ನವದೆಹಲಿ: ಖಾಸಗಿ ಟೆಲಿಕಾಂ ಕಂಪನಿಗಳ ದುಬಾರಿ ರೀಚಾರ್ಜ್ಗಳಿಗೆ ಬೇಸತ್ತು. BSNL ಕಡೆಗೆ ಹೆಚ್ಚಿನ ಗ್ರಾಹಕರು ಮುಖ ಮಾಡುತ್ತಿರುವಂತಹ ಬೆನ್ನಲ್ಲೇ ಬಿಎಸ್‌ಎನ್‌ಎಲ್ ಕಂಪನಿಯು ತನ್ನ ಗ್ರಾಹಕರಿಗಾಗಿ ಭರ್ಜರಿ ಆಫರ್ ನೀಡಿದೆ.
ಹೌದು, ರೀಚಾರ್ಜ್ ಪ್ಲಾನ್ ಗಳು ತಿಂಗಳಿಂದ ತಿಂಗಳಿಗೆ ಏರಿಕೆಯಾಗುತ್ತಲೇ ಇದೆ ಆದರೂ ಸಹ BSNL ಬಳಕೆದಾರರಿಗೆ ಭರ್ಜರಿ ಗುಡ್‌ನ್ಯೂಸ್ ನೀಡಿದ್ದು, ₹666ಕ್ಕೆ ಬರೋಬ್ಬರಿ 210 GB ಡೇಟಾ, ಅನ್‌ಲಿಮಿಟೆಡ್ ಕರೆಯನ್ನು ನೀಡಿದೆ.

BSNL ಗ್ರಾಹಕರಿಗಾಗಿ ತನ್ನ ಯೋಜನೆಗಳನ್ನು ಕೈಗೆಟುಕುವ ಬೆಲೆಯಲ್ಲಿ ಪ್ಲಾನ್‌ಗಳನ್ನು ನೀಡುತ್ತಿದೆ, ಇದು ದೀರ್ಘ ಮಾನ್ಯತೆ, ಸಾಕಷ್ಟು ಡೇಟಾ ಮತ್ತು ಇತರ ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ.
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‌ನ ಅಂತಹ ಒಂದು ಅದ್ಭುತ ಯೋಜನೆ.ಈ ಪ್ಲಾನ್‌ನ ವ್ಯಾಳಿಡಿಟಿವರೆಗೆ ಬಳಕೆದಾರರು ಬರೋಬ್ಬರಿ 210GB ಡೇಟಾವನ್ನು ಪಡೆಯುತ್ತಾರೆ. ಅಲ್ಲದೆ, ದೈನಂದಿನ ಮಿತಿ ಮುಗಿದ ನಂತರ, ನೀವು 40kbps ವೇಗದಲ್ಲಿ ಇಂಟರ್ನೆಟ್ ಅನ್ನು ಬಳಸಬಹುದು. ಈ ಯೋಜನೆಯಡಿಯಲ್ಲಿ, ಪ್ರತಿದಿನ 100 ಸಂದೇಶಗಳನ್ನು ಅಂದರೆ SMS ಕಳುಹಿಸುವ ಸೌಲಭ್ಯವನ್ನ ತನ್ನ ಗ್ರಾಹಕರಿಗೆ ಒದಗಿಸಿದೆ.
BSNLನ ₹666 ಯೋಜನೆ
ಬಿಎಸ್‌ಎನ್‌ಎಲ್ ಕಂಪನಿಯು ತನ್ನ ಗ್ರಾಹಕರಿಗಾಗಿ 666 ರೂಪಾಯಿಯ ಯೋಜನೆಯನ್ನು ಪರಿಚಯಿಸುತ್ತಿದೆ. ಈ ಯೋಜನೆಯು ಗ್ರಾಹಕರಿಗೆ 105 ದಿನಗಳ ದೀರ್ಘಾವಧಿಯ ವ್ಯಾಲಿಡಿಟಿಯನ್ನು ನೀಡಿದೆ.
3.5 ತಿಂಗಳ ಮಾನ್ಯತೆ
ರೂ 666 ರ ಈ ಯೋಜನೆಯಲ್ಲಿ, ಬಳಕೆದಾರರು 105 ದಿನಗಳ ಮಾನ್ಯತೆಯನ್ನು ಪಡೆಯಹುದು. ಈ ಯೋಜನೆಯು ನಿಮಗೆ 3.5 ತಿಂಗಳ ಕಾಲ ರೀಚಾರ್ಜ್ ಮಾಡುವ ಒತ್ತಡಕ್ಕೆ ಬ್ರೇಕ್ ನೀಡುತ್ತದೆ. ಪ್ರತಿ ತಿಂಗಳು ರೀಚಾರ್ಜ್‌ನಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ.
ಅನಿಯಮಿತ ಕರೆ ಸೌಲಭ್ಯ
ಈ ಯೋಜನೆಯು ಅನಿಯಮಿತ ಕರೆ ಸೌಲಭ್ಯವನ್ನು ಒದಗಿಸುತ್ತದೆ. ಇದರಲ್ಲಿ ಬಳಕೆದಾರರು 105 ದಿನಗಳವರೆಗೆ ಅನಿಯಮಿತ ಫೋನ್ ಕರೆಗಳನ್ನು ಮಾಡಬಹುದು. ಇದಲ್ಲದೆ, ಈ ಯೋಜನೆಯು ಪ್ರತಿದಿನ 2GB ಹೈ ಸ್ಪೀಡ್ ಇಂಟರ್ನೆಟ್‌ನ ಪ್ರಯೋಜನವನ್ನು ಒದಗಿಸುತ್ತದೆ. ಇದರರ್ಥ ಬಳಕೆದಾರರು ಪ್ಲಾನ್ ಮಾನ್ಯತೆಯವರೆಗೆ 210GB ಡೇಟಾದ ಪ್ರಯೋಜನವನ್ನು ಪಡೆಯುತ್ತಾರೆ. ದೈನಂದಿನ ಮಿತಿ ಮುಗಿದ ನಂತರ, ನೀವು 40kbps ವೇಗದಲ್ಲಿ ಇಂಟರ್ನೆಟ್ ಅನ್ನು ಬಳಸಬಹುದು. ಈ ಯೋಜನೆಯಡಿಯಲ್ಲಿ, ಪ್ರತಿದಿನ 100 ಸಂದೇಶಗಳನ್ನು ಅಂದರೆ SMS ಕಳುಹಿಸುವ ಸೌಲಭ್ಯವೂ ಲಭ್ಯವಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications