ಎಲ್ ನ 397 ರೂಪಾಯಿ ಯೋಜನೆಯಲ್ಲಿ ಏನೆಲ್ಲಾ ಸೌಲಭ್ಯಗಳಿವೆ?
ಉಚಿತ ಕರೆ: ಮೊದಲ 30 ದಿನಗಳವರೆಗೆ ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಉಚಿತ ಕರೆಗಳು. ಅದರ ನಂತರ, ಹೊರಹೋಗುವ ಕರೆಗಳು ನಿಲ್ಲುತ್ತವೆ, ಆದರೆ ಒಳಬರುವ ಕರೆಗಳು ಪೂರ್ಣ 150 ದಿನಗಳ ಮಾನ್ಯತೆಯವರೆಗೆ ಮುಂದುವರಿಯುತ್ತವೆ.
ದೈನಂದಿನ ಡೇಟಾ: ಮೊದಲ 30 ದಿನಗಳವರೆಗೆ ಪ್ರತಿದಿನ 2GB ಹೈ-ಸ್ಪೀಡ್ ಡೇಟಾ (ಒಟ್ಟು 60GB ಡೇಟಾ).
ಉಚಿತ SMS: ಮೊದಲ 30 ದಿನಗಳವರೆಗೆ ದಿನಕ್ಕೆ 100 ಎಂಎಮ್ಎಸ್‌ನ್ನು ಮಾಡಲು ಅವಕಾಶವಿರುತ್ತದೆ.
ದ್ವಿತೀಯ ಸಿಮ್ ಬಳಕೆದಾರರಿಗೆ ಉತ್ತಮ ಆಯ್ಕೆ
ಬಿಎಸ್ಎನ್ಎಲ್ ಅನ್ನು ಸೆಕೆಂಡರಿ ಸಿಮ್ ಆಗಿ ಬಳಸುವವರಿಗೆ ಮತ್ತು ಆಗಾಗ್ಗೆ ರೀಚಾರ್ಜ್ ಮಾಡುವ ಬಗ್ಗೆ ಚಿಂತಿಸಲು ಬಯಸದವರಿಗೆ ಈ ಯೋಜನೆ ವಿಶೇಷವಾಗಿ ಉಪಯುಕ್ತವಾಗಿದೆ. ಕರೆ ಮಾನ್ಯತೆಯೊಂದಿಗೆ, ಬಳಕೆದಾರರು ಪ್ರತಿ ತಿಂಗಳು ಹೆಚ್ಚುವರಿ ಹಣವನ್ನು ಖರ್ಚು ಮಾಡದೆ ತಮ್ಮ ಸಂಖ್ಯೆಯನ್ನು ಸಕ್ರಿಯವಾಗಿರಿಸಿಕೊಳ್ಳಬಹುದು.
ಬಿಎಸ್ಎನ್ಎಲ್ 485 ರೂ. ಪ್ರಿಪೇಯ್ಡ್ ಯೋಜನೆ
ಬಿಎಸ್ಎನ್ಎಲ್ 485 ರೂ.ಗಳ ಯೋಜನೆಯು (BSNL Rs 485 Plan) 80 ದಿನಗಳ ವ್ಯಾಲಿಡಿಟಿ ಹೊಂದಿದೆ. ನೀವು ಪ್ರತಿದಿನ 2GB ಡೇಟಾ ಪಡೆಯಬಹುದು. ನಿಮಗೆ 485 ರೂ. ಪ್ರಿಪೇಯ್ಡ್ ಯೋಜನೆಯಲ್ಲಿ ಒಟ್ಟು 160GB ಡೇಟಾ ಸೌಲಭ್ಯ ಸಿಗುತ್ತದೆ. ಇದಲ್ಲದೆ, ಈ ಯೋಜನೆಯಲ್ಲಿ ವಿವಿಧ ಪ್ರಯೋಜನಗಳು ಲಭ್ಯವಿದೆ. ಈ ಪ್ರಿಪೇಯ್ಡ್ ಯೋಜನೆಯು ಅನಿಯಮಿತ ಸ್ಥಳೀಯ, ಎಸ್‌ಟಿಡಿ ಮತ್ತು ರೋಮಿಂಗ್ ವಾಯ್ಸ್ ಕಾಲ್ ಸೌಲಭ್ಯ ಒಳಗೊಂಡಿದೆ. ನೀವು ಪ್ರತಿದಿನ 100 ಎಸ್‌ಎಂಎಸ್ ಸಹ ಪಡೆಯಬಹುದು
ದೀರ್ಘಾವಧಿಯ ಮಾನ್ಯತೆ ಮತ್ತು ಬಜೆಟ್ ಸ್ನೇಹಿ ಬೆಲೆಯೊಂದಿಗೆ, BSNL ನ 397 ರೂ. ಯೋಜನೆಯು ಸಂಪರ್ಕದಲ್ಲಿರುವಾಗ ಹಣವನ್ನು ಉಳಿಸಲು ಬಯಸುವ ಬಳಕೆದಾರರಿಗೆ ಒಂದು ಉತ್ತಮ ಆಯ್ಕೆಯಾಗಿದೆ. ಇದು ಆಗಾಗ್ಗೆ ರೀಚಾರ್ಜ್‌ಗಳ ತೊಂದರೆಯನ್ನು ಕಡಿಮೆ ಮಾಡುವುದಲ್ಲದೆ ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಹೆಚ್ಚಿಸುತ್ತದೆ. ಇನ್ನೂ ಪಾಕೆಟ್ ಸ್ನೇಹಿ ರೀಚಾರ್ಜ್ ಬಯಸುವವರಿಗೆ, BSNL ನ ಇತ್ತೀಚಿನ ಕೊಡುಗೆ ಸೂಕ್ತವಾಗಿರುತ್ತದೆ.


Click it and Unblock the Notifications