ಬಿಎಸ್ಎನ್ಎಲ್ (BSNL) ಖಾಸಗಿ ಕಂಪನಿಗಳೊಂದಿಗೆ ಸ್ಪರ್ಧಿಸಲು ಅಗ್ಗದ ಬೆಲೆಗಳು ಮತ್ತು ಉತ್ತಮ ಪ್ರಯೋಜನಗಳನ್ನು ನೀಡುವ ಪ್ರಿಪೇಯ್ಡ್ ಯೋಜನೆಗಳನ್ನು ತಂದಿದೆ. ಈ ಯೋಜನೆಗಳು ಅಧಿಕ ಡೇಟಾ ಸೌಲಭ್ಯ ಒಳಗೊಂಡಿದೆ.ಈ ಯೋಜನೆಗಳ ಬೆಲೆ ಮತ್ತು ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ.
ಹೌದು,ಬಿಎಸ್‌ಎನ್ಎಲ್ ಇತ್ತೀಚಿಗೆ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ನೇರವಾಗಿ ಪೈಪೋಟಿ ನೀಡುತ್ತಿದೆ. ಇದರ ಭಾಗವಾಗಿ ಹಲವು ಯೋಜನೆಗಳನ್ನು ಪರಿಚಯಿಸುತ್ತಾ ಬಂದಿದೆ. ಈಗಾಗಲೇ ಕೆಲವು ಆಕರ್ಷಕ ಪ್ರೀಪೇಯ್ಡ್ ಪ್ಲಾನ್‌ಗಳನ್ನು ಬಿಡುಗಡೆ ಮಾಡುವ ಸೈ ಅನಿಸಿಕೊಂಡಿದೆ.

ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆಯು ದೇಶದ ಕೆಲವು ಪ್ರಮುಖ ಸ್ಥಳಗಳಲ್ಲಿ 4G ಸೇವೆಗಳನ್ನು ಪ್ರಾರಂಭಿಸಿದೆ. ಕಂಪನಿಯು ಮುಂದಿನ ಕೆಲವು ತಿಂಗಳುಗಳಲ್ಲಿ ದೇಶಾದ್ಯಂತ 5G ಸೇವೆಗಳನ್ನು ನೀಡಲು ಸಜ್ಜಾಗಿದೆ. ಇದಲ್ಲದೆ, ಬಿಎಸ್ಎನ್ಎಲ್ 5G ಪ್ರಯೋಗಗಳು ಮತ್ತು ಲೈವ್ ಟಿವಿ ಚಾನೆಲ್ ಸೇರಿದಂತೆ ವಿವಿಧ ಉಪಕ್ರಮಗಳನ್ನು ಜಾರಿಗೆ ತರುತ್ತಿದೆ. ಈಗಾಗಲೇ ಬಿಎಸ್ಎನ್ಎಲ್ (BSNL) ಮೂರು ಅದ್ಭುತ ಪ್ರಿಪೇಯ್ಡ್ ಯೋಜನೆಗಳನ್ನು ತಂದಿದೆ. ಇವುಗಳು ಕೈಗೆಟುಕುವ ಬೆಲೆಯಲ್ಲಿ ಉತ್ತಮ ಪ್ರಯೋಜನಗಳನ್ನು ನೀಡುತ್ತವೆ. ಇವು ಗ್ರಾಹಕರಿಂದ ಮೆಚ್ಚುಗೆ ಪಡೆದಿವೆ.
ಬಿಎಸ್ಎನ್ಎಲ್ 485 ರೂ. ಪ್ರಿಪೇಯ್ಡ್ ಯೋಜನೆ
ಬಿಎಸ್ಎನ್ಎಲ್ 485 ರೂ.ಗಳ ಯೋಜನೆಯು (BSNL Rs 485 Plan) 80 ದಿನಗಳ ವ್ಯಾಲಿಡಿಟಿ ಹೊಂದಿದೆ. ನೀವು ಪ್ರತಿದಿನ 2GB ಡೇಟಾ ಪಡೆಯಬಹುದು. ನಿಮಗೆ 485 ರೂ. ಪ್ರಿಪೇಯ್ಡ್ ಯೋಜನೆಯಲ್ಲಿ ಒಟ್ಟು 160GB ಡೇಟಾ ಸೌಲಭ್ಯ ಸಿಗುತ್ತದೆ. ಇದಲ್ಲದೆ, ಈ ಯೋಜನೆಯಲ್ಲಿ ವಿವಿಧ ಪ್ರಯೋಜನಗಳು ಲಭ್ಯವಿದೆ. ಈ ಪ್ರಿಪೇಯ್ಡ್ ಯೋಜನೆಯು ಅನಿಯಮಿತ ಸ್ಥಳೀಯ, ಎಸ್‌ಟಿಡಿ ಮತ್ತು ರೋಮಿಂಗ್ ವಾಯ್ಸ್ ಕಾಲ್ ಸೌಲಭ್ಯ ಒಳಗೊಂಡಿದೆ. ನೀವು ಪ್ರತಿದಿನ 100 ಎಸ್‌ಎಂಎಸ್ ಸಹ ಪಡೆಯಬಹುದು. ಕಂಪನಿಯು ಹೊಸದಾಗಿ ಯಾವುದೇ ಹೆಚ್ಚುವರಿ ಪ್ರಯೋಜನಗಳನ್ನು ಸೇರಿಸಿಲ್ಲ.
ಬಿಎಸ್ಎನ್ಎಲ್ 249 ರೂ. ಪ್ರಿಪೇಯ್ಡ್ ಯೋಜನೆ
ಬಿಎಸ್ಎನ್ಎಲ್ 249 ರೂ. ಪ್ರಿಪೇಯ್ಡ್ ಯೋಜನೆಯು (BSNL Rs 249 Plan) 45 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ನೀವು ಪ್ರತಿದಿನ 2GB ಡೇಟಾ ಪಡೆಯಬಹುದು. ಈ ಅದ್ಭುತ ಯೋಜನೆಯು ವಿಶೇಷವಾಗಿ, ಒಟ್ಟು 90GB ಡೇಟಾ ಸೌಲಭ್ಯವನ್ನು ಒಳಗೊಂಡಿದೆ. ನೀವು 249 ರೂ. ಪ್ರಿಪೇಯ್ಡ್ ಯೋಜನೆಯೊಂದಿಗೆ ಅನಿಯಮಿತ ಸ್ಥಳೀಯ, ಎಸ್‌ಟಿಡಿ ಮತ್ತು ರೋಮಿಂಗ್ ವಾಯ್ಸ್ ಕಾಲ್‌ಗಳ ಸೌಲಭ್ಯವನ್ನು ಸಹ ಹೊಂದಿದೆ. ಅಲ್ಲದೆ, ಈ ಯೋಜನೆಯಲ್ಲಿ ಪ್ರತಿದಿನ 100 ಎಸ್‌ಎಂಎಸ್ ಸೌಲಭ್ಯ ಒದಗಿಸಲಾಗುತ್ತದೆ. ನೀವು ಈ ಯೋಜನೆಯಲ್ಲಿ, ದೈನಂದಿನ 2GB ಡೇಟಾವನ್ನು ಖಾಲಿ ಮಾಡಿದ ನಂತರ, 40 Kbps ವೇಗದಲ್ಲಿ ಇಂಟರ್ನೆಟ್ ಬಳಸಬಹುದು.
ಬಿಎಸ್ಎನ್ಎಲ್ 229 ರೂ. ಪ್ರಿಪೇಯ್ಡ್ ಯೋಜನೆ
ಬಿಎಸ್ಎನ್ಎಲ್ 229 ರೂ. ಪ್ರಿಪೇಯ್ಡ್ ಯೋಜನೆಯು (BSNL Rs 229 Plan) ಒಂದು ತಿಂಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ಪ್ಲಾನ್‌ನಲ್ಲಿ ದಿನಕ್ಕೆ 2GB ಡೇಟಾ ಲಭ್ಯವಿದೆ. ನೀವು 229 ರೂ.ಗಳ ಪ್ರಿಪೇಯ್ಡ್ ಪ್ಲಾನ್‌ನೊಂದಿಗೆ ರೀಚಾರ್ಜ್ ಮಾಡಿದರೆ, ಒಟ್ಟು 62GB ವರೆಗಿನ ಡೇಟಾ ಪ್ರಯೋಜನ ಪಡೆಯಬಹುದು. ಇದಲ್ಲದೆ, ಈ ಪ್ಲಾನ್‌ನಲ್ಲಿ ಹಲವು ಪ್ರಯೋಜನಗಳು ಲಭ್ಯವಿದೆ.
ಬಿಎಸ್ಎನ್ಎಲ್ 229 ರೂ. ಪ್ರಿಪೇಯ್ಡ್ ಯೋಜನೆಯು ಅನಿಯಮಿತ ಸ್ಥಳೀಯ, ಎಸ್‌ಟಿಡಿ ಮತ್ತು ರೋಮಿಂಗ್ ಧ್ವನಿ ಕರೆಗಳನ್ನು ಒಳಗೊಂಡಿದೆ. ಮತ್ತು ನಿತ್ಯ 100 ಎಸ್‌ಎಂಎಸ್ ಸೌಲಭ್ಯವನ್ನು ಸಹ ನೀಡುತ್ತದೆ. ಈ ಯೋಜನೆಯಲ್ಲಿ ದೈನಂದಿನ 2GB ಡೇಟಾ ಮಿತಿ ಮುಗಿದ ನಂತರ, ನೀವು 40 Kbps ವೇಗದಲ್ಲಿ ಇಂಟರ್ನೆಟ್ ಅನ್ನು ಬಳಸಬಹುದು
More From GoodReturns

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ

Gold Price Today India: ಯುಗಾದಿ ಬಳಿಕ ಏರಿಕೆ ಹಾದಿ ಹಿಡಿದ ಚಿನ್ನದ ಬೆಲೆ-24K/100gನಲ್ಲಿ 6,500 ರೂ. ಜಿಗಿತ!

8th Pay Commission: 8ನೇ ವೇತನ ಆಯೋಗದಿಂದ ಮಹತ್ವದ ಅಪ್ಡೇಟ್; ಪ್ರಶ್ನಾವಳಿ ಸಲ್ಲಿಸಲು ಮಾ.31ರ ವರೆಗೂ ಅವಕಾಶ

Flipkart CFO: ಐಪಿಒಗೆ ಮುನ್ನ ಫ್ಲಿಪ್ಕಾರ್ಟ್ನಲ್ಲಿ ದೊಡ್ಡ ಬದಲಾವಣೆ: CFO ಸ್ಥಾನ ತ್ಯಜಿಸಿದ ವೆಂಕಟರಾಮನ್



Click it and Unblock the Notifications